ಟೋನರ್, ಪ್ರೈಮರ್, ಫೌಂಡೇಶನ್, ಕನ್ಸೀಲರ್, ಹೈಲೈಟರ್, ಲಿಪ್ ಸ್ಟಿಕ್, ಕಾಜಲ್, ಐ ಲೈನರ್ ಮತ್ತು ಬ್ಲಶ್ ನಂಥ ಬೇಸಿಕ್ ಮೇಕಪ್ ಉತ್ಪನ್ನಗಳಿದ್ದರೆ ಸಾಕು. ನೀವು ಉಳಿದ ಮೇಕಪ್ ಐಟಮ್ಸ್ ಅಂದ್ರೆ ಕಲೆಕ್ಟರ್, ಬ್ರಾಂಝರ್, ಐ ಶ್ಯಾಡೋ, ಫೇಸ್ ಪೌಡರ್ ಇತ್ಯಾದಿ ಬೇಕೆಂದರೆ ಇರಿಸಿಕೊಳ್ಳಿ. ಆದರೆ ಇದು ಅನಿವಾರ್ಯವಲ್ಲ. ಇವುಗಳನ್ನು ಬಳಸದೆಯೇ ಯಾವ ಹೆಣ್ಣಾದರೂ ಸರಿ, ಸಹಜವಾಗಿ ಪ್ರಾಕೃತಿಕ, ಪರ್ಫೆಕ್ಟ್ ಲುಕ್ಸ್ ಪಡೆಯಬಹುದು. ಪರ್ಫೆಕ್ಟ್ ಫೆಸ್ಟಿವ್ ಮೇಕಪ್ ಹೊಂದುವುದು ಹೇಗೆ ಎಂದು ವಿವರವಾಗಿ ತಿಳಿಯೋಣವೇ?
ಕೇಕಿ/ಪ್ಯಾಚಿ ಮೇಕಪ್
ಮೇಕಪ್ ಇನ್ ಪ್ಲಯೆನ್ಸರ್ಸ್ ಪ್ರಕಾರ ಮೇಕಪ್ ನ ಅರ್ಥ ಎಂದರೆ ಕೇಕಿ ಆಗುವುದು, ಇದು ಸದಾ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ನಿಜವಲ್ಲ. ನೀವು ಎಲ್ಲಕ್ಕಿಂತ ಮೊದಲು ಖಾತ್ರಿಪಡಿಸಿ ಕೊಳ್ಳಬೇಕಾದುದು ಎಂದರೆ, ಮೇಕಪ್ ಮಾಡುವ ಮುನ್ನ, ನಿಮ್ಮ ಚರ್ಮದ ಛಿದ್ರಗಳನ್ನು ಮರೆಮಾಚಬೇಕಿದೆ. ಇಲ್ಲಿನ ಮತ್ತೊಂದು ಮಹತ್ವಪೂರ್ಣ ವಿಷಯ ಎಂದರೆ ನೀವು ನಿಮ್ಮ ಚರ್ಮದ ಸುಕ್ಕು ಕಲೆ, ಕಪ್ಪು ವೃತ್ತ ಇತ್ಯಾದಿಗಳನ್ನು ಸರಿಯಾಗಿ ಗುರುತಿಸಿ, ನಿಮ್ಮ ಚರ್ಮಕ್ಕೆ ಸಪೋರ್ಟ್ ಮಾಡಬೇಕು.
ನೀವು ಇಂಥ ಸುಕ್ಕು ಕಲೆ, ಕಪ್ಪು ವೃತ್ತಗಳನ್ನು ನಿಮ್ಮ ಚರ್ಮದೊಂದಿಗೆ ಬ್ಲೆಂಡ್ ಆಗುವಂತೆ ಆ ಮಟ್ಟಕ್ಕೆ ಮರೆಮಾಚುವ ಪ್ರಯತ್ನ ಮಾಡಬೇಕು. ಆದರೆ ಸಾಮಾನ್ಯವಾಗಿ ಹೆಂಗಸರು ಧಾರಾಳ ಫೌಂಡೇಶನ್, ಕನ್ಸೀಲರ್ ಬಳಸಿ ಇಂಥ ಎಲ್ಲಾ ದೋಷ ನಿವಾರಣೆಗೆ ಧಾವಿಸುತ್ತಾರೆ. ಆಗ ಅದು ಅಸಹಜ, ಕೇಕಿ ಲುಕ್ ನೀಡುತ್ತದೆ.
