ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ, ನಟಿ ಅನುಶ್ರೀ ಚೆಂದದ ಸೀರಿಯುಟ್ಟು ಅಂದದ ಫೋಟೋಗಳನ್ನು ತಮ್ಮ ಇನ್ಸ್​ಟಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಕೇಸರಿ ಬಣ್ಣದ ಸೀರಿಯುಟ್ಟಿರುವ ಅನುಶ್ರೀ, ಫೋಟೋಶೂಟ್​ ಮಾಡಿಸಿಕೊಂಡು ಕಂಗೊಳಿಸುತ್ತಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್​ಟಾದಲ್ಲಿ ಹಂಚಿಕೊಂಡಿರುವ ಅವರು, “ಎಷ್ಟೇ ಆಧುನಿಕತೆ ಬಂದರು… ಹಣೆ ಮೇಲೆ ಬೊಟ್ಟು… ಮಲ್ಲಿಗೆ ಹೂ ತೊಟ್ಟು… ಸೀರೆ ಉಟ್ಟು!!! ನಗುವ ನಗು ಎಂದಿಗೂ ಮಾಸದು!!!” ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅಂಜಲಿ ರಾಜ್ ಡಿಸೈನರ್ ಸ್ಟುಡಿಯೋದ ಉಡುಗೆ, ದಿ ಸ್ಪಟಿಕಾದ ಜುವೆಲ್ಲರಿ, ಶಿವುಗೌಡ ಮೇಕಪ್, ಪರಮೇಶ್​ ಹೇರ್​ಸ್ಟೈಲಿಸ್ಟ್​ನಿಂದ ಹೇರ್​ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಈ ಅಂದ ಚೆಂದದ ಫೋಟೋಗಳನ್ನು ಭರತ್ ಫೋಟೋಗ್ರಫಿಯವರು ಕ್ಲಿಕ್ಕಿಸಿದ್ದಾರೆ.

ಫೋಟೋಗಳಿಗೆ ಹಲವಾರು ಮಂದಿ ಕಮೆಂಟ್​ ಮಾಡಿದ್ದು, ಲವ್ ಇಮೋಜಿ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದರೆ, ಮತ್ತೆ ಕೆಲವು ನಿಮ್ಮ ಕೈಹಿಡಿಯುವ ಹುಡುಗ ಅದೃಷ್ಟವಂತ ಎಂದು ಕಮೆಂಟ್​ ಮಾಡಿದ್ದಾರೆ. ನೀವು ಎಂದಿಗೂ ಚೆಂದ, ನೀವೊಬ್ಬ ಅಪ್ಪಟ ಕನ್ನಡತಿ, ನಿಮ್ಮ ಮೊಗದ ನಗು ಸದಾ ಹೀಗೇ ಕಂಗೊಳಿಸಲಿ ಎಂದು ಕಮೆಂಟ್​ ಮಾಡಲಾಗಿದೆ.

ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿರುವ ಅನುಶ್ರೀ, ತಮ್ಮ ಚಟಪಟ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡಿಬಿಡುತ್ತಾರೆ. ಉಪ್ಪು ಹುಳಿ, ಖಾರ, ಮಾದ ಮತ್ತು ಮಾನಸಿ, ಬೆಂಕಿಪಟ್ನ ಚಿತ್ರಗಳಲ್ಲೂ ನಟಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