ಹೆಣ್ಣು ಮಕ್ಕಳ ಗಂಡು ಮಕ್ಕಳ ಜಾತಕಗಳಲ್ಲಿ ಮದುವೆ ಯೋಗ ಇದ್ದು ಮದುವೆ ಆಗದೆ ಹಲವಾರು ಆಲೋಚನೆಗಳನ್ನು ಮಾಡಿ ಕೊಂಡು ಇನ್ನು ಮುಂದಕ್ಕೆ ನೋಡೋಣ ಇನ್ನು ಚೆನ್ನಾಗಿರೋ ಹುಡುಗಿ ಹುಡುಗ ಸಿಕ್ತಾರೆ ಇನ್ನೂ ಹಲವಾರು ನೆಚ್ಚಿನ ಆಸೆಗಳನ್ನು ಇಟ್ಟುಕೊಂಡು ಇನ್ನೂ ಹಲವಾರು ಆಲೋಚನೆಗಳನ್ನು ಇಟ್ಟು ಕೊಳ್ಳುತ್ತಾ ನೀವು ಹೋದರೆ ಮದುವೆಗಳಾಗುವುದು ಕಷ್ಟ ಯೋಚನೆ ಮಾಡಿ ದಯವಿಟ್ಟು ಅರ್ಥ ಮಾಡಿ ಕೊಳ್ಳಿ ನಿಮ್ಮ ಜಾತಕಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನಿಮಗೆ ಗೊತ್ತಿರುವ ಜ್ಯೋತಿಷ್ಯರ ತರ ಹೋಗಿ ಪರಿಹಾರ ಮಾಡಿ ಕೊಳ್ಳಿ ಖಂಡಿತವಾಗಲೂ ಒಳ್ಳೆಯದಾಗುತ್ತೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅದರ ಕಷ್ಟ ನೋವು ನೀವೇ ಪಡಬೇಕು ಬೇರೆಯವರಲ್ಲ ಆಲೋಚನೆ ಮಾಡಿ.
ಈಗಿನ ಕಾಲದಲ್ಲಿ ಕೆಲವರ *BIODATA* ಕೆಲಸ ಸಂಬಳ ನೋಡುವುದರ ಜೊತೆಗೆ ಪ್ರತ್ಯಕ್ಷವಾಗಿ ಭೇಟಿ ನೀಡಿ ಅವರ *ಮನೆತನ* *ಸಂಸ್ಕಾರ* *ಗುಣ*ಅವರ ಮನೆಯ ಪರಿಸ್ಥಿತಿ ಅವರ ಮನೆತನ ಎಲ್ಲವನ್ನು ನೋಡಿ ನಿರ್ಣಯ ತೆಗೆದು ಕೊಳ್ಳಿ. ಪ್ರತಿಯೊಬ್ಬರಿಗೆ *ಸರಕಾರಿ* ನೌಕರಿ ಎಲ್ಲಿಂದ ಸಿಗುತ್ತೆ. ಹಾಗೆ ಎಲ್ಲರೂ *software engnieer* ಆಗಲು ಸಾಧ್ಯವೇ…? ನಾವು ಸ್ವತಃ ನಮ್ಮ ಮಕ್ಕಳಿಗೆ *ಸರಕಾರಿ ನೌಕರಿ* ಕೊಡಿಸಲು ಸಾಧ್ಯವೇ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ಏಕೆಂತಂದರೆ ಯಾರಿಗೆ ಆಗಲಿ ಅವರ *ಜಾತಕಗಳಲ್ಲಿ* ಏನಿರುತ್ತೆ ಅದೇ ಸಿಗುತ್ತೆ ಅದು ಬಿಟ್ಟು ಬೇರೇನು ಸಿಗಲ್ಲ ಪ್ರಯತ್ನ ಪಟ್ಟರೆ ಸಿಗುವಂತಹದು ಸಿಗೋದಿಲ್ಲ ಏಕೆ ಅಂತ ಅಂದ್ರೆ ಟೈಮ್ ಮೀರಿ ಹೋಗಿರುತ್ತೆ ಅದು ಎಷ್ಟೋ ಜನಕ್ಕೆ ಅರ್ಥ ಆಗ್ತಾ ಇಲ್ಲ.
