ಕಳೆದ ಕೆಲವು ವಾರಗಳಿಂದ ನಟಿ ಅಭಿನಯ ಮನೆಯಲ್ಲಿ ಮದುವೆಯ ಸಡಗರ ಜೋರಾಗಿ ನಡೆದಿದೆ. ನಟಿ ಅಭಿನಯ ಅವರು ತಮ್ಮ ನಿಶ್ಚಿತಾರ್ಥದ ನಂತರ ತಮ್ಮ ಅಭಿಮಾನಿಗಳೊಂದಿಗೆ ತಾನು ಮದುವೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಆ ಬಳಿಕ ಅಭಿನಯ ಚಿತ್ರರಂಗದ ಒಬ್ಬರನ್ನು ಮದುವೆಯಾಗಲಿದ್ದಾರೆ ಮತ್ತು ಸ್ಟಾರ್‌ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆ ವದಂತಿಗಳಿಗೆ ನಟಿ ಅಭಿನಯ ಪೂರ್ಣವಿರಾಮ ಹಾಕಿದ್ದಾರೆ.

ತನ್ನ 15 ವರ್ಷಗಳ ಗೆಳೆಯನೊಂದಿಗೆ ನಟಿ ಅಭಿನಯ ಮದುವೆ ಆಗಿದ್ದಾರೆ. ಅಭಿನಯ ಪತಿಯ ಹೆಸರು ಸನ್ನಿ ವರ್ಮಾ. ಮಾರ್ಚ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಇದೀಗ ವಿವಾಹವಾಗಿದ್ದಾರೆ.

ಅಭಿನಯ ಮತ್ತು ಸನ್ನಿ ವರ್ಮಾ ಅವರ ಮದುವೆಯ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ. ಅಭಿನಯ ಅವರ ವಿವಾಹವು ಸಾಂಪ್ರದಾಯಿಕ ಪದ್ಧತಿ ಪ್ರಕಾರ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ದಂಪತಿಗಳು ಕಂಗೊಳಿಸುತ್ತಿದ್ದರು.

ಮದುವೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಹೊಸ ಜೀವನ ಆರಂಭಿಸುತ್ತಿರುವ ವಧು-ವರರಿಗೆ ನೆಟಿಜನ್‌ಗಳು ಶುಭ ಹಾರೈಸುತ್ತಿದ್ದಾರೆ.

ಅಭಿನಯ ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ನಟನೆಯ ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗು ಚಿತ್ರಗಳಾದ ಶಂಭೋ ಶಿವ ಶಂಭೋ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ನೆನಿಂತೆ, ದಮ್ಮು, ಧ್ರುವ, ಮತ್ತು ಫ್ಯಾಮಿಲಿ ಸ್ಟಾರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ವರ್ಮಾ ಹೈದರಾಬಾದ್‌ನವರು.

ಅಭಿನಯ ಹುಟ್ಟಿದ್ದು ರಾಜಮಂಡ್ರಿಯಲ್ಲಿ. ಮೊದಲು ಮಾಡೆಲಿಂಗ್‌ನಲ್ಲಿ ಮಿಂಚಿದ ಅವರು ನಂತರ ನಟಿಯಾಗಿ ಅವಕಾಶಗಳನ್ನು ಪಡೆದರು. ಅವರ ವಿವಾಹ ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಮಾತೂ ಬಾರದ ಅಭಿನಯ ತನ್ನ ಅಮೋಘ್ನವಾದ ಅಭಿನಯದಿಂದಲೇ ಮನಸೂರೆಗೊಂಡವರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