ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!
ದೀಪಾವಳಿ ಒಂದು ತರಹ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಹೊರಳುವ ಹಬ್ಬ. ಬೆಳಕಿನ ಈ ಹಬ್ಬ ಚಂದ್ರಮ ಚೆಲ್ಲುವ ಬೆಳಂದಿಗಳಿಂದಲ್ಲ, ಬದಲಿಗೆ ಎಲ್ಲೆಡೆ ಪಸರಿಸಿದ ಅಮಾವಾಸ್ಯೆಯ ಕತ್ತಲನ್ನು ಸೀಳಿಕೊಂಡು ಶುಕ್ಲಪಕ್ಷದ ಚಂದ್ರನ ಕಾಂತಿ ಚೆಲ್ಲಬೇಕೆಂದು, ನಮ್ಮ ಬದುಕೂ ಸಹ ದಿನೇ ದಿನೇ ಅಭಿವೃದ್ಧಿಗೊಳ್ಳಬೇಕು ಎಂಬುದರ ಸಂಕೇತ. ಈ ರೀತಿ ಬೇಸರ, ದುಃಖದ ಜೀವನದಲ್ಲಿ ಸಂತೋಷದ ಅಲೆ ಉಕ್ಕಿ ಬರಲೆಂದು ಹಾರೈಸುತ್ತದೆ. ಖುಷಿ, ಸಂತಸ ಎಂಬುದು ನಮ್ಮ ಅಕ್ಕಪಕ್ಕವೇ ಇದೆ, ಅದು ಸಣ್ಣಪುಟ್ಟ ವಿಷಯಗಳಲ್ಲಿ ತುಂಬಿದೆ. ಇದನ್ನು ನಾವು ಗುರುತಿಸಬೇಕಷ್ಟೆ. ದೀಪಾವಳಿ ಹಬ್ಬ ಹಳೆಯ, ಮರೆತುಹೋದ ಸಂಬಂಧಗಳನ್ನು ನೆನಪಿಸುವ, ಜಾಗೃತಗೊಳಿಸುವ, ಸದಾ ನಂಟು ಮುಂದುರಿಸುವ ಹಬ್ಬಾಗಿಲಾಗಿದೆ.
ಇಂದಿನ ಈ ಟೆಕ್ನಿಕ್ ಸೇವೆಯ ಪ್ರಪಂಚದಲ್ಲಿ, ಮಾನವ ಸದಾ ಸರ್ವದಾ ಒಬ್ಬಂಟಿ ಎನಿಸುತ್ತಾನೆ. ಇಂಥ ಕಡೆ ನಾವು ದಿನದಿನ ಹೊಸ ಹೊಸ ಸಂಬಂಧದ ಸಸಿ ನೆಟ್ಟು ಪೋಷಿಸಬೇಕಾದುದು ಅತ್ಯಗತ್ಯ. ದೀಪಾವಳಿಯ ನೆಪದಲ್ಲಿ ನಾವು ಕುಟುಂಬದ ಸದಸ್ಯರು, ನೆಂಟರಿಷ್ಟರ ಜೊತೆ ಒಂದಿಷ್ಟು ಕ್ವಾಲಿಟಿ ಟೈಂ ಕಳೆದು, ಜಿಡ್ಡುಗಟ್ಟಿದ ಮನಸ್ಸಿಗೆ ಬೆಳಕು ತುಂಬು ಕೆಲಸ ಮಾಡಬೇಕು. ಹಬ್ಬ ಇರುವುದೇ ಖುಷಿ ಹಂಚಲು! ದೀಪಾವಳಿಯ ಹಬ್ಬವಂತೂ ಖುಷಿ ಮತ್ತು ಕಾಂತಿ ತುಂಬಿ ತರುತ್ತದೆ. ಈ ಹಬ್ಬವನ್ನು ನಿಮ್ಮ ಕುಟುಂಬದ ಜೊತೆ, ಸಣ್ಣಪುಟ್ಟ ಸಂತಸದ ಕ್ಷಣಗಳು ಹೆಚ್ಚುವಂತೆ ಸಡಗರ, ಸಂಭ್ರಮದಿಂದ ಆಚರಿಸಿ.
