ಎಂದಿನ ಮನೆಗೆಲಸದ ಧಾವಂತ, ಉದ್ಯೋಗಸ್ಥೆಯಾದರೆ ಆಫೀಸಿಗೂ ದೌಡಾಯಿಸಬೇಕು, ಈ ಮಧ್ಯೆ ಮಕ್ಕಳನ್ನು ಶಾಲೆಗೆ ರೆಡಿ ಮಾಡಬೇಕು, ಪತಿರಾಯರಿಗೆ ಲಂಚ್‌ ಬಾಕ್ಸ್ ನೀಡಿ, ಮನೆಯ ಹಿರಿಯರಿಗೆ ವೇಳಾವೇಳೆಗೆ ಪಥ್ಯದ ಆಹಾರ, ಕೈಗೆ ಸಿಗುವಂತೆ ಔಷಧಿ ಸಿದ್ಧಪಡಿಸಿಟ್ಟು ಹೊರಡುವ ಮಹಿಳೆಯರಿಗೆ ಮುಖಕ್ಕೆ ಫ್ರೆಶ್‌ ಲುಕ್ಸ್ ತಂದುಕೊಳ್ಳಲು ಪುರಸತ್ತಾದರೂ ಎಲ್ಲಿ?

ತಮ್ಮನ್ನು ತಾವು ಅಲಂಕರಿಸಿಕೊಂಡು ಸಿದ್ಧರಾಗಿ ಹೊರಡಲು ಟೈಮೇ ಇಲ್ಲ ಅಂತಾರೆ. ಇಷ್ಟೆಲ್ಲ ಅಚ್ಚುಕಟ್ಟಾಗಿ ಕೆಲಸ ಪೂರೈಸುವ ಹೆಂಗಸರಿಗೆ ತಮ್ಮನ್ನು ತಾವೇ ಗಮನಿಸಿಕೊಳ್ಳಲು ಸಮಯಾವಕಾಶ ಖಂಡಿತಾ ಇರುವುದಿಲ್ಲ. ಆದರೆ ಫ್ರೆಶ್‌ ಲುಕ್ಸ್ ಗಾಗಿ ಪ್ರತಿ ಸಲ ಪಾರ್ಲರ್‌ ಗಂತೂ ಹೋಗಲಾಗದು. ನೀವು ಮನೆಯಲ್ಲಿದ್ದುಕೊಂಡೇ, ನಿಮ್ಮ ಸಮಯಾವಕಾಶದ ಅನುಕೂಲಕ್ಕೆ ತಕ್ಕಂತೆ ಈ ಸಲಹೆಗಳನ್ನು ಅನುಸರಿಸಿ ಉತ್ತಮ ಗ್ಲೋ ಪಡೆಯಿರಿ. ಅದೂ ಹೆಚ್ಚು ದುಬಾರಿ ಖರ್ಚು ಮಾಡದೆ! ಹೌದು, ಈ ಫೇಸ್‌ ಮಾಸ್ಕ್ ಬಳಸಿ ನೀವು ಮನೆಯಲ್ಲೇ ಕೆಲವಾರು ನಿಮಿಷಗಳಲ್ಲಿ ಬೇಕಾದ ಫ್ರೆಶ್‌ ಲುಕ್ಸ್ ಪಡೆಯಬಹುದು.

ಹನೀ ಫೇಸ್ಮಾಸ್ಕ್

ಈ ಫೇಸ್‌ ಮಾಸ್ಕ್ ನ್ನು ಡ್ರೈ ಸ್ಕಿನ್ನಿನವರಿಗೆ ಮ್ಯಾಜಿಕ್‌ ಎಂದು ಹೇಳಿದರೆ, ಅದು ತಪ್ಪಲ್ಲ. ಏಕೆಂದರೆ ಇದರಲ್ಲಿ ಧಾರಾಳ ಹೈಡ್ರೇಶನ್‌ ಗುಣಗಳು ಅಡಗಿವೆ. ಈ ಜೇನು ಆಧಾರಿತ ಮಾಸ್ಕ್ ಆ್ಯಂಟಿ ಆಕ್ಸಿಡೆಂಟ್‌ ನಲ್ಲಿ ರಿಚ್‌ ಆಗಿದ್ದು, ನಿಮ್ಮ ಚರ್ಮವನ್ನು ಕೆಲವೇ ನಿಮಿಷಗಳಲ್ಲಿ ಮೃದುಗೊಳಿಸಬಲ್ಲದು.

