ಶರತ್ ಚಂದ್ರ
ಕನ್ನಡದ ಹಿರಿಯ ನಿರ್ದೇಶಕ ನಾಗಣ್ಣ ಮತ್ತೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ,ವಿಷ್ಣುವರ್ಧನ್, ಉಪೇಂದ್ರ, ದರ್ಶನ್ ರಂತಹ ಕನ್ನಡದ ಸೂಪರ್ ಸ್ಟಾರ್ ನಟರ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಣ್ಣ, ‘ಕುರುಕ್ಷೇತ್ರ’ ದಂತಹ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದಾರೂ,ಒಂದಷ್ಟು ವರ್ಷಗಳು ಚಿತ್ರರಂಗದಿಂದ ದೂರ ಉಳಿದಿದ್ದರು.. ಗಣೇಶ್ ನಟಿಸಿದ ‘ಗಿಮಿಕ್ ‘ ಚಿತ್ರದ ನಂತರ ಒಂದಷ್ಟು ಗ್ಯಾಪ್ ನ ನಂತರ ಈಗ ಮತ್ತೆ ರಿಯಲ್ ಸ್ಟಾರ್ ಉಪೇಂದ್ರ ನಟಿಸಲಿರುವ ಸೂರಪ್ಪ ಬಾಬು ನಿರ್ಮಿಸಲಿರುವ ಚಿತ್ರದ ಮೂಲಕ ವಾಪಾಸಾಗಲಿಗದ್ದಾರೆ.
ಅಕ್ಷಯ ತದಿಗೆಯ ಶುಭ ದಿನದಂದು ಚಿತ್ರದ ಟೈಟಲ್ ಟೀಸರ್ ಬಿಡಲಾಗಿದೆ. ಚಿತ್ರಕ್ಕೆ ‘ಭಾರ್ಗವ ‘ ಅಂತ ಹೆಸರಿಡಲಾಗಿದೆ.ಈ ಹಿಂದೆ ಗಿಮಿಕ್ ಚಿತ್ರಕ್ಕೆ ಸಂಗೀತ ನೀಡಿದ್ದ ಅರ್ಜುನ್ ಜನ್ಯ ಈ ಚಿತ್ರಕ್ಕೆ ಕೂಡ ಸಂಗೀತ ನೀಡಲಿದ್ದಾರೆ.
ಉಪೇಂದ್ರ ಜೊತೆ ನಾಗಣ್ಣ ಅವರ ಕಾಂಬಿನೇಶನ್ ಈ ಹಿಂದೆ ಕೂಡ ವರ್ಕ್ಔಟ್ ಆಗಿದೆ. ಗೋಕರ್ಣ, ಕುಟುಂಬ ಮತ್ತು ಗೌರಮ್ಮ ದಂತಹ ಸೂಪರ್ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ.
ಟೈಟಲ್ ಟೀಸರ್ ನಲ್ಲಿ ಲಾರಿಯೊಂದರ ನಂಬರ್ ಪ್ಲೇಟ್ ನಲ್ಲಿ ಮಂಗಳೂರಿನ ರಿಜಿಸ್ಟ್ರೇಷನ್ ಕಂಡು ಬರುತ್ತದೆ. ಬಹುಷಃ ಕಥೆ ಮಂಗಳೂರಿನ ಸುತ್ತ ಮುತ್ತ ನಡೆಯಬಹುದು ಅನಿಸುತ್ತದೆ. ಈ ಎಲ್ಲಾ ಮಾಹಿತಿಗಳು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿದೆ.
ಸೂರಪ್ಪ ಚಿತ್ರದ ಯಶಸ್ಸಿನ ನಂತರ ಸೂರಪ್ಪ ಬಾಬು ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಎಂ. ಬಿ. ಬಾಬು ನಿರ್ಮಾಪಕ ರಾಗಿ ಈ ಹಿಂದೆ ನಾಗಣ್ಣ ಜೊತೆ ಸೂರಪ್ಪ, ಕೋಟಿಗೊಬ್ಬ ನಂತಹ ಸೂಪರ್ ಹಿಟ್ ಚಿತ್ರಗಳನ್ನು ಸ್ಯಾಂಡಲ್ ವುಡ್ ಗೆ ನೀಡಿದ್ದಾರೆ. ಚಿತ್ರೀಕರಣ ಸಧ್ಯದಲ್ಲೇ ಆರಂಭಗೊಳ್ಳಲಿದ್ದು ಇನ್ನಷ್ಟು ಮಾಹಿತಿಗಳು ಚಿತ್ರತಂಡ ದಿಂದ ಹೊರಬರಲಿದೆ.