ನೀವು ಯಾವುದೋ ಪಾರ್ಟಿಗೆ ಹೊರಟಿದ್ದೀರಿ, ಆಗ ನಿಮ್ಮ ಚರ್ಮ ಡಲ್, ಮುಖದಲ್ಲಿ ಸುಕ್ಕು ನಿರಿಗೆ ಇದ್ದರೆ ಪಾರ್ಟಿಯೇ ಬೇಡ ಎನಿಸುತ್ತದೆ. ಆದರೆ ಸೂಕ್ತ ಮೇಕಪ್ ಅನುಸರಿಸುವುದರಿಂದ, ನೀವು ಪಾರ್ಲರ್ ಹಂಗಿಲ್ಲದೆ ಸ್ವತಃ ಸಿಂಗರಿಸಿಕೊಂಡು ಮುಖದಲ್ಲಿ ಲೋಪ ದೋಷಗಳಿಲ್ಲದಂತೆ ಪಾರ್ಟಿಯ ಮುಖ್ಯ ಆಕರ್ಷಣೆ ಆಗಬಹುದು. ನೀವು ಯಾವುದೇ ಕಾಸ್ಮೆಟಿಕ್ಸ್ ನ್ನು ನಿಮ್ಮ ಸ್ಕಿನ್ ಟೈಪ್ ಗೆ ತಕ್ಕಂತೆ ಖರೀದಿಸಿರದಿದ್ದರೆ, ನಿಮ್ಮ ಮುಖ ಸಹಜವಾಗಿ ಕಳೆಗುಂದಿದಂತೆ ಕಾಣುತ್ತದೆ, ನಿಮಗೆ ಬೇಜಾರು ತಪ್ಪಿದ್ದಲ್ಲ. ಅದರಲ್ಲೂ ಮುಖ್ಯವಾಗಿ ಫೌಂಡೇಶನ್ ಕ್ರೀಂ ವಿಚಾರ. ಸ್ಕಿನ್ ನ್ನು ಬ್ಯೂಟಿಫುಲ್ ಆಗಿಸುವುದೇ ಇದರ ಬಳಕೆಯ ಉದ್ದೇಶ. ಹೀಗಾಗಿ ಇದನ್ನು ಆರಿಸು ಮೊದಲು ನಿಮ್ಮ ಸ್ಕಿನ್ ಟೈಪ್ ಬಗ್ಗೆ ಅಗತ್ಯ ತಿಳಿದುಕೊಳ್ಳಿ.
ವಿವಿಧ ಬಗೆಯ ಫೌಂಡೇಶನ್ಸ್
ಲಿಕ್ವಿಡ್ ಫೌಂಡೇಶನ್ : ಇದನ್ನು ಬಳಸುವ ಬಿಗಿನರ್ಸ್ ಮತ್ತು ಡ್ರೈ ಸ್ಕಿನ್ ನವರ ಕುರಿತು ಹೇಳುವುದಾದರೆ, ಈ ಲಿಕ್ವಿಡ್ ಫೌಂಡೇಶನ್ ಇಂಥವರಿಗೆ ಬೆಸ್ಟ್. ಏಕೆಂದರೆ ಬಳಸಲು ಇದು ಸುಲಭ, ಹಾಗೆಯೇ ಚರ್ಮದಲ್ಲಿ ಈಝಿ ಬ್ಲೆಂಡ್ ಆಗುತ್ತದೆ. ಲಿಕ್ವಿಡ್ ಫೌಂಡೇಶನ್ ಆಯಿಲ್‌ವಾಟರ್ ಬೇಸ್ಡ್ ಫಾರ್ಮುಲಾದಿಂದ ತಯಾರಿಸಲಾಗುತ್ತದೆ. ಇದು ಪೋರ್ಸ್‌ಡಾರ್ಕ್ ಮಾರ್ಕ್ಸ್ ನ್ನು ಹೆವಿಯಾಗಿ ಕವರ್ ಮಾಡುತ್ತದೆ, ಜೊತೆಗೆ ನಿಮ್ಮ ಸ್ಕಿನ್ ಟೋನಿಗೆ ನ್ಯಾಚುರಲ್ ಲುಕ್ಸ್ ನೀಡುತ್ತಾ ತಿಳಿಯಾಗಿಸುವ ಕೆಲಸ ಮಾಡುತ್ತದೆ. ಇವೆಲ್ಲ ಸ್ಕಿನ್ ಟೈಪ್ ಗೆ ಸೂಟ್ ಆಗುವಂತಿರಬೇಕು.
ಒದಗುವ ಬ್ರಾಂಡ್ಸ್ : ಲ್ಯಾಕ್ಮೆ ಪರ್ಫೆಕ್ಟಿಂಗ್ ಲಿಕ್ವಿಡ್ ಫೌಂಡೇಶನ್, ಮೆಬೆಲಿನ್ ಫಿಟ್ ಮೀ ಫೌಂಡೇಶನ್, ರೆವಲಾನ್ ಕಲರ್ ಸ್ಟೇ ಲಿಕ್ವಿಡ್ ಫೌಂಡೇಶನ್, ಲೋರಿಯಲ್ ಇನ್ ಫಾಲಿಬ್ ಫೌಂಡೇಶನ್.
ಗಮನಿಸಿ : ಈ ಲಿಕ್ವಿಡ್ ನಿಮ್ಮ ಚರ್ಮದ ಮೇಲೆ 4-5 ಗಂಟೆ ಕಾಲ ಮಾತ್ರ ಉಳಿಯಬಲ್ಲದು. ನೀವೇನಾದರೂ ಹೆಚ್ಚು ಗಂಟೆಗಳ ಕಾಲ ಉಳಿಸಬಯಸಿದರೆ, ಬೆವರು ಬರುವುದರಿಂದ ಮತ್ತು ಆಯ್ಲಿ ಸ್ಕಿನ್ ನವರಿಗೆ ಅದು ಪ್ಯಾಚಿ ಪ್ಯಾಚಿ ಆಗಿ ಕಾಣಬಹುದು. ಆದ್ದರಿಂದ ಬಹಳ ಹೊತ್ತು ಇದು ಉಳಿಯಲಿ ಎಂದು ಬಯಸದಿರಿ.
ಪೌಡರ್ ಫೌಂಡೇಶನ್ : ನಿಮ್ಮದು ಆಯ್ಲಿ ಚರ್ಮವಾಗಿದ್ದರೆ, ನೀವು ಪೌಡರ್ ಫೌಂಡೇಶನ್ ಆರಿಸಿಕೊಳ್ಳುವುದೇ ಸೂಕ್ತ. ಇದು ಡ್ರೈ ಸಲ್ಯೂಶನ್ ಆಗಿದ್ದು, ಪಿಗ್ಮೆಂಟ್ಸ್ ಮಿನರಲ್ಸ್ ನಿಂದ ಕೂಡಿದೆ. ಇದು ನಿಮ್ಮ ಸ್ಕಿನ್ ಮೇಲಿನ ಹೆಚ್ಚುವರಿ ಜಿಡ್ಡನ್ನು ಹೀರಿಕೊಂಡು, ಅದಕ್ಕೆ ನ್ಯಾಚುರಲ್ ಫಿನಿಶ್ ನೀಡುತ್ತದೆ. ಇದು ನಿಮಗೆ ಸುಲಭವಾಗಿ ಬ್ರಶ್, ಮಾರ್ಕೆಟ್ ನಲ್ಲಿ ಪ್ರೆಸ್ಡ್ ಲೂಸ್ ಫಾರ್ಮ್ ನಲ್ಲಿ ಲಭ್ಯ. ಡ್ರೈ ಸ್ಕಿನ್ ನವರು ಈ ಫೌಂಡೇಶನ್ ಬಳಸಲೇಬಾರದು. ಇದರಿಂದ ಸುಕ್ಕು ನಿರಿಗೆ, ಡಾರ್ಕ್ ಸ್ಪಾಟ್ಸ್ ಉತ್ತಮವಾಗಿ ಕವರ್ ಆಗದ ಕಾರಣ, ಮುಖ ಕೆಟ್ಟದಾಗಿ ಕಾಣುವ ಸಾಧ್ಯತೆಗಳಿವೆ.
