‘ಎಂಪುರಾನ್’.. ಇತ್ತೀಚೆಗೆ ತೆರೆಕಂಡ ಈ ಸಿನಿಮಾ, ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ತಿದ್ದಂತೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಯಿತು. ಹೌದು.. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್ ಲಾಲ್, ಟೊವಿನೋ ಥಾಮಸ್, ಪೃಥ್ವಿರಾಜ್ ಹಾಗೂ ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ರಿಲೀಸ್ ಬಳಿಕ ಒಂದಷ್ಟು ವಿವಾದಗಳಿಗೆ ಗುರಿಯಾಯ್ತು. ಐತಿಹಾಸಿಕ ವಿಷಯಗಳನ್ನ ತಿರುಚಿ, ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ ಅಂತ ಸಿನಿಮಾದ ಕಲೆಕ್ಷನ್ ಡ್ರಾಪ್ ಆಯಿತು. ಆನ್ ಲೈನ್ ನಲ್ಲಿ ಜನ ಸಿನಿಮಾನ ನೋಡದಿರಲು ನಿರ್ಧರಿಸದಂತೆ ಅಲೆಯೊಂದು ಎದ್ದಿತ್ತು.
ಕೂಡಲೇ ಎಚ್ಚೆತ್ತುಕೊಂಡ ಚಿತ್ರತಂಡ, ಅದಕ್ಕೆ ಮೊದಲಿಗೆ 17 ಕಟ್ಸ್ ನೀಡಿ ನ್ಯೂ ವರ್ಷನ್ ನ ಥಿಯೇಟರ್ ಗೆ ತಂದಿತ್ತು. ಅದೀಗ ಕತ್ತರಿ ಬಿದ್ದಂತಹ ದೃಶ್ಯಗಳ ಸಂಖ್ಯೆ 17ರಿಂದ 24ಕ್ಕೆ ಏರಿಕೆಯಾಗಿದೆ. ಅಲ್ಲದೆ, ಖಳನಾಯಕನ ಹೆಸರನ್ನ ಕೂಡ ಚಿತ್ರದಲ್ಲಿ ಬದಲಿಸಿದೆ ಟೀಂ. ಇವೆಲ್ಲಕ್ಕೂ ಮಿಗಿಲಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಲಾಲೆಟ್ಟನ್ ಮೋಹನ್ ಲಾಲ್ ಅವ್ರೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇದು ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ. ಯಾರಿಗೆಲ್ಲಾ ಹರ್ಟ್ ಆಗಿದೆಯೋ ಅವರಿಗೆಲ್ಲಾ ಕ್ಷಮೆ ಇರಲಿ ಅಂತ ಅಕ್ಷರಶಃ ಕ್ಷಮೆ ಕೋರಿದ್ದರು.
ಅದಾದ ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಆರ್ ಎಸ್ ಎಸ್ ನಡುವೆ ವಾದ- ವಿವಾದಗಳು ಉಲ್ಬಣಗೊಂಡವು. ಆದ್ರೂ ಸಹ ಸಿನಿಮಾ ಆರೇ ದಿನದಲ್ಲಿ ಡೊಮೆಸ್ಟಿಕ್ ನಲ್ಲಿ ಬರೋಬ್ಬರಿ 100 ಕೋಟಿ ಕ್ಲಬ್ ಸೇರಿದೆ. ಯೆಸ್.. ಭಾರತ ಒಂದರಲ್ಲೇ ಕೇವಲ ಆರು ದಿನಗಳಲ್ಲಿ ನೂರು ಕೋಟಿ ಗಳಿಸೋ ಮೂಲಕ ಎಂಪುರಾನ್ ಎಲ್ಲರ ಹುಬ್ಬೇರಿಸಿದೆ. ಅಲ್ಲದೆ, ವರ್ಲ್ಡ್ ವೈಡ್ ಐದೇ ದಿನದಲ್ಲಿ 200 ಕೋಟಿ ಕಲೆಕ್ಷನ್ ಮಾಡಿ, ಬಾಕ್ಸ್ ಆಫೀಸ್ ನಲ್ಲಿ ನಾಗಾಲೋಟ ಮುಂದುವರೆಸಿದೆ.
ಅಲ್ಲದೆ, ಈ ಸಿನಿಮಾದಿಂದ ಮೋಹನ್ ಲಾಲ್ ಒಂದಲ್ಲ ಎರಡೆರಡು ಬಾರಿ ಬಹಿರಂಗವಾಗಿ ಕ್ಷಮೆ ಕೇಳುವ ಪ್ರಮೇಯ ಎದುರಾಯ್ತು. ಅದಾಗ್ಯೂ ಕೂಡ ಎಂಪುರಾನ್ ಸಿನಿಮಾ ತಾರಾಂಗಣ, ಮೇಕಿಂಗ್ ವಿಚಾರದಲ್ಲಿ ಬೆಸ್ಟ್ ಅನಿಸಿಕೊಂಡಿದೆ. ಸ್ವತಃ ಮೋಹನ್ ಲಾಲ್ ಅವರೇ ಹೇಳಿದಂತೆ ಇದು ಲೂಸಿಫರ್ ಸಿನಿಮಾದ ಸೀಕ್ವೆಲ್. ಕಾದಂಬರಿ ಆಧರಿಸಿ ಮಾಡಿದಂತಹ ‘ಲೂಸಿಫರ್’, ‘ಎಂಪುರಾನ್’ ಬಳಿಕ ಮತ್ತೊಂದು ಕೊನೆಯ ಭಾಗ ಬರಲಿದೆ. ಅದಕ್ಕೀಗ ಟೈಟಲ್ ಕೂಡ ಫೈನಲ್ ಆಗಿದೆ. ಅದನ್ನ ಎಂಪುರಾನ್ ಚಿತ್ರದ ಮ್ಯೂಸಿಕ್ ಕಂಪೋಸರ್ ದೀಪಕ್ ದೇವ್, ಸಂದರ್ಶನವೊಂದರಲ್ಲಿ ಬಾಯಿ ಜಾರುವ ಮೂಲಕ ರಿವೀಲ್ ಮಾಡಿಬಿಟ್ಟಿದ್ದಾರೆ. ಇಷ್ಟಕ್ಕೂ ಲೂಸಿಫರ್ ಚಿತ್ರದ ಮೂರನೇ ಭಾಗದ ಟೈಟಲ್ ಅಸ್ರೇಲ್. ಹೌದು.. ಇಸ್ರೇಲ್ ನಲ್ಲಿ ನಡೆಯುತ್ತಿರೋ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗ್ತಿದ್ದು, ಅದೇ ವಿಷಯಗಳನ್ನ ಇಟ್ಕೊಂಡು ಅಸ್ರೇಲ್ ಸಿನಿಮಾ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.