*ಹಳ್ಳಿಗಳಲ್ಲಿ* ಹೆಣ್ಣು ಮಕ್ಕಳು ಗಂಡು ಮಕ್ಕಳು ಇದ್ದಾರೆ ಅವರ ಊರುಗಳಲ್ಲಿ ಹೊಲ ಗದ್ದೆ ಇದ್ದು ದೊಡ್ಡ ದೊಡ್ಡ ತೆಂಗಿನ ತೂಪಗಳು ಲಕ್ಷಗಟ್ಟಲೆ ಸಂಪಾದನೆ ಮಾಡುವಂತಹ ಕುಟುಂಬಗಳು ಸಂಸ್ಕಾರವಂತ ಗುಣವಂತ ಮಕ್ಕಳು ಇದ್ದಾರೆ ಪರಿಶೀಲಿಸಿ ಈಗಿನ ಕೆಲವರು ಮನಸ್ಥಿತಿಗಳ ಪ್ರಕಾರ ಅಂತಹ ಜನ ಇಲ್ಲ ಅಂತ ತಿಳಿದು ಕೊಂಡಿದ್ದೀರಾ ನೀವು ಆಲೋಚನೆ ಈ ರೀತಿ ಮಾಡುತ್ತಿರುವುದು ಇದು ಸರಿನಾ ಮನೆಯಲ್ಲಿ ಕುಳಿತು ಕನಸು ಕಾಣಬೇಡಿ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ
*ಶೂನ್ಯದಿಂದ ಜಗತ್ತನ್ನು ನಿರ್ಮಾಣ ಮಾಡುವ ಹುಡುಗರು ಹುಡುಗಿಯರು ಇದ್ದಾರೆ,ಅಚ್ಚುಕಟ್ಟಾಗಿ ಮನೆತನ ನಡೆಸಿ ಕೊಂಡು ಹೋಗುವ ಹೆಣ್ಣುಮಕ್ಕಳು ಗಂಡು ಮಕ್ಕಳು ಇದ್ದಾರೆ*
ಶ್ರೀಮಂತಿಕೆಯ ಮದದಿಂದ ಕೆಡುವ ಕೆಡಿಸುವ *ಮಕ್ಕಳು ದುಶ್ಚಟಗಳ ದಾಸರು * ಇದ್ದಾರೆ. ಬರಿ *ಡಿಗ್ರೀ* ನೋಡಿ ನಿರ್ಣಯ ತೆಗೆದು ಕೊಳ್ಳುತ್ತಿದ್ದರೆ ಇದು ನೀವು ಮಾಡುತ್ತಿರುವಂತಹ ನಿಮ್ಮ *ದೊಡ್ಡ ತಪ್ಪು*. ಇಂಜಿನಿಯರ್ ಆದರು *15000 ರಿಂದ 20000/-* ವೇತನ ಪಡೆದು ಕೆಲಸ ಮಾಡುವವರಿದ್ದಾರೆ *ಪೊಲೀಸ್ ಭರ್ತಿ* ನಡೆದಾಗ ನೋಡಿ ತಮಗೆ ಬೇಕಾದ *ಡಿಗ್ರೀ* ಹೊಂದಿದ ಹುಡುಗರು ಸಾಲಲ್ಲಿ ನಿಂತಿರುತ್ತಾರೆ.
