ಉಫ್  .!! ಪುರುಸೊತ್ತೇ ಇಲ್ಲ ? ಆದ್ರೂ, "ದಿನವೆಲ್ಲ ನಿನಗೆ ಏನ್ ಇರುತ್ತೆ ಮನೇಲಿ ಕೆಲಸ ಅಂತ ಕೇಳೋ ಪ್ರೆಶ್ನೆ?"  ಹೌಸ್ ವೈಫ್ ಗೆ ಈ ಸವಾಲು ಮಾಮೂಲಿ ಆಗೋಗಿದೆ. ಇನ್ನು ಎರಡು ಕಡೆ ದುಡಿಯೋ ಹೆಣ್ಣುಮಕ್ಕಳ ಪಾಡು ಹೇಗಿರುತ್ತೆ ನೋಡಿ  ದಿನದ ಬದುಕಿನ ಸೆಣಸಾಟ

ಬೆಳಿಗ್ಗೆನೇ ಎದ್ದು,  ಮನೆಮುಂದೆ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಶುರುವಾಗಿದ್ದು ಕೆಲಸ ಮುಗಿತಾನೆ ಇಲ್ಲ.  ಮಕ್ಕಳಿಗೆ ಹಾರ್ಲಿಕ್ಸ್ ಗಂಡನಿಗೆ ಟೀ ಅತ್ತೆ ಗೆ ಶುಗರ್ ಲೆಸ್ ಕಾಫಿ ಮಾವನಿಗೆ ಹಾಲು ಕೊಟ್ಟು, ತಿಂಡಿ ಮಾಡುವ ಗೊಜಲು ಒಬ್ಬರಿಗೆ ಒಂದೊಂದು ತಿಂಡಿ ಮಾಡಿ ಬಡಿಸಬೇಕು ಎಲ್ಲರಿಗೂ ಮೆಚ್ಚಿಸಿ ಮಾಡೋ ಅಷ್ಟರಲ್ಲಿ ಅವಳಿಗೇನು ಇಷ್ಟ ಅನ್ನೋದೇ ಮರೆತೇ ಹೋದವಳು? ಮಕ್ಕಳಿಗೆ ಸ್ಕೂಲ್ ಗೆ ರೆಡಿ ಮಾಡಿ ಗಂಡನ ಕೈಗೆ ಆಫೀಸ್ ಬ್ಯಾಗ್ ಲಂಚ್ ಬ್ಯಾಗ್ ಕೊಟ್ಟು ಗಡಿಯಾರದ ಸದ್ದು ಆಫೀಸ್ ಟೈಮ್ ಅಯ್ಯೋ...! ಕನ್ನಡಿ ಮುಂದೆ ನಿಲ್ಲೋ ಟೈಮ್ ಇಲ್ಲ ಒಂದೇ ನಿಮಿಷ ಅಷ್ಟೇ ಬೇಗ ತಲೆ ಬಾಚಿ ಹೇರ್ ಗೆ ಒಂದ್ ಕ್ಲಿಪ್ ಹಾಕಿ ಸಿಂಪಲ್ ಆಗಿ ಇರೋ ಕುರ್ತಾ ಲೆಗ್ಗಿನ್ಸ್ ಹಾಕೊಂಡು ಸೀರೆ ಹಾಕೋ ಟೈಮ್ ಇಲ್ಲ?  ಹೇಗೋ ನಡಿಯುತ್ತೆ ಲೈಫ್ ತಿಂಡಿ ನು ಮಾಡಿಲ್ಲ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಪಾರ್ಕಿಂಗ್ ಅಲ್ಲಿ ಗಾಡಿ ನಿಲ್ಲಿಸಿ ಹೋಗೋ ಅಷ್ಟರಲ್ಲಿ 10 ನಿಮಿಷ ಲೇಟ್. ಪಂಚಿಂಗ್ ಮಾಡಿ ಕಂಪ್ಯೂಟರ್ ಮುಂದೆ ಕುಳಿತರೆ, ಮೇಡಂ ಆ ಫೈಲ್ ರೆಡಿನಾ ಆ ಚೆಕ್ ರೆಡಿನಾ? ಪ್ರೆಶ್ನೆಗಳ ಸುರಿಮಳೆ ಅವಳಿಗೋಸ್ಕರ ಟೈಮ್ ಇರೋದೇ ಭ್ರಮೆ ಅನ್ನೋ ಅಷ್ಟು ಕೆಲಸದ ಒತ್ತಡ. ಬಾಸ್ ಕರೆದು ಆ ಮೀಟಿಂಗ್ ರೆಡಿನಾ ಈ ಫೈಲ್ ರೆಡಿನಾ? ಪುರುಸೊತ್ತು ಅನ್ನೋದು ದೂರದ ಮಾತಾಗಿತ್ತು  ಮಧ್ಯಾಹ್ನ ಊಟ ಮಾಡಿ ಮತ್ತೆ ಕೆಲಸ ಅದು ಇದು ಸಂಜೆ ಗಡಿಯಾರದ ಸದ್ದು ? ಮತ್ತೆ ಮನೆ ಮಕ್ಕಳು ಕೆಲಸ ಊಟದ ತಯಾರಿ ಜತೆಗೆ ಮಕ್ಕಳಿಗೆ ಓದಿಸುವುದು ಹೋಂವರ್ಕ್ ಮಾಡಿಸುವುದು, ಊಟ ಮಾಡು ಮುಸುರೆ ತಿಕ್ಕು ದಿನವೇ ಕಳೆದು ಹೋಗಿತ್ತು ಅವಳ ಜೀವನ ?

