ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್​ನಲ್ಲಿ ಆರಂಭಗೊಂಡ FIA ಏಷ್ಯಾ ಪೆಸಿಫಿಕ್ rally ಚಾಂಪಿಯನ್​ಶಿಪ್​  (APRC) ನಲ್ಲಿ  ಹಾಲಿ ರಾಷ್ಟ್ರೀಯ ಚಾಂಪಿಯನ್ ಅರ್ಕಾ ಮೋಟಾರ್ಸ್ಪೋಟ್ಸ್​ನ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ವೇಗದ ಸಮಯ ದಾಖಲಿಸಿದ್ದಾರೆ.

ಬೆಂಗಳೂರಿನ ಕರ್ಣ ಕಡೂರ್ ಅನುಭವಿ ಸಹ-ಚಾಲಕ ಕೇರಳದ ಮೂಸಾ ಶೆರಿಫ್ ಅವರೊಂದಿಗೆ 1.45-ಕಿಮೀ ಅನ್ನು 2 ನಿಮಿಷ 50.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಮೊದಲ ಲ್ಯಾಪ್ ನಂತರ ಅಮಿತ್ರಜೀತ್ ಘೋಷ್ ಮತ್ತು ಅಶ್ವಿನ್ ನಾಯಕ್ ವೇಗವನ್ನು ಹೆಚ್ಚಿಸಿದರು. ಆದರೆ ಕರ್ಣ ಕಡೂರ್ ತಮ್ಮ ಎರಡನೇ ಲೂಪ್​ನಲ್ಲಿ 1 ನಿಮಿಷ, 24.4 ಸೆಕೆಂಡುಗಳ ಲ್ಯಾಪ್ನೊಂದಿಗೆ ದಿನದ ವೇಗದ ಚಾಲಕರಾದರು.

ಜೇಸನ್ ಸಾಲ್ಡಾನ್ಹಾ ಮತ್ತು ಪಿವಿ ಶ್ರೀನಿವಾಸ ಮೂರ್ತಿ ದಿನದ ಅಂತ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಘೋಷ್ ಮತ್ತು ನಾಯಕ್ ಮೂರನೇ ಸ್ಥಾನಕ್ಕೆ ತೃಪ್ತರಾದರು.

ವಂಸಿ ಮೆರ್ಲಾ  ಅವರಿಂದ ಪ್ರಚಾರ ಪಡೆದ ಮತ್ತು ಮದ್ರಾಸ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ APRC rally ಶನಿವಾರ ಆರು ಸ್ಪೆಷಲ್ ಹಂತಗಳು ಮತ್ತು ಭಾನುವಾರ ಐದು ಹಂತಗಳನ್ನು ಒಳಗೊಂಡಿರಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