ಕ್ರಿಕೆಟಿಗ ಯುಜ್ವೇಂದ್ರ ಚಾಹಲ್‌ ಮತ್ತು ನೃತ್ಯ ಸಂಯೋಜಕಿ, ನೃತ್ಯಗಾರ್ತಿ ಧನಶ್ರೀ ವರ್ಮಾ ವಿಚ್ಛೇದನ ನೀಡಿದ್ದಾರೆ. ಈ ಸುದ್ದಿ ಕೆಲವು ದಿನಗಳಕಾಲ ಸಂಚಲನ ಮೂಡಿಸಿತ್ತು. ಅಲ್ಲದೆ ಧನಶ್ರೀ ಹೊಸ ಬಾಯ್‌ಫ್ರೆಂಡ್‌ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದರು. ಇದರ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಡಿವೋರ್ಸ್‌ ಬಳಿಕ ಧನಶ್ರೀ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ. ಅಲ್ಲದೆ, ಕೆಲವು ದಿನಗಳ ಕಾಲ ಹೊಸ ಗೆಳೆಯನ ಜೊತೆ ಸುತ್ತಾಡಿ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋಸ್‌ ಮೂಲಕ ಟ್ರೇಂಡ್‌ ಆಗಿದ್ದರು.. ಇದೀಗ ಧನಶ್ರೀ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.. ವಿಚ್ಚೇದನವಾದ ತಿಂಗಳಿಗೆ ಗುಡ್‌ ನ್ಯೂಸ್‌..? ಏನಿರಬಹುದು ಎಂದು ನೋಡೋಣ.

ಹೌದು.. ಟೀಂ ಇಂಡಿಯಾ ಕ್ರಿಕೆಟಿಗ ಚಹಾಲ್‌ಗೆ ಡಿವೋರ್ಸ್‌ ನೀಡಿದ ಬಳಿಕ ಧನಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಇದೀಗ ಈ ಮಾಹಿತಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.. ತೆಲುಗು ಸಿನಿಮಾದ ಮೂಲಕ ಬಿಗ್‌ಸ್ಕ್ರೀನ್‌ಗೆ ಪಾದಾರ್ಪಣೆ ಮಾಡಲು ಧನಶ್ರೀ ಸಿದ್ಧರಾಗಿದ್ದಾರೆ.

ಈ ಸುದ್ದಿಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೊದಲ ಚಿತ್ರದ ಚಿತ್ರೀಕರಣ ಮುಗಿಸಿರುವ ಧನಶ್ರೀ, ಈ ಕುರಿತು ಪೋಸ್ಟ್‌ಗಳ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಅಂದಹಾಗೆ.. ಇವರ ಮೊದಲ ಸಿನಿಮಾ ದಿಲ್ ರಾಜು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಧನಶ್ರೀ ತಮ್ಮ ಪೋಸ್ಟ್‌ನಲ್ಲಿ.. “ಇದು ನನ್ನ ಮೊದಲ ಸಿನಿಮಾ, ತುಂಬಾ ವಿಶೇಷವಾದ ಚಿತ್ರ.. ನನ್ನ ಫಸ್ಟ್‌ ಚಿತ್ರವನ್ನು ಪೂರ್ಣಗೊಳಿಸಿದ ಅನುಭವ ಬಹಳ ವಿಭಿನ್ನವಾಗಿದೆ. ಸೂಪರ್ ಟೀಂ ಮತ್ತು ದಿಲ್ ರಾಜು ಪ್ರೊಡಕ್ಷನ್ಸ್ ಜೊತೆ ಮರೆಯಲಾಗದ ಸಮಯ ಕಳೆದಿದ್ದೇನೆ. ಶೀಘ್ರವೇ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇವೆ.. ಇದೆಲ್ಲವೂ ದೇವರ ಪ್ಲಾನ್‌” ಅಂತ ಬರೆದುಕೊಂಡಿದ್ದಾರೆ.

ಇನ್ಟಾ ಪೋಸ್ಟ್‌ನಲ್ಲಿ ಧನಶ್ರೀ.. ಸಿನಿತಂಡದೊಂದಿಗೆ ಸೆಟ್‌ನಲ್ಲಿ ಕಳೆದ ಕೆಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಡಾನ್ಸ್‌ ಸೇರಿದಂತೆ ಸೆಟ್‌ನಲ್ಲಿ ಎಂಜಾಯ್‌ ಮಾಡಿದ ವಿಡಿಯೋಗಳನ್ನು ಸಹ ಶೇರ್‌ ಮಾಡಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