ದಕ್ಷಿಣದ ಚಿತ್ರಗಳು ಇಡೀ ದೇಶಾದ್ಯಂತ ಯಶಸ್ವಿಯಾಗಿ `ಪ್ಯಾನ್‌ ಇಂಡಿಯಾ ಚಿತ್ರಗಳು' ಎಂಬ ಖ್ಯಾತಿಗೊಳಗಾಗಿ ಬಾಕ್ಸ್ ಆಫೀಸ್‌ ನಲ್ಲಿ ಕೋಟಿಗಟ್ಟಲೆ ಗಳಿಸುತ್ತಿರುವಾಗ, ಬಾಲಿವುಡ್‌ ಸಿನಿಮಾ ಮಖಾಡೆ ಮಲಗಿರುವುದೇಕೆ? ಚಿತ್ರಮಂದಿರಕ್ಕೆ ಬಾರದ ಜನ, OTT ಯಲ್ಲೂ ದಕ್ಷಿಣದ ಚಿತ್ರಗಳದ್ದೇ ಮೇಲುಗೈ! ಬಾಲಿವುಡ್‌ ತೀರಾ ಹದಗೆಟ್ಟಿರುವುದಕ್ಕೆ ಸಾಕ್ಷಿ. ಇದಕ್ಕೆ ಕಾರಣವೇನು....?

ಬಾಲಿವುಡ್‌ ನ ಯಾವಾ ಕಲಾವಿದ ಅಥವಾ ನಿರ್ದೇಶಕರೂ ಇಂದು ಗಟ್ಟಿಯಾಗಿ ನೆಲೆ ನಿಂತಿದ್ದಾರೆ ಎಂದು ಹೇಳಲಾಗದು. ಪರಿಣಾಮವಾಗಿ ಇಂದು ಬಾಲಿವುಡ್‌ ನ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ದಯನೀಯವಾಗಿ ಸೋತು ನೆಲಕಚ್ಚುತ್ತಿವೆ, ಮಖಾಡೆ ಮಲಗಿಬಿಟ್ಟಿವೆ. ವರ್ತಮಾನದ ಎಲ್ಲಾ ಕಲಾವಿದರೂ ತಮ್ಮನ್ನು ತಾವು ಸಾಧಾರಣ, ಮಾಮೂಲಿ ಮನುಷ್ಯರಿಂದ ದೂರ ಇರಿಸಿಕೊಳ್ಳುವಂಥ ಪ್ರಯತ್ನದಲ್ಲೇ ತೊಡಗಿರುತ್ತಾರೆ. ಹಿಂದಿನ ಕಾಲದಲ್ಲಾದರೆ ಯಾವ ಸಾಧಾರಣ ವ್ಯಕ್ತಿಯೇ ಆಗಲಿ, ಯಾವುದೇ ಶೂಟಿಂಗಿನ ಸೆಟ್‌ ಗೆ ಹೋಗಿ, ಅಲ್ಲಿ ಲೈಟ್‌ ಬಾಯ್‌ ನಿಂದ ಹಿಡಿದು ದೊಡ್ಡ ಸ್ಟಾರ್‌ ವರೆಗೂ ಯಾರನ್ನಾದರೂ ಭೇಟಿ ಆಗಬಹುದಿತ್ತು. ಆ ದಿನಗಳಲ್ಲಿ ಕಲಾವಿದರ ಅಭಿಮಾನಿಗಳೂ ಸಹ ಖುಷಿಯಾಗಿ ತಮ್ಮ ಮೆಚ್ಚಿನ ನಟನಟಿಯರನ್ನು ಕಾಣಲು ಹೀಗೆ ಶೂಟಿಂಗ್‌ ಸ್ಪಾಟ್‌ ಗೆ ಧಾವಿಸುತ್ತಿದ್ದರು. ಆಗೆಲ್ಲ ಅಭಿಮಾನಿಗಳೊಂದಿಗೆ ಕಲಾವಿದರು, ತಾಂತ್ರಿಕ ವರ್ಗದವರು ಎಲ್ಲರೂ ಒಂದೇ ಕಡೆ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು.