ಒದಗುವ ಬ್ರಾಂಡ್ಸ್ : ಮೆಬಿಲಿನ್ ಫಿಟ್ ಮೀ ಪೌಡರ್ ಫೌಂಡೇಶನ್, ಲೋರಿಯಲ್ ಪ್ಯಾರಿಸ್, ಟ್ರೂ ಮ್ಯಾಚ್ ಫೇಸ್ ಪೌಡರ್, ಮ್ಯಾಕ್ಸ್ ಸ್ಟುಡಿಯೋ ಫಿಕ್ಸ್ ಪೌಡರ್ ಪ್ಲಸ್ ಫೌಂಡೇಶನ್, ಏವನ್ ಮಿನರಲ್ ಫೌಂಡೇಶನ್ ಇತ್ಯಾದಿ.
ಗಮನಿಸಿ : ಆಯ್ಲಿ ಸ್ಕಿನ್ ನವರಿಗೆ ಹೆಚ್ಚು ಆ್ಯಕ್ನೆ, ಮೊಡವೆ, ಸುಕ್ಕು ನಿರಿಗೆಗಳ ಕಾಟವಿರುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ, ನೀವು ಮೀಡಿಯಂ ಕವರೇಜ್ ಬದಲು ಫುಲ್ ಕವರೇಜ್ ನ ಫೌಂಡೇಶನ್ ಆರಿಸಿ. ಇದು ನಿಮ್ಮ ಚರ್ಮದ ಮೇಲೆ 2-3 ಗಂಟೆ ಕಾಲ ಮಾತ್ರ ಉಳಿಯಬಲ್ಲದು.
ಕ್ರೀಂ ಫೌಂಡೇಶನ್ : ಒಂದೋ ಡ್ರೈ ಸ್ಕಿನ್ ಪ್ರಾಬ್ಲಂ, ಮತ್ತೆ ಇಡೀ ದಿನ ಯಾವುದೇ ಈವೆಂಟ್ ಅಟೆಂಡ್ ಮಾಡುವುದರಲ್ಲಿ ಕಳೆದುಹೋಗುತ್ತದೆ, ಹೀಗಿರುವಾಗ ನೀವು ಕ್ರೀಂ ಫೌಂಡೇಶನ್ ಬಳಸಿ ನಿಮ್ಮ ಮುಖವನ್ನು 10-12 ಗಂಟೆಗಳ ಕಾಲ ಕವರೇಜ್ ನೀಡಬಹುದು ಅಂದ್ರೆ, ಇಡೀ ದಿನ ನಿಮ್ಮ ಮುಖ ಫ್ರೆಶ್ ಆಗಿಯೇ ಇರುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಆಗಿಡುವಲ್ಲಿಯೂ ಪೂರಕ. ಏಕೆಂದರೆ ಇದರಲ್ಲಿ ಎಸೆನ್ಶಿಯ್ ಆಯಿಲ್ ಸಹ ಬೆರೆತಿರುತ್ತದೆ.
ಒದಗುವ ಬ್ರಾಂಡ್ಸ್ : ಮೆಬೆಲಿನ್ ಮೂಸ್ ಫೌಂಡೇಶನ್, ಲ್ಯಾಕ್ಮೆ 95 ಮೂಸ್ ಫೌಂಡೇಶನ್, ಮ್ಯಾಕ್ ಮಿನರೈಸ್ಡ್ ಫೌಂಡೇಶನ್, ಕಲರ್ ಗರ್ಲ್ 360 ಕ್ಲೀನ್ ವಿಪ್ಡ್ ಕ್ರೀಂ ಫೌಂಡೇಶನ್.