ಜೊತೆಗೆ ಈ ಮಾಸ್ಕ್ ನಲ್ಲಿ ವಿಟಮಿನ್ಸ್ ‌ಧಾರಾಳ ಇರುವುದರಿಂದ, ಇದು ಚರ್ಮದಲ್ಲಿ ಈ ಚಳಿಗಾಲಕ್ಕೆ ಬೇಕಾದಂಥ ಶುಷ್ಕತನ ತೊಲಗಿಸಿ, ಉತ್ತಮ ಗ್ಲೋ ತಂದುಕೊಡಬಲ್ಲದು. ಹೀಗಾಗಿ ಈ ಹೈಡ್ರೇಟೇಡ್‌ ಆ್ಯಂಟಿ ಆಕ್ಸಿಡೆಂಟ್‌ ಫೇಸ್‌ ಮಾಸ್ಕ್ ನಿಂದ ಆರಾಮವಾಗಿ ಗ್ಲೋಯಿಂಗ್‌ ಕಾಂಪ್ಲೆಕ್ಷನ್‌ ಪಡೆದುಕೊಳ್ಳಿ. ಹೀಗಾಗಿ ಈ ಹನೀ ಪೋಶನ್‌ ರೀನೇವಿಂಗ್‌ ಫೇಸ್‌ ಮಾಸ್ಕ್ ಹೆಚ್ಚು ಲಾಭಕರ ಎನಿಸುತ್ತದೆ.

ಬಳಸುವುದು ಹೇಗೆ? : ಈ ಮಾಸ್ಕ್ ನ್ನು ನೀವು 10-12 ನಿಮಿಷಗಳ ಕಾಲ ಮುಖಕ್ಕೆ ಮೆತ್ತಿಕೊಂಡು ಹಾಗೇ ಇರಿ, ನಂತರ ತೆಗೆದು ಮೃದು ಕೈಗಳಿಂದ ಮುಖವನ್ನು ಮಸಾಜ್‌ ಮಾಡಿ, ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖಕ್ಕೆ ಬಿಲ್ ಕುಲ್ ಉತ್ತಮ ಕಾಂತಿ ಮೈಗೂಡುತ್ತದೆ. ಯಾವುದೇ ಪಾರ್ಟಿ ಫಂಕ್ಷನ್‌ ಗಳಿಗೆ ಹೋಗಲು, ಇದು ಪರ್ಫೆಕ್ಟ್ ಆಯ್ಕೆ. ಇದನ್ನು ನೀವು ನಿಮ್ಮ ಸಮಯಾನುಸಾರ  ಆನ್‌ ಲೈನ್‌, ಆಫ್‌ ಲೈನ್‌ ಕೊಳ್ಳಬಹುದು.

ಗ್ರೇಪ್ಹೈಡ್ರೋಜೆಲ್ ಮಾಸ್ಕ್

ನಿಮ್ಮ ಮುಖದಲ್ಲಿ ಆ್ಯಕ್ನೆ ಸಮಸ್ಯೆ ಹೆಚ್ಚಾಗಿದ್ದರೆ, ನೀವು ನಿಮ್ಮ ಮುಖಕ್ಕೆ ಏನೂ ಹಚ್ಚುವುದೇ ಬೇಡ ಎಂದು ಗಾಬರಿಗೊಂಡಿದ್ದರೆ, ಆಗ ನೀವು ಧಾರಾಳವಾಗಿ ಈ ಗ್ರೇಪ್‌ ಫ್ರೂಟ್‌ ಹೈಡ್ರೋಜೆಲ್ ‌ಮಾಸ್ಕ್ವನ್ನು ಒಂದಿಷ್ಟು ಟೆನ್ಶನ್‌ ಇಲ್ಲದೆ ಬಳಸಬಹುದು. ಇದನ್ನು ವಿಶೇಷವಾಗಿ ಆ್ಯಕ್ನೆ ಪ್ರೋನ್‌ ಸ್ಕಿನ್‌ ಗಾಗಿಯೇ ಡಿಸೈನ್‌ ಗೊಳಿಸಲಾಗಿದೆ. ಇದರಲ್ಲಿದೆ ಗ್ರೇಪ್‌ ಫ್ರೂಟ್‌ ಎಕ್ಸ್ ಟ್ರಾಕ್ಟ್. ಅದು ಚರ್ಮವನ್ನು ರೀಫ್ರೆಶ್‌ ಮಾಡಲು ಸದಾ ರೆಡಿ. ಇದರಲ್ಲಿ ವಿಟಮಿನ್ಸ್ ಇದ್ದು, ಚರ್ಮಕ್ಕೆ ಹೆಚ್ಚಿನ ಹೊಳಪು ನೀಡಿ, ಆ್ಯಕ್ನೆ ಆಗದಂತೆಯೂ ತಡೆಯುತ್ತದೆ. ಆ್ಯಕ್ನೆ ಸ್ಪಾಟ್‌ ಲೆಸ್ ನ ಕಲೆ ತಗ್ಗಿಸುವಲ್ಲಿಯೂ ಸಹಾಯಕ.

ಬಳಸುದು ಹೇಗೆ? : ಇದು ಪೀಲ್ ಆಫ್‌ ಮಾಸ್ಕ್ ಎನಿಸಿದೆ. ಇದನ್ನು ಒದ್ದೆ ಮುಖಕ್ಕೆ ಅಂಟಿಸಿಕೊಂಡ ನಂತರ, 10-15 ನಿಮಿಷ ಬಿಟ್ಟು ನಿಧಾನವಾಗಿ ಮುಖದಿಂದ ಪೀಲ್‌ಆಫ್‌ ಮಾಡಬೇಕು, ಅಂದ್ರೆ ವೆರಿ ಈಝಿ ಟು ಯೂಸ್‌. ಇದು ಸಾಕಷ್ಟು ಬಜೆಟ್‌ ಫ್ರೆಂಡ್ಲಿ ಆಗಿದ್ದು, ಎಲ್ಲರ ಕೈಗೆಟುಕುವಂತಿದೆ.

ಚಾರ್ಕೋಲ್ ಮಾಸ್ಕ್

ಇದು ಈಗ ಸಾಕಷ್ಟು ಟ್ರೆಂಡಿ ಎನಿಸಿದೆ. ವೈಶಿಷ್ಟ್ಯ ಅಂದ್ರೆ ಇದು ಪೋರ್ಸ್‌ ಕ್ಲೀನ್‌ ಮಾಡಿ, ಬ್ಲ್ಯಾಕ್‌ ಹೆಡ್ಸ್ ಸಮಸ್ಯೆ ಇಲ್ಲದಂತೆಯೂ ಮಾಡಬಲ್ಲದು. ಇದ್ದಿಲಿನ ಗುಣಗಳು ಚರ್ಮದ ಮೇಲೆ ಅಡಗಿದ ಧೂಳು ಮಣ್ಣನ್ನು ಕ್ಲೀನ್‌ ಮಾಡಿ ನಿಮಗೆ ಕ್ಲಿಯರ್‌ ಸ್ಕಿನ್ ಒದಗಿಸುತ್ತದೆ. ಜೊತೆಗೆ ಆ್ಯಕ್ನೆ ಸಮಸ್ಯೆಗಳಿಂದಲೂ ನಿಮ್ಮನ್ನು ಪಾರು ಮಾಡುತ್ತದೆ. ಇದು ಚರ್ಮದ ಡೆಡ್‌ ಸೆಲ್ಸ್ ತೊಲಗಿಸಿ, ಚರ್ಮದ ಹೆಚ್ಚುವರಿ ಜಿಡ್ಡಿನಾಂಶವನ್ನು ನಿವಾರಿಸುತ್ತದೆ. ಹೀಗಾಗಿ ಚರ್ಮ ಸಹಜ ಗ್ಲೋ ಗಳಿಸುತ್ತದೆ. ನ್ಯಾಚುರಲ್ ಗ್ಲೋಗಾಗಿ ಇದನ್ನು ಅಗತ್ಯ ಟ್ರೈ ಮಾಡಿ.

ಬಳಸುದು ಹೇಗೆ? : ಎಲ್ಲಕ್ಕೂ ಮೊದಲು ಮುಖವನ್ನು ಕ್ಲೆನ್ಸರ್‌ ಬಳಸಿ ಕ್ಲೀನ್‌ ಮಾಡಿ. ಇದರ ಮೇಲೆ ಈ ಫೇಸ್‌ ಮಾಸ್ಕ್ ಧರಿಸಿರಿ. 15 ನಿಮಿಷ ಬಿಟ್ಟು ಇದನ್ನು ಕಳಚಬೇಕು. ತಣ್ಣೀರಿನಿಂದ ಮುಖ ತೊಳೆಯಿರಿ. ನಂತರ ಮುಖವನ್ನು ಲಘುವಾಗಿ ಮಸಾಜ್‌ ಮಾಡಿ, ಇದಕ್ಕೆ ಮಾಯಿಶ್ಚರೈಸರ್‌ ಹಚ್ಚಿರಿ. ತಕ್ಷಣ ನಿಮ್ಮ ಮುಖದಲ್ಲಾಗಿರುವ ವ್ಯತ್ಯಾಸ ನಿಮಗೆ ತಿಳಿಯುತ್ತದೆ.

ಓಟ್ಮೀಲ್ ಮಾಸ್ಕ್

ನಿಮ್ಮದು ಅತಿ ಸೆನ್ಸಿಟಿವ್ ಚರ್ಮ ಆಗಿದ್ದರೆ, ಯಾವುದೇ ಪ್ರಾಡಕ್ಟ್ ಬಳಸುವ ಮೊದಲು 10 ಸಲ ಯೋಚಿಸಲೇ ಬೇಕು. ಏಕೆಂದರೆ ಸೆನ್ಸಿಟಿವ್ ‌ಸ್ಕಿನ್‌ ಅತಿ ಸೂಕ್ಷ್ಮವಾದ್ದರಿಂದ, ಯಾವುದೇ ಪ್ರಾಡಕ್ಟ್ಸ್ ನಿಂದ ಹಾನಿ ಆಗಬಹುದು. ಇಂಥವರೂ ಸಹ ಈ ಚಳಿಗಾಲದಲ್ಲಿ ನಿಮಿಷಗಳಲ್ಲೇ ಕಾಂತಿಯುತ ಚರ್ಮ ಬಯಸಿದರೆ, ಓಟ್‌ ಮೀಲ್ ‌ಮಾಸ್ಕ್ ಗಿಂತ ಬೆಸ್ಟ್ ಬೇರಾವುದೂ ಇಲ್ಲ ಎನ್ನಬಹುದು. ಏಕೆಂದರೆ ಇದರಲ್ಲಿ ಆ್ಯಂಟಿ ಇನ್‌ ಫ್ಲಮೇಟರಿ ಆ್ಯಂಟಿ ಮೈಕ್ರೋಬಿಯಲ್ ಗುಣಗಳಿದ್ದು, ಚರ್ಮವನ್ನು ಕ್ಲೀನ್‌ಸಾಫ್ಟ್ ಗೊಳಿಸಲು ಮುನ್ನುಗ್ಗುತ್ತದೆ. ಈ ಮಾಸ್ಕ್ ಚರ್ಮದ ಹೀಲಿಂಗ್‌ ಪ್ರೋಸೆಸ್‌ ನ್ನು ಸಹ ತೀವ್ರ ಚುರುಕುಗೊಳಿಸಬಲ್ಲದು.

