ನಮ್ಮ ಹಣೆಬರಹಕ್ಕೆ ಎಂತಹ ಉಪಾಯ ಕೂಡ ಅಪಾಯ ಆಗುತ್ತೆ.....
ಭಿಕ್ಷುಕ : ಅಮ್ಮಾ ತಾಯೀ... ಅಂತ ಬೇಡಿದರೆ ದಿನಾಲು ಭಿಕ್ಷೆ ಹಾಕ್ತೀರಿ..... ಆದರೆ ತಪ್ಪು ತಿಳೀಬೇಡಿ ಅಮ್ಮಾ..... ಉಪ್ಪು, ಹುಳಿ, ಖಾರ ಇಲ್ಲದೇ ದಿನಾಲು ಹೇಗಮ್ಮಾ ತಿನ್ನೋದು.....?!!
ಮನೆಯಾಕೆ : ನನ್ನ ಗಂಡನೇ ಒಂದು ದಿನ ಏನೂ ಹೇಳದೆ ಬಾಯಿ ಮುಚ್ಕೊಂಡು ತಿಂತಾರೆ... ನಿಂದೇನು ಕೊಂಕು.....?
ಭಿಕ್ಷುಕ : ಅಮ್ಮಾ... ನಿಮ್ಮ ಯಜಮಾನ್ರೇ.....ಇಪ್ಪತ್ತು ರೂಪಾಯಿ ಕೊಟ್ಟು ನಿಮ್ಮನ್ನು ಕೇಳು ಅಂದಿದ್ದು. ನೋಡಿ ಅಲ್ಲಿ ಕಾಂಪೌಂಡ್‌ಹಿಂದೆ ನಿಂತಿದ್ದಾರೆ......
ಸ್ಟೈಲಿಶ್ ಸಿತಾರಾ ಸರಸರನೆ ಹೊಸ ಚಪ್ಪಲಿ ಅಂಗಡಿಗೆ ಹೋದಳು. ಅಲ್ಲಿ ಸುಮಾರು ಒಂದೂವರೆ ಘಂಟೆ ಕಾಲ ಅಂಗಡಿಯಲ್ಲಿ ಇದ್ದಬದ್ದ ಚಪ್ಪಲಿಗಳನ್ನೆಲ್ಲ ಹೊರ ತೆಗೆಸಿ, ಹಾಕಿ ತೆಗೆದು ಮಾಡಿ, ಅಲ್ಲಿದ್ದ ಸೇಲ್ಸ್ ನವರ ಜೀವ ತಿಂದಳು.
ಕೊನೆಯಲ್ಲಿ ಆ ಹೊಸ ಚಪ್ಪಲಿಗಳ ಅಡಿಯಲ್ಲಿದ್ದ ಹಳೆ ಬ್ರಾಂಡಿನದೊಂದು ಅಂತೂ ಇಂತೂ ಅವಳ ಮೆಚ್ಚುಗೆ ಗಳಿಸಿತು. ಅದನ್ನು ಹಿಡಿದುಕೊಂಡು ಸಂಭ್ರಮದಿಂದ ಕ್ಯಾಶ್ ಕೌಂಟರ್ ನಲ್ಲಿದ್ದ ಮಾಲೀಕರ ಬಳಿ ಓಡಿಹೋಗಿ ತೋರಿಸಿದಳು, ``ಇದರ ಬೆಲೆ ಎಷ್ಟು ಅಂತ ನೋಡಿ ಇವರೆ.... ಇದನ್ನೇ ಪ್ಯಾಕ್ ಮಾಡಿಸಿ!'' ಎಂದಳು.
``ಏನೂ ಬೇಡ ತಾಯಿ.... ಇದು ನಮ್ಮ ಅಂಗಡಿಯದಲ್ಲ.... ನಿಮ್ಮದೇ ಕಾಲಿನ ಚಪ್ಪಲಿಗಳು!'' ಎಂದಾಗ ಸಿತಾರಾ ಸ್ಟೈಲಿಶ್ ಆಗಿ ಅಲ್ಲಿಂದ ಹೊರನಡೆದಳು.
ನೀತಿ : ಇರೋ ಗಂಡನ್ನ ಬಿಟ್ಟು, ಹೊಸ ಗಂಡನನ್ನು ಹುಡುಕಿದರೆ ಇದೇ ಗತಿ!
