-ಶರತ್ ಚಂದ್ರ
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತಮ್ಮ ಚಿತ್ರಗಳಲ್ಲಿ ಪರಿಚಯಿಸಿದ ನಾಯಕಿಯರು ನಂತರ ನಾಯಕಿಯಾರಾಗಿ ಜನಪ್ರಿಯರಾಗಿರುವುದು ಎಲ್ಲರಿಗೂ ಗೊತ್ತಿದೆ. ಅಪೂರ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಕ್ಕೆ ಕಾಲಿಟ್ಟ ಅಪೂರ್ವ ಗೌಡ ಕೂಡ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನಟಿಸಿದ ಮೊದಲ ಚಿತ್ರ ಫ್ಲಾಪ್ ಆದರೂ ಕೂಡ ಅಪೂರ್ವರಿಗೆ ನಂತರ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ದೊರೆತಿದ್ದು ಅವರು ಸಮರ್ಥವಾಗಿ ಬಳಸಿಕೊಡಿದ್ದಾರೆ.
ಈಗಾಗಲೇ 'ಶರಣ್ ಜೊತೆ ವಿಕ್ಟರಿ 2' ' ಅಜಯ್ ರಾವ್ ಜೊತೆ ಕೃಷ್ಣ ಟಾಕೀಸ್, ''ಪುರುಷೋತ್ತಮ 'ಪೆಂಟಾಗನ್ '' ರಾನಿ ' ' ಸೂರಿ ಲವ್ಸ್ ಸಂಧ್ಯಾ ಕಣಾoಜಾರು ಹೀಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಅಪೂರ್ವ, ಕೃಷ್ಣ ಟಾಕೀಸ್ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯೊಂದನ್ನು ಪಡೆದು ಕೊಂಡಿದ್ದರು.
ಕಳೆದ ವರ್ಷ ಬಿಡುಗಡೆಯಾದ ಮಕ್ಕಳ ಚಿತ್ರ 'ಓ ನನ್ನ ಚೇತನ ' ಚಿತ್ರದ ಮೂಲಕ ನಿರ್ದೇಶಕಿಯ ಪಟ್ಟ ಕೂಡ ಅಲಂಕರಿಸಿದ್ದರು. ತನ್ನನ್ನು ಚಿತ್ರರಂಗ ಕ್ಕೆ ಪರಿಚಯಿಸಿದ ರವಿಚಂದ್ರನ್ ಅವರ ಸಪೋರ್ಟ್ ಕೂಡ ಈ ಚಿತ್ರಕ್ಕಿತ್ತು . ಮೊಬೈಲ್ ನಿಂದ ಸಣ್ಣ ಮಕ್ಕಳ ಮೇಲೆ ಬೀರುವ ಕೆಟ್ಟ ಪರಿಣಾಮಗಳ ಕುರಿತಾದ ಸಾಮಾಜಿಕ ಕಳಕಳಿ ಹೊಂದಿದ್ದ ಈ ಚಿತ್ರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಸದ್ಯಕ್ಕೆ ಮೇ 9 ರಂದು ಬಿಡುಗಡೆಯಾಗಲಿರುವ ಈಗಲ್ ಮೀಡಿಯಾ ಬ್ಯಾನರ್ನ ಅಡಿಯಲ್ಲಿ ನವರಸನ್ ನಿರ್ಮಿಸುತ್ತಿರುವ ರಾಪ್ಪರ್ ಚಂದನ್ ಶೆಟ್ಟಿ ಪ್ರಪ್ರಥಮ ಬಾರಿಗೆ ನಾಯಕನಾಗಿ ನಟಿಸುತ್ತಿರುವ 'ಸೂತ್ರಧಾರಿ ' ಚಿತ್ರದ ನಾಯಕಿಯಾಗಿ ಅಪೂರ್ವ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಅಪೂರ್ವ, ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದಷ್ಟು ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.
,