ಹೂಡಿಕೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಮಹಿಳೆಯರಿಗೆ ಈ ಸಲಹೆಗಳು, ಅವರು ಆರ್ಥಿಕವಾಗಿ ಬಲಗೊಳ್ಳಲು ನೆರವಾಗಬಹುದು…….!
ಭಾರತದಲ್ಲಿ ಬಹಳಷ್ಟು ಮಹಿಳೆಯರು ಹಣಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಪುರುಷರಿಗೆ ಅಂದರೆ ತಮ್ಮ ಪತಿ, ತಂದೆ, ಅಣ್ಣ ಅಥವಾ ತಮ್ಮನಿಗೆ ಬಿಟ್ಟುಕೊಡುತ್ತಾರೆ. ಅವರಲ್ಲಿ ಓದುಬರಹ ಬಲ್ಲ ಮಹಿಳೆಯರು ಕೂಡ ಸೇರಿದ್ದಾರೆ. ಉನ್ನತ ಹುದ್ದೆಗೆ ಏರಿದರೂ ಇದರಲ್ಲಿ ಸೇರಿದ್ದಾರೆ. ಪುರುಷ ಪ್ರಧಾನ ಸಮಾಜ ಹಾಗೂ ಆರ್ಥಿಕ ಸಾಕ್ಷರತೆಯ ದೌರ್ಬಲ್ಯ ಇದಕ್ಕೆ ಕಾರಣ.
ಮಹಿಳೆಯರು ಹೂಡಿಕೆಗೆ ಸಂಬಂಧಪಟ್ಟ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಕಲಿತುಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆಗೂ ತನ್ನದೇ ಆದ ಖಾಸಗಿ ಆರ್ಥಿಕ ಗುರಿಗಳಿರುತ್ತವೆ. ಅವನ್ನು ಈಡೇರಿಸಿಕೊಳ್ಳಲು ಆಕೆ ಹೂಡಿಕೆ ಮಾಡಬೇಕು.
ಮದುವೆ ಹಾಗೂ ಯಶಸ್ವಿ ವೈವಾಹಿಕ ಜೀವನಕ್ಕೆ.
ಮಕ್ಕಳ ಜೀವನದಲ್ಲಿ ಅತ್ಯುತ್ತಮ ಆರಂಭ ನೀಡಲು.
ತಮ್ಮ ವಯೋವೃದ್ಧ ತಾಯಿ ತಂದೆಯರ ಸೇವೆಗಾಗಿ.
ತಮ್ಮ ಆರೋಗ್ಯ ಹಾಗೂ ಅತ್ಯುತ್ತಮ ನಾಳೆಗಾಗಿ.
`ಇಂಡಿಯಾ ಮನಿ ಡಾಟ್ ಕಾಮ್’ನ ಸಿಇಓ ಹಾಗೂ ಸಂಸ್ಥಾಪಕ ಸಿ.ಎಸ್. ಸುಧೀರ್ ಸೂಕ್ತ ಹೂಡಿಕೆಗಾಗಿ ಈ ಕೆಳಗಿನ ಸಲಹೆಗಳನ್ನು ಕೊಟ್ಟಿದ್ದಾರೆ.
ಅವಿವಾಹಿತ ಯುವತಿಯರಿಗೆ : ನೀವಿನ್ನೂ ಮದುವೆಯಾಗದಿದ್ದಲ್ಲಿ, ಫುಲ್ ಟೈಮ್ ಜಾಬ್ ಮಾಡುತ್ತಿದ್ದಲ್ಲಿ, ನಿಮ್ಮ ಬಳಿ ಹೂಡಿಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ಈ ವಯಸ್ಸಿನಲ್ಲಿ ನೀವು ತೆಗೆದುಕೊಂಡ ಹೂಡಿಕೆಯ ನಿರ್ಧಾರ ಭವಿಷ್ಯದಲ್ಲಿ ನಿಮ್ಮ ಹೂಡಿಕೆಯ ಬೆನ್ನೆಲುಬಾಗಿ ಸಾಬೀತಾಗುತ್ತದೆ.
ಮದುವೆಗಾಗಿ ಹೂಡಿಕೆ ಒಂದು ಅಲ್ಪಕಾಲಿಕ ಗುರಿ. ನೀವು ಬ್ಯಾಂಕ್ ಎಫ್‌ಡಿ, ಪೋಸ್ಟ್ ಆಫೀಸ್ ಆರ್ ಡಿ ಅಥವಾ ಲಿಕ್ವಿಡ್ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. 5 ವರ್ಷಕ್ಕೂ ಹೆಚ್ಚಿನ ಗುರಿ ನಿಮಗೆ ಇದ್ದಲ್ಲಿ ಅಂದರೆ ಮನೆ ಖರೀದಿ ಮಾಡಬೇಕೆಂದಿದ್ದರೆ, ಅದಕ್ಕಾಗಿ ನೀವು ಈಕ್ವಿಟಿ ಮ್ಯೂಚ್ಯುವಲ್ ಫಂಡ್ ಹಾಗೂ ಷೇರ್ ಗಳಲ್ಲಿ ಹಣ ಹೂಡಿಕೆ ಮಾಡಬಹುದು. ದೀರ್ಘಾವಧಿಗಾಗಿ (5 ವರ್ಷಕ್ಕೂ ಹೆಚ್ಚಿನ ಅವಧಿ) ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಇದರಲ್ಲಿ ಒಳ್ಳೆಯ ರಿಟರ್ನ್ಸ್ ದೊರಕುವ ಸಾಧ್ಯತೆಯಿರುತ್ತದೆ.
ಉದ್ಯೋಗಸ್ಥ ವಿವಾಹಿತ ಮಹಿಳೆಯರಿಗೆ : ವಿವಾಹಿತ ಉದ್ಯೋಗಸ್ಥ ಮಹಿಳೆಗೆ 2 ಕರ್ತವ್ಯಗಳಿರುತ್ತವೆ. ಮನೆ ಸಂಭಾಳಿಸುವುದು ಹಾಗೂ ಉದ್ಯೋಗ ಮಾಡುವುದು. ಇಂತಹ ಮಹಿಳೆಯರು ಸೀಮಿತ ಅಪಾಯವಿರುವ ಹೂಡಿಕೆ ಮಾಡಬೇಕು. ವಿವಾಹಿತ ಮಹಿಳೆ ಸಾಮಾನ್ಯವಾಗಿ ತನ್ನ ಮಕ್ಕಳ ಮದುವೆ ಮಾಡುವುದು, ಇಲ್ಲವೇ ಮನೆ ಖರೀದಿ ಅಥವಾ ನಿವೃತ್ತಿ ನಂತರದ ಖರ್ಚುಗಳಿಗಾಗಿ ಹೂಡಿಕೆ ಮಾಡುತ್ತಾಳೆ. ಪಿಪಿಎಫ್ ಹಾಗೂ ಎನ್ ಡಿ ಎಸ್ ಸೇವಾ ನಿವೃತ್ತಿಗೆ ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ. ಇದರಲ್ಲಿ ತೆರಿಗೆ ಉಳಿತಾಯಕ್ಕೂ ಅನುಕೂಲವಾಗುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡಬೇಕಿದ್ದರೆ ಡೇಟ್ ಮತ್ತು ಈಕ್ವಿಟಿಯ ಮಿಶ್ರಣದಲ್ಲಿ ಹೂಡಿಕೆಯ ಪರ್ಯಾಯ ಆಯ್ಕೆ ಮಾಡಿಕೊಳ್ಳಬಹುದು.
ಈಕ್ವಿಟಿ ಮ್ಯೂಚುವಲ್ ಫಂಡ್, ಎನ್‌ಎಸ್‌ಪಿ, ಎಫ್ ಡಿ, ಬ್ಯಾಲೆನ್ಸ್ಡ್ ಮ್ಯೂಚುವಲ್ ಫಂಡ್ ನಲ್ಲೂ ಹೂಡಿಕೆ ಮಾಡಬಹುದು. ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಮೆಂಟ್ ಪ್ಲ್ಯಾನ್ ಸಿಪ್ ಮುಖಾಂತರ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ. ಇದರಲ್ಲಿ ತಿಂಗಳಿಗೊಮ್ಮೆ ಅಥವಾ 15 ದಿನಕ್ಕೊಮ್ಮೆ ನಿಗದಿಪಡಿಸಿದ ದಿನದಂದು ಮ್ಯೂಚುವಲ್ ಫಂಡ್ ನಲ್ಲಿ ಚಿಕ್ಕ ಮೊತ್ತವನ್ನು ಹೂಡಿಕೆ ಮಾಡಬಹುದು.
ಗೃಹಿಣಿಗೆ ಹೂಡಿಕೆಯ ಪರ್ಯಾಯಗಳು
ಗೃಹಿಣಿಯರು ಸಾಮಾನ್ಯವಾಗಿ ತಮ್ಮ ಕಷ್ಟದ ದಿನಗಳಿಗಾಗಿಯೇ ಉಳಿತಾಯ ಮಾಡುತ್ತಾರೆ. ಅವರು ಎಸ್ ಬಿ ಖಾತೆಯಲ್ಲಿ ಉಳಿತಾಯ ಮಾಡುತ್ತಾರೆ. ಎಫ್ ಡಿ ಅಥವಾ ಆರ್ ಡಿ ಖಾತೆಯಲ್ಲಿ ಹೂಡಿಕೆಯ ಬಗ್ಗೆ ಅವರು ಯೋಚಿಸಬೇಕು. ಅದರಲ್ಲಿ ಬಡ್ಡಿ ಹೆಚ್ಚು ಸಿಗುತ್ತದೆ.
ಒಂದು ವೇಳೆ ನೀವು ಹೂಡಿಕೆಯಲ್ಲಿ ರಿಸ್ಕ್ ಎದುರಿಸಲು ಸಿದ್ಧರಿದ್ದರೆ ಸಿಪ್ ಮುಖಾಂತರ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಗೋಲ್ಡ್ ಎಟಿಎಫ್ ನಲ್ಲೂ ಹೂಡಿಕೆ ಮಾಡುವುದು ಉಪಯುಕ್ತ ಎನಿಸಬಹುದು.
ಮಹಿಳೆಯರಿಗಾಗಿ ಸ್ಮಾರ್ಟ್ ಹೂಡಿಕೆಗಳು
ಫೇರ್ ಸೆಂಟ್ ನ ಸಂಸ್ಥಾಪಕ ಹಾಗೂ ಸಿಇಓ ರಜತ್ ಜಿ.ರವರ ಪ್ರಕಾರ ಸ್ಮಾರ್ಟ್ ಹೂಡಿಕೆಯ ಕೆಲವು ಉಪಾಯಗಳು ಇಲ್ಲಿವೆ:
ಡಿಜಿಟಲ್ ಗೋಲ್ಡ್ : ಅಂದಹಾಗೆ ವಸ್ತು ಹಾಗೂ ಹೂಡಿಕೆ ಎರಡರ ರೂಪದಲ್ಲೂ ಚಿನ್ನ ಕಳೆದ ದಶಕದಲ್ಲಿ ತನ್ನ ಹೊಳಪು ಕಳೆದು ಕೊಂಡಿದೆ. ಹೀಗಾಗಿ ದೇಶದ ಸ್ಮಾರ್ಟ್ ಮಹಿಳೆಯರು ಈಗ ಡಿಜಿಟಲ್ ಚಿನ್ನದ ಖರೀದಿಗೆ ಆದ್ಯತೆ ಕೊಡುತ್ತಿದ್ದಾರೆ. ಇದರಿಂದ ಅವರಿಗೆ ತಮ್ಮ ಸಂಪತ್ತನ್ನು ಸುರಕ್ಷಿತವಾಗಿಡುವ ಚಿಂತೆಯಿಂದಲೂ ಮುಕ್ತಿ. ಜೊತೆಗೆ ಈ ತೆರನಾದ ಚಿನ್ನದ ಖರೀದಿಯಲ್ಲಿ ಅದರ ಗುಣಮಟ್ಟದ ಬಗ್ಗೆ ಯಾವುದೇ ದ್ವಂದ್ವ ಇರಲಾರದು. ಡಿಜಿಟಲ್ ರೂಪದಲ್ಲಿ ಖರೀದಿಸಿದ ಚಿನ್ನವನ್ನು ವಿಶ್ವಾಸಾರ್ಹ ಹಾಗೂ ಮಾನ್ಯತೆ ಪಡೆದ ಚಾನೆಲ್ ಗಳ ಮುಖಾಂತರ ಪಡೆಯಲಾಗುತ್ತದೆ. ಅದು ಗುಣಮಟ್ಟ ಹಾಗೂ ಶುದ್ಧತೆಯ ಭರವಸೆ ನೀಡುತ್ತದೆ.
ಪಿ2ಪಿ ರಾಡಿಂಗ್ : ಕಡಿಮೆ ರಿಸ್ಕ್ ನಲ್ಲಿ ಹೆಚ್ಚು ಲಾಭಕ್ಕಾಗಿ ತಂತ್ರಜ್ಞಾನ ಆಧಾರಿತ ಪಿ2ಪಿ ರಾಡಿಂಗ್ ಪ್ಲ್ಯಾಟ್ ಫಾರ್ವ್ ಅಂದರೆ ಫೇಯರೆಂಟ್ ಡಾಟ್ ಕಾಮ್ ಹೂಡಿಕೆದಾರರಿಗೆ ಒಂದೊಳ್ಳೆಯ ಸುರಕ್ಷಿತ ಪರ್ಯಾಯ ಉಪಾಯವಾಗಿದೆ. ಸ್ಮಾರ್ಟ್ ಭಾರತೀಯ ಮಹಿಳೆಯರಿಗೆ ಆಕರ್ಷಕ ಹೂಡಿಕೆಯ ರೂಪದಲ್ಲಿ ಪಿ2ಪಿ ರಾಡಿಂಗ್ಸ್ ನ ಆಯ್ಕೆ ಸುಲಭ ಹಾಗೂ ಸೌಲಭ್ಯದಾಯಕ ಆಗಿರುವುದೇ ಕಾರಣವಾಗಿದೆ. ಅದಕ್ಕಾಗಿ ನೀವು ಕೆಲವು ಪ್ರಾಥಮಿಕ ಮಾಹಿತಿ ಪೂರೈಸಲು ಕೆವೈಸಿಯ ದಾಖಲೆಗಳನ್ನು ಕೊಡಬೇಕಾಗುತ್ತದೆ. ಒಂದು ಸಲ ಡಾಕ್ಯುