ಇದೋ..... ಬಂದೇಬಿಟ್ಟಿತು ದೀಪಾವಳಿ ಹಬ್ಬ! ಮಾರ್ಕೆಟ್ ನಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಧೂಳೆಬ್ಬಿಸಿದೆ. ಬೇರೆ ಬೇರೆ ಬ್ರಾಂಡ್ಸ್ ಅತ್ಯಾಕರ್ಷಕ ಆಫರ್ಸ್ ನೀಡುತ್ತಿವೆ. ಏಕೆಂದರೆ ಹೆಂಗಸರು ಈ ಸಂದರ್ಭದಲ್ಲಿ ತಮ್ಮನ್ನು ತಾವು ಅತಿ ಸುಂದರವಾಗಿ ಪ್ರಸ್ತುತಪಡಿಸಲು, ಮಾರ್ಕೆಟ್ ನ ಬಹುತೇಕ ಬ್ರಾಂಡ್ಸ್ ಟ್ರೈ ಮಾಡಿಯೇ ತೀರುತ್ತಾರೆ. ಹೀಗಾಗಿ ನೀವು ಎಂಥ ಬ್ಯೂಟಿ ಪ್ರಾಡಕ್ಟ್ಸ್ ಕೊಳ್ಳಲಿದ್ದೀರಿ, ಯಾವ ವಿಷಯ ಗಮನದಲ್ಲಿಡಬೇಕು, ಯಾವಾಗ, ಎಲ್ಲಿಂದ ಕೊಳ್ಳಬೇಕು, ಇತ್ಯಾದಿ ನಿಗಾ ವಹಿಸಿ ನಿಮ್ಮ ಬಜೆಟ್ ಕಂಟ್ರೋಲ್ ನಲ್ಲಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು.
ಲಿಪ್ ಕೇರ್
ಹಬ್ಬಕ್ಕಾಗಿ ತುಟಿಗಳ ಶೃಂಗಾರದ ಕಡೆ ಗಮನಹರಿಸಲು ಸಮಯವಿಲ್ಲವೇ? ಹಾಗೆ ಮಾಡದಿರಿ, ಇಡೀ ಮುಖದ ಕೇಂದ್ರಬಿಂದುವಾದ ತುಟಿಗಳ ಲಿಪ್ ಸ್ಟಿಕ್ ಎಲ್ಲಕ್ಕಿಂತ ಮುಖ್ಯ. ನೀವು ಎಂಥ ಉತ್ಕೃಷ್ಟ ಉಡುಗೆ ಧರಿಸಿದ್ದರೂ ಸಹ, ತುಟಿಗಳನ್ನು ನಿರ್ಲಕ್ಷಿಸಿದ್ದರೆ ಗ್ಲಾಮರಸ್ ಟಚ್ ನೀಡಿದಂತೆ ಆಗುವುದೇ ಇಲ್ಲ. ಆಗ ನಿಮ್ಮ ದುಬಾರಿ ಉಡುಗೆ ಕಡೆ ಯಾರ ಗಮನ ಹರಿಯೋಲ್ಲ, ನಿಮ್ಮಲ್ಲಿ ಆಕರ್ಷಣೆ ಸಹ ಉಂಟಾಗಲ್ಲ.
ಹಾಗಾದರೆ ಟಾಪ್ ಲಿಪ್ ಸ್ಟಿಕ್ ಬ್ರಾಂಡ್ಸ್ ಬಗ್ಗೆ ತಿಳಿಯೋಣವೇ? ಇದರಿಂದ ನಿಮಗೆ ಸ್ಮಾರ್ಟ್ ಲುಕ್ಸ್ ಗ್ಯಾರಂಟಿ.
ಟಾಪ್ 5 ಲಿಪ್ ಸ್ಟಿಕ್ ಬ್ರಾಂಡ್ಸ್ ಇನ್ ಟ್ರೆಂಡ್ಸ್ : ಇಲ್ಲಿ ನೀವು ಮ್ಯಾಟ್ ನಿಂದ ಹಿಡಿದು ಹೈ ಶೈನ್ ಫಿನಿಶ್ ಲಿಪ್ ಸ್ಟಿಕ್ ಬಳಸಿಕೊಳ್ಳಬಹುದು, ನಿಮ್ಮ ಇಷ್ಟದ ಆಯ್ಕೆ ಪ್ರಕಾರ! ಇದನ್ನು ಬಳಸಿ ನೀವು ದೀಪಾವಳಿಯ ಸಂಜೆಗಳಲ್ಲಿ ಹೆಚ್ಚು ಗ್ಲಾಮರಸ್ ಆಗಿ ಮಿಂಚಬಹುದು.
