ರಾಕಿಂಗ್ ಸ್ಟಾರ್ ಯಶ್ ಅವರೇ ಟಾಕ್ಸಿಕ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, 2026ರ ಮಾರ್ಚ್ 19ರಂದು ಟಾಕ್ಸಿಕ್ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇದರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೂಡ ಅಫಿಶಿಯಲಿ ಪೋಸ್ಟ್ ಮೂಲಕ ಖಚಿತಪಡಿಸಿದೆ. ಅಲ್ಲಿಗೆ ಯಶ್ ಫ್ಯಾನ್ಸ್ ಇನ್ನೂ ಒಂದು ವರ್ಷ ಟಾಕ್ಸಿಕ್ ನೋಡೋಕೆ ಕಾಯಲೇಬೇಕು. ಮಾರ್ಚ್ 19ರಂದು ಯುಗಾದಿ ಹಬ್ಬವಿದೆ. ಹಾಗಾಗಿ ಮುಂದಿನ ವರ್ಷದ ಯುಗಾದಿ ವಿಶೇಷ, ಅದೇ ಡೇಟ್ ಗೆ ಸಿನಿಮಾನ ದೊಡ್ಡ ಪರದೆಗೆ ತರೋ ಯೋಜನೆಯಲ್ಲಿದೆ ಚಿತ್ರತಂಡ.
ಅಂದಹಾಗೆ ಯಶ್ ಅವರ ಕೆಜಿಎಫ್ ಚಾಪ್ಟರ್-2 ಸಿನಿಮಾ ತೆರೆಕಂಡು ಮೂರು ವರ್ಷಗಳಾಯ್ತು. ಇದೀಗ ಟಾಕ್ಸಿಕ್ ರಿಲೀಸ್ ಗೆ ಮತ್ತೊಂದು ವರ್ಷ ಕಾಯಬೇಕಿದೆ. ಅಲ್ಲಿಗೆ ತಮ್ಮ ನೆಚ್ಚಿನ ನಾಯಕನಟನನ್ನ ಬಿಗ್ ಸ್ಕ್ರೀನ್ ಮೇಲೆ ಕೆಜಿಎಫ್-2ನಲ್ಲಿ ಕಣ್ತುಂಬಿಕೊಂಡಿದ್ದ ಫ್ಯಾನ್ಸ್ ಒಟ್ಟು ನಾಲ್ಕು ವರ್ಷಗಳೇ ಎದುರು ನೋಡಬೇಕಿದೆ.
ಮಲಯಾಳಂನ ಸೆನ್ಸಿಬಲ್ ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇತ್ತೀಚೆಗೆ ಯಶ್ ಬರ್ತ್ ಡೇ ವಿಶೇಷ ಟೀಸರ್ ಲಾಂಚ್ ಅಗಿತ್ತು. ಒಂದೇ ಒಂದು ಟೀಸರ್ ನಿಂದ ಹಾಲಿವುಡ್ ವರೆಗೂ ಸೌಂಡ್ ಮಾಡಿದೆ ಟಾಕ್ಸಿಕ್. ಅದ್ರ ಮೇಕಿಂಗ್ ಸ್ಟೈಲ್ ಯಾವ ಹಾಲಿವುಡ್ ಸಿನಿಮಾಗೂ ಕಮ್ಮಿಯಿಲ್ಲ. ಒಂದೊಂದು ಫ್ರೇಮ್ ಕೂಡ ಇಂಪ್ರೆಸ್ಸೀವ್ ಆಗಿದೆ. ಅದ್ರಲ್ಲೂ ಯಶ್ ಸ್ವ್ಯಾಗ್ ನೆಕ್ಸ್ಟ್ ಲೆವೆವ್ ಗಿದೆ. ಇನ್ನು ನಯನತಾರಾ, ಕಿಯಾರಾ ಅದ್ವಾನಿ ಸೇರಿದಂತೆ ಸಾಲು ಸಾಲು ಹಾಲಿವುಡ್ ತಂತ್ರಜ್ಞರು ಹಾಗೂ ಕಲಾವಿದರು ಇದರಲ್ಲಿ ಕೆಲಸ ಮಾಡ್ತಿದ್ದಾರೆ.
ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆ ಜೆ ಪೆರ್ರಿ ಸೇರಿದಂತೆ ಹಾಲಿವುಡ್ ಕಲಾವಿದರು ಟಾಕ್ಸಿಕ್ ಸಿನಿಮಾ ಬಗ್ಗೆ ಇತ್ತೀಚೆಗೆ ಮಾತನಾಡಿದ್ರು. ಇದೀಗ ಸಿನಿಮಾದ ರಿಲೀಸ್ ಡೇಟ್ ಲಾಕ್ ಆಗಿರೋದು ಖುಷಿ ಕೊಟ್ಟಿದೆ. ಡ್ರಗ್ ದುನಿಯಾದ ಮೇಲೆ ಬೆಳಕು ಚೆಲ್ಲಲಿರೋ ಟಾಕ್ಸಿಕ್ ಸಿನಿಮಾ ಕೆಜಿಎಫ್ ಚಾಪ್ಟರ್-2 ಬಾಕ್ಸ್ ಆಫೀಸ್ ಕಲೆಕ್ಷನ್ ರೆಕಾರ್ಡ್ಸ್ ಬ್ರೇಕ್ ಮಾಡೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟರ ಮಟ್ಟಿಗೆ ಯಶ್ ಲುಕ್ಸ್ ಕಿಕ್ ಕೊಡ್ತಿದೆ.
ಪ್ರತೀ ದಿನ ಟಾಕ್ಸಿಕ್ ಸೆಟ್ ನಲ್ಲಿ 1000ಕ್ಕೂ ಅಧಿಕ ಮಂದಿ ಕೆಲಸ ಮಾಡ್ತಿದ್ದು, 450ಕ್ಕೂ ಅಧಿಕ ಕಲಾವಿದರ ದಂಡಿದೆ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಸುಮಾರು 20 ಎಕರೆಯಲ್ಲಿ ಬೃಹತ್ ಸೆಟ್ ಹಾಕಿ ಒಂದಷ್ಟು ದೃಶ್ಯಗಳನ್ನ ಚಿತ್ರಿಸಲಾಗಿತ್ತು. ಅದು ಎಂತಹ ಪ್ರಪಂಚ ಅನ್ನೋದನ್ನ ಸ್ವತಃ ಸಚಿವರಾದ ಈಶ್ವರ್ ಖಂಡ್ರೆ ಅವರೇ ರಿವೀಲ್ ಮಾಡಿದ್ರು. ಅಲ್ಲದೆ, ಜೈ ಪುರ, ತೂತುಕುಡಿ, ಗೋವಾ, ಮುಂಬೈ ಹೀಗೆ ಸಾಕಷ್ಟು ಲೊಕೇಷನ್ಸ್ ನಲ್ಲಿ ಟಾಕ್ಸಿಕ್ ಶೂಟಿಂಗ್ ನಡೀತಿದೆ.
ಕನ್ನಡದ ಜೊತೆ ಭಾರತದ ಪ್ರಮುಖ ಐದು ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದ್ದು, ಈ ಬಾರಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒಟ್ಟೊಟ್ಟಿಗೆ ಚಿತ್ರೀಕರಣ ಆಗ್ತಿರೋದು ಇಂಟರೆಸ್ಟಿಂಗ್. ಕನ್ನಡ ಸಿನಿಮಾಗಳಿಗೆ ಹಾಗೂ ಚಿತ್ರರಂಗಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟ ಯಶ್ ಅವರು, ಈ ಬಾರಿ ಕೂಡ ಮತ್ತೊಂದು ಇತಿಹಾಸದ ಅಧ್ಯಾಯ ಬರೆಯಲು ಹೊರಟಂತಿದೆ.