–ಶರತ್ ಚಂದ್ರ
ಉತ್ತರ ಕರ್ನಾಟಕದ ರಂಗಭೂಮಿಯ ಸೂಪರ್ ಸ್ಟಾರ್ ಮತ್ತು ಲೆಜೆಂಡ್ರಿ ನಟ ರಾಜು ತಾಳಿಕೋಟೆ ಅಂದ್ರೆ ಯಾರಿಗೆ ಗೊತ್ತಿಲ್ಲ? ಅದರಲ್ಲೂ ‘ಕಲಿಯುಗದ ಕುಡುಕ ‘ಎಂಬ ಹಾಸ್ಯ ನಾಟಕ ಅಲ್ಲಿ ವರ್ಲ್ಡ್ ಫೇಮಸ್. ಸ್ಯಾಂಡಲ್ ವುಡ್ ನಲ್ಲಿ ಕೂಡ ಅನೇಕ ವರ್ಷಗಳಿಂದ ತಮ್ಮ ಡೈಲಾಗ್ ಡೆಲಿವರಿ, ವಿಶೇಷ ಮ್ಯಾನರಿಸಂ ಮತ್ತು ಹಾಸ್ಯದ ಮೂಲಕ ಕಚಗುಳಿ ನೀಡುವ ಮೂಲಕ ರಂಜಿಸುತ್ತಾ ಬಂದಿದ್ದಾರೆ. ಇದೀಗ ಅವರ ಮಗ ಭರತ್ ತಾಳಿಕೋಟೆ ‘ವಿಕ್ಕಿ ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದರ್ಪಣೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಟ್ರೈಲರ್ ಲಾಂಚ್ ಇವೆಂಟ್ ಬೆಂಗಳೂರಿನಲ್ಲಿ ನಡೆದಿದ್ದು, ಹಿರಿಯ ರಂಗಭೂಮಿ ಮತ್ತು ಚಲನ ಚಿತ್ರ ಕಲಾವಿದೆ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಹಾಗೂ ಖ್ಯಾತ ನಟ ಸುಧೀರ್ ಅವರ ಧರ್ಮ ಪತ್ನಿ ಮಾಲತಿ ಸುಧೀರ್ ಟ್ರೈಲರ್ ಲಾಂಚ್ ಮಾಡಿ ಶುಭ ಹಾರೈಸಿದರು.
ಕಾಶೀನಾಥ್ ಸಣ್ಣ ಬಜೆಟ್ ನಲ್ಲಿ ನಿರ್ಮಿಸಿ ನಿರ್ದೇಶಿಸಿದ ಅನುಭವ ಚಿತ್ರದ ಬಗ್ಗೆ ಸಾಕಷ್ಟು ನೆಗೆಟಿವ್ ಮಾತು ಗಳು ಕೇಳಿ ಬಂದಿತ್ತು. ಆದರೆ ಪ್ರೇಕ್ಷಕರು ಆ ಸಿನಿಮಾ ಯಶಸ್ವಿ ಮಾಡಿದ್ರು. ಅದೇ ರೀತಿ ಒಳ್ಳೆ ಸಬ್ಜೆಕ್ಟ್ ಇದ್ರೆ ಖಂಡಿತ ಸಿನಿಮಾ ಯಶಸ್ವಿ ಯಾಗುತ್ತೆ.ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಮಾಲತಿ ಸುಧೀರ್ ಹರಸಿದರು
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ನಿಭಾಯಿಸಿಕೊಂಡು ವಿಮರ್ಶಕರ ಮತ್ತು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಉತ್ತರ ಕರ್ನಾಟಕದ ಪ್ರತಿಭೆ ನವೀನ್ ಶಂಕರ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಜವಾರಿ ಹುಡುಗ ಭರತ್ ಮತ್ತು ಇಡೀ ತಂಡಕ್ಕೆ ಸಾಥ್ ನೀಡಿದ್ದಾರೆ.
ತಾವು ರಾಜು ತಾಳಿಕೋಟೆ ಯವರ ಅಪ್ಪಟ ಅಭಿಮಾನಿಯಾಗಿದ್ದು ಅವರ ನಾಟಕ ನೋಡಿಕೊಂಡು ಬೆಳೆದಿರುವುದಾಗಿ ತಿಳಿಸಿದರು.
ಕಥೆ ಚಿತ್ರಕಥೆ ಸಂಭಾಷಣೆ ಬರೆದು ವಿಕ್ಕಿ ಚಿತ್ರವನ್ನು ನಿರ್ದೇಶಿಸುತ್ತಿರುವ ದೀಪಕ್. ಎಸ್. ಅವಂದಕರ್ ಮಾತಾಡಿ ತಮ್ಮ ಚಿತ್ರ ಕಾಮಿಡಿ ಜೋನರ್ ಗೆ ಸೇರಿದ್ದು ಮಧ್ಯೆ ಹಾರರ್ ಸನ್ನಿವೇಶ ಕಥೆ ಗೆ ತಕ್ಕಂತೆ ಬಳಸಲಾಗಿದೆ ಎಂದರು.
ಚಿತ್ರದಲ್ಲಿ ವಿಂದ್ಯ ಹೆಗಡೆ ನಾಯಕಿ ಯಾಗಿ ನಟಿಸಿದ್ದು ತಾನು ರಾಜು ತಾಳಿಕೋಟೆಯವರ ಜೊತೆ ನಟಿಸುವಾಗ ಸ್ವಲ್ಪ ನರ್ವಸ್ ಆಗಿದ್ದೆ ಆದರೆ ಅವರು ನನಗೆ ಧೈರ್ಯ ತುಂಬಿ ಸುಲಲಿತ ವಾಗಿ ಅಭಿನಯಿಸಲು ಪ್ರೋತ್ಸಾಹಿಸಿದ್ರು ಅಂತ ತಿಳಿಸಿದ್ದಾರೆ.
ನಾಯಕ ಭರತ್ ಈ ಹಿಂದೆ ಸಣ್ಣ ಪುಟ್ಟ ಪಾತ್ರಗಳನ್ನ ಮಾಡಿದ್ದೆ, ಈ ಚಿತ್ರದಲ್ಲಿ ನಾಯಕನ ಪಾತ್ರ ಸಿಕ್ಕಿದೆ ಪ್ರೇಕ್ಷಕರ ಆಶೀರ್ವಾದ ಇರಲಿ ಅಂತ ಕೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಉತ್ತರ ಕರ್ನಾಟಕ ದ ಅನೇಕ ಪ್ರತಿಭೆ ಗಳನ್ನು ಬಳಸಿಕೊಳ್ಳಲಾಗಿದೆ.
ಕೇಸರಿ ನಂದನ ಸಿನಿ ಕ್ರಿಯೇಷನ್ ಲಾಂಛನ ದಲ್ಲಿ ನವನೀತಾ ಲಕ್ಷ್ಮಿ ಹಾಗೂ ಕೆ. ಆರ್. ಸುರೇಶ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಖು ಅವರ ಛಾಯಾಗ್ರಹಣ, ಅರವ್ ರಿಷಿಕ್ ಅವರ ಸಂಗೀತ ನೀಡಿದ್ದಾರೆ.
ರಮೇಶ್ ಅವರ ಅಕ್ಷರ ಮೂವೀಸ್ ಮೂಲಕ ವಿತರಣೆ ಯಾಗುತ್ತಿರುವ ಈ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