ವೈದ್ಯಕೀಯ ಮಧ್ಯ ಪ್ರವೇಶ ಕೌಶಲ್ಯಗಳಲ್ಲಿ ಅಪೋಲೋ ಹಾಸ್ಪಿಟಲ್ಸ್ ನ ಮುಂದಾಳತ್ವ ಮೊದಲ ಬಾರಿಗೆ ಬೆಂಗಳೂರಿನಲ್ಲಿ ದೊರಕಲಿದೆ. ಕೋವಿಡ್ ಆರೋಗ್ಯ ಆರೈಕೆ ಕ್ಷೇತ್ರವನ್ನು ಗಮನಾರ್ಹವಾಗಿ ಬದಲಾಯಿಸಿ, ನಮ್ಮ ದೇಶದಲ್ಲಿ ನಾವು ಆರೋಗ್ಯ ಆರೈಕೆ ಸೇವೆಗಳನ್ನು ಜನರಿಗೆ ತಲುಪಿಸುವ ರೀತಿಯನ್ನು ಮೂಲಭೂತವಾಗಿ ಬದಲಾಯಿಸಿದೆವು. ಈ ಪ್ಯಾಂಡಮಿಕ್ ನಮಗೆ ಪಲ್ಮನರಿ ರೋಗಗಳು ಮತ್ತು ಮೊದಲ ಹಂತದ ಮಧ್ಯ ಪ್ರವೇಶಗಳ ಪ್ರಾಮುಖ್ಯತೆಯನ್ನು ಬೋಧಿಸಿತು. ಶ್ವಾಸಕೋಶದ ಉಪ ಮುಖ್ಯಪ್ರದೇಶದ ಪರಿಣತಿಯಲ್ಲಿ ಅಂತರ್ ವಿಭಾಗೀಯ ಸಹಯೋಗ ಮತ್ತು ದಕ್ಷ ಅತ್ಯುನ್ನತಮಟ್ಟದ ತಂತ್ರಜ್ಞಾನದ ಉಪಯೋಗ, ಇವು ಕ್ಷಮತೆ ಹೆಚ್ಚಿಸಲು ಮುಖ್ಯ ಗಮನದ ಕೇಂದ್ರಬಿಂದುಗಳು.
ಅಪೋಲೋ 35 ವರ್ಷಗಳ ಸಮೃದ್ಧ ಇತಿಹಾಸ ಇರುವ ಸುಪ್ರಸಿದ್ಧ ಬಹುಶಿಸ್ತಿನ ಆರೋಗ್ಯ ಆರೈಕೆ ಸಮೂಹ. ಉತ್ತಮಿಕೆ, ಆವಿಷ್ಕಾರ ಮತ್ತು ರೋಗಿಗಳ ಸಮಾಧಾನಗಳಿಗೆ ಈ ಸಂಸ್ಥೆ ತೀವ್ರಬದ್ಧ. ಈ ಸಂಸ್ಥೆಯ ಧ್ಯೇಯ ರೋಗಿಗಳಿಗೆ ಹೆಚ್ಚು ಉತ್ತಮ ಪರಿಣಾಮಗಳನ್ನು ಉಂಟುಮಾಡುವ ಅತ್ಯುನ್ನತ ದರ್ಜೆಯ ಆರೈಕೆಯನ್ನು ಸೀಮಾತೀತ ಮತ್ತು ಸಂಯೋಜಿತ ಸೇವೆಯ ಮುಂದುವರಿಕೆಯಿಂದ ಸಾಧಿಸಿ, ನೀಡುವುದು. ಬೆಂಗಳೂರಿನ ಪಲ್ಮನಾಲಜಿ ವಿಭಾಗ ತನ್ನ ಚಿಕಿತ್ಸಾಲಯ ಸೇವೆಗೆ ವಿಶ್ವಪ್ರಸಿದ್ಧ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಕಟಣೆಗಳಲ್ಲಿ ವರದಿಗಳು, ಆವಿಷ್ಕಾರ ಎಲ್ಲೆಡೆಯೂ ಮಾನ್ಯವಾಗಿದ್ದು, ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಪ್ರಮಾಣಿತ ಸೇವಾ ದಾಖಲೆ ಹೊಂದಿದೆ.