ಲ್ಯಾಕ್ಮೆ 95 ಮ್ಯಾಟ್ ಲಿಪ್ ಕಲರ್, ಇದರಲ್ಲಿ ಗರಿಷ್ಠ ಗ್ಲಾಮರಸ್ ಪ್ರಾಡಕ್ಟ್ಸ್ ಆರಿಸಿಕೊಳ್ಳುವ ಆಯ್ಕೆ ಇದೆ. ನೈಕಾದಿಂದ ಮ್ಯಾಟ್ ಲಿಪ್ ಸ್ಟಿಕ್ಸ್, ಇದರ ರೆಡ್‌ಕ್ರಂಚಿ ಕಲರ್ ನಿಮ್ಮ ತುಟಿಗಳಿಗೆ ಕ್ರಂಚ್ ತರುವುದರ ಜೊತೆ ಜೊತೆಯಲ್ಲೇ ತುಂಬಾ ದುಬಾರಿ ಆಗದೆ, ಪಾಕೆಟ್ ಫ್ರೆಂಡ್ಲಿ ಆಗಿದೆ.
ಲ್ಯಾಕ್ಮೆ ಆ್ಯಬ್ ಸಲ್ಯೂಟ್ ಮಸಾಬಾ ರೇಂಜ್ ನಲ್ಲಿ 10ಕ್ಕಿಂತ ಹೆಚ್ಚುವರಿ ಶೇಡ್ಸ್ ಇದ್ದು, ಭಾರತೀಯ ಚರ್ಮಕ್ಕೆ ಪರ್ಫೆಕ್ಟ್ ಎನಿಸಿದೆ. ಅದೇ ತರಹ ಶುಗರ್ ಲಿಕ್ವಿಡ್ ಲಿಪ್ ಸ್ಟಿಕ್ ಪರ್ಫೆಕ್ಟ್ ಮಾತ್ರವಲ್ಲದೆ, ಬಜೆಟ್ ಫ್ರೆಂಡ್ಲಿ ಕೂಡ. ಇದನ್ನು ನೈಕಾ ವೆಬ್ ಸೈಟ್ ನಿಂದ ಸೋಡಿ ಸಹಿತ ಪಡೆಯಬಹುದು.
ನೇಲ್ ಕೇರ್ ಡ್ರೆಸ್
ರೆಡಿ ಆದ ನಂತರ, ಉಗುರಿಗೆ ಟ್ರೆಂಡಿ ನೇಲ್ ಪಾಲಿಶ್ ಯಾ ನೇಲ್ ಆರ್ಟ್ ನಿಂದ ಸೆಲಿಶ್ ಲುಕ್ ಪಡೆಯಿರಿ.
ನೇಲ್ ಪಾಲಿಶ್ ಇನ್ ಟ್ರೆಂಡ್ಸ್ : ನೇಲ್ ಪಾಲಿಶ್ ಖರೀದಿಸುವಾಗ, ಮ್ಯಾಟ್ ಯಾ ಗ್ಲಾಸಿ ನೇಲ್ ಪಾಲಿಶ್ ಯಾವುದನ್ನು ಖರೀದಿಸಬೇಕೋ ಆ ಬಗ್ಗೆ ಎಲ್ಲಕ್ಕೂ ಮೊದಲು ಮೈಂಡ್ ಸೆಟ್ ಮಾಡಿಕೊಳ್ಳಿ. ಏಕೆಂದರೆ ಇವೆರಡೂ ಈಗ ಟ್ರೆಂಡಿ ಎನಿಸಿವೆ. ಇನ್ನು ಅವುಗಳ ಬಣ್ಣದ ವಿಷಯ, ಇಲ್ಲಿನ ಎಲ್ಲ ಕಲರ್ಸ್ ಟಾಪ್ ಟ್ರೆಂಡಿ ಎನಿಸಿವೆ. ಇವು ಎಲ್ಲಾ ಬಗೆಯ ಡ್ರೆಸ್‌ಸ್ಕಿನ್ ಟೋನ್ ಟೈಪ್ ಗೂ ಸೂಟ್ ಆಗುತ್ತವೆ. ಇವನ್ನು ನಿಮ್ಮ ನೆಚ್ಚಿನ ಸೈಟ್ ಗಳಿಂದ ಆನ್ ಲೈನ್ ಖರೀದಿಸಿ.