ಚಳಿಗಾಲದ ಈ ಸೀಸನ್‌ ನಲ್ಲಿ ನಾವು ನಮ್ಮ ಚರ್ಮದ ಕಡೆ ವಿಶೇಷ ಗಮನ ಕೊಡಲೇಬೇಕು. ಅದು ನಮ್ಮ ಪರ್ಸನಾಲ್ಟಿಗೆ ಪ್ರತ್ಯೇಕ ಕಳೆ ತಂದುಕೊಡುತ್ತದೆ. ಮೂಲತಃ ಹುಟ್ಟಿನಿಂದ ನಾವೆಲ್ಲರೂ ವಿಭಿನ್ನ ಬಗೆಯ ಚರ್ಮ ಹೊಂದಿರುತ್ತೇವೆ, ಹೀಗಾಗಿ ಪ್ರತಿಯೊಬ್ಬರ ಚರ್ಮ ಬ್ಯೂಟಿಫುಲ್!

ನಮ್ಮ ಚರ್ಮದ ಕಡೆ ನಿಗಾ ವಹಿಸುವುದು ನಮ್ಮ ಕೈಯಲ್ಲೇ ಇದೆ. ಪ್ರತಿದಿನ ಅಥವಾ ಆಗಾಗ ಇದಕ್ಕಾಗಿ ಪಾರ್ಲರ್‌ ಗೆ ಹೋಗಲಾಗದು. ಆದರೆ ಚರ್ಮಕ್ಕೆ ಪಾರ್ಲರ್‌ ನಂಥ ಆರೈಕೆಯನ್ನು ನಾವು ನಮ್ಮ ಮನೆಯಲ್ಲೇ ನೀಡಬಹುದು. ಈ ಚಳಿಗಾಲದಲ್ಲಿ ನಾವು ನಮ್ಮ ಚರ್ಮದ ಆರೈಕೆ ಹೇಗೆ ಉತ್ತಮವಾಗಿ ಮಾಡಬಹುದು ಎಂದು ಗಮನಿಸೋಣವೇ?

ಚರ್ಮ ಮಾಯಿಶ್ಚರೈಸ್ಡ್ ಆಗಿರಲಿ

ನಿಮ್ಮ ಚರ್ಮ ಆಯ್ಲಿ ಅಥವಾ ಡ್ರೈ ಆಗಿರಲಿ, ಎಲ್ಲಾ ಬಗೆಯ ಚರ್ಮಕ್ಕೂ ಮಾಯಿಶ್ಚರೈಸಿಂಗ್‌ ಅತಿ ಅಗತ್ಯ, ಏಕೆಂದರೆ ಹೆಚ್ಚುತ್ತಿರುವ ವಯಸ್ಸು, ಹಾರ್ಮೋನ್‌ ಬದಲಾವಣೆ ಹಾಗೂ ಋತುಮಾನದ ದೃಷ್ಟಿಯಿಂದ ನಮ್ಮ ಚರ್ಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಈ ಕಾರಣ ಚರ್ಮದ ಮಾಯಿಶ್ಚರ್‌ ಕಡಿಮೆ ಆಗಬಹುದು ಅಥವಾ ಇಲ್ಲ ಎಂದಾಗಬಹುದು. ಧೂಳು, ಮಣ್ಣು, ಪರಿಸರ ಮಾಲಿನ್ಯ ನಮ್ಮ ಚರ್ಮವನ್ನು ಡಲ್ ಮಾಡಿಬಿಡುತ್ತದೆ. ಇದಕ್ಕೆ ಪರಿಹಾರವೇನು?

ನಿಮ್ಮ ಚರ್ಮ ಯಾವ ಬಗೆಯದು ಎಂದು ತಿಳಿಯಿರಿ. ಆ ಕುರಿತು ಒಂದಿಷ್ಟು ಓದಿಕೊಳ್ಳಿ. ನಂತರ ಉತ್ತಮ ಮಾಯಿಶ್ಚರೈಸರ್ ಬಳಸಿ ನಿಮ್ಮ ಚರ್ಮದ ಆರೈಕೆ ಮಾಡಿ. ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದರೆ ಉತ್ತಮ ಫ್ರೂಟ್‌ ಬೇಸ್ಡ್ ಮಾಯಿಶ್ಟರೈಸರ್‌ ಬಳಸಿಕೊಳ್ಳಿ. ಇದು ನಿಮ್ಮ ಚರ್ಮದ ಜಿಡ್ಡಿನಂಶವನ್ನು ಬ್ಯಾಲೆನ್ಸ್ ಮಾಡುತ್ತದೆ. ನಿಮ್ಮ ಚರ್ಮ ಡ್ರೈ ಆಗಿದ್ದರೆ ನೀವು ಆಲ್ಮಂಡ್‌ ಬೇಸ್ಡ್ ಮಾಯಿಶ್ಟರೈಸರ್‌ ಬಳಸಬೇಕು. ಇದರಿಂದ ನಿಮ್ಮ ಚರ್ಮ ಹೈಡ್ರೇಟೆಡ್‌ ಆಗಿ ಸದಾ ಹೊಳೆಯುತ್ತಾ ಇರುತ್ತದೆ.

ನಿಯಮಿತ ಮಸಾಜ್ಅತ್ಯಗತ್ಯ

ನಿಯಮಿತ ಮಸಾಜ್‌ ನಿಂದ ನಿಮ್ಮ ಚರ್ಮ ಹೆಲ್ದಿ  ಆ್ಯಕ್ಟಿವ್ ‌ಆಗುತ್ತದೆ. ಯಂತ್ರಕ್ಕೆ ಲ್ಯೂಬ್ರಿಕೇಶನ್‌ ಅಗತ್ಯ ಇರುವಂತೆ, ನಮ್ಮ ಚರ್ಮಕ್ಕೆ ಆಗಾಗ ಮಸಾಜ್‌ ನ ಅಗತ್ಯವಿದೆ. ಆಗ ಮಾತ್ರ ನಮ್ಮ ಚರ್ಮ ರಿಂಕಲ್ ಫ್ರೀ  ಗ್ಲೋಯಿಂಗ್‌ ಆಗಿರುತ್ತದೆ. ನಿಮ್ಮ ಚರ್ಮದ ಮಸಾಜ್‌ ಪಾಯಿಂಟ್ಸ್ ಕುರಿತು ತಿಳಿದುಕೊಳ್ಳಿ, ನಿಮ್ಮ ಫೇಸ್‌ ಟೈಂ ಬಗ್ಗೆ ಸಹ ತಿಳಿಯಿರಿ. ನಂತರ ಒಂದು ಸೂಕ್ತ ಮಸಾಜ್‌ ಕ್ರೀಂ ಆರಿಸಿಕೊಳ್ಳಿ. ಅದು ಚರ್ಮವನ್ನು ಬೆಟರ್‌ ಮಾಡುವಂತಿರಬೇಕು. ಇದನ್ನು ನಾವು ಮನೆಯಲ್ಲಿ ಕುಳಿತೇ ನಿಭಾಯಿಸಬಹುದು. ಒಂದು ಉತ್ತಮ ಆಲ್ಮಂಡ್‌ ಕ್ರೀಂ ನಿಮ್ಮ ಚರ್ಮವನ್ನು ಯಂಗ್‌ ಆಗಿರಿಸಿ, ರಿಂಕಲ್ ಫ್ರೀ ಮಾಡಲು ಪೂರಕ.

ನಿಯಮಿತ ಸ್ಟೀಂ ಅಗತ್ಯ

ಮುಖದ ಮೇಲೆ ಜಮೆಗೊಳ್ಳುವ ಧೂಳು, ಮಣ್ಣು ಇತ್ಯಾದಿ ಕ್ಲಿಯರ್‌ ಮಾಡಲು ಸ್ಟೀಮಿಂಗ್‌ (ಹಬೆಯ ಆರೈಕೆ) ಉತ್ತಮ ಆಯ್ಕೆಯಾಗಿದೆ. ಸ್ಟೀಂ ಪಡೆಯುವುದರಿಂದ ನಿಮ್ಮ ದೇಹದ ಡೆಡ್‌ ಸೆಲ್ಸ್ ದೂರವಾಗುತ್ತದೆ. ಪೋರ್ಸ್‌ ಕ್ಲಿಯರ್‌ ಆಗಿ, ನಿಮ್ಮ ಚರ್ಮ ಉಸಿರಾಡಲು ಅನುವಾಗುತ್ತದೆ. ಮುಖದಲ್ಲಿನ ಬ್ಲ್ಯಾಕ್‌ ಹೆಡ್ಸ್ ತೊಲಗಿಸಲು, ಮೊದಲು ಮುಖಕ್ಕೆ 8-10 ನಿಮಿಷ ಸ್ಟೀಂ ಒದಗಿಸಿ, ನಂತರ ಸ್ಕ್ರಬ್‌ ಮಾಡಿ. ಸ್ಟೀಂನಿಂದ ನಿಮ್ಮ ಮುಖಕ್ಕೆ ಸಿಗುವ ಶಾಖ, ಅಲ್ಲಿ ರಕ್ತ ಸಂಚಾರ ಹೆಚ್ಚಾಗಿ, ಮುಖಕ್ಕೆ ಕಾಂತಿ ಕೊಡಲು ಕಾರಣವಾಗುತ್ತದೆ. ಆಗ ಅಲ್ಲಿಗೆ ಸಿಗುವ ಆಮ್ಲಜನಕದ ಪೂರೈಕೆಯೂ ಇಂಪ್ರೂವ್ ‌ಆಗುತ್ತದೆ. ಇದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯ ಪ್ರೆಶ್‌ ನೆಸ್‌ ಒದಗುತ್ತದೆ, ಕಾಂತಿಯಿಂದ ಹೊಳೆಯುತ್ತದೆ. ಡ್ರೈ ಚರ್ಮದವರಿಗೆ ಸ್ಟೀಂನಿಂದ ತುಂಬಾ ಲಾಭವಿದೆ. ಮುಖದ ಸುಕ್ಕುಗಳು ಮಾಯವಾಗಿ, ಲೂಸ್‌ ಆದ ಚರ್ಮ ಟೈಟ್‌ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