ಮನೆಗೆ ವಿನೂತನ ಗೃಹಾಲಂಕಾರ
ದೀಪಾವಳಿಯಂದು ನಿಮ್ಮ ಮನೆಯ ಗೃಹಾಲಂಕಾರದಲ್ಲಿ ಈ ಸಲ ತುಸು ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಪತಿ, ಮಕ್ಕಳು, ಇತರ ಸದಸ್ಯರ ಜೊತೆ 2 ದಿನಗಳ ಮೊದಲಿನಿಂದಲೇ ಮನೆಯ ಸ್ವಚ್ಛತೆ, ಶುಭ್ರತೆ ಆರಂಭಿಸಿ. ಇದರಿಂದ ಅವರ ಜೊತೆ ಸಮಯ ಕಳೆಯುವ ಅವಕಾಶ ಸಿಗುತ್ತದೆ, ಪತಿ ಜೊತೆ ಸಣ್ಣಪುಟ್ಟ ಹಾಸ್ಯಚಟಾಕಿ, ಜೋಕ್ಸ್ ಹಂಚಿಕೊಳ್ಳುತ್ತಾ ಸರಸಮಯವಾಗಿ ಕಾಲ ಕಳೆಯಿರಿ. ಮಕ್ಕಳು ಸಹ ನಿಮ್ಮ ಈ ಹೊಸ ಉತ್ಸಾಹ ಕಂಡು, ಆನಂದದಿಂದ ನಿಮ್ಮೊಂದಿಗೆ ಸಂತಸದ ಕ್ಷಣ ಹಂಚಿಕೊಳ್ಳುತ್ತಾರೆ.
ಮನೆಯಲ್ಲಿನ ಹಳೆಯ ಸಾಮಗ್ರಿ ಎಸೆಯುವ ಬದಲು ಅವನ್ನು ರೀಯೂಸ್ ಮಾಡಲು ಯತ್ನಿಸಿ. ಇವನ್ನು ರಿಪೇರಿ ಮಾಡಿಸಿ, ಹೊಸ ಲುಕ್ ಕೊಡಿ. ತೀರಾ ಅಗತ್ಯ ಇವರು ಬಡವರಿಗೆ ಅವನ್ನು ಹಂಚಿರಿ. ನೀವು ಹಳೆಯ ಬಾಟಲಿಯಿಂದ ಹೊಸ ವ್ಯಾಂಪ್ ಮಾಡಬಹುದು. ಹಳೆಯ ಡಬ್ಬಾ ಅಲಂಕರಿಸಿ ಗಿಡಕ್ಕೆ ಹೊಸ ಪಾಟ್ ಮಾಡಿ. ಈ ರೀತಿ ನಿಮ್ಮ ಹಳೆಯ ಸಾಮಗ್ರಿಗಳಿಂದ ಮನೆಗೆ ಹೊಸ ಲುಕ್ ನೀಡಿ. ಇದರಿಂದ ನಿಮ್ಮ ಮನೆ ಕ್ರಿಯೇಟಿವಿಟಿಯಿಂದ ನವೀನ ಅಲಂಕಾರ ಕಾಣುವಂತಾಗುತ್ತದೆ, ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕೂ ಸಹ ಮಕ್ಕಳ ಸಹಾಯ ಪಡೆಯಿರಿ.
ಸದ್ಯದ ಸಮಯದಲ್ಲಿ ಬಹುತೇಕ ಎಲ್ಲರ ಮನೆಗಳಲ್ಲೂ ಸಣ್ಣ ಮಕ್ಕಳ ನಡುವೆ ಕ್ಲೇ ಗೇಮ್ ಹೆಚ್ಚು ಜನಪ್ರಿಯ. ಇದು ಒಂದು ತರಹದ ರಬ್ಬರ್ ನಂಥ ಲೈಟ್ ಪದಾರ್ಥ ಆಗಿದ್ದು, ಸಣ್ಣ ಮಕ್ಕಳ ಕಲ್ಪನೆ ಮತ್ತು ಕ್ರಿಯಾಶೀಲತೆ ಗಮನಿಸಿಕೊಂಡೇ ತಯಾರಿಸಲಾಗಿದೆ. ಕ್ಲೇ ನಿಜಕ್ಕೂ ಒಂದು ಬಗೆಯ ಫ್ಲೆಕ್ಸಿಬಲ್ ಪದಾರ್ಥ ಆಗಿದ್ದು, ಮಕ್ಕಳು ತಾವೇ ಇದಕ್ಕೆ ಬಯಸಿದ ಆಕಾರ ನೀಡಬಹುದು. ಶಾಲೆಯಲ್ಲೂ ಸಹ ಮಕ್ಕಳಿಗೆ ಕ್ಲೇ ನೀಡಿ ಹೊಸ ಹೊಸ ವಿಷಯ ಕಲಿಸಲಾಗುತ್ತದೆ. ನೀವೇಕೆ ಮಕ್ಕಳಿಗೆ ಹೇಳಿ ದೀಪಾವಳಿಯ ಈ ಸಂದರ್ಭದಲ್ಲಿ ಗೃಹಾಲಂಕಾರಕ್ಕೆ ಬೇಕಾಗುವಂಥ ಸಣ್ಣಪುಟ್ಟ ಹಣತೆ, ಕ್ಯಾಂಡಲ್ ಇತ್ಯಾದಿ ಆಕೃತಿಗಳನ್ನು ಅವರಿಂದ ಮಾಡಿಸಬಾರದು? ಈ ರೀತಿ ಹೊಸ ಪ್ರೇರಣೆ ಪಡೆದು ಅವರು ಹೆಚ್ಚು ಉತ್ಸಾಹಿತರಾಗುತ್ತಾರೆ. ಇದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ, ಅವರಿಗೆ ಒಂದಿಷ್ಟು ಹೊಸತನ್ನು ಕಲಿಯುವ ಅವಕಾಶ ಸಿಗುತ್ತದೆ. ಅವರ ಜೊತೆ ನಿಮ್ಮ ಟ್ಯೂನಿಂಗ್ ಇನ್ನಷ್ಟು ಸ್ಟ್ರಾಂಗ್ ಆಗುತ್ತದೆ.
ಹೂ ಎಂದರೆ ಯಾರಿಗೇ ತಾನೇ ಆಕರ್ಷಕ ಎನಿಸದು? ಹೀಗಾಗಿ ಈ ಸಲದ ದೀಪಾವಳಿಗೆ ಇಡೀ ಮನೆಯನ್ನು ಹೂಗಳಿಂದ ಸಿಂಗರಿಸಿ. ಅಗತ್ಯ ಎನಿಸಿದರೆ ಕೃತಕ ಹೂಗಳನ್ನೂ ಬಳಸಿಕೊಳ್ಳಿ. ಇದರಿಂದ ನಿಮ್ಮ ಮನೆ ಅತಿ ಸುಂದರ ಎನಿಸುತ್ತದೆ, ಅರಳಿದಂತೆ ಕಾಣುತ್ತದೆ.
ನೀವು ಮಕ್ಕಳೊಂದಿಗೆ ಕಲೆತು ನಿಮ್ಮ ನೆಂಟರಿಷ್ಟರು, ಫ್ರೆಂಡ್ಸ್ ಗಾಗಿ ನಿಮ್ಮ ಕೈಗಳಿಂದಲೇ ಸ್ವತಃ ತಯಾರಿಸಬಹುದಾದ ಹ್ಯಾಂಪರ್ಸ್ ರೆಡಿ ಮಾಡಿ. ಕೆಲವು ಕಲರ್ ಫುಲ್ ಥರ್ಮಾಕೋಲಾ ಬಾಕ್ಸ್ ಸಹ ಬಳಸಿಕೊಳ್ಳಿ. ಚಾಕಲೇಟ್, ಸ್ವೀಟ್ಸ್, ಡ್ರೈ ಫ್ರೂಟ್ಸ್ ಇತ್ಯಾದಿ ಅಲಂಕರಿಸಿ ಹ್ಯಾಂಪರ್ಸ್ ರೆಡಿ ಮಾಡಿ. ಜೊತೆಗೆ ಹಣತೆ, ಸೆಂಟೆಡ್ ಕ್ಯಾಂಡಲ್ಸ್ ಇತ್ಯಾದಿ ಸಹ ಕೊಡಿ. ನಿಮ್ಮ ಹ್ಯಾಂಪರ್ ಗಳ ಜೊತೆ ವಿಂಡ್ ಚೈಮ್ಸ್ ಸಹ ಇಡಿ. ಮಕ್ಕಳು ಇದರಿಂದ ಬಹಳ ಥ್ರಿಲ್ ಆಗುತ್ತಾರೆ.
ಈ ಸಂದರ್ಭದಲ್ಲಿ ನೀವು ಮನೆಯಲ್ಲೇ ತಯಾರಿಸಿದ ಬಣ್ಣಬಣ್ಣದ ಕ್ಯಾಂಡಲ್ಸ್ ಸಹ ಕೊಡಬಹುದು. ಮಕ್ಕಳ ಕಂಪನಿ ಇವನ್ನು ಮಾಡಲು ಹೆಚ್ಚು ಉತ್ಸಾಹ ನೀಡುತ್ತದೆ.
ಇದೇ ತರಹ ಮಕ್ಕಳಿಗೆ ಬಣ್ಣ ಬಣ್ಣದ ವಿಶಿಷ್ಟ ವಿನ್ಯಾಸದ ರಂಗೋಲಿ ಎಂದರೆ ಬಲು ಇಷ್ಟ. ನೀವು ಜೊತೆಗಿದ್ದರೆ, ಅವರಿಗೆ ಈ ರಂಗೋಲಿ ಬಿಡಿಸುವುದು ಬಹಳ ಆಸಕ್ತಿಕರ ಹಾಗೂ ಸ್ವಾರಸ್ಯದ ಸಂಗತಿ ಆಗುತ್ತದೆ. ನೀವು ಅವರಿಗೆ ರಂಗೋಲಿ ಕಲಿಸಿ, ನಿಮ್ಮ ಇತರ ಕೆಲಸಗಳ ಕಡೆ ಗಮನ ಹರಿಸಬಹುದು. ರಂಗೋಲಿಯ ಕೆಲಸ ಮಕ್ಕಳನ್ನು ಬಿಝಿಯಾಗಿಡುವುದಷ್ಟೇ ಅಲ್ಲ, ಅವರ ಕ್ರಿಯೇಟಿವಿಟಿಯ ಖುಷಿಯನ್ನೂ ಹೆಚ್ಚಿಸುತ್ತದೆ.
ದೀಪಾವಳಿ ಹಬ್ಬವನ್ನು ಸ್ಪೆಷಲ್ ಆಗಿಸಲು, ಮಕ್ಕಳಿಗೆ ಇದಕ್ಕೆ ಸಂಬಂಧಿಸಿದ ಕಥೆಗಳನ್ನು ಹೇಳಿ. ನಿಮ್ಮ ಮನೆಮಂದಿ ಜೊತೆ ಕುಳಿತು, ಈ ಹಬ್ಬಕ್ಕೆ ಸಂಬಂಧಿಸಿದ ಹಳೆಯ ಫೋಟೋ ನೋಡುತ್ತಾ, ನಿಮ್ಮ ನೆನಪುಗಳನ್ನು ತಾಜಾ ಮಾಡಿಕೊಳ್ಳಿ. ದೀಪಾವಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಿ.
ದೀಪಾವಳಿಯ ಅನನ್ಯ ಉಡುಗೊರೆ
ಪತ್ನಿಯರು ತಮ್ಮ ಪತಿಯರಿಗೆ, ಬ್ಯೂಟಿಫುಲ್ ಡಿಸೈನ್ ಮಾಡಿದ ಟ್ರೆಡಿಷನಲ್ ಸ್ಟೈಲ್ ಕುರ್ತಾ ಪೈಜಾಮಾ ಸೆಟ್ ಗಿಫ್ಟ್ ನೀಡಬಹುದು.
ನೀವು ಮನೆಮಂದಿಯನ್ನೆಲ್ಲ ಒಟ್ಟು ಸೇರಿಸಿ, ಒಂದು ಮೆಮೊರಿ ಕೊಲ್ಯಾಜ್ ಮಾಡಬಹುದು. ಇದರಿಂದ ಆಯ್ದ ವಿಭಿನ್ನ ಫೋಟೋಗಳನ್ನು ಫ್ರೇಮ್ ಹಾಕಿಸಿ, ಮೆಯ್ನ್ ಹಾಲ್ ನಲ್ಲಿ ಅಳವಡಿಸಿ. ಇದು ಎಲ್ಲರಿಗೂ ಹಳೆ ನೆನಪುಗಳ ಒಂದು ಸುಂದರ ಗಿಫ್ಟ್ ಆಗುತ್ತದೆ.
ಗಂಡಸರು ತಮ್ಮ ಪತ್ನಿಗೆ ಮೇಕಪ್ ಸೆಟ್ ಗಿಫ್ಟ್ ಆಗಿ ನೀಡಬಹುದು. ಮೇಕಪ್ ಸೆಟ್ ನಲ್ಲಿ ಇತರ ವಸ್ತುಗಳೊಂದಿಗೆ ಅಗತ್ಯವಾಗಿ BB ಕ್ರೀಂ ಇರಿಸಲು ಮರೆಯದಿರಿ. ಏಕೆಂದರೆ ಇದರ ಬಳಕೆಯಿಂದ ನಿಮ್ಮ ಪತ್ನಿಯ ಮುಖ ಕ್ಷಣಗಳಲ್ಲಿ ಗ್ಲೋ ಗಳಿಸುತ್ತದೆ.
