ಹುಡುಗಹುಡುಗಿ ಮದುವೆಯ ಬಂಧನದಲ್ಲಿ ಬಂಧಿಗಳಾದಾಗ ಅವರ ಮನಸ್ಸಿನಲ್ಲಿ ಸೆಕ್ಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ. ಅಂತಹ ಸಂದರ್ಭದಲ್ಲಿ ಅವರು ಪೋರ್ನೊಗ್ರಫಿ ಸಹಾಯ ಪಡೆಯುವುದು ಸೂಕ್ತ ಎನಿಸುತ್ತದೆ. ಆದರೆ ಅದೇ ಮುಂದೆ ಚಟವಾಗಿ ಪರಿಣಮಿಸುತ್ತದೆ. ಆರೋಗ್ಯದ ಮೇಲಷ್ಟೇ ಅಲ್ಲ, ವೈವಾಹಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಸೆಕ್ಸ್ ಗಾಗಿ ಜಾಗೃತಗೊಳಿಸುವುದು
ಹುಡುಗ ಹುಡುಗಿ ಅಥವಾ ಪುರುಷ ಮಹಿಳೆಯ ಅಂತರಂಗದ ಕ್ಷಣಗಳ ಫೋಟೊ ಅಥವಾ ವಿಡಿಯೋಗಳಿಗೆ `ಪೋರ್ನೊಗ್ರಫಿ' ಎಂದು ಕರೆಯುತ್ತಾರೆ. ಸ್ವಲ್ಪ ಭಿನ್ನತೆಗಾಗಿ ಸರಿ. ಆದರೆ ಅದೇ ಚಟವಾಗಿ ಪರಿಣಮಿಸಿದರೆ ಅದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ.
ಸುಲಭ ಲಭ್ಯತೆ : ಇಂಟರ್ ನೆಟ್ ನಲ್ಲಿ ಇಂತಹ ಪೋರ್ನ್ ಮೆಟೀರಿಯಲ್ ಸುಲಭವಾಗಿ ಲಭಿಸುತ್ತವೆ.
ಲೈಂಗಿಕ ತಜ್ಞರ ಅಭಿಪ್ರಾಯ : ತಜ್ಞರ ಪ್ರಕಾರ, ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಅಂತಹ ವಿಷಯ ಸಾಮಗ್ರಿ ಅಥವಾ ಸೈಟ್ ಗಳನ್ನು ನೋಡುತ್ತೀರೆಂದರೆ ಅದು ನಿಮ್ಮ ಸೆಕ್ಸ್ ಲೈಫ್ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಆದರೆ ಅದೇ ಪದೇ ಪದೇ ಪುನರಾವರ್ತನೆ ಆಗುತ್ತಿದ್ದರೆ ಅದು ನಿಮ್ಮ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು.
ತಪ್ಪು ಚಿತ್ರಣ : ಪೋರ್ನೊಗ್ರಫಿ ವಿಷಯ ಅಥವಾ ಚಿತ್ರಣ ಮನುಷ್ಯನ ಕಾಮುಕತೆಯ ಬಗ್ಗೆ ತಪ್ಪಾಗಿ ಚಿತ್ರಿಸುತ್ತವೆ. ಅದು ಕೇವಲ ಕಲ್ಪನೆಯ ಆಧಾರ ಹೊಂದಿರುತ್ತದೆ. ಆದರೆ ಅದನ್ನು ಓದುವವರು ಹಾಗೂ ನೋಡುವವರ ಮೇಲೆ ಅದು ಗಾಢ ಪರಿಣಾಮ ಬೀರುತ್ತದೆ. ಒಂದು ಸಂಶೋಧನೆಯ ಪ್ರಕಾರ, ವಾರದಲ್ಲಿ ಒಂದು ಗಂಟೆ ಅಥವಾ ಅದಕ್ಕೂ ಕಮ್ಮಿ ಸಮಯ ಪೋರ್ನೊಗ್ರಫಿಯನ್ನು ವೀಕ್ಷಸುತ್ತಿದ್ದಲ್ಲಿ ಚಿಂತೆಯ ವಿಷಯ ಏನಲ್ಲ. ಆದರೆ, 10 ಗಂಟೆ ಅಥವಾ ಅದಕ್ಕೂ ಹೆಚ್ಚು ಅವಧಿಯ ವೀಕ್ಷಣೆ ದಾಂಪತ್ಯದ ಮೇಲೆ ದುಷ್ಪರಿಣಾಮ ಬೀರದೇ ಇರುವುದಿಲ್ಲ.
ದಾಂಪತ್ಯ ಜೀವನದಲ್ಲಿ ಪೋರ್ನೊಗ್ರಫಿ : ವೈದ್ಯರ ಪ್ರಕಾರ, ಪೋರ್ನೊಗ್ರಫಿಯಿಂದಾಗಿ ದಾಂಪತ್ಯ ಜೀವನದಲ್ಲಿ ಸೆಕ್ಸ್ ನ್ನು ನೋಡು ದೃಷ್ಟಿಕೋನವೇ ಬದಲಾಗುತ್ತದೆ. ಪೋರ್ನೊಗ್ರಫಿಗೆ ಅಡಿಕ್ಟ್ ಆದ ವ್ಯಕ್ತಿ ಸಂಗಾತಿಯಿಂದ ಅದೇ ಮಾದರಿಯ ಸೆಕ್ಸ್ ಇಚ್ಛಿಸುತ್ತಾನೆ. ಹೀಗಾಗಿ ಸಂಗಾತಿಯಲ್ಲಿ ಸೆಕ್ಸ್ ಬಗೆಗಿನ ಆಸಕ್ತಿಯೇ ಕುಂದುತ್ತದೆ. ಅದು ಅವರ ದಾಂಪತ್ಯ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಆ ದೃಶ್ಯಗಳಲ್ಲಿ ತೋರಿಸುವ ಸಮಾಗಮದ ಸನ್ನಿವೇಶಗಳು ಅತ್ಯಂತ ವಿಭಿನ್ನವಾಗಿರುತ್ತವೆ.
ಗಂಡನೇ ಆಗಿರಬಹುದು ಅಥವಾ ಹೆಂಡತಿ, ಅವರು ಸಂಗಾತಿಯಿಂದ ಅಷ್ಟೇ ಉತ್ತೇಜನದ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಅವರಲ್ಲಿ ಪರಸ್ಪರ ಪ್ರೀತಿಯ ಭಾವನೆ ಕಡಿಮೆಯಾಗುತ್ತದೆ. ಅದನ್ನು ಅತಿ ಕಾಮುಕತೆಯ ಶ್ರೇಣಿಯಲ್ಲಿ ಇರಿಸಬೇಕಾಗುತ್ತದೆ. ಏಕೆಂದರೆ ಅದು ಪ್ರೀತಿಯಾಗಿರದೆ ಕೇವಲ ದೇಹದ ಹಸಿವಾಗಿರುತ್ತದೆ. ಸೂಕ್ತ ಹೊಂದಾಣಿಕೆಯಿಲ್ಲದೆ ನಿಮ್ಮ ದಾಂಪತ್ಯ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ದೆಹಲಿಯ ಒಂದು ಆಫೀಸ್ ನಲ್ಲಿ ಕೆಲಸ ಮಾಡುವ ಸುನೀಲ್ ಗೆ ಪೋರ್ನ್ ವೀಕ್ಷಣೆಯ ಚಟ ತಗುಲಿತ್ತು. ಆಫೀಸಿನ ಮೀಟಿಂಗ್ ಸಮಯದಲ್ಲೂ ಅವನು ಪೋರ್ನ್ ಸೈಟ್ ನ ಟ್ಯಾಬ್ ನ್ನು ಸದಾ ಮುಕ್ತವಾಗಿಟ್ಟುಕೊಂಡಿರುತ್ತಿದ್ದ. ಇದು ಮಹಿಳಾ ಸಹೋದ್ಯೋಗಿಗಳಿಗೆ ತಿಳಿದಾಗ ಅವರು ಮೇಲಧಿಕಾರಿಗೆ ದೂರು ಕೊಟ್ಟರು. ಆ ಬಳಿಕ ಅವನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಹೋಗಬೇಕಾಯಿತು. ಮನೋತಜ್ಞರ ಸಲಹೆ ಪಡೆಯಬೇಕಾಯಿತು.