ತುಂಬಾ ಉನ್ನತೀಕರಿಸಿದ ಪಲ್ಮನರಿ ಸೇವಾ ಕಾರ್ಯಕ್ರಮವನ್ನು ಅಪೋಲೋ ರಾಷ್ಟ್ರೀಯ ವ್ಯವಸ್ಥೆ ಉದ್ದಕ್ಕೂ ಅಳವಡಿಸುವುದು ಈ ಸಂಸ್ಥೆಯ ಗುರಿ. ಇದರಿಂದ ಎಲ್ಲ ರೋಗಿಗಳಿಗೂ ಅತ್ಯಾಧುನಿಕ ಮೂಲಭೂತ ಸೌಲಭ್ಯ ಮತ್ತು ತಂತ್ರಜ್ಞಾನದೊಡನೆ, ಅತಿ ಉಚ್ಚ ದರ್ಜೆಯ ಚಿಕಿತ್ಸಾಲಯ ಆರೈಕೆ ಮತ್ತು ಪರಿಣತಿ ನೀಡುವುದು ಖಾತ್ರಿ. ಅತಿ ವಿಶಿಷ್ಟ, ಅತ್ಯಾಧುನಿಕ ವಿಧಾನಗಳನ್ನು ಪರಿಚಯಿಸಿ, ಎಲ್ಲಾ ಶ್ವಾಸಕೋಶ ಸಂಬಂಧಿತ ರೋಗಗಳಿಗೆ ಪರಿಹಾರಗಳನ್ನು ಹುಡುಕುವುದರಿಂದ ಇದು ಸಾಧ್ಯ.
ಇಂಥ ಸಂಯೋಜಿತ, ಸಮಗ್ರ ಸೇವೆಗಳ ಮಾದರಿಯನ್ನು ರಾಷ್ಟ್ರೀಯ ವ್ಯಾಪ್ತಿಯಲ್ಲಿ ನೀಡುವಂಥ ಕಾರ್ಯಕ್ರಮಗಳು/ಸೇವಾ ಅಳವಡಿಕೆಗಳು ಇವೆ. ಸಂಪೂರ್ಣ ಹೋಲಿಸ್ಟಿಕ್ ಉನ್ನತ ಕಾರ್ಯನೀತಿಯಿಂದ ಸಂಬಂಧಿತ ಸೇವೆಗಳನ್ನು ಸಮನ್ವಯ ಮಾಡುವ ಸಾಮರ್ಥ್ಯದಿಂದ ಸಂಸ್ಥೆ ಎಲ್ಲ ರೋಗಿಗಳಿಗೂ ಒಂದೇ ಸೂರಿನಡಿ ಮುಂದಿನ ಪೀಳಿಗೆಯ ಔಷಧೋಪಚಾರ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
ಬೆಂಗಳೂರಿನ ಪಲ್ಮನಾಲಜಿ ವಿಭಾಗದಲ್ಲಿ ಅಪೋಲೋ ಸೇವೆಗಳ ಶ್ರೇಣಿ ಹಳೇ ರೋಗಗಳಿಗೆ ಹೊಸ ಪರಿಹಾರ.
ಉಬ್ಬಸ ಆರೈಕೆ (ಆಸ್ತಮಾ) ವಿಶೇಷ ಗಾಳಿಪಥ (ಏರ್ ವೇ) ಚಿಕಿತ್ಸಾಲಯದ ಪ್ರಸ್ತುತಿಯಿಂದ ವ್ಯವಸ್ಥಿತ ವಿಧಾನದ ಮೂಲಕ ಅತ್ಯುತ್ತಮ ಮಟ್ಟಕ್ಕೆ ಏರಿಸಲಾಗಿದೆ. ಇದನ್ನು ತೀವ್ರ ಶ್ವಾಸಕೋಶ ಆಸ್ತಮಾ ಇರುವ ರೋಗಿಗಳಲ್ಲಿ ಅಪೋಲೋ ಇತ್ತೀಚಿನ ವಿಧಾನವಾದ ಬ್ರಾಂಕಿಯಲ್ ಥರ್ವೋಪ್ಲಾಸ್ಟಿಯ ಉಪಯೋಗದಿಂದ ಪುಷ್ಟಿಗೊಳಿಸಿದೆ.
