–ಶರತ್ ಚಂದ್ರ
ಲವ್ ಮಾಕ್‌ಟೇಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ ನಟಿ ರಚನಾ ಇಂದರ್ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ನಿರ್ದೇಶಸಿದ್ದ ‘ಲವ್ ಮಾಕ್‌ಟೇಲ್’ ಚಿತ್ರದಲ್ಲಿ ಹೀರೋಯಿನ್ಗಳಾಗಿ ಆಗಿ ಮಿಲನ ನಾಗರಾಜ್ ಮತ್ತು ಅಮೃತ ಅಯ್ಯಂಗಾರ್ ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೂ ಕೂಡ ಈ ಚಿತ್ರ ದಲ್ಲಿ ಚೂಟಿ ಹುಡುಗಿಯ ಪಾತ್ರದಲ್ಲಿ ರಚನಾ ಇಂದರ್ ಎಲ್ಲರ ಗಮನ ಸೆಳೆದಿದ್ದರು.
ಅಭಿನಯಿಸಿದ ಪ್ರಥಮ ಚಿತ್ರದಲ್ಲೇ ಗಮನ ಸೆಳೆದಿದ್ದ ರಚನಾ ಳ ‘ಹೆಂಗೆ ನಾವು ‘ ಡೈಲಾಗ್ ತುಂಬಾ ಫೇಮಸ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಬರುವ ಮೀಮ್ಸ್, ರೀಲ್ಸ್ ಗಳಲ್ಲಿ ಆ ಡೈಲಾಗ್ ಸ್ವಲ್ಪ ದಿನ ಚಾಲ್ತಿ ಯಲ್ಲಿತ್ತು.
ಆ ನಂತರ ‘ಲವ್ ಮಾಕ್‌ಟೇಲ್’ ಸೀಕ್ವಲ್ ನಲ್ಲಿ ಅತಿಥಿ ಪಾತ್ರ ಮಾಡಿದ್ದ ರಚನಾ ನಟಿಸಿದ ಹರಿಕಥೆಯಲ್ಲ ಗಿರಿಕಥೆ ಯ ಚಿತ್ರದಲ್ಲಿ ಕೂಡ ಈಕೆಯ ಡೈಲಾಗ್ ಡೆಲಿವರಿ ಜನಕ್ಕೆ ಇಷ್ಟ ಆಗಿತ್ತು ರಿಷಬ್ ಶೆಟ್ಟಿ ಗೆ ತಪಸ್ವಿನಿ ಪೂನಚ್ಚ ನಾಯಕಿಯಾಗಿ ನಟಿಸಿದ್ದಾರೂ ಕೂಡ ರಚನಾ ನಟಿಸಿದ್ದ ಸಣ್ಣ ಪಾತ್ರ ಗಮನ ಸೆಳೆದಿತ್ತು. ಅದರಲ್ಲೂ ಆಕೆ ಒಂದೇ ಉಸಿರಿನಲ್ಲಿ ಹೇಳುವ ಬುಡುಬುಡಿಕಿ ಶೈಲಿಯ ಡೈಲಾಗ್ ಚಿತ್ರದ ಹೈಲೈಟ್ ಆಗಿತ್ತು.
ಜನಪ್ರಿಯ ನಿರ್ದೇಶಕ ಶಶಾಂಕ್ ನಿರ್ದೇಶನದ ‘ಲವ್ 360 ‘ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ರಚನಾ, ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಸೂಚನೆಯನ್ನು ಆ ಚಿತ್ರದ ಮೂಲಕ ನೀಡಿದ್ದರು
ಟ್ರಿಪಲ್ ರೈಡಿಂಗ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮೂರು ನಾಯಕಿರಲ್ಲೊಬ್ಬರಾಗಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರಮ್ ಮಹಾರಾಣಿ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದ ಈಕೆ ನಟಿಸಿದ ‘ನಾಲ್ಕನೇ ಆಯಾಮ’ ನಾಟ್ ಔಟ್ ಚಿತ್ರಗಳು ಮಾತ್ರ ಬಂದು ಹೋಗಿದ್ದೆ ಗೊತ್ತಾಗಲಿಲ್ಲ.
ಇತ್ತೀಚೆಗೆ ಬಿಡುಗಡೆಯಾದ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಬಿಟ್ರೆ ಅಭಿನಯಕ್ಕೆ ಅವಕಾಶ ಇರಲಿಲ್ಲ.
‘ನಾನು ಮತ್ತು ಗುಂಡ ‘ ಎರಡನೇ ಭಾಗದಲ್ಲಿ ರಾಕೇಶ್ ಅಡಿಗ ರಿಗೆ ಜೋಡಿಯಾಗಿ ನಟಿಸುತ್ತಿರುವ ರಚನಾಗೆ ಈ ಸಿನಿಮಾದಲ್ಲಿ ನಾಯಕನ ಜೊತೆಯಲ್ಲದೆ, ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾಯಿಯ ಜೊತೆ ಕೂಡ ಒಂದಷ್ಟು ಸನ್ನಿವೇಶಗಳಿವೆಯಂತೆ.
ಒಟ್ಟಿನಲ್ಲಿ ಡೈಲಾಗ್ ಗೂ ಸೈ ನಟನೆಗೂ ಸೈ ಎನಿಸಿರುವ ಈ ಮುದ್ದಾದ ನಾಯಕಿಯ ಪ್ರತಿಭೆಯನ್ನು ನಮ್ಮ ನಿರ್ದೇಶಕರು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ.