ಯಾವ ರೀತಿ ಡೇಲಿ ಹೈಜೀನ್ ಕಡೆ ಗಮನಹರಿಸಬೇಕೋ, ಅದೇ ತರಹ ಚರ್ಮದ ಪೋಷಣೆಯತ್ತ ಗಮನ ಕೊಡಬೇಕಾದುದೂ ಅಷ್ಟೇ ಅಗತ್ಯ. ಆಗ ಮಾತ್ರ ಚರ್ಮದ ಮಾಯಿಶ್ಚರ್ ಚರ್ಮದಲ್ಲಿ ಲಾಕ್ ಆಗಿ ನಮಗೆ ಹೆಲ್ದಿ ಸ್ಕಿನ್ ಸಿಗಲು ಸಾಧ್ಯ. ಚರ್ಮದಲ್ಲಿ ಎಂದೂ ಕಲೆಗುರುತು ಮೂಡದಂತೆ, ಅದನ್ನು ಸದಾ ಯಂಗ್ ಹೆಲ್ದಿ ಆಗಿರಿಸಿಕೊಳ್ಳಲು ಅದರ ಆರೈಕೆಯತ್ತ ಹೆಚ್ಚಿನ ಗಮನ ಹರಿಸಬೇಕಾದುದು ಅತ್ಯಗತ್ಯ. ಇದರಲ್ಲಿ ಮಾಯಿಶ್ಚರೈಸಿಂಗ್ ಲೋಶನ್ ಗೆ ಹೆಚ್ಚಿನ ಮಹತ್ವವಿದೆ. ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.
ಸ್ಕಿನ್ ಲೋಶನ್ ಏಕೆ ಅಗತ್ಯ?
ಬದಲಾಗುತ್ತಿರುವ ಋತು, ಚರ್ಮದ ಕಡೆ ಹೆಚ್ಚಿನ ಗಮನಹರಿಸದೆ ಅದರ ಆರೈಕ ನಿರ್ಲಕ್ಷಿಸಿದರೆ, ಅದು ಡ್ರೈ ಆದೀತು. ಇದನ್ನು ಸರಿಪಡಿಸಲು ಬಾಡಿ ಲೋಶನ್ ಗಿಂತ ಬೆಸ್ಟ್ ಬೇರೊಂದಿಲ್ಲ. ಇದು ಚರ್ಮವನ್ನು ಇರಿಟೇಟ್ ಮಾಡದೆ, ಮಾಯಿಶ್ಚರ್ ನ್ನು ಚರ್ಮದಲ್ಲಿ ಲಾಕ್ ಮಾಡುತ್ತದೆ. ಇದಕ್ಕಾಗಿ, ನೀವು ಶವರ್ ತೆಗೆದುಕೊಂಡಾಗೆಲ್ಲ, ತಕ್ಷಣ ಈ ಲೋಶನ್ ನಿಂದ ದೇಹವನ್ನು ನರಿಶ್ ಮಾಡಲು ಮರೆಯದಿರಿ.
ರಫ್ ಸ್ಪಾಟ್ಸ್ ತೊಲಗಿಸಿ : ನಿಮ್ಮದು ಡ್ರೈ ಸ್ಕಿನ್ ಆಗಿರದೆ ನಾರ್ಮಲ್ ಆಗಿದ್ದರೂ, ನಿಮ್ಮ ಮೊಣಕೈ, ಮಂಡಿಗಳ ಬಳಿ ಖಂಡಿತಾ ಡ್ರೈ ಸ್ಪಾಟ್ಸ್ ಕಂಡುಬರುತ್ತವೆ. ನಾವು ಈ ಜಾಗದ ಬಳಿ ಕೋಕೋ ಬಟರ್ ಯುಕ್ತ ಲೋಶನ್ ಹಚ್ಚಿದರೆ, ಇದರಿಂದ ನಿಮ್ಮ ಚರ್ಮದ ರಫ್ ಸ್ಪಾಟ್ಸ್ ದೂರವಾಗುವುದಲ್ಲದೆ, ಚರ್ಮ ಬಲು ಸಾಫ್ಟ್ ಸ್ಮೂಥ್ ಆಗುತ್ತದೆ.
ನೋವಿನಿಂದ ಪರಿಹಾರ : ಒಮ್ಮೊಮ್ಮೆ ನಮ್ಮ ಚರ್ಮದ ಡ್ರೈನೆಸ್ ಎಷ್ಟು ಹೆಚ್ಚುತ್ತದೆಂದರೆ, ಅದು ಚರ್ಮದ ಮೇಲೆ ಹೊಪ್ಪಳದಂತೆ, ಶುಷ್ಕ ಪದರಾಗಿ ಕಂಡುಬರುತ್ತದೆ. ಇದನ್ನು ಮುಟ್ಟಿದರೆ ಅಥವಾ ಬೇರೆಡೆಗೆ ಆ ಭಾಗ ತಗುಲಿದರೆ ಬಹಳ ನೋವಾಗುತ್ತದೆ. ಹೀಗಾದಾಗ ಬಾಡಿ ಲೋಶನ್ ಇಂಥ ಭಾಗವನ್ನು ಬಲು ಸ್ಮೂತ್ ಆಗಿಸುತ್ತದೆ. ಇದರಿಂದ ಡೆಡ್ ಸ್ಕಿನ್ ಸುಲಭವಾಗಿ ತೊಲಗಲು ಅವಕಾಶವಾಗುತ್ತದೆ. ಇದರಿಂದ ನಿಧಾನವಾಗಿ ಸ್ಕಿನ್ ಹೀಲ್ ಆಗತೊಡಗುತ್ತದೆ.
ಫೀಲ್ ರಿಲ್ಯಾಕ್ಸ್ : ಈ ಲೋಶನ್ ನಮ್ಮ ಚರ್ಮಕ್ಕೆ ಹೇಗೆ ರಿಲ್ಯಾಕ್ಸ್ ಫೀಲಿಂಗ್ ನೀಡಬಹುದು ಎಂದು ಆಶ್ಚರ್ಯಗೊಂಡಿರಾ? ಒಂದು ನೆನಪಿಡಿ, ನೀವು ರಿಲ್ಯಾಕ್ಸ್ ಆಗಲು ಬಯಸಿದಾಗೆಲ್ಲ ನೀವು ಕೆಲವು ಹನಿ ಈ ಲೋಶನ್ ನ್ನು ಹಸ್ತದ ಮೇಲೆ ಹಾಕಿಕೊಂಡು, ಕೈಕಾಲುಗಳಿಗೆ ಅದರಿಂದ ನಿಧಾನ ಹಿತವಾಗಿ ಮಸಾಜ್ ಮಾಡಿ. ಇದರಿಂದ ಹೊಮ್ಮುವ ಶಾಖ, ನಿಮ್ಮ ಇಡೀ ದೇಹ ಹಗುರ ಮಾಡಿ, ಉತ್ತಮ ರಿಲ್ಯಾಕ್ಸಿಂಗ್ ಫೀಲ್ ನೀಡುತ್ತದೆ. ಜೊತೆಗೆ ಇದರ ಸುವಾಸನೆ ನಿಮಗೆ ಬಲು ರಿಫ್ರೆಶಿಂಗ್ ಫೀಲ್ ನೀಡುತ್ತದೆ.
ಬಾಡಿ ಲೋಶನ್ ಸ್ಪೆಷಲ್ ಆಗಿರಲಿ : ನಿಮಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಬಾಡಿ ಲೋಶನ್ಸ್ ಸಿಗುತ್ತವೆ ಎಂಬುದೇನೋ ನಿಜ, ನೀವು ಇದನ್ನು ಖರೀದಿಸಿದಾಗೆಲ್ಲ, ಇದರ ಘಟಕಗಳತ್ತ ಒಮ್ಮೆ ಕಣ್ಣು ಹಾಯಿಸಿ. ಇದರಿಂದ ನಿಮ್ಮ ಚರ್ಮ ಬಹಳ ನರಿಶ್ ಆಗುತ್ತದೆ ಹಾಗೂ ಅದರ ಘಟಕಗಳಿಂದ ನಿಮ್ಮ ಚರ್ಮಕ್ಕೆ ಅಪಾಯ ಆಗಬಾರದೆಂಬುದೂ ಮುಖ್ಯ. ಇದರ ಘಟಕಗಳ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.