ಕ್ರಾನಿಕ್ ಅಬ್ ಸ್ಟ್ರಕ್ಟಿಲ್ ಪಲ್ಮನರಿ ಡಿಸೀಸ್ ಇದು ವಿಶೇಷ ಗಾಳಿಪಥ ಚಿಕಿತ್ಸಾಲಯದ ಪ್ರಸ್ತುತಿಯ ಮೂಲಕ ಒಂದು ವ್ಯವಸ್ಥಿತ ವಿಧಾನವನ್ನು ಬಹಳ ಉನ್ನತ ಮಟ್ಟಕ್ಕೆ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಹೊಸ ಪೀಳಿಗೆಯ ಔಷಧಿ ಮತ್ತು ಲಂಗ್ ವಾಲ್ಯೂಮ್ ರಿಡಕ್ಷನ್ ಎಂದು ಕರೆಯಲಾಗುವ ಇತ್ತೀಚಿನ ವಿಧಿವಿಧಾನ (ಇಂಟ್ ವೇಪರ್ ಥೆರಪಿ) ಉಪಯೋಗಿಸಲಾಗುತ್ತಿದೆ. ಈ ಚಿಕಿತ್ಸಾ ಪದ್ಧತಿಯನ್ನು ಭಾರತದಲ್ಲಿ ಪರಿಚಯಿಸಿರುವ ಕೆಲವೇ ಕೆಲವು ಆದ್ಯ ಪ್ರವರ್ತಕರಲ್ಲಿ ಅಪೋಲೋ ಹಾಸ್ಪಿಟಲ್ಸ್ ಮುಂದಾಳು!
ಶ್ವಾಸಕೋಶಗಳಲ್ಲಿ ಗಾಯದ ಗುರುತುಗಳು/ ಇಂಟರ್ ಸ್ಪೇಷಿಯಲ್ ಲಂಗ್ ಡಿಸೀಸ್ ಈಗಾಗಲೇ ವಿಶೇಷ ಪರಿಣತಿಯ ಚಿಕಿತ್ಸಾಲಯಗಳು ಅಂಗ ಕಸಿಯಂಥ ಸೇವೆಗಳ ಜೊತೆ ಅತ್ಯಾಧುನಿಕ ಚಿಕಿತ್ಸಾ ಆರೈಕೆ ಮತ್ತು ಮೂಲಭೂತ ಸೌಲಭ್ಯಗಳೊಡನೆ ಕಾರ್ಯನಿರತವಾಗಿದೆ.
ಅಂಗಕಸಿ/ಜೋಡಣೆ
ಅಪೋಲೋದಲ್ಲಿ ಅಂಗಕಸಿ/ಜೋಡಣೆ ಕಾರ್ಯಕ್ರಮ ಉಲ್ಪಣವಾದ ಮತ್ತು ಕೊನೆಯ ಹಂತದ ಶ್ವಾಸಕೋಶದ ರೋಗಗಳಿಗೆ ವಿಶೇಷ ಸೇವೆ ನೀಡುತ್ತದೆ.
ಎಕ್ಸ್ ಟ್ರಾ ಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ ಒಂದು ಚಿಕಿತ್ಸಾ ವಿಧಾನವಾಗಿ ಇದನ್ನು ಈ ಸಂಸ್ಥೆ ಉನ್ನತ, ಸಮಗ್ರ ಆರೈಕೆ ಆರ್ಮಮೆಂಟೇರಿಯಂನಲ್ಲಿ ಸೇರಿಸಲಾಗಿದೆ.
ಶ್ವಾಸಕೋಶದ ಅರ್ಬುದ ರೋಗದ ತೀವ್ರ ಏರಿಕೆಯಿಂದ, ವಿಶೇಷ ಚಿಕಿತ್ಸಾ ಪದ್ಧತಿಗಳ ಸಮನ್ವಯ ಅವಶ್ಯಕ. ಅಪೋಲೋದ ಸಮನ್ವಯಿತ ಎದೆಯ ಔಷಧೋಪಚಾರ ಮತ್ತು ಕ್ಯಾನ್ಸರ್ ಸೇವೆ, ತಮ್ಮ ಸಿಬ್ಬಂದಿಗೆ ರೋಗವನ್ನು ನಿರ್ವಹಿಸಲು, ರೋಗ ನಿಧಾನದಿಂದ ನಿಖರ ಬಹು ವಿಧಾನ ನಿರ್ವಹಣೆಯವರೆಗೆ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ ಒದಗಿಸುತ್ತದೆ.