ಮೇಕಪ್ ಮಾಡುವ ಮೊದಲು ಎಲ್ಲಕ್ಕೂ ಮುಖ್ಯ ಹೆಜ್ಜೆ ಎಂದರೆ, ನೀವು ಟೋನರ್, ಮಾಯಿಶ್ಚರೈಸರ್. ಪ್ರೈಮರ್ ಹಚ್ಚಿ ಆ ಪ್ರಕ್ರಿಯೆ ಶುರು ಮಾಡಿದ್ದೀರಿ ತಾನೇ ಎಂಬುದು. ಹೀಗೆ ಮಾಡುವುದರಿಂದ, ನಿಮ್ಮ ಚರ್ಮಕ್ಕೆ ಸ್ಮೂತ್ ಕ್ಯಾನ್ವಾಸ್ ಗೆ ಬದಲಾಯಿಸಲು ನೆರವಾಗುತ್ತದೆ. ಮುಂದೆ ನೀವು ನಿಮ್ಮ ಕ್ರಮಕ್ಕೆ ಅನುಸಾರ ಸುಲಭವಾಗಿ ಮೇಕಪ್ ಮಾಡಿಕೊಳ್ಳಿ.
ಇಲ್ಲಿ ಇನ್ನೊಂದು ಪ್ರಮುಖ ವಿಷಯ ಎಂದರೆ, ಯಾವ ದಿನ ನೀವು ಎಕ್ಸ್ ಫಾಲಿಯೇಟ್ ಮಾಡುತ್ತೀರೋ ಆ ದಿನ ಯಾವ ಮೇಕಪ್ಪೂ ಮಾಡಬಾರದು. ಇದರಿಂದ ಮೇಕಪ್ ಘಟಕ ನಿಮ್ಮ ರೋಮಛಿದ್ರ ಪ್ರವೇಶಿಸಿ, ಅದನ್ನು ಕ್ಲೋಸ್ ಮಾಡಿಬಿಟ್ಟೀತು. ಇದು 2 ವಿಧದಲ್ಲಿ ಹಾನಿಕಾರಕ ಇದರಿಂದ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ ಮತ್ತು ಇದು ನಿಮ್ಮ ಮೇಕಪ್ ನ್ನು ತುಂಡರಿಸಿ, ಅಲ್ಲಲ್ಲಿ ಪ್ಯಾಚಿ ಲುಕ್ಸ್ ಬರುವಂತೆ ಮಾಡಿಬಿಡುತ್ತದೆ.
ನೀವ ಫೌಂಡೇಶನ್ ಬಳಸಲು ಆರಂಭಿಸುವ ಮೊದಲು, ಎಲ್ಲೆಲ್ಲಿ ಕಲೆಗುರುತು, ಸುಕ್ಕು ಇವೆಯೋ ಅವನ್ನೆಲ್ಲ ಅದರಿಂದ ಮರೆಮಾಚಲು ಪ್ರಯತ್ನಿಸಿ. ನೀವು ಇದನ್ನು ಸತತ ಹಚ್ಚುವಾಗ ನೆನಪಿಡಬೇಕಾದುದು ಎಂದರೆ, ಅಗತ್ಯ ಬ್ಯೂಟಿ ಬ್ಲೆಂಡರ್ ಉಪಯೋಗಿಸಿ ಇದನ್ನು 2-3 ನಿಮಿಷಗಳಿಗಿಂತ ಹೆಚ್ಚಾಗಿ ಬ್ಲೆಂಡ್ ಮಾಡಿ. ಫೌಂಡೇಶನ್ ಸದಾ ನಿಮ್ಮ ತ್ವಚೆಯ ಬಣ್ಣಕ್ಕೆ ತಕ್ಕಂತೆ ಮಾತ್ರ ಹಚ್ಚಬೇಕು, ಇದು ಲೈಟ್ ಯಾ ಡಾರ್ಕ್ ಆಗಬಾರದು. ದೀಪಾವಳಿಯಂಥ ಹಬ್ಬದ ಸಂದರ್ಭದಲ್ಲಿ ಮೇಕಪ್ ನಿಮ್ಮ ಚರ್ಮ ಸೌಂದರ್ಯ ಹೆಚ್ಚಿಸಬೇಕೇ ವಿನಾ ಅದನ್ನು ಡಾರ್ಕ್ ಯಾ ಲೈಟ್ ಮಾಡಬಾರದು.