ಉಪ್! ಯಂತ್ರದ ಜೀವನ ಅನ್ನೋ ಅಷ್ಟು ಬ್ಯುಸಿ ಲೈಫ್ ಹೆಣ್ಣುಮಕ್ಕಳಿಗೆ? ಹೆಣ್ಣು ಮನಸು ಮಾಡಿದರೆ ಎಲ್ಲವ ಮಾಡ ಬಲ್ಲಳು? ಅವಳ ಮನಸ್ಸನ್ನು ಅರಿಯುವ ಹೃದಯಗಳು ಬೇಕು ಅಷ್ಟೇ! ಇಷ್ಟೆಲ್ಲ ಮಾಡೋ ಅವಳ ನಿರೀಕ್ಷೆ ಚಡಪಡಿಕೆ ಒಂದೇ ಅವಳಿಗೆ ಅರ್ಥಮಾಡಿಕೊಂಡು  ಅವಮಾನ ನಿಂದನೆ ಮಾಡದೇ ಅನುಮಾನಿಸದೆ ಅಭಿಮಾನ ದಿಂದ ಪ್ರೀತಿ ಕೊಟ್ಟು ಸ್ಪಂದಿಸಿ ಸಂತೈಸವ ಗುಣ ನನ್ನ ಗಂಡನಿಗೆ ಇರಲಿ ಎಂದು ಬಯಸುತ್ತಾಳೆ ಅಷ್ಟೇ...?  ಸ್ಪಂದನೆ ಸ್ಫೂರ್ತಿ  ಸಿಗದೇ ಹೋದಾಗಲೇ  ಖಾಲಿ ಭಾವಗಳು ಏನೋ ಪಡೆಯುವ ಹಂಬಲ ಕೆಟ್ಟ ಆಲೋಚನೆಗಳಲ್ಲಿ ಬಂಧಿಯಾಗಿ ನರಳಾಟದಲ್ಲಿ ಜೀವನ ಕಳೆಯುವಳು.ಅದೆಷ್ಟೋ ಹೆಣ್ಣುಮಕ್ಕಳಿಗೆ ಪ್ರೀತಿ ಸ್ಪಂದನೆ ಸಿಗದೇ "ಹೆಣ್ಣಿನ ಜೀವನ ಹೀಗೇಕೆ?!" ಎಂದು ಜೀವನಪೂರ್ತಿ ಕಣ್ಣೀರಲ್ಲಿ ಕೈ ತೊಳೆಯುತ್ತ ಇಷ್ಟೇ ಜೀವನ?  ಗಂಡನ ಹಾಗೂ ಅವರ ಮನೆಯವರ ಶೋಷಣೆ ದಬ್ಬಾಳಿಕೆಯನ್ನು ಪ್ರತಿಭಟಿಸಲು ಆಗದೆ ಸಮಾಜವನ್ನು ಎದುರಿಸುವ ಶಕ್ತಿಯು ಇಲ್ಲದೆ ಹಣೆಬರಹ ಅಂದುಕೊಂಡು ಜೀವನ ಸವೆಯುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