ಈ ಕುರಿತು ಬೆಂಗಳೂರಿನ ಅಪೋಲೋ ಹಾಸ್ಪಿಟಲ್ ನ ಪಲ್ಮನಾಲಜಿ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಎಂ. ಮೆಹ್ತಾ ಹೇಳುತ್ತಾರೆ, “ಅಪೇಕ್ಷಣೀಯ ಪರಿಣಾಮಗಳನ್ನು ಸಾಧಿಸಲು, ಎಲ್ಲಾ ಸೇವೆಗಳನ್ನು ಸಮನ್ವಯ ಮಾಡುವುದೇ ನಮ್ಮ ಮಂತ್ರ. ತಂತ್ರಜ್ಞಾನವನ್ನು ಹೋಲಿಸಲು ಸಾಧ್ಯವಾಗುವ ಅತಿ ಉಚ್ಚ ಮಟ್ಟಕ್ಕೆ ಏರಿಸಲಾಗುತ್ತದೆ. ಹೆಚ್ಚಿನ ತಂತ್ರಜ್ಞಾನಗಳನ್ನು ಅವುಗಳನ್ನು ನಿರ್ವಹಿಸಲು ಅವಶ್ಯಕ ಕೌಶಲ್ಯಗಳ ಜೊತೆ ಒದಗಿಸಲಾಗಿದೆ. ಸಾಧ್ಯವಾಗುವ ಅತ್ಯುತ್ತಮ ಮಟ್ಟದ ವೈದ್ಯಕೀಯ ಸೇವೆಗಳನ್ನು ಅತ್ಯುನ್ನತ ಮಟ್ಟದ ತರಬೇತಿ ಮತ್ತು ಬೆಂಬಲದ ಜೊತೆ ನೀಡುವುದು ನಮ್ಮ ಗುರಿ, ಆರೋಗ್ಯ ಸೇವೆಗಳಿಗೆ 360 ಡಿಗ್ರಿಗಳ ಸಮಗ್ರ ಕಾರ್ಯ ವಿಧಾನದಿಂದ ನಾವು ಆಂಕಾಲಜಿ ಮತ್ತು ತೀವ್ರ ಆರೈಕೆಯಂಥ ಇತರ ವಿಶೇಷ ಪರಿಣತಿಗಳನ್ನು ಸಮನ್ವಯ ಮಾಡಲು ಸಮರ್ಥರಾಗಿದ್ದೇವೆ.”
ವೇಗ ಬೆಳವಣಿಗೆಯ ಕ್ಷೇತ್ರವಾದ ಅಧ್ಯಯನದಲ್ಲಿ ಈ ಸಂಸ್ಥೆ ಆದ್ಯ ಪ್ರವರ್ತಕ ಮುಂದಾಳು ಸಿಮ್ಯುಲೇಟರ್ ಗಳ ಉಪಯೋಗದಿಂದ, ವಿದ್ಯಾಭ್ಯಾಸ ಕ್ರಮಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳನ್ನು ಒಳಗೊಂಡ ನಿರಂತರ ವಿದ್ಯಾಭ್ಯಾಸ ಕಾರ್ಯಕ್ರಮಗಳು ಹಾಗೂ ಸಹಯೋಗ ವಿಧಾನಗಳನ್ನು ಬಹಳವಾಗಿ ಅವಲಂಬಿಸಿದೆ. ಇತ್ತೀಚೆಗೆ ಹೈಬ್ರಿಡ್ ಮಾಡೆಲ್ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿ ಇದರಲ್ಲಿ ಅಂತರ್ಜಾಲದ ಮೂಲಕ 150 ಜನ ಭಾಗವಹಿಸಿದ್ದು 100 ಜನರು ದೈಹಿಕವಾಗಿ ಹಾಜರಿದ್ದರು.
ಅಪೋಲೋ ಹಾಸ್ಪಿಟಲ್ಸ್ ತಮ್ಮ ಸೇವೆಗಳನ್ನು ನಿರಂತರವಾಗಿ ಉನ್ನತೀಕರಿಸಿ ಕ್ಷಿತಿಜವನ್ನು ವಿಸ್ತರಿಸುತ್ತಿದೆ. ಅಪೋಲೋ ಹಾಸ್ಪಿಟಲ್ಸ್ ರೋಗಿಗಳಿಗೆ ಆರೈಕೆ ಮತ್ತು ಆರಾಮ ಒದಗಿಸಿ, ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಖಾತ್ರಿ ಪಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಪೋಲೋ ಸ್ಪೆಷಾಲಿಟಿ ಹಾಸ್ಪಿಟಲ್ಸ್/2, 14ನೇ ಅಡ್ಡರಸ್ತೆ, ಮಾಧವನ್ ಪಾರ್ಕ್ ಬಳಿ, ಜಯನಗರ, ಬೆಂಗಳೂರು. ಫೋನ್ : 9019963161