ಬೇಬಿ ಸ್ಕಿನ್ ಕೇರ್
ಮಕ್ಕಳ ಚರ್ಮ ಬಹಳ ಸೆನ್ಸಿಟಿವ್ ಆಗಿರುತ್ತದೆ. ಹೀಗಾಗಿ ಚಿಕ್ಕ ಮಕ್ಕಳಿಗಾಗಿ ನಾವು ಒಂದಿಷ್ಟೂ ಯೋಚಿಸದೆ ಯಾವುದೋ ಪ್ರಾಡಕ್ಟ್ ಬಳಸಿ ಸ್ನಾನ ಮಾಡಿಸಿದರಾಯಿತು ಎಂದುಕೊಂಡರೆ ಅದು ತಪ್ಪು. ಅದರಲ್ಲೂ ಮುಖ್ಯವಾಗಿ ಹಿರಿಯರಾದ ನಾವು ಬಳಸುವಂಥ ಸೋಪು, ಶ್ಯಾಂಪೂ ಇತ್ಯಾದಿ ಮಕ್ಕಳಿಗೆ ಬಳಸಲೇಬಾರದು. ಏಕೆಂದರೆ ಅವರ ಅತಿ ನಾಜೂಕಾದ ಕೋಮಲ ಚರ್ಮಕ್ಕೆ ಸಾಫ್ಟ್, ಕೆಮಿಕಲ್ ಫ್ರೀ, ಜೆಂಟಲ್ ಪ್ರಾಡಕ್ಟ್ಸ್ ನ್ನೇ ಸದಾ ಬಳಸಬೇಕು. ಈ ವಿಚಾರವಾಗಿ ಚರ್ಮತಜ್ಞರ ಸಲಹೆಗಳನ್ನು ತಿಳಿಯೋಣ.
ನೋ ಮಿಸ್ಟೇಕ್ ಇನ್ ಶವರ್
ಮಗುವಿಗೆ ನೀವು ಸ್ನಾನ ಮಾಡಿಸುವಾಗೆಲ್ಲ, ಕುದಿ ನೀರು ಬೇಡ. ಮಗುವಿಗೆ ಹಿತಕರ ಎನಿಸುವಂಥ ಬೆಚ್ಚಗಿನ ನೀರಿರಲಿ. ಇದರಿಂದ ಮಗು ಸೇಫ್ ಮಾತ್ರವಲ್ಲದೆ, ಅದರ ಚರ್ಮಕ್ಕೂ ಯಾವುದೇ ಬಗೆಯ ಹಾನಿ ಆಗುವುದಿಲ್ಲ. ಏಕೆಂದರೆ ಮಗುವಿನ ಚರ್ಮ ಮತ್ತು ಸಿಸ್ಟಂ ಎರಡೂ ಬಹಳ ಸೆನ್ಸಿಟಿವ್ ಆಗಿರುತ್ತದೆ. ಇನ್ನೊಂದು ವಿಷಯ ಗಮನಿಸಿ, ಮಗುವಿಗೆ ಕೇವಲ 4-5 ನಿಮಿಷ ಮಾತ್ರ ಸ್ನಾನ ಮಾಡಿಸಬೇಕು. ಹೆಚ್ಚು ಹೊತ್ತು ಸ್ನಾನ ಮಾಡಿಸಿದರೆ ಅದರ ಚರ್ಮದಲ್ಲಿ ರಾಶೆಸ್, ಡ್ರೈನೆಸ್, ಹೆಚ್ಚು ಸೆನ್ಸಿಟಿವ್ ಆದಕಾರಣ ಮೈ ಮೇಲೆ ಹೊಪ್ಪಳೆ (ಪೀಲ್) ಕಾಣಿಸಿದರೂ ಆಶ್ಚರ್ಯವಿಲ್ಲ.
ಮಗುವಿಗೆ ಸ್ನಾನ ಮಾಡಿಸುವಾಗ ಈ ಎಲ್ಲಾ ಅಂಶಗಳನ್ನೂ ನೆನಪಿಡಿ. ಆಗ ಮಾತ್ರ ಮಗುವಿನ ಚರ್ಮ ಸಾಫ್ಟ್ಟ್, ಸಿಲ್ಕಿ, ಶೈನಿ ಹೆಲ್ದಿ ಆಗಿರುತ್ತದೆ.
ಸ್ನಾನದ ನಂತರ ಮಾಯಿಶ್ಚರೈಸರ್ ಮಗುವಿಗೆ ಬಳಸುವ ಮಾಯಿಶ್ಚರೈಸರ್ ಹೇಗಿರಬೇಕು? ಇದಕ್ಕಾಗಿ ಉತ್ತಮ ಸುವಾಸನೆಯುಳ್ಳ ಮಾಯಿಶ್ಚರೈಸರ್ ಆರಿಸಲು ಹೋಗದಿರಿ. ಯಾರೋ ಏನೋ ಬಳಸಿದರು ಎಂದು ನಿಮ್ಮ ಮಗುವಿಗೂ ಅದನ್ನೇ ಬಳಸಬೇಡಿ. ಹಿಂದೆ ನಮ್ಮ ದೊಡ್ಡ ಮಗುವಿಗೆ ಇಂತಿಂಥ ಪ್ರಾಡಕ್ಟ್ಸ್ ಬಳಸಿದ್ದೆ, ಆದ್ದರಿಂದ ಎರಡನೇ ಮಗುವಿಗೂ ಅದೇ ನಡೆಯುತ್ತದೆ ಎಂದುಕೊಳ್ಳಬೇಡಿ. ಪ್ರತಿಯೊಂದು ಮಗುವಿನ ಚರ್ಮ ಅತಿ ಸೂಕ್ಷ್ಮ, ವಿಭಿನ್ನವೇ ಆಗಿರುತ್ತದೆ. ಹಾಗಾಗಿ ಅದು ವಿಭಿನ್ನವಾಗಿ ರಿಯಾಕ್ಟ್ ಆಗಬಹುದು.
ಹೀಗಾಗಿ ನೀವು ನಿಮ್ಮ ಮಗುವಿಗಾಗಿ ಮಾಯಿಶ್ಚರೈಸರ್ ಅರಿಸುವಾಗೆಲ್ಲ ಅದು ಕೆಮಿಕಲ್ ಫ್ರೀ, ಪ್ಯಾರಾಬಿನ್ ಫ್ರೀ, ಫ್ರಾಗ್ರೆನ್ಸ್ ಫ್ರೀ ಆಗಿರಬೇಕು. ಆದಷ್ಟೂ ಇಂಥ ಉತ್ಪನ್ನಗಳಲ್ಲಿ ಝಿಂಕ್ ಆಕ್ಸೈಡ್ ಇರಬೇಕು ಅಥವಾ ಜೆಂಟಲ್ ಮಾಯಿಶ್ಚರೈಸರ್ ನ್ನೇ ಬಳಸಬೇಕು. ಏಕೆಂದರೆ ಇದು ಮಗುವಿನ ಚರ್ಮದ ಹೊರಪದರದ ಮೇಲೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ಮಗುವಿನ ಚರ್ಮಕ್ಕೆ ಎಕ್ಸ್ ಟ್ರಾ ಕೇರ್, ಎಕ್ಸ್ ಟ್ರಾ ಪ್ರೊಟೆಕ್ಷನ್ ದೊರಕುತ್ತದೆ.
ಸೂಕ್ತ ಬೇಬಿ ಪೌಡರ್ ಆಯ್ಕೆ
ನಿಮ್ಮ ಮಗುವಿಗೆ ಯಾವುದೋ ಒಂದು ಬೇಬಿ ಪೌಡರ್ ಕೊಂಡರಾಯಿತೆಂದು ನಿರ್ಲಕ್ಷ್ಯ ವಹಿಸದಿರಿ. ಮಾರ್ಕೆಟ್ ನಲ್ಲಿ ನಿಮಗೆ ಹತ್ತು ಹಲವು ಇಂಥ ಪ್ರಾಡಕ್ಟ್ಸ್ ಲಭ್ಯ. ಆದರೆ ನಿಮ್ಮ ಮಗುವಿಗೆ ಎಂಥದ್ದು ಸೂಕ್ತ? ಯೋಚಿಸಿ ಆರಿಸಿ. ಇದಕ್ಕಾಗಿ ನೀವೇ ರಿಸರ್ಚ್ ಮಾಡಿ ಅಥವಾ ಚರ್ಮತಜ್ಞರ ಸಲಹೆ ಪಡೆದು ಅದರಂತೆ ಮುಂದುವರಿಯಿರಿ. ಅಂಥ ಬೇಬಿ ಪೌಡರ್ ಮಾತ್ರ ನಿಮ್ಮ ಮಗುವಿಗೆ ಸೂಕ್ತ ಆಗಬಲ್ಲದು.
ನಿಮ್ಮ ಮಗುವಿಗಾಗಿ ಝಿಂಕ್ ಆಕ್ಸೈಡ್ ಯುಕ್ತ ಜೆಂಟಲ್ ಬೇಬಿ ಪೌಡರನ್ನೇ ಬಳಸಬೇಕು. ಏಕೆಂದರೆ ಇದರಲ್ಲಿ ನಿಮ್ಮ ಬೇಬಿಗೆ ಬೇಕಾಗು ಕೂಲ್, ಫ್ರೆಶ್, ಹ್ಯಾಪಿ ಫೀಲ್‌ನೀಡುವ ಗುಣಗಳಿದ್ದು, ಜೊತೆಗೆ ಹೀಲಿಂಗ್ ಗುಣಾಂಶ ಇರುವುದರಿಂದ, ಇದು ಬೇಬಿಯ ಚರ್ಮವನ್ನು ಸದಾ ಸ್ಮೂಥ್ ಆಗಿಡಬಲ್ಲದು. ಜೊತೆಗೆ ಬೇಬಿ ಪೌಡರ್ ನಲ್ಲಿ ನ್ಯಾಚುರಲ್ ಆ್ಯಕ್ಟಿವ್ ಅಂದ್ರೆ ರೈಸ್ ಸ್ಟಾರ್ಚ್‌ಇದ್ದರೆ, ಅದು ಬೇಬಿಯ ಸೆನ್ಸಿಟಿವ್ ಸ್ಕಿನ್ ರಕ್ಷಿಸುವಲ್ಲಿ ಮುಂದವಾಗಿರುತ್ತದೆ. ಇದು ಸ್ಕಿನ್ ಮೇಲೆ ಬ್ರೀದೆಬಲ್ ಲೇಯರ್‌ಒದಗಿಸುತ್ತದೆ, ಇದರಿಂದಾಗಿ ಚರ್ಮದ ಪೋರ್ಸ್ ಕ್ಲಾಗ್ ಆಗುವ ಚಿಂತೆ ಇರುವುದಿಲ್ಲ.
ಮಾಯಿಶ್ಚರೈಸರ್ ಅತಿ ಅಗತ್ಯ???
ಮಗು ಸುಖವಾಗಿ ನಿದ್ರಿಸಲಿ ಎಂಬ ಕಾರಣಕ್ಕೆ ತಾಯಿ ಅದಕ್ಕೆ ಮಲಗುವಾಗಲೂ ಡೈಪರ್ ತೊಡಿಸುತ್ತಾಳೆ. ಇದರಿಂದಾಗಿ ಸ್ಕಿನ್ ನಲ್ಲಿ ರಾಶೆಸ್, ರೆಡ್ ನೆಸ್, ಇಚಿಂಗ್ ಉಂಟಾಗುತ್ತದೆ. ಹೀಗಾಗಿ ಗಂಟೆಗೊಂದು ಸಲ ನ್ಯಾಪಿ ಬಲಿಸುವುದೇ ಸೂಕ್ತ. ಸಾಧ್ಯವಿದ್ದಷ್ಟೂ ಮಗುವಿನ ಚರ್ಮದ ಮೇಲೆ ಪೌಡರ್ ಸಿಂಪಡಿಸುತ್ತಾ ಅದನ್ನು ಡ್ರೈ ಆಗಿರಿಸಿ. ಆದ್ದರಿಂದೀ ನೀವು ಬೇಬಿ ಪ್ರಾಡಕ್ಟ್ ನಲ್ಲಿ ಮಾಯಿಶ್ಚರೈಸರ್, ಲೋಶನ್, ಪೌಡರ್ ಗಳನ್ನೇ ಕೊಳ್ಳಬೇಕು. ಇದು ಮಗುವಿನ ಸೆನ್ಸಿಟಿವ್ ಸ್ಕಿನ್ ಗೆ ಪರ್ಫೆಕ್ಟ್ ಮಾತ್ರವಲ್ಲದೆ, ಅದರ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿ, ಜೊತೆಗೆ ಹೀಲಿಂಗ್ ಸಹ ಮಾಡುತ್ತದೆ. ಇದರಿಂದಾಗಿ ಮಗುವಿನ ಚರ್ಮ ಸದಾ ಸಾಫ್ಟ್ ಸ್ಮೂತ್ ಆಗಿರುತ್ತದೆ.
– ಪ್ರತಿನಿಧಿ
ಕ್ರೇಡ್ : ಹೀಗೆ ನಿಭಾಯಿಸಿ
ಈ ಸಮಸ್ಯೆ ಸಣ್ಣ ಕೂಸುಗಳಿಗೆ ಅನ್ವಯಿಸುತ್ತದೆ. ಈ ಕಾರಣ ನೀವು ಮಗುವಿನ ನೆತ್ತಿಯ ಮೇಲೆ ಹಳದಿ, ಗ್ರೀಸಿ ಪ್ಯಾಚ್ ಗಮನಿಸುವಿರಿ. ಎಷ್ಟೋ ಸಲ ಇದು ನಿಮ್ಮ ಮಗುವಿನ ಹಣೆ, ಹುಬ್ಬು, ಕಿವಿಗಳ ಅಕ್ಕಪಕ್ಕ ಸಹ ಕಾಣಿಸಬಹುದು. ಕಾಲಕ್ರಮೇಣ ಇದು ತಂತಾನೇ ಮಾಯವಾಗತ್ತದೆ ಎಂಬುದು ನಿಜವಾದರೂ, ಎಚ್ಚರಿಕೆ ಲೇಸು. ನೀವು ನಿಮ್ಮ ಮಗುವಿನ ಸ್ಕಾಲ್ಪ್ ನ್ನು ಕ್ಲಿಯರ್, ಶುಭ್ರವಾಗಿ ಕಾಣಲು ಕೈಗಳಿಂದ ಅದರ ಕ್ಯಾಪ್ ಸರಿಸಿದಾಗ, ಅದರ ಸಂವೇದನಾಶೀಲ ಚರ್ಮಕ್ಕೆ ತೊಂದರೆ ಆಗಬಹುದು. ಈ ಸಮಸ್ಯೆ ಸಾಮಾನ್ಯವಾಗಿ, ಹೇರ್ ಫಾಲಿಕ್ಸ್ ನ ಅತ್ತಿತ್ತ ಇರುವ ಸ್ಕಿನ್ ಗ್ಲಾಂಡ್ಸ್ ಅತ್ಯಧಿಕ ಆಯಿಲ್ ಸ್ರವಿಸುವಿಕೆಯಿಂದಾಗಿ ಆಗುತ್ತದೆ. ಈ ಸಮಸ್ಯೆ ಕೂಡ ತಂತಾನೇ ಸರಿಹೋಗುತ್ತದೆ. ಆದರೆ ನಿಮ್ಮ ಮಗುವಿನ ಸ್ಥಿತಿಯಲ್ಲಿ ಸುಧಾರಣೆ ಕಾಣದಿದ್ದರೆ ನೀವು ಕೂಡಲೇ ಚರ್ಮತಜ್ಞರನ್ನು ಭೇಟಿ ಆಗಬೇಕು.