ಗಮನಿಸಿ : ನಿಮ್ಮದು ಹೆಚ್ಚು ಡ್ರೈ ಸ್ಕಿನ್ ಆಗಿದ್ದರೆ, ಫೌಂಡೇಶನ್ ಬ್ರೇಕ್ ಆಗುವುದನ್ನು ತಪ್ಪಿಸಲು, ಮೊದಲು ಮುಖಕ್ಕೆ ಧಾರಾಳ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.
ಸೀರಂ ಫೌಂಡೇಶನ್ : ಇತ್ತೀಚೆಗೆ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದು ಚರ್ಮಕ್ಕೆ ಪೋಷಣೆ ಒದಗಿಸುವುದರ ಜೊತೆಗೆ, ಫ್ರೆಶ್‌ಗ್ಲಾಸಿ ಲುಕ್ಸ್ ಸಹ ನೀಡುತ್ತದೆ. ಏಕೆಂದರೆ ಈ ಸೀರಂ ಫೌಂಡೇಶನ್ ಆರ್ಗನ್ ಆಯಿಲ್ ನಿಂದ ಸಮೃದ್ಧವಾಗಿದೆ. ಇದರ ಸಿಲಿಕಾನ್ ಬೇಸ್ಡ್ ಫಾರ್ಮುಲಾ ಇದನ್ನು ತೆಳುವಾಗಿಸುತ್ತದೆ. ಹೀಗಾಗಿ ಹೆಚ್ಚಿನ ಆಯಿಲ್ ಸುಲಭವಾಗಿ ಚರ್ಮದಲ್ಲಿ ವಿಲೀನಗೊಳ್ಳುತ್ತದೆ. ಆಯ್ಲಿ ಚರ್ಮದವರಿಗಾಗಿಯೇ ಇದನ್ನು ವಿಶೇಷವಾಗಿ ರೂಪಿಸಲಾಗಿದೆ. ಇದು 2-3 ಗಂಟೆ ಕಾಲ ಉಳಿದರೂ, ಇದರ ಪರಿಣಾಮ ಬಹಳ ಉತ್ತಮಮಟ್ಟದ್ದು.
ಒದಗುವ ಬ್ರಾಂಡ್ಸ್ : ಲೋರಿಯಲ್ ಪ್ಯಾರಿಸ್ ಏಜ್ ಪರ್ಫೆಕ್ಟ್ ರೇಡಿಯೆಂಟ್ ಸೀರಂ ಫೌಂಡೇಶನ್, ಲ್ಯಾಕ್ಮೆ ಆ್ಯಬ್ ಸಲ್ಯೂಟ್‌ಆರ್ಗನ್ ಆಯಿಲ್ ಸೀರಂ ಫೌಂಡೇಶನ್, ಡಿಯೋರ್‌ನ್ಯೂಡ್ ಏಡ್ ಸೀರಂ ಫೌಂಡೇಶನ್ ಇತ್ಯಾದಿ.
ಗಮನಿಸಿ : ಈ ಸೀರಂ ಫೌಂಡೇಶನ್ ಡ್ರೈ ಆಯ್ಲಿ ಸ್ಕಿನ್ ಇಬ್ಬರಿಗೂ ಉಪಕಾರಿ. ಹೀಗಾಗಿ ಇದನ್ನು ಕೊಳ್ಳುವ ಮೊದಲು ನಿಮ್ಮ ಸ್ಕಿನ್ ಟೈಪ್ ತಿಳಿದಿರಲಿ, ಆಗ ಮಾತ್ರ ನಿಮಗೆ ಸೀರಂ ಫೌಂಡೇಶನ್ ಹೆಚ್ಚು ಲಾಭಕಾರಿ ಎನಿಸಿತು.
ಮೂಸ್ ಫೌಂಡೇಶನ್ : ಇದನ್ನು ವಿಪ್ಡ್ ಫೌಂಡೇಶನ್ ಎಂದೂ ಕರೆಯುತ್ತಾರೆ. ಇದು ಬಹಳ ಲೈಟ್‌ಚರ್ಮಕ್ಕೆ ಬಹಳ ಸಾಫ್ಟ್ ಟಚ್ ನೀಡುವಂಥದ್ದು. ಇದು ಚರ್ಮಕ್ಕೆ ಮ್ಯಾಟ್ ಫಿನಿಶ್ ನೀಡಿ, ಫೈನ್ ಲೈನ್ಸ್ ಸ್ಪಾಟ್ಸ್ ನ್ನು ಕವರ್ ಮಾಡುತ್ತದೆ. ಇದು ಮುಖವನ್ನು ಮೋಸ್ಟ್ ಬ್ಯೂಟಿಫುಲ್ ಆಗಿಸಿ, ಸ್ಪಾಟ್ಸ್ ನ್ನು ಪರ್ಫೆಕ್ಟ್ ಆಗಿ ಕವರ್ ಮಾಡುತ್ತದೆ, ಸ್ಕಿನ್ ಟೋನ್ ನ್ನು ಇಂಪ್ರೂವ್ ಮಾಡುತ್ತದೆ. ಇದು ಎಲ್ಲಾ ಬಗೆಯ ಚರ್ಮದವರಿಗೂ ಒಪ್ಪುತ್ತದೆ. ಆದರೆ ಇದನ್ನು ಹಚ್ಚಿದ ನಂತರ 3 ಗಂಟೆ ಕಾಲ ಮಾತ್ರ ಉಳಿಯುತ್ತದೆ.
ಒದಗುವ ಬ್ರಾಂಡ್ಸ್ : ಲ್ಯಾಕ್ಮೆ ಆ್ಯಬ್ ಸಲ್ಯೂಟ್ ಮೂಸ್ ಫೌಂಡೇಶನ್, ಫೇಸೇಜ್ ಮೂಸ್ ಫೌಂಡೇಶನ್, ಬ್ಲ್ಯಾಕ್ ರೇಡಿಯೆನ್ಸ್ ಕಲರ್ ಪರ್ಫೆಕ್ಟ್ ಮೂಸ್ ಫೌಂಡೇಶನ್.
ಫೌಂಡೇಶನ್ ಹಚ್ಚಿಕೊಳ್ಳುವುದು ಹೇಗೆ?
ನೀವು ಯಾವಾಗ ಮುಖಕ್ಕೆ ಫೌಂಡೇಶನ್ ಹಚ್ಚಬೇಕೆಂದರೂ, ಅದಕ್ಕೆ ಮೊದಲು ಮುಖವನ್ನು ಕ್ಲೆನ್ಸರ್ ನಿಂದ ಶುಭ್ರಗೊಳಿಸಿ. ಆಗ ಚರ್ಮದ ಮೇಲಿನ ಧೂಳು ಮಣ್ಣು, ಕೊಳೆ ದೂರಾಗುತ್ತದೆ.
ನಂತರ ಪೋರ್ಸ್ ನ್ನು ಟೈಟ್ ಮಾಡಲು, ಟೋನರ್ ಬಳಸಿ. ನಂತರ ಮಾಯಿಶ್ಚರೈಸರ್ ಬಳಸಿರಿ. ನಿಮ್ಮ ಪೋರ್ಸ್ ಹೆಚ್ಚು ದೊಡ್ಡದಾಗಿದ್ದರೆ ಪ್ರೈಮರ್ ಬಳಸಿಕೊಳ್ಳಿ. ಇದು ಸ್ಮೂಥ್ ಬೇಸ್ ಒದಗಿಸುವುದರ ಜೊತೆ, ಚರ್ಮದ ರಕ್ಷಣೆಯ ಹೊಣೆ ಹೊರುತ್ತದೆ.