ನವ ವಿವಾಹಿತ ಪತಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ. ಅವನ ಪತ್ನಿ ಆಗ ತಾನೇ ಅಡುಗೆ ಕಲಿಯ ತೊಡಗಿದ್ದಳು. ಹಾಗೆಂದು ಅವಳ ಅಡುಗೆ ಸರಿ ಇಲ್ಲ ಎಂದು ಟೀಕಿಸಿ ಅವನು ನೆಮ್ಮದಿ ಕಾಣಲು ಸಾಧ್ಯವೇ?
ಪತ್ನಿ : ಏನ್ರಿ.... ಇವತ್ತಿನ ಅಡುಗೆ ಚೆನ್ನಾಗಿತ್ತು ಅಲ್ವೇ? ನೀವೇನಂತೀರಿ...? ಊಟ ಮಾಡುವಾಗ ಏನೂ ಹೇಳಲಿಲ್ಲ....
ಪತಿ : ನಿನ್ನ ಈ ಬಿರಿದ ಕೇಶರಾಶಿಯ ಹಾಗೆ, ಹರಡಿದ ಈ ಮೇಘಮಾಲೆಗೆ ಸರಿಸಾಟಿಯುಂಟೇ? ಹಾಗಾಗಿಯೇ ಇದು ಗ್ರೇವಿಯಿಂದ ಹಿಡಿದು ಚಪಾತಿಯವರೆಗೂ ಎಲ್ಲೆಲ್ಲೂ ತನ್ನ ಸೌಂದರ್ಯ ಪ್ರದರ್ಶಿಸಿದೆ, ಡಾರ್ಲಿಂಗ್!
ರೋಗಿ : ಡಾಕ್ಟ್ರೇ, ಮೊನ್ನೆ ನೀವು ಔಷಧಿ ಚೀಟಿ (ಪ್ರಿಸ್ ಕ್ರಿಪ್ಶನ್) ಬರೆದುಕೊಟ್ಟಿದ್ರಲ್ಲ, ಅದರ ಹಿಂದೆ ಕೊನೆ ಘಳಿಗೇಲಿ ಅವಸರದಲ್ಲಿ ಏನೋ ಬರೆದು ಕೊಟ್ರಿ. ಅದಕ್ಕಾಗಿ ಬೆಂಗಳೂರು ಪೂರ್ತಿ ಹುಡುಕಾಡಿದೆ, ಒಂದು ಅಂಗಡಿಯಲ್ಲಾದರೂ ಆ ಟಾನಿಕ್ ಸಿಕ್ಕಿದ್ದರೆ ಕೇಳಿ!
ಡಾಕ್ಟರ್: ಬಡ್ಕೊಂಡ್ರು.... ನನ್ನ ಪೆನ್ ಸರಿಯಾಗಿ ಬರೆಯುತ್ತಿರಲಿಲ್ಲ ಅಂತ ಚೀಟಿ ತಿರುವಿಹಾಕಿ ಹಿಂದೆ ಗೀಚಿದ್ದಷ್ಟೆ!
ಒಂದು ಖಾಸಗಿ ಕಂಪನಿಯ ನಡುವಯಸ್ಸು ಮೀರಿದ ಬಾಸ್, ತನಗಾಗಿ ಒಬ್ಬ ಅತಿ ಬ್ಯೂಟಿಫುಲ್, ಅಪ್ ಡೇಟೆಡ್, ಗ್ಲಾಮರಸ್ ವೈಯಾರಿಯನ್ನು ಹೊಸದಾಗಿ ಸೆಕ್ರೆಟರಿ ಆಗಿ ನೇಮಿಸಿಕೊಂಡರು.
ಅದಾಗಿ ಒಂದು ತಿಂಗಳ ನಂತರ, ಅದೇನಾಯಿತೋ ಏನೋ, ಬಾಸ್ ತಮ್ಮ 25ನೇ ಮಹಡಿಯ ಛೇಂಬರ್ ನಿಂದ ಕೆಳಗೆ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದೇ....? ಅಲ್ಲಿಗೆ ಓಡಿಬಂದ ಪೊಲೀಸ್ ಪಡೆ ವಿಚಾರಣೆ ಆರಂಭಿಸಿತು.