ಆದರೆ ಈಗಿನ ಪರಿಸ್ಥಿತಿ ಖಂಡಿತಾ ಹೀಗಿಲ್ಲ. ಈಗೆಲ್ಲ ಕಲಾವಿದರು ಮೊದಲ ಚಿತ್ರ ಸೈನ್‌ ಮಾಡಿದ ತಕ್ಷಣವೇ ಪಿ, ಮ್ಯಾನೇಜರ್‌, ಸುರಕ್ಷತೆಗಾಗಿ ಬೌನ್ಸರ್‌ ಸೇವೆ ಎಂದು ಬಾಡಿಗಾರ್ಡ್‌ ನಿಯಮಿಸಿಕೊಳ್ಳುತ್ತಾರೆ, ಅವರ ನಡುವೆ ತಮಗೆ ತಾವೇ ಕೈದಿಗಳಾಗುತ್ತಾರೆ. ಈ ಸರ್ಪಗಾವಲನ್ನು ದಾಟಿ ಸಾಧಾರಣ ಜನ ತಮ್ಮ ನೆಚ್ಚಿನ ನಟನಟಿಯರನ್ನು ಭೇಟಿಯಾಗುವುದಾದರೂ ಹೇಗೆ? ಈಗ ಯಾವ ಕಲಾವಿದರೂ ಸೆಟ್‌ ಗಳಲ್ಲಿ ಬಹಳ ಹೊತ್ತೇನೂ ಉಳಿಯುವುದಿಲ್ಲ. ಅವರೆಲ್ಲ ತಂತಮ್ಮ ಪರ್ಸನಲ್ ವ್ಯಾನಿಟಿಗಳಲ್ಲಿ ಕುಳಿತೇ ಇರುತ್ತಾರೆ. ತಮ್ಮ ಸೀನ್‌ ನ ಶೂಟಿಂಗ್‌ ಎಂದು ಹೇಳಿದಾಗ ಮಾತ್ರ, ವ್ಯಾನಿಟಿ ವ್ಯಾನಿನಿಂದ ಎದ್ದು ಕ್ಯಾಮೆರಾ ಎದುರು ಹೋಗಿ ನಿಲ್ಲುತ್ತಾರೆ. ಅದಾದ ತಕ್ಷಣ ತಮ್ಮ ವ್ಯಾನಿಗೆ ದೌಡಾಯಿಸುತ್ತಾರೆ.

ಹೀಗಿರುವ ಇಂದಿನ ಮಹಾನ್‌ ತಾರೆಯರು ತಳಹದಿಯ ಮಟ್ಟದಲ್ಲಿ ನಮ್ಮ ಸಾಮಾನ್ಯ ಜನರನ್ನು ಗುರುತಿಸುವುದಾದರೂ ಹೇಗೆ? ಇಂಥ ಸ್ಟಾರ್‌ ಗಳಿಗೆ ತಮ್ಮದೇ ಸೆಟ್‌ ಗಳ ಸ್ಪಾಟ್‌ ಬಾಯ್‌ ಗಳಿಗೆ ಇರುವ ಸಮಸ್ಯೆಗಳ ಬಗ್ಗೆ ಗೊತ್ತೇ? ಸಾಮಾನ್ಯ ಜನ ಎಂಥ ಚಿತ್ರ ನೋಡಲು ಬಯಸುತ್ತಾರೆ? ಅದಕ್ಕೆ ಸ್ಪಂದಿಸುವುದು ಹೇಗೆ? ನಿವಾರಣೆ ಹೇಗೆ.....? ಇತ್ಯಾದಿಗಳ ಅರಿವಾದರೂ ಇದೆಯೇ?

ಇದಕ್ಕೆ ವಿರುದ್ಧ ಎಂಬಂತೆ ದ. ಭಾರತದ ಚಿತ್ರೋದ್ಯಮದ ಮಂದಿ ಸದಾ ಸಾಮಾನ್ಯರೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ಕನ್ನಡದ್ದೇ ಇರಲಿ, ತೆಲಗಿನದ್ದೇ ಇರಲಿ, ತಮಿಳಿನ ರೋಬೋ ಇತ್ಯಾದಿ ಇರಲಿ, ಜನಸಾಮಾನ್ಯರ ಸಂಪರ್ಕದಿಂದಾಗಿಯೇ ಈ ಚಿತ್ರಗಳು ಇಷ್ಟು ಜನಪ್ರಿಯ ಆಗಲು ಸಾಧ್ಯವಾಯ್ತು. ಚಿತ್ರದ ಯಶಸ್ಸಿನಿಂದ, ನಾಯಕ ರಾಮ್ ಚರಣ್‌ ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಪಾರ್ಟಿ ಏರ್ಪಡಿಸಿ, ಸಣ್ಣ ಲೈಟ್‌ ಬಾಯ್‌ ನ್ನೂ ಬಿಡದೆ, ಇಡೀ ಚಿತ್ರದ ಎಲ್ಲಾ ತಾಂತ್ರಿಕ ವರ್ಗದವರನ್ನು ಮನೆಗೂ ಕರೆಸಿಕೊಂಡು, ಪ್ರತಿಯೊಬ್ಬರಿಗೂ 10 ಗ್ರಾಮಿನ ಚಿನ್ನದ ಸರ ನೀಡಿ, ಭೂರಿ ಭೋಜನ ಏರ್ಪಡಿಸಿದ್ದ. ಅವರೊಂದಿಗೆ ಸುದೀರ್ಘ ಮಾತುಕಥೆಯಲ್ಲಿ ಪಾಲ್ಗೊಂಡಿದ್ದ. ಇದಲ್ಲವೇ ಅಸಲಿ ಬಾಂಧವ್ಯ......?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