ನಂತರ ಮುಖದ ಮೇಲೆ ಹನಿ ಹನಿಯಾಗಿ ಫೌಂಡೇಶನ್ ಹಚ್ಚಿರಿ ಹಾಗೂ ಬ್ಯೂಟಿ ಬ್ಲೆಂಡರ್ ನೆರವಿನಿಂದ ಅದನ್ನು ಚರ್ಮದ ಆಳಕ್ಕಿಳಿಯುವಂತೆ ಬ್ಲೆಂಡ್ ಮಾಡಿ. ಆಗ ಇಡೀ ಮುಖ ಒಂದೇ ರೀತಿಯ ಟೋನ್ ಹೊಂದುತ್ತದೆ. ಹೆಚ್ಚು ಫೇರಾಗಿ ಕಾಣಿಸಲು, ಎಂದೂ ಧಾರಾಳ ಫೌಂಡೇಶನ್ ಸುರಿದು ಉಜ್ಜಲು ಹೋಗಬೇಡಿ. ಇದರಿಂದ ನಿಮ್ಮ ಮುಖದ ಇಡೀ ಲುಕ್ಸ್ ಹಾಳಾದೀತು.
– ವಿ. ವನಮಾಲಾ.
ಫೌಂಡೇಶನ್ ಖರೀದಿಸುವ ಮೊದಲು
ನೀವು ನಿಮ್ಮ ಸ್ಕಿನ್ ಟೈಪ್ ಗೆ ತಕ್ಕಂತೆ ಫೌಂಡೇಶನ್ ಖರೀದಿಸಿದಾಗ, ನಿಮ್ಮ ಸ್ಕಿನ್ ಟೋನಿಗಿಂತ 12 ಟೋನ್ ಕೆಳಗಿರುವಂತೆಯೇ ಕೊಳ್ಳಿರಿ. ಆಗ ಮಾತ್ರ ಅದು ನಿಮ್ಮ ಸ್ಕಿನ್ ಟೋನಿಗೆ ಸೆಟ್ ಆದೀತು.ಎಂದೂ ನಿಮ್ಮ ಕೈ ಮೇಲೆ ಫೌಂಡೇಶನ್ ಹಾಕಿಕೊಂಡು ಪರೀಕ್ಷಿಸಲು ಹೋಗದಿರಿ. ಏಕೆಂದರೆ ಆ ಭಾಗದ ಸ್ಕಿನ್ ಮುಖಕ್ಕಿಂತಲೂ ಸದಾ ಫೇರ್ ಆಗಿರುತ್ತದೆ. ಹೀಗಾಗಿ ಸರಿಯಾದ ಶೇಡ್ ಆರಿಸಲು ಜಾಲೈನ್ ನಿಂದ ಕುತ್ತಿಗೆಗೆ ಹಚ್ಚಿ ಪರೀಕ್ಷಿಸಿ. ಎಂದೂ ಮುಖಕ್ಕೆ 2ಕ್ಕಿಂತ ಹೆಚ್ಚು ಪದರ ಫೌಂಡೇಶನ್ ಹಚ್ಚಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಫೌಂಡೇಶನ್ ಮುಖದ ಮೇಲೆ ರೇಕಿ ಎನಿಸುತ್ತದೆ. ಎಂದೂ ಫೌಂಡೇಶನ್ ಹಚ್ಚಿ ಹಾಗೇ ನಿದ್ರಿಸಿಬಿಡಬೇಡಿ. ಹೀಗೆ ಮಾಡುವುದರಿಂದ ಓಪನ್ ಪೋರ್ಸ್, ಪಿಂಪಲ್ಸ್, ಬ್ರೇಕ್ ಔಟ್ ಪ್ಲಾಬ್ಲಂ ಹೆಚ್ಚುತ್ತದೆ. ಮತ್ತೊಂದು ವಿಷಯ, ಫೌಂಡೇಶನ್ ನ್ನು ಸದಾ ಮೇಕಪ್ ರಿಮೂವರ್ ನಿಂದಲೇ ಕ್ಲೀನ್ ಮಾಡಬೇಕು. ಹೀಗೆ ಮಾಡುವುದರಿಂದ ಏಜಿಂಗ್ ಸಮಸ್ಯೆ ಕಾಡುವುದಿಲ್ಲ. ಸ್ಕಿನ್ ಟೋನಿಗೆ ತಕ್ಕಂತೆ ಫೌಂಡೇಶನ್ ಆರಿಸಲು ಮರೆಯದಿರಿ.