ವೆಡ್ಡಿಂಗ್‌, ಫಂಕ್ಷನ್‌, ಪಾರ್ಟಿಗಳ ಸೀಸನ್‌ ಇದು. ಹೀಗಾಗಿ ನವ ವಧು ಅಥವಾ ವೆಡ್ಡಿಂಗ್‌ ಪಾರ್ಟಿಗೆ ಬಂದ ಹೆಂಗಸರಿರಲಿ, ಮುಖದಲ್ಲಿ ಹೊಳೆಹೊಳೆಯುವ ಗ್ಲೋ ಹೊಂದಿ ಮಿಂಚಲು ಬಯಸುತ್ತಾರೆ. ಕಳೆದ 2 ವರ್ಷಗಳಿಂದ ಕೊರೋನಾ ಕಾಟದಿಂದಾಗಿ ಯಾರೂ ಮದುವೆಯಂಥ ಶುಭ ಕಾರ್ಯಗಳಿಗೆ ಭೇಟಿ ನೀಡುತ್ತಿರಲಿಲ್ಲ. ಆದರೆ ಇದೀಗ ಅಡ್ಡಿಗಳೇನಿಲ್ಲ, ಯಾರು ಯಾವ ಸಮಾರಂಭಕ್ಕಾದರೂ ಹೋಗಬಹುದು. ಹೆಂಗಸರು ತಮ್ಮ ಸ್ಕಿನ್‌ ಗಾಗಿ ಈಗ ಯಾವುದೇ ಕಾಂಪ್ರಮೈಸ್‌ ಗೆ ರೆಡಿ ಇಲ್ಲ. ಮುಖದ ಸುಕ್ಕು ಕಲೆ ಮರೆಯಾಗಿ, ಮುಖಕ್ಕೆ ಅಖಂಡ ಕಾಂತಿ ಬರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಪಾರ್ಲರ್‌ ಗೆ ಹೋಗಿ ಕೂರಬೇಕೇ? ಅಷ್ಟೊಂದು ಹಣ, ಸಮಯ ಇಲ್ಲ ಅಂತೀರಾ? ಹಾಗಾದರೆ ಮನೆಯಲ್ಲೇ ಕುಳಿತು ಉತ್ತಮ ಬ್ಲೀಚ್‌ ಬಳಸಿ, ಕೆಲವೇ ನಿಮಿಷಗಳಲ್ಲಿ ಹೆಚ್ಚು ಖರ್ಚು ಮಾಡದೆ ಕಾಂತಿ ಗಳಿಸುವುದು ಹೇಗೆ?

ಉತ್ತಮ ಬ್ಲೀಚ್ಬಳಸಿರಿ

ಮುಖದಲ್ಲಿ  ಗ್ಲೋ ತಂದುಕೊಳ್ಳಬೇಕೇ? ಇದಕ್ಕಾಗಿ ಪಾರ್ಲರ್‌ ನ ಫೇಶಿಯಲ್ ಅಗತ್ಯವಿಲ್ಲ. ಉತ್ತಮ ಗುಣಮಟ್ಟದ ಬ್ಲೀಚ್ ಬಳಸುವುದರಿಂದ ನೀವು ಮನೆಯಲ್ಲಿ ಇದ್ದುಕೊಂಡೇ ಫೇಶಿಯಲ್ ನಂಥ ಗ್ಲೋ ಪಡೆಯಬಹುದು, ಅದೂ ಕೆಲವೇ ನಿಮಿಷಗಳಲ್ಲಿ ಹೇಸ್‌ ಫ್ರೀ ವಿಧಾನದಿಂದ. ಒಂದು ಉತ್ತಮ ಗುಣಮಟ್ಟದ ಬ್ಲೀಚ್‌ ಮುಖದ ಅನಗತ್ಯ ಡೆಡ್‌ ಸ್ಕಿನ್‌ ಸೆಲ್ಸ್ ನ್ನು ತೊಲಗಿಸುತ್ತದೆ, ಹೊಸ ಪಿಗ್ಮೆಂಟೇಶನ್‌ ಸೆಲ್ಸ್ ಹೆಚ್ಚದಂತ ನಿಯಂತ್ರಿಸುತ್ತದೆ. ಚರ್ಮದಲ್ಲಿ ಡೆಡ್‌ ಸೆಲ್ಸ್ ಜಮೆಗೊಂಡಾಗ, ಇದು ಚರ್ಮದ ಪೋರ್ಸ್ ನ್ನು ಕ್ಲಾಗ್‌ ಮಾಡುವ ಜೊತೆಗೆ, ಚರ್ಮಕ್ಕೆ ಅಲ್ಲಲ್ಲಿ ಡ್ರೈ ಪ್ಯಾಚೆಸ್‌ ನೀಡುತ್ತದೆ. ಇದನ್ನು ಎಕ್ಸ್ ಫಾಲಿಯೇಶನ್‌ ನಿಂದ ಮಾತ್ರ ತೊಲಗಿಸಬಹುದು. ಆಗ ಸ್ಕಿನ್‌ ಟೆಕ್ಸ್ ಚರ್‌, ಇದರ ಹೆಲ್ತ್ ಬೆಟರ್‌ ಆಗುತ್ತದೆ. ಉತ್ತಮ ಬ್ಲೀಚ್‌ ಬಳಸುವುದರಿಂದ, ಚರ್ಮವನ್ನು ನಿಮಿಷಗಳಲ್ಲೇ ಎಕ್ಸ್ ಫಾಲಿಯೇಟ್‌ ಮಾಡಿ ಉತ್ತಮ ಕಾಂತಿ ತುಂಬುತ್ತದೆ.