ಬಳಸುವುದು ಹೇಗೆ? : ಮೊದಲು ಮುಖವನ್ನು ಶುಚಿಗೊಳಿಸಿ, ನಂತರ ಈ ಮಾಸ್ಕ್ ಧರಿಸಿರಿ. ನಂತರ ಕನಿಷ್ಠ 15-20 ನಿಮಿಷ ಇದನ್ನು ಹಾಗೇ ಮುಖದ ಮೇಲೆ ಇರಲು ಬಿಡಿ. ಆಮೇಲೆ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮ ನೈಸರ್ಗಿಕ ವಿಧಾನದಿಂದಲೇ ಕಾಂತಿ ಗಳಿಸುತ್ತದೆ, ಅದು ಚರ್ಮವನ್ನು ಸ್ವಲ್ಪ ಇರಿಟೇಟ್‌ ಮಾಡದೆ! ಈ ಮಾಸ್ಕ್ ಸುಲಭವಾಗಿ ನಿಮಗೆ ಎಲ್ಲೆಡೆ ಸಿಗುತ್ತದೆ.

ಪಂಪ್ಕಿನ್ಹನೀ ಮಾಸ್ಕ್

ನೀವು ಮುಖದಲ್ಲಿ ಒಮ್ಮೆಲೇ ಹೆಚ್ಚಿನ ಗ್ಲೋ ಬಯಸಿದರೆ, ನೀವು ಚಳಿಗಾಲದಲ್ಲಿ ಈ ಪಂಪ್‌ ಕಿನ್‌ ಹನೀ ಮಾಸ್ಕ್ ಬಳಸಿ, ಚರ್ಮಕ್ಕೆ ರೀಫ್ರೆಶ್‌ಗ್ಲೋಯಿಂಗ್‌ ಲುಕ್ಸ್ ಪಡೆಯಿರಿ. ಜೇನಿನ ಕಾರಣ ಅದು ಹೆಲ್ದಿ ಸೆಲ್ಸ್ ಪ್ರಮೋಟ್‌ ಮಾಡಿ, ಸ್ಕಿನ್‌ ಮತ್ತಷ್ಟು ಯಂಗ್‌ಆಗುವಂತೆ ಮಾಡಬಲ್ಲದು. ಪಂಪ್‌ ಕಿನ್‌ ಆಯಿಲ್ ‌ನಲ್ಲಿ ವಿಟಮಿನ್ಸ್, ಮಿನರಲ್ಸ್, ಒಮೇಗಾ 3 ಹೆಚ್ಚಿರುವ ಕಾರಣ, ಇದು ಡ್ಯಾಮೇಜ್‌ ಸ್ಕಿನ್‌ ನ್ನು ರಿಪೇರಿ ಮಾಡಿ, ಏಜಿಂಗ್‌ ಪ್ರೋಸೆಸ್‌ ನ್ನು ಸ್ಲೋ ಸಹ ಮಾಡಬಲ್ಲದು.

ಇದು ನಿಮ್ಮ ಚರ್ಮದ ಡಲ್ ನೆಸ್‌ ದೂರಗೊಳಿಸಿ, ಅದಕ್ಕೆ ಹೆಚ್ಚಿನ ಗ್ಲೋ ಕೊಡುವುದಲ್ಲದೆ, ಸ್ಮೂತ್‌ ಗೊಳಿಸುವ ಜವಾಬ್ದಾರಿಯನ್ನೂ ವಹಿಸುತ್ತದೆ.