ಮಕ್ಕಳ ಕೋಣೆಯನ್ನು ವಿಭಿನ್ನವಾಗಿ ಅಲಂಕರಿಸಿ ಅವರನ್ನು ಬೆರಗಾಗಿಸಿ.
ಮಕ್ಕಳಿಗೆ ಪರ್ಸನೈಸ್ಡ್ ಗಿಫ್ಟ್ಸ್ ಬಲು ಇಷ್ಟ. ಅದರಲ್ಲಿ ಅವರಿಷ್ಟದ ಕಾರ್ಟೂನ್ ಚಿತ್ರವಿದ್ದರೆ ಇನ್ನೂ ಖುಷಿ ಹೆಚ್ಚು! ಹಾಲಿಗಾಗಿ ಕಪ್, ವಾಟರ್ ಬಾಟಲ್, ಮಕ್ಕಳ ಟವೆಲ್, ಕಲರ್ಸ್ ಸ್ಕೆಚ್, ಜಾಮಿಟ್ರಿ ಬಾಕ್ಸ್ ಇತ್ಯಾದಿಗಳ ಮೇಲೆ ಅವರ ಹೆಸರು, ಮೆಚ್ಚಿನ ಕಾರ್ಟೂನ್ ಮೂಡಿಸಿ ಕೊಡಿ. ಅವರು ಖುಷಿಯಿಂದ ಕುಣಿದಾಡುತ್ತಾರೆ.
ಹಬ್ಬ ಎಂದ ಮೇಲೆ ಹೊಸ ಬಟ್ಟೆ ಧರಿಸಲು ಮಕ್ಕಳು ಉತ್ಸಾಹದಿಂದ ಸದಾ ಮುಂದಾಗುತ್ತಾರೆ. ಈ ಸಲದ ದೀಪಾವಳಿಗೆ ನೀವು ಅವರಿಗೆ ಟ್ರೆಡಿಷನ್ ಲುಕ್ಸ್ ಇವರು ಡ್ರೆಸ್ ಕೊಡಿಸಿ. ಇದಕ್ಕಾಗಿ ಆನ್ ಲೈನ್ ನಲ್ಲಿ ತಡಕಾಡಿ, ನಿಮ್ಮ ಮಕ್ಕಳು ಬಯಸುವಂಥ ಅತ್ಯಾಕರ್ಷಕ ಬಣ್ಣದ ಟ್ರೆಂಡಿ ಡ್ರೆಸ್ ಕೊಡಿಸಿ.
ಹಬ್ಬಕ್ಕೆ ಮಿಠಾಯಿ ಬೇಕು, ಮಕ್ಕಳಿಗೆ ಈ ನೆಪದಲ್ಲಿ `ಸ್ಪೆಷಲ್ ಚಾಕಲೇಟ್ಸ್’ ಕೊಡಿಸಿ, ಅದು ಉತ್ತಮ ದೀಪಾವಳಿ ಗಿಫ್ಟ್ ಆಗುತ್ತದೆ. ಸಾಧ್ಯವಾದರೆ ಮನೆಯಲ್ಲೇ ಚಾಕಲೇಟ್ ತಯಾರಿಸಲು ಟ್ರೈ ಮಾಡಿ ನೋಡಿ.
ಒಟ್ಟೊಟ್ಟಿಗೆ ಶಾಪಿಂಗ್ ಮಾಡಿ
ದೀಪಾವಳಿಯ ಈ ಸಂದರ್ಭದಲ್ಲಿ ಬೇಕಾದಷ್ಟು ಶಾಪಿಂಗ್ ಇರುತ್ತದೆ. ಇದು ಬಹಳ ಸುಸ್ತು ಮಾಡಿಸುವ ಕೆಲಸ. ಇದಕ್ಕಾಗಿ ನೀವು ಪತಿ ಮಕ್ಕಳನ್ನೂ ಜೊತೆಗೆ ಕರೆದೊಯ್ದರೆ, ನಿಮಗೆ ಸುಸ್ತು ಮರೆಯಾಗಿ ಹೆಚ್ಚಿನ ಉಲ್ಲಾಸ ಮೂಡುತ್ತದೆ.
ಅದೇ ತರಹ ನೀವು ನಿಮ್ಮ ನಾದಿನಿ, ಅತ್ತೆ, ಓರಗಿತ್ತಿ, ಮೈದುನ, ಅಕ್ಕತಂಗಿ, ಫ್ರೆಂಡ್ಸ್ ಜೊತೆಗೂಡಿ ಶಾಪಿಂಗ್ ಮಾಡಿದರೆ, ಟೈಂ ಹೋದದ್ದೇ ಗೊತ್ತಾಗುವುದಿಲ್ಲ. ಇದರಿಂದ ಎಲ್ಲರೂ ಔಟಿಂಗ್ ಹೊರಟಂತೆ ಆಗುತ್ತದೆ, ಜೊತೆ ಜೊತೆಗೆ ಟೈಂ ಕಳೆದ ಖುಷಿಯೂ ಇರುತ್ತದೆ. ಜೊತೆಗೆ ನಿಮ್ಮ ಶಾಪಿಂಗ್ ಬಜೆಟ್ ನಲ್ಲೇ ಇರುವಂತೆ ಅವರುಗಳು ನೋಡಿಕೊಳ್ಳುತ್ತಾರೆ, ಉಳಿತಾಯ ಆಗುತ್ತದೆ.
ದೀಪಾವಳಿಯ ತಯಾರಿಯ ಮಧ್ಯೆ ಆಕಸ್ಮಿಕವಾಗಿ ಮನೆಗೆ ಅತಿಥಿಗಳು ಬಂದರೆ, ಅವರನ್ನೂ ನಿಮ್ಮ ಜೊತೆ ಶಾಪಿಂಗ್ ಗೆ ಹೊರಡಿಸಿ. ಆದರೆ ಈ ಸಡಗರಗಳ ಮಧ್ಯೆ ನಿಮಗೆ ಮೇಕಪ್ ಮಾಡಿಕೊಳ್ಳಲು ಸಮಯವೇ ಸಿಗೋಲ್ಲ. ಅರ್ಜೆಂಟ್ ಹೊರಡಬೇಕು, ಸಮಯದ ಅಭಾವ, ಮೇಕಪ್ ಸಹ ಆಗಬೇಕು…. ಆಗ ನೀವು ತಕ್ಷಣ BB ಕ್ರೀಂ ಬಳಸಿಕೊಳ್ಳಿ. ಇದು ನಿಮಗೆ ಉತ್ತಮ ಮೇಕಪ್ ನ ಫಿನಿಶ್ ನೀಡುತ್ತದೆ. ಇದಕ್ಕಾಗಿ ಬಹಳ ಸಮಯ ಏನೂ ಬೇಕಾಗೋಲ್ಲ ಇದನ್ನು ನೀವು ಮುಖಕ್ಕೆ ಹಚ್ಚಿಕೊಂಡಿದ್ದೇ, ಮುಖ ಅಪೂರ್ವ ಗ್ಲೋ ಗಳಿಸುತ್ತದೆ. ನಂತರ ನೀವು ಅತಿಥಿಗಳ ಆದರೋಪಚಾರ ನಡೆಸಿ, ಆರಾಮವಾಗಿ ಶಾಪಿಂಗ್ ಸಹ ಮಾಡಬಹುದು. ಒಟ್ಟಾರೆ ಕೆಲವೇ ನಿಮಿಷಗಳಲ್ಲಿ ನೀವು ರೆಡಿ ಆಗಬಹುದು.
ಮನೆಯಲ್ಲೇ ಬಗೆ ಬಗೆಯ ವ್ಯಂಜನ
ದೀಪಾವಳಿಗಾಗಿ ಬಗೆ ಬಗೆಯ ಭಕ್ಷ್ಯಗಳು ಪ್ರತಿ ಮನೆಯಲ್ಲೂ ತಯಾರಾಗುತ್ತವೆ. ನೀವು ಆದಷ್ಟೂ ಹೊರಗಿನ ನಕಲಿ ಮಿಠಾಯಿ ಕೊಳ್ಳುವ ಬದಲು, ನಿಮ್ಮ ಕೈಲಾದಷ್ಟು ಮನೆಯಲ್ಲೇ ತಯಾರಿಸಿ. ಮನೆಯವರ ಆಯ್ಕೆಗೆ ಆದ್ಯತೆ ಇರಲಿ.
ಈ ಸಂದರ್ಭದಲ್ಲಿ ನೀವು ಅಗತ್ಯವಾಗಿ ಪತಿ, ಮಕ್ಕಳ ಸಹಾಯ ಪಡೆಯಬಹುದು. ದೈನಂದಿನ ಕೆಲಸದ ಮಧ್ಯೆ ಅವರಿಗೂ ಇದಕ್ಕೆಲ್ಲ ಪುರಸತ್ತು ಇರೋಲ್ಲ. ಆದರೆ ಹಬ್ಬದ ಈ ಸಂದರ್ಭದಲ್ಲಿ ಕೂಡಿ ಅಡುಗೆ ಮಾಡುವ ಸುರ್ವಣಾವಕಾಶ ಕಳೆದುಕೊಳ್ಳಬೇಡಿ. ಇಂಥ ಸಣ್ಣಪುಟ್ಟ ಸಂಭ್ರಮದ ಕ್ಷಣಗಳು ಖುಷಿ ಹೆಚ್ಚಿಸುತ್ತವೆ, ಇದಕ್ಕಾಗಿ ದೊಡ್ಡ ಸಂತೋಷ ಕೂಟ ಬೇಡ.
ನಿಮ್ಮ ನೆಂಟರಿಷ್ಟರು ಈ ಸಂದರ್ಭದಲ್ಲಿ ಮಾಡಿದ ವ್ಯಂಜನ ಟೇಸ್ಟ್ ಮಾಡಿ, ನಿಮಗೆ ಅದನ್ನು ಸುಧಾರಿಸುವ ಸಲಹೆ ನೀಡಬಲ್ಲವರಾದರೆ, ಅಗತ್ಯ ಅಂಥವರನ್ನು ಮನೆಗೆ ಕರೆಸಿಕೊಳ್ಳಿ. ಹಿರಿಯರಾದರೆ ಅವರ ಮನೆಗೇ ಕೊಂಡುಹೋಗಿ. ಹಬ್ಬಕ್ಕೆ ಸಾಧ್ಯವಿದ್ದಷ್ಟೂ ನಿಮ್ಮ ನೆಂಟರಿಷ್ಟರನ್ನು ಮನೆಗೆ ಕರೆಸಿಕೊಳ್ಳಿ. ಈ ರೀತಿ ಗೆಟ್ ಟು ಗೆದರ್ ಸಹ ಆಗುತ್ತದೆ. ಮಕ್ಕಳಿಗಂತೂ ಇಂಥ ಸಂದರ್ಭ ಬಲು ಇಷ್ಟ. ಹಬ್ಬದಲ್ಲಿ ಎಲ್ಲರೂ ಕಲೆತು ರುಚಿಕರ ಪಕ್ವಾನ್ನ ಸವಿದರೆ, ಸಂಬಂಧದ ತಂತು ಇನ್ನಷ್ಟು ಗಟ್ಟಿಯಾಗುತ್ತದೆ.
ನೆಂಟರಿಷ್ಟರೊಂದಿಗೆ ಸಂಭ್ರಮಿಸಿ
ಇಂದಿನ ವೇಗದ ಜೀವನಶೈಲಿ, ಸತತ ಬಿಡುವಿಲ್ಲದ ಕಾರ್ಯಕಲಾಪಗಳ ಮಧ್ಯೆ, ನಾವು ನಮ್ಮ ನೆಂಟರಿಷ್ಟರ ಜೊತೆ ಸಂತಸದ ಕ್ಷಣ ಹಂಚಿಕೊಳ್ಳಲು ಆಗುವುದೇ ಇಲ್ಲ. ಆದರೆ ಇಂಥ ದೊಡ್ಡ ಹಬ್ಬಗಳು ಬಂದಾಗ, ಅವರೆಲ್ಲರ ಜೊತೆ ಬೆರೆತು ಸಂಭ್ರಮಿಸಲು ಒಂದು ನೆಪ ಸಿಗುತ್ತದೆ. ಅದರಲ್ಲೂ ದೀಪಾವಳಿಯಂಥ ಗ್ರಾಂಡ್ ಹಬ್ಬಕ್ಕೆ ಎಲ್ಲರೂ ಕಲೆತಾಗಲೇ ಚೆನ್ನ! ಇದು ನಮಗೆ ಬೇಕಾದ ಎಲ್ಲಾ ಆತ್ಮೀಯರೊಂದಿಗೂ ಕಲೆತು ಸಡಗರ ಸಂಭ್ರಮ ಹಂಚಿಕೊಳ್ಳಲು ಸುರ್ವಣಾವಕಾಶ ನೀಡುತ್ತದೆ. ಈ ನೆಪದಲ್ಲಿ ದೀಪಾವಳಿ ನಮ್ಮ ಸಂಬಂಧಗಳ ಬೆಸುಗೆಯನ್ನು ಸುಧಾರಿಸುತ್ತದೆ. ನೀವು ಈ ಸಲದ ದೀಪಾವಳಿಗೆ ಇಂಥ ಪ್ರಯತ್ನಪಟ್ಟು, ನಿಮ್ಮ ಸಂತೋಷ ಹೆಚ್ಚಿಸಿಕೊಳ್ಳಿ.
ನೀವು ನೆಂಟರಿಷ್ಟರನ್ನು ಭೇಟಿಯಾಗಲು ಹೋಗುವಾಗ ಅಗತ್ಯವಾಗಿ ಮುಖಕ್ಕೆ BB ಕ್ರೀಂ ಹಚ್ಚಿಕೊಳ್ಳಲು ಮರೆಯದಿರಿ, ಏಕೆಂದರೆ ಫೆಸ್ಟಿವ್ ಲುಕ್ಸ್ ಗಾಗಿ ಮುಖದಲ್ಲಿ ಗ್ಲೋ ಅಗತ್ಯ ಇರಬೇಕು ಹಾಗೂ BB ಕ್ರೀಂ ನಿಮಗೆ ಕೆಲವೇ ಕ್ಷಣಗಳಲ್ಲಿ ನ್ಯಾಚುರಲ್ ಗ್ಲೋ ನೀಡುತ್ತದೆ.
ನೀವು ಸಹ ನಿಮ್ಮ ಪತಿ, ಮಕ್ಕಳ ಜೊತೆ ನಿಮ್ಮ ಆತ್ಮೀಯರ ಮನೆಗೆ ಭೇಟಿ ನೀಡಿ, ಅವರಿಗೆ ಶುಭಾಶಯ ಕೋರಿ, ನಿಮ್ಮ ಕೈಲಾದ ಗಿಫ್ಟ್ ನೀಡಿರಿ. 3 ದಿನಗಳ ಹಬ್ಬವಾದ್ದರಿಂದ ಅವರೂ ಬಂದು ಹೋಗಲಿ. ಈ ರೀತಿ ಎಲ್ಲರೊಂದಿಗೆ ನಕ್ಕು ನಲಿಯಿರಿ, ಹರಟೆ ಕೊಚ್ಚಿರಿ. ಹೊಸ ಹೊಸ ಸ್ಮರಣೀಯ ಘಳಿಗೆ ಹೆಚ್ಚಿಸಿ.
ನಿಮ್ಮ ನೆಂಟರಿಷ್ಟರ ಜೊತೆ ಯಾವುದೋ ಕಾರಣಕ್ಕೆ ಏನೋ ಮನಸ್ತಾಪ ಉಂಟಾಗಿದ್ದರೆ, ಖಂಡಿತಾ ಅವರನ್ನು ಮಾತನಾಡಿಸಿ, ಅಸಮಾಧಾನ ಹೋಗಲಾಡಿಸಿ, ಅಗತ್ಯವಾಗಿ ಹಬ್ಬಕ್ಕೆ ಮನೆಗೆ ಕರೆಸಿಕೊಳ್ಳಿ. ಹಿರಿಯರಾದರೆ ನೀವೇ ಅವರಲ್ಲಿಗೆ ಹೋಗಿ ಗಿಫ್ಟ್ ನೀಡಿ ಸಂತೋಷ ಹೆಚ್ಚಿಸಿ. ಒಟ್ಟಾರೆ ಅವರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ. ಹಳೆಯ ಎಲ್ಲಾ ಕಹಿ ಸಂಗತಿ ಮರೆತು, ಇನ್ನು ಮುಂದಾದರೂ ಸದಾ ಒಂದಾಗಿರುವ ಸಂಕಲ್ಪ ತೊಡಿ. ನಿಮ್ಮ ಮನೆಯವರೂ ಜೊತೆಗೂಡಲಿ, ಹಬ್ಬದ ಸಂಭ್ರಮ ಸಡಗರ ಹೆಚ್ಚಲಿ. ಹ್ಯಾಪಿ ದೀಪಾವಳಿ!
– ಗಿರಿಜಾ ಶಂಕರ್