– ರಾಘವೇಂದ್ರ ಅಡಿಗ ಎಚ್ಚೆನ್.

ವಿಶ್ವ ಆರಾಧ್ಯ ದೈವ, ಶಾಂತಿದೂತ, ಜೈ ಶ್ರೀರಾಂ ಕುರಿತಾದ ’ರಾಮ ರಾಮ ರಾಮ ಎಂಬ ರಾಮ ಜಪದಲಿ ಜಗವ ಕಾಣಬಹುದು’ ಸಾಲಿನ ’ಭಾರತ ಕಂಡ ಅಯೋಧ್ಯ ರಾಮ’ ಮೂರು ನಿಮಿಷದ ವಿಡಿಯೋ ಆಲ್ಬಂ ಹಾಡನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಲಕ್ಷೀನಾರಾಯಣ ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬಿಡುಗಡೆ ಮಾಡಿ ಶುಭ ಹಾರೈಸಿದರು.

IMG-20250330-WA0014

ಅತ್ರೇಯ ಕ್ರಿಯೇಷನ್ ಲಾಂಚನದಲ್ಲಿ ಡಾ.ಸುಮಿತಾ ಪ್ರವೀಣ್ ಹಾಗೂ ಪ್ರವೀಣ್.ಸಿ.ಬಾನು ಮಗಳ ಸಲುವಾಗಿ ನಿರ್ಮಾಣ ಮಾಡಿದ್ದಾರೆ. ’ಗಂಗೆಗೌರಿ’ ’ತಾರಕೇಶ್ವರ’ ’ಟೇಕ್ವಾಂಡೋ ಗರ್ಲ್’ ಚಿತ್ರಗಳ ಖ್ಯಾತಿಯ ಕು.ಋತುಸ್ಪರ್ಶ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

IMG-20250330-WA0012

ಪರಿಕಲ್ಪನೆ,ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ಡಿ.ಸಿ.ವೀರೇಂದ್ರ ಬೆಳ್ಳಿಚುಕ್ಕಿ ಮಾತನಾಡಿ ಹಾಡಿನ ಕೆಲಸ ಮೂರು ತಿಂಗಳ ಹಿಂದೆ ಮುಗಿದಿತ್ತು. ಉತ್ತರ ಪ್ರದೇಶ ಸರ್ಕಾರದ ಸ್ಪರ್ಧಾತ್ಮಕ ವಿಭಾಗಕ್ಕೂ ಇದನ್ನು ಸಲ್ಲಿಸಲಾಗಿತ್ತು. ಅಲ್ಲಿ ಕುಂಬಮೇಳ ನಡೆಯುತ್ತಿರುವ ಕಾರಣ, ಸದ್ಯದಲ್ಲೆ ಫಲಿತಾಂಶ ತಿಳಿಸುವುದಾಗಿ ಹೇಳಿರುತ್ತಾರೆ.

IMG-20250330-WA0017

ಕೇವಲ ಹಾಡು ಇದ್ದರೆ ಸಾಲದು. ಶುರುವಾಗುವ ಮುನ್ನ ರಾಮ, ಅಲ್ಲಿನ ದೇವಸ್ಥಾನದ ಬಗ್ಗೆ ಹಿನ್ನಲೆ ಧ್ವನಿ ನೀಡಿದರೆ ಚೆನ್ನಾಗಿರುತ್ತದೆಂದು ನಿರ್ಮಾಪಕರು ಸಲಹೆ ನೀಡಿದ್ದರಿಂದ ತರಾತುರಿಯಲ್ಲಿ ಬರೆದು ಸಿದ್ದಪಡಿಸಲಾಗಿದೆ. ಬೇರೆ ರಾಜ್ಯದವರು ಹಾಡನ್ನು ವೀಕ್ಷಿಸಿ ತುಂಬಾ ಚೆನ್ನಾಗಿ ಮೂಡಿಬಂದಿದೆ.

IMG-20250330-WA0016

ನಮ್ಮ ಭಾಷೆಗೆ ತರ್ಜುಮೆ ಮಾಡಿರೆಂದು ಕೋರಿಕೊಂಡಿರುತ್ತಾರೆ. ಅದಕ್ಕಾಗಿ ಹಿಂದಿ, ಮರಾಠಿಗೆ ಧ್ವನಿಗೂಡಿಸುವ ಕೆಲಸ ನಡೆಯುತ್ತಿದೆ. ಹಿರಿಯ ನಟ ಎಂ.ಎಸ್.ಸತ್ಯು ಮಗ ಶಿವಸತ್ಯ ಸಂಗೀತ ಸಂಯೋಜಸಿದ್ದಾರೆ. ಪೇಜಾವರ ಸ್ವಾಮಿಗಳು ನಮ್ಮನ್ನು  ಕರೆಸಿಕೊಂಡು ವಿಶೇಷವಾಗಿ ಸನ್ಮಾನಿಸಿದ್ದಾರೆ. ಋತುಸ್ಪರ್ಶ ಯೂಟ್ಯೂಬ್ ಚಾನಲ್‌ದಲ್ಲಿ ಗೀತೆಯನ್ನು ನೋಡಬಹುದು.

IMG-20250330-WA0013

ಋತುಸ್ಪರ್ಶ ಒಂದೇ ಟೇಕ್‌ದಲ್ಲಿ ಮಾಡುತ್ತಿದ್ದಳು. ಈಕೆಗೆ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವಿದೆ. ಜಯನಗರ ಹಾಗೂ ರಾಜಾಜಿನಗರ ರಾಮಮಂದಿರ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ  ಮಾಹಿತಿ ನೀಡಿದರು.

IMG-20250330-WA0015

ಇಲ್ಲಿಯವರೆಗೂ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದೇನೆ. ಆದರೆ ರಾಮನ ಬಗ್ಗೆ ಹಾಡಲು ಅವಕಾಶ ಬಂದಾಗ ಇದು ನನ್ನ ಸುಕೃತ ಅಂತ ಭಾವಿಸಿ ಭಕ್ತಿಭಾವದಿಂದ ಹಾಡಿದ್ದೇನೆ ಅಂತಾರೆ ಮಾನಸಹೊಳ್ಳ.

IMG-20250330-WA0018

ಛಾಯಾಗ್ರಹಣ ಗಗನ್, ವಿಎಫ್‌ಎಕ್ಸ್ ಅನಿಲ್ ಅವರದಾಗಿದೆ. ಸುಂದರ ಸಮಯದಲ್ಲಿ ಹಿರಿಯ ನಟ,ನಿರ್ಮಾಪಕ ಗಣೇಶ್‌ರಾವ್ ಕೇಸರ್‌ಕರ್, ನಿರ್ದೇಶಕರುಗಳಾದ ಓಂಕಾರ್ ಪುರುಷೋತ್ತಮ್, ರವೀಂದ್ರವಂಶಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮುಂತಾದವರು ಉಪಸ್ತಿತರಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