ಬಳಸುವುದು ಹೇಗೆ? : ಇದನ್ನು ಬಳಸುವುದು ಬಲು ಸುಲಭ. ಮುಖ ಶುಚಿಗೊಳಿಸಿ, ಈ ಮಾಸ್ಕ್ ಧರಿಸಿ 12-15 ನಿಮಿಷ ಹಾಗೇ ಬಿಡಿ, ನಂತರ ತಣ್ಣೀರಿನಿಂದ ಚೆನ್ನಾಗಿ ಮುಖ ತೊಳೆಯಿರಿ.

ಇದನ್ನು ಮರೆಯದಿರಿ

ನೀವು ಫೇಸ್‌ ಮಾಸ್ಕ್ ಖರೀದಿಸುವಾಗೆಲ್ಲ, ಅದಕ್ಕೆ ಮೊದಲು ನಿಮ್ಮ ಸ್ಕಿನ್‌ ಟೈಪ್‌ಯಾವ ಪ್ರಕಾರದ್ದು ಎಂದು ತಿಳಿಯಿರಿ. ಏಕೆಂದರೆ ಬೇರೆ ಬೇರೆ ವಿಭಿನ್ನ ಸ್ಕಿನ್‌ ಟೈಪ್‌ ನ್ನು ಗಮನದಲ್ಲಿರಿಸಿಕೊಂಡೇ ಪ್ರತಿ ಫೇಸ್‌ ಮಾಸ್ಕ್ ತಯಾರಿಸಿರುತ್ತಾರೆ. ಹಾಗಾಗಿ ನಿಮ್ಮ ಸ್ಕಿನ್‌ ಟೈಪ್‌ ತಿಳಿದು ಅದಕ್ಕೆ ಫೇಸ್‌ ಮಾಸ್ಕ್ ಪೂರಕ ಕೊಂಡಾಗ, ಉತ್ತಮ ರಿಸಲ್ಟ್ ಸಿಗುತ್ತದೆ. ಜೊತೆಗೆ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ.

ಇನ್ನೊಂದು ಮಾತನ್ನು ಮರೆಯದಿರಿ, ಫೇಸ್‌ ಮಾಸ್ಕ್ ನಲ್ಲಿ ಪ್ಯಾರಾಬೇನ್ಸ್, ಸುವಾಸನೆ, ಆಲ್ಕೋಹಾಲ್‌, ಡೈ…… ಇತ್ಯಾದಿಗಳನ್ನು ಖಂಡಿತಾ ಬಳಸಿರಬಾರದು. ಏಕೆಂದರೆ ಇವು ನಿಮ್ಮ ಚರ್ಮಕ್ಕೆ ಹಾನಿ, ಅಲರ್ಜಿ ಮಾಡುವ ಸಂಭವವಿದೆ. ದುರಾಸೆಗೆ ಒಳಗಾಗಿ ಇಂಥ ಮಾಸ್ಕ್ ಗಳನ್ನು 30-40 ನಿಮಿಷ ಹಾಗೇ ಮುಖದ ಮೇಲೆ ಉಳಿಸಿಕೊಳ್ಳಬೇಡಿ, ಅದರಿಂದ ಹೆಚ್ಚಿನ ಲಾಭ ಆಗಬಹುದು ಎಂದು ನೀವು ನಿರೀಕ್ಷಿಸಿರಬಹುದು, ಬದಲಿಗೆ ಹಾನಿ ಆದೀತು. ಹೀಗಾಗಿ 10-15 ನಿಮಿಷಗಳ ಕಾಲಾವಧಿ ಪರ್ಫೆಕ್ಟ್ ಆಗಿರುತ್ತದೆ.

ಬಿ. ಪರಿಮಳಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