ಬಹುಭಾಷಾ ನಟಿ ರಮ್ಯಾಶ್ರೀ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಭೋಜ್‌ಪುರಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ರಮ್ಯಾಶ್ರೀ ನಾಯಕಿ ನಟಿಯಾಗಿ ವೃತ್ತಿಜೀವನ ಆರಂಭಿಸಿದವರು.

ವೈವಿಧ್ಯಮಯ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ ಅವರು, ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ವಿಶೇಷ ಮನ್ನಣೆ ಪಡೆದವರು.

ರಮ್ಯಾಶ್ರೀ ಅವರು ತೆಲುಗು ಹುಡುಗಿಯಾಗಿದ್ದರೂ ಮೊದಲು ನಾಯಕಿಯಾಗಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದವರು. ಕನ್ನಡ ಚಿತ್ರರಂಗದಲ್ಲಿಯೇ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹೆಚ್ಚಿನ ಮನ್ನಣೆ ಪಡೆದವರು. ಅವರ ಮೊದಲ ಹೆಸರು ಸುಜಾತಾ. ಅವರು ಚಿತ್ರರಂಗ ಪ್ರವೇಶಿಸಿದಾಗ ಸುಜಾತಾ ಎನ್ನುವ ಹೆಸರಿನವರು ಸಾಕಷ್ಟು ನಟಿಯರಿದ್ದರು. ಹಾಗಾಗಿ ತಮ್ಮ ಹೆಸರನ್ನು ರಮ್ಯಾಶ್ರೀ ಎಂದು ಬದಲಾಯಿಸಿಕೊಂಡಿದ್ದರು.

ನಟನೆಯ ಜೊತೆಗೆ, ಬರವಣಿಗೆ ಮತ್ತು ನಿರ್ದೇಶನದಲ್ಲೂ ಅನುಭವವಿರುವ ರಮ್ಯಾಶ್ರೀ ಹಲವು ಭಾಷೆಗಳಲ್ಲಿ ನಟಿಸಿದ್ದು, ಚಿತ್ರರಂಗದಲ್ಲಿನ ತಮ್ಮ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಾನು ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರರಂಗದಲ್ಲಿ ತನಗೆ ಬಂದ ಟೀಕೆಗಳನ್ನು ಹಗುರವಾಗಿ ಪರಿಗಣಿಸಿದ್ದೇನೆ ಎಂದು ಹೇಳಿದ್ದಾರೆ.

ನುವ್ವು ನೇನು, ಆದಿ, ಸಿಂಹಾದ್ರಿ ಮತ್ತು ಯಮಗೋಳ ಮಾರಿ ಮದಲಿಂದಿ ಚಿತ್ರಗಳಲ್ಲಿ ತಮ್ಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿರುವ ರಮ್ಯಾಶ್ರೀ, ಸಂದರ್ಶನವೊಂದರಲ್ಲಿ ಕೆಲವು ಕರಾಳ ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಿಂದೆ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ, ಕೆಲವರು ಅವಳು ಸರಿಯಾಗಿ ಉಡುಗೆ ತೊಡುವುದಿಲ್ಲ ಎಂದು ಟೀಕಿಸುತ್ತಾರೆ. ಒಮ್ಮೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಬಳಿಕ ಅವರು ಅನುಚಿತವಾಗಿ ಉಡುಪು ಧರಿಸುತ್ತಾರೆ ಎಂದು ಹೇಳಿ ಆಹ್ವಾನವನ್ನು ಹಿಂತೆಗೆದುಕೊಂಡರು. ಆದರೆ, ಅಂತಹ ಸಂದರ್ಭಗಳಲ್ಲಿ ಕೆಲವರು ನನ್ನ ಬೆಂಬಲಕ್ಕೆ ನಿಂತರು ಎಂದು ಹೇಳಿದ್ದಾರೆ.

ನಾನು ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ತುಂಬಾ ಡೀಸೆಂಟ್ ಆಗಿರುತ್ತೇನೆ. ಅಲ್ಲಿ ನನ್ನನ್ನು ನೋಡಿದ ಎಲ್ಲರೂ ಅಚ್ಚರಿಗೊಂಡರು. ಆದರೆ, ಅವರು ಹಾಕುವ ಬಟ್ಟೆ ನೋಡಿ ಕ್ಯಾರೆಕ್ಷರ್‌ ನಿರ್ಧರಿಸುತ್ತಾರೆ. ಸೀರೆ ಉಡುವ ಪ್ರತಿ ಮಹಿಳೆ ಸಂಪ್ರದಾಯಸ್ತೆ ಅಲ್ಲ, ಚಡ್ಡಿ ಹಾಕುವ ಪ್ರತಿ ಹೆಣ್ಣು ಅದಲ್ಲ ಎಂದು ಹಿರಿಯರೊಬ್ಬರು ಹೇಳುವುದನ್ನು ಕೇಳಿ ನನಗೆ ತುಂಬಾ ಧೈರ್ಯ ಬಂತು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿರುವ ರಮ್ಯಾಶ್ರೀ, ನಾನು ಸುಮಾರು ಎರಡು ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿಲ್ಲ. ಆದರೆ ಉದ್ಯಮದ ಆರಂಭಿಕ ವರ್ಷಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನು ಎದುರಿಸಿದ್ದೆ. ಆಫರ್‌ ನೀಡಿದವರು ಹಾಗೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ತಾಯಿ ಕೂಡ ಕೇಳದೆ ಊಟ ಕೊಡುವುದಿಲ್ಲ, ಅಲ್ಲವೇ? ಹಾಗೆಯೇ ಇದು ಕೂಡ. ಕೆಲವೊಮ್ಮೆ ಅಂತಹ ಪ್ರಸ್ತಾಪಗಳು ಆಕರ್ಷಕವಾಗಿರಬಹುದು. ಆದರೆ, ಅವರು ಅಂತಹ ಕೆಲಸವನ್ನು ಮಾಡಲು ಧೈರ್ಯ ಮಾಡುವುದಿಲ್ಲ. ನಾವು ಉದ್ಯಮದಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಆದ್ದರಿಂದ ಈ ರೀತಿಯ ವಿಷಯಗಳು ಸ್ವಾಭಾವಿಕವಾಗಿ ನಡೆಯುತ್ತವೆ. ಆದರೆ ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಕಾನೂನಿಗೆ ತಿಳಿಸಿ. ಅಸಭ್ಯವಾಗಿ ವರ್ತಿಸಿದರೆ, ಪೊಲೀಸರಿಗೆ ದೂರು ನೀಡಿ. ಆದರೆ ನೀವೇಕೆ ಹೀಗೆ ಕೇಳುತ್ತೀರಾ ಎನ್ನುವುದು ತಪ್ಪು ಎಂದು ನಟಿ ಸೆನ್ಸೇಷನಲ್‌ ಹೇಳಿಕೆಗಳನ್ನು ನೀಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