ಅಮೋನಿಯಾಫ್ರೀ ಬ್ಲೀಚ್

ಉತ್ತಮ ಬ್ಲೀಚ್‌ ಯಾವಾಗಲೂ ಅಮೋನಿಯಾಫ್ರೀ ಆಗಿರಬೇಕು. ಆಗ ಮಾತ್ರ ಅದನ್ನು ಬಳಸುವುದರಿಂದ ಕಂಗಳಿಗೆ ಯಾವುದೇ ಇರಿಟೇಶನ್‌ ಆಗದು. ಆಯಾ ಬ್ಲೀಚ್‌ ಪ್ಯಾಕ್‌ ಮೇಲೆ ನೀಡಲಾಗಿರುವ ಸೂಚನೆ ಪ್ರಕಾರ ಫಾಲೋ ಮಾಡಿ, ಮುಖಕ್ಕೆ ನೀಟಾಗಿ ಹಚ್ಚಬಹುದು. ಅಮೋನಿಯಾ ಇದ್ದರೆ ಅದು ಕಂಗಳು, ಚರ್ಮಕ್ಕೆ ಇರಿಟೇಶನ್‌ ಮಾಡುತ್ತದೆ. ಅಕಸ್ಮಾತ್‌ ಇದು ಅಲ್ಪ ಪ್ರಮಾಣದಲ್ಲಿ ಚರ್ಮದ ಆಳಕ್ಕೆ ಇಳಿದರೆ, ನಿಮ್ಮ ಉಸಿರಾಟಕ್ಕೆ ತೊಂದರೆ, ಚರ್ಮ ಅಲ್ಲಲ್ಲಿ ಊದುವ ಸಾಧ್ಯತೆಗಳಿವೆ. ಹೀಗಾಗಿ ಅಮೋನಿಯಾಫ್ರೀ ಬ್ಲೀಚ್‌ ಮಾತ್ರ ಬಳಸಿರಿ.

ಅನಗತ್ಯ ಕೂದಲನ್ನು ಮರೆಮಾಚಲು ಅನೇಕ ಹೆಂಗಸರು ಫೇಶಿಯಲ್ ಹೇರ್‌ ನ ಸಮಸ್ಯೆ ಎದುರಿಸುತ್ತಾರೆ. ಇದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಇದರಿಂದ ಅವರು ಉತ್ತಮ ಗುಣಮಟ್ಟದ ಔಟ್‌ ಫಿಟ್ಸ್ ಧರಿಸಲಾಗದೆ ಕಷ್ಟಪಡುತ್ತಾರೆ. ಎಂಥ ಹೈ ಫೈ ಡ್ರೆಸ್‌ ಧರಿಸಿದರೂ, ತಮ್ಮ ಮುಖದ ಅನಗತ್ಯ ಕೂದಲು, ಸೌಂದರ್ಯಕ್ಕೆ ಪೂರಕವಲ್ಲ ಎಂದು ಕಂಗೆಡುತ್ತಾರೆ. ಉತ್ತಮ ಗುಣಮಟ್ಟದ ಬ್ಲೀಚ್‌ ನಲ್ಲಿ ಹೈಡ್ರೋಜನ್‌ ಪೆರಾಕ್ಸೈಡ್‌ ಘಟಕವಿದ್ದು, ಉತ್ತಮ ಬ್ಲೀಚಿಂಗ್‌ ಏಜೆಂಟ್‌ ಆಗಿ ಕೆಲಸ ನಿರ್ವಹಿಸುತ್ತದೆ. ಇದರಿಂದ ಮುಖದ ಅನಗತ್ಯ ಕೂದಲು ಎಲ್ಲೋ ಕಾಣದಂತೆ ಅಡಗಿಹೋಗುತ್ತದೆ.  ನಿಮ್ಮ ನೈಸರ್ಗಿಕ ಸೌಂದರ್ಯ ತಂತಾನೇ ಅರಳುತ್ತದೆ!

24 ಕ್ಯಾರೆಟ್ಗೋಲ್ಡ್ ಡಸ್ಟ್ ಬ್ಲೀಚ್

ಇಂಥ ಘಟಕಗಳುಳ್ಳ ಬ್ಲೀಚ್‌ ಕ್ರೀಂನಲ್ಲಿ ಗೋಲ್ಡ್ ಡಸ್ಟ್ ಮತ್ತು ನ್ಯಾಚುರಲ್ ಆ್ಯಂಟಿ ಆಕ್ಸಿಡೆಂಟ್‌ ಅಡಗಿದ್ದು, ಅದು ನಿಮ್ಮ ಸ್ಕಿನ್ ಟೋನ್‌ ನ್ನು ಬ್ರೈಟ್‌ ಮಾಡಿ, ಕೆಲವೇ ನಿಮಿಷಗಳಲ್ಲಿ ಅಚ್ಚುಕಟ್ಟಾದ ಬ್ರೈಡಲ್ ಗ್ಲೋ ತಂದುಕೊಡುತ್ತದೆ. ನಿಮ್ಮ ಸ್ಕಿನ್‌ ಗೆ ಇದು ಅಪ್ಪಟ ಅಪರಂಜಿಯಾಗಿ ಕಾಂತಿಯ ಕಳೆ ತುಂಬುತ್ತದೆ. ನೀವು ಬ್ರೈಡಲ್ ಲುಕ್ಸ್ ನಲ್ಲಿ ಅಲಂಕೃತಳಾದಾಗ, ಈ 24 ಕ್ಯಾರೆಟ್‌ ಗೋಲ್ಡ್ ಡಸ್ಟ್ ಬ್ಲೀಚ್‌, ನಿಮ್ಮ ಮುಖ ಮಂಡಲವನ್ನು ಬಂಗಾರಭೂಷಿತೆ ಆಗಿಸುತ್ತದೆ!

ಅಪ್ಲೈ ಮಾಡೋದು ಸುಲಭ

ಉತ್ತಮ ಗುಣಮಟ್ಟದ ಬ್ಲೀಚ್‌ ನ್ನು ಸುಲಭವಾಗಿ ಹೀಗೆ ಅಪ್ಲೈ ಮಾಡಿ :

ಮೊದಲು ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದು ಶುಭ್ರಗೊಳಿಸಿ. ನಂತರ ಟಿಶ್ಯು ಪೇಪರ್‌ ನಿಂದ ಇನ್ನಷ್ಟು ಕ್ಲೀನ್‌ ಮಾಡಿ. ಇದರಿಂದ ಮುಖಕ್ಕೆ ಮೆತ್ತಿದ ಎಲ್ಲಾ ಕೊಳೆ ದೂರವಾಗುತ್ತದೆ.

ಪ್ಯಾಕ್‌ ಮೇಲಿನ ಸೂಚನೆ ಅನುಸರಿಸುತ್ತಾ, ಇದಕ್ಕೆ ತುಸು ಆ್ಯಕ್ಟಿಲೇಟರ್‌ ಬೆರೆಸಿಕೊಳ್ಳಿ. ನಂತರ ಮುಖ, ಕುತ್ತಿಗೆಗೆ ಹಚ್ಚಿ, ಕಂಗಳ ಬಳಿ ಬೇಡ.

ಕೆಲವು ನಿಮಿಷ ಬಿಟ್ಟು ಕೊನೆಯಲ್ಲಿ ತಣ್ಣೀರಿನಿಂದ ಮುಖ ತೊಳೆಯಿರಿ. ಇದೀಗ ನಿಮ್ಮ ಬ್ರೈಡಲ್ ಗ್ಲೋ ಮಿರಿಮಿರಿ ಮಿಂಚುತ್ತದೆ.

ಪ್ರತಿನಿಧಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