ಗಾರ್ಮೆಂಟ್ಸ್ ಗಳಲ್ಲಿ, ಖಾಸಗಿ ಕಾರ್ಖಾನೆ,ಆಸ್ಪತ್ರೆಗಳಲ್ಲಿ, *ಸೆಕ್ಯೂರಿಟಿ ಗಾರ್ಡ್* , *ಸ್ವಚ್ಚತಾ ಸಿಬ್ಬಂದಿ ಗಳಾಗಿ* ತಿಂಗಳಿಗೆ 10 ರಿಂದ 15 ಸಾವಿರಗಳಿಗೆ 8-10 ಗಂಟೆ ದುಡಿಯುವ ಪದವೀಧರ ಗಂಡು, ಹೆಣ್ಣುಮಕ್ಕಳು
ಬಹುಶಃ ಆ ಸಾಲಿನಲ್ಲಿ *ತಮ್ಮ ಮಗನೂ, ಮಗಳೂ* ಇರಲು ಬಹುದು ಇದರ ಬಗ್ಗೆ ವಿಚಾರ ಮಾಡಿ ಮತ್ತು *ಪರಿಶೀಲಿಸಿ ‘* ನೋಡಿದ ನಂತರ ನಿರ್ಣಯಿಸಿ. ಬರಿ *ಡಿಗ್ರೀ* ನೇ ಬೇಕು ಎಂದರೆ *ರಾತ್ರಿ 9:00 ನಂತರ ಬಾರ್ ನಲ್ಲಿ ಹೋಗಿ ನೋಡಿ* ಅನೇಕ *ಡಿಗ್ರೀ ಹೋಲ್ಡರ್ಸ್* ಕಾಣಿಸುತ್ತಾರೆ. ಬರೀ ನೌಕರಿ ಸಿಗಲಿಲ್ಲವೆಂದು ದುಖಃ ಮರೆಯುವ ಔಷಧಿಯ ಜೊತೆಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳ್ತಾರೆ ಮಾಡ್ತಾರೆ ಇದು ಅವರು ತಪ್ಪಲ್ಲ ಪರಿಸ್ಥಿತಿ ಹಾಗೆ ಇದೆ.
*ಇಂದು ಅನೇಕ ಹುಡುಗಿಯರ ಹುಡುಗರ biodata ನೋಡಿ ನಗಬೇಕು ಪಳಬೇಕು ಒಂದು ಗೊತ್ತಾಗ್ತಾ ಇಲ್ಲ ಇವರ ಮುಂದಿನ ಜೀವನ ಹೇಗಿರುತ್ತೆ ಆಲೋಚನೆ ಮಾಡಿ ನೋಡಿದರೆ ತುಂಬಾ ಕಷ್ಟಕರ ಅನಿಸುತ್ತದೆ* ಕಾರಣ ಜನ್ಮ ದಿನಾಂಕ ನೋಡಿ, ಬಹಳ ಹುಡುಗಿಯರ ವಯಸ್ಸು30 ರಿಂದ 35 ವರ್ಷಗಳಾದರೂ ಅವರ *ಇಚ್ಛೆ ,ಭಾವನೆ* ಗಳ ವಿಚಾರ ಮಾಡುವದಿಲ್ಲ. ಇವತ್ತಿನ ದಿನಮಾನದಲ್ಲಿ ಮಾನವನ ಆಯಸ್ಸು ಸರಾಸರಿ 60 ರಿಂದ 65 ಒಳಗಡೆ ವರ್ಷ ಅಷ್ಟೇ, ಇನ್ನು ಉಳಿದಿರುವ ,ಬಾಕಿ ವರ್ಷದಲ್ಲಿ ಯಾವ ಸುಖ ಪಡೆಯುತ್ತಾರೆ ಮಕ್ಕಳು ಹುಟ್ಟಿದರೆ ಅವರು ದೊಡ್ಡೋರಾಗುವುದು ಯಾವಾಗ ಅವರಿಗೆ ನೀವು ಮದುವೆ ಮಾಡೋದು ಯಾವಾಗ ನೀವೇ ಯೋಚನೆ ಮಾಡಿ ನಿಮ್ಮನ್ನು ನೀವೇ ಕೇಳಿ ಕೊಳ್ಳಿ ?
*ಅತಿಯಾಗಿ ಪ್ರೀತಿ ಮಾಡಿ ಮಕ್ಕಳ ಸಂಸಾರ ಜೀವನ ಏಕೆ ಹಾಳು ಮಾಡುತ್ತೀರಿ…* ಸರಕಾರಿ ನೌಕರಿಗೆ ಅಥವಾ ಒಳ್ಳೆಯ ನೌಕರಿಗೆ ಲಕ್ಷ ಲಕ್ಷ ಕೊಟ್ಟು ಸೇರುತ್ತಾರೆ ಮುಂದೆ ಅವರು ಲಂಚ ತೆಗೆದು ಕೊಂಡೇ ಕೆಲಸ
ಮಾಡುತ್ತಾರೆ. ಮಹಾಭಾರತದಲ್ಲಿ ಯುಧಿಷ್ಠರನು ಒಂದು ಸತ್ಯ ಹೇಳುತ್ತಿದ್ದ *ಸಾವು* ಎಲ್ಲರಿಗೂ ಇದೆ…ಆದರೆ… *ಸಾಯಲು* ಯಾರು ತಯಾರಿಲ್ಲ..!, ಇವತ್ತಿನ ಪರಿಸ್ಥಿತಿ ಬಹಳ ಗಂಭೀರ ವಾಗಿದೆ.
*ಅನ್ನ* ಎಲ್ಲರಿಗೂ ಬೇಕು… ಆದರೆ… *ರೈತನ* ಜೊತೆ ಮದುವೆ ಇಷ್ಟವಿಲ್ಲಾ ಯಾಕೆ
*,ನೀರು* ಎಲ್ಲರಿಗೂ ಬೇಕು…. ಆದರೆ…. *ನೀರನ್ನು* ಉಳಿಸಬೇಕು ಅಂತ ಅನ್ನಿಸುವುದಿಲ್ಲ. *ನೆರಳು* ಎಲ್ಲರಿಗೂ ಬೇಕು…………. ಆದರೆ……… *ಗಿಡ ಮರಗಳನ್ನು* ಬೆಳೆಸಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ…………
*ಸೊಸೆ* ಎಲ್ಲರಿಗೂ ಬೇಕು… ಆದರೆ. ಹೆಣ್ಣು ಮಗು ಹುಟ್ಟುವುದು ಬೇಡ ಗಂಡು ಮಗು ಹುಟ್ಟಬೇಕು ಯಾವುದೋ ಒಂದು ಮಗು ಹುಟ್ಟಲಿ ಅಂತ ಯಾರಿಗೂ ಅನ್ನಿಸುವುದಿಲ್ಲ………………….ಈ ರೀತಿ ಯಾರಿಗೂ ಅನ್ನಿಸುವುದಿಲ್ಲ ಯಾಕೆ
*ಸರೀ ಅನಿಸಿದರೆ*
*ಮುಂದೆ ಕಳುಹಿಸಿರಿ ಮನೆ,ಮಕ್ಕಳನ್ನು ಪರಿವರ್ತನೆಯ ಹಾದಿಯಲ್ಲಿ ತನ್ನಿ*
ಆಮೇಲೆ ಹೇಳಿರುವಂತಹ ಒಂದೊಂದು ಮಾತುಗಳು ಒಂದು ಕಡೆ ಸತ್ಯ ಅಡಗಿದೆ ದಯವಿಟ್ಟು ಈ ಸತ್ಯವನ್ನು ಎಲ್ಲರೂ ಅರಿತು ನಮ್ಮ ಸಂಸಾರ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ…….. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಅರ್ಥಮಾಡಿ ಕೊಂಡು ಮುಂದುವರಿಸಿ. ಇದರಲ್ಲಿ ಏನಾದರೂ ತಪ್ಪು ಇದ್ದರೆ ಕ್ಷಮಿಸಿ,