ಕೊರೋನಾ ಬಂದಾಗಿನಿಂದ ನಾವು ನಮ್ಮ ಚರ್ಮದ ಸಂರಕ್ಷಣೆಯುತ್ತ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಅದರಲ್ಲೂ ತರುಣಿಯರು WFH, ಆಫೀಸಿನ ಭರಾಟೆಯಲ್ಲಿ ಈ ಕಡೆ ಗಮನಿಸುತ್ತಲೇ ಇಲ್ಲ. ಇವರುಗಳಿಗೆ ಹೇಗೂ WFH ವರದಾನವಾಗಿದೆಯಲ್ಲ, ಹೊರಗಿನ ಓಡಾಟದ ಟೆನ್ಶನ್ ಇಲ್ಲ ಎಂದೇ ಅನಿಸುತ್ತದೆ. ಆದರೆ ಇತ್ತೀಚೆಗಂತೂ ಬಹಳಷ್ಟು ಆಫೀಸ್ ತೆರೆದಿವೆ, ಇತರ ಗೃಹಿಣಿಯರೂ ಮಕ್ಕಳನ್ನು ಶಾಎಗೆ, ನಿತ್ಯದ ಹೊರಗಿನ ಓಡಾಟದಲ್ಲಿ ಬಿಝಿ ಆಗೀಬೇಕಿದೆ. ಹೀಗಾಗಿ ಕೊರೋನಾ ಕಾಲದಲ್ಲಿ ನಿರ್ಲಕ್ಷಿಸಲಾಗಿದ್ದ ಚರ್ಮವನ್ನು ಇದೀಗ ಬಹಳ ಎಚ್ಚರವಹಿಸಿ ನೋಡಿಕೊಳ್ಳಬೇಕಿದೆ. ಹೀಗಾಗಿ ಅವರು FB, ಇನ್ ಸ್ಟಾಗ್ರಾಂ ಯಾ ಇತರೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ವ್ ಗಳಲ್ಲಿ ಫಿಲ್ಟರ್ಸ್ ನೆರವಿನಿಂದ ತಮ್ಮನ್ನು ತಾವು ಬ್ಯೂಟಿಫುಲ್ ಆಗಿ ತೋರ್ಪಡಿಸಿಕೊಂಡಿರಬಹುದು, ಆದರೆ ಅಸಲಿ ವಿಷಯ ಬೇರೆ ಎಂಬುದು ಅವರಿಗೂ ಗೊತ್ತು! ಹೀಗಾಗಿ ನೀವು ಚರ್ಮವನ್ನು ಬಲು ಯಂಗ್‌ಬ್ಯೂಟಿಫುಲ್ ಆಗಿರಿಸಿಕೊಳ್ಳಲು ಬಯಸಿದರೆ, ಈಗಲೇ ಎಚ್ಚೆತ್ತುಕೊಳ್ಳಿ! ಇಲ್ಲದಿದ್ದರೆ 30+ ಪ್ರಾಯದಲ್ಲೇ ನೀವು 60+ ಚರ್ಮದವರಾಗಿ ಕಾಣಬಾರದು. ಅದಕ್ಕೆ ಮಾಡಬೇಕಾದುದೇನು ಎಂದು ವಿವರವಾಗಿ ತಿಳಿಯೋಣವೇ? :
ಸುಕ್ಕುನಿರಿಗೆಗಳ ಸಮಸ್ಯೆ
20+ ನವರ ಚರ್ಮ ಯೌವನ ತುಂಬಿ ತುಳುಕುವಂಥದ್ದು. ಅವರಿಗೆ ಸಮಸ್ಯೆ ಇರದು. ಮುಖದಲ್ಲಿ ಕಾಂತಿ, ಕಳೆ, ಆಕರ್ಷಣೆ ಹೆಚ್ಚಿರುತ್ತದೆ. ಆದರೆ ಈ ವಯಸ್ಸಿನಲ್ಲಿ ನಿರ್ಲಕ್ಷ್ಯ ವಹಿಸಿದರೆ, ಮುಖದಲ್ಲಿ ಫೈನ್ ಲೈನ್ಸ್ ಜೊತೆಗೆ ಕ್ರಮೇಣವಾಗಿ ಸುಕ್ಕು ನಿರಿಗೆಗಳು ಮೂಡಲಾರಂಭಿಸುತ್ತವೆ.
ಇದು ಯಾವಾಗ ಕಾಣಿಸುತ್ತೇ?
ಚರ್ಮದ ಒಳಭಾಗ ನಮ್ಮ ಚರ್ಮದ ಹೊರ ಪದರನ್ನು ಸಪೋರ್ಟ್ ಮಾಡುವಂಥ ಕೊಲೋಜೆನ್‌ಎಲಾಸ್ಟಿನ್ ಎಂಬ ಪ್ರೋಟೀನ್ ಪದರಗಳಲ್ಲಿ ಕೊರತೆ ಉಂಟಾದಾಗ! ಆಗ ಚರ್ಮ ಆರ್ದ್ರತೆ, ಸೌಂದರ್ಯ ಕಳೆದುಕೊಂಡು ಕಳಾಹೀನ ಆಗುತ್ತದೆ. ಹೀಗಾಗಿ ನೀವು ನಿಮ್ಮನ್ನು ಈ ಸುಕ್ಕುಗಳಿಂದ ದೂರ ಇರಿಸಿಕೊಳ್ಳಲು ಸೂಕ್ತ ಸ್ಕಿನ್ ಕೇರ್ ಜೊತೆ ಹೆಲ್ದಿ ಈಟಿಂಗ್ ಅಭ್ಯಾಸ ಮಾಡಿಕೊಳ್ಳಿ.
ಟೆನ್ಶನ್ ನಿಮ್ಮನ್ನು ಕಾಡದಿರಲಿ
ಇತ್ತೀಚಿನ ದಿನಗಳಲ್ಲಿ ಮನೆ ಅಥವಾ ಆಫೀಸಿನ ವಾತಾವರಣ ಇರಲಿ, ಎಲ್ಲೆಡೆ ಸದಾ ಸ್ಟ್ರೆಸ್ ತುಂಬಿರುತ್ತದೆ. ಎಷ್ಟೋ ಜನ ಈ ಕೊರೋನಾ ಮಹಾಮಾರಿಯಿಂದ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿದ್ದರೆ, ಇತರರಿಗೆ ಕುಂದುತ್ತಿರುವ ಸಂಬಳ, ಕೆರಿಯರ್‌ನದೇ ದೊಡ್ಡ ಟೆನ್ಶನ್. ಯುವಜನತೆ ತಮ್ಮ ಕೆಲಸ ಕಳೆದುಕೊಳ್ಳುವ ಚಿಂತೆಯಲ್ಲಿ ಭಯಭೀತರಾಗುತ್ತಾರೆ. ಇದರಿಂದ ಇವರ ಚರ್ಮದ ಸೌಂದರ್ಯ ಸಹಜವಾಗಿ ಕುಗ್ಗುತ್ತದೆ.
ನಮ್ಮ ದೇಹದಲ್ಲಿ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನ್ ಇದ್ದು, ನಮ್ಮ ಹೆಚ್ಚಿನ ಚಿಂತೆಯ ಕಾರಣ ಅದರ ಬ್ಯಾಲೆನ್ಸ್ ತಪ್ಪುತ್ತದೆ. ಹಾಗಾಗಿ ನಮ್ಮ ಮುಖದಲ್ಲಿ ಆ್ಯಕ್ನೆ, ಮೊಡಲೆ, ಫೈನ್ ಲೈನ್ಸ್, ಮೆಟಬಾಲಿಸಂ ಬ್ಯಾಲೆನ್ಸ್ ತಪ್ಪುತ್ತದೆ. ಸಕಾಲಕ್ಕೆ ಇದನ್ನು ಕಂಟ್ರೋಲ್ ಮಾಡದಿದ್ದರೆ ಹಾನಿ ತಪ್ಪದು. ಹೀಗಾಗಿ ಸಾಧ್ಯವಾದಷ್ಟೂ ಸಕಾರಾತ್ಮಕವಾಗಿ ಯೋಚಿಸಿ, ಟೆನ್ಶನ್ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ. ಇಲ್ಲದಿದ್ದರೆ ಈ ಟೆನ್ಶನ್ ನಿಮ್ಮ ಮುಖದ ಕಳೆ ಕೆಡಿಸುತ್ತದೆ.
ಮನೆಮದ್ದನ್ನು ನಿರ್ಲಕ್ಷಿಸದಿರಿ
ವಯಸ್ಸಿಗೆ ಮುಂಚಿನ ವೃದ್ಧಾಪ್ಯ ಯಾರಿಗೂ ಬೇಡ. ಹೀಗಾಗಿ ಈ ಮನೆಮದ್ದು ಅನುಸರಿಸಿ, ನಿಮ್ಮ ಮುಖದ ಕುಂದುಕೊರತೆ ನಿವಾರಿಸಿ, ನಿಮಗೆ ಚಿರಯೌವನ ಮರಳಿಸಲಿದೆ.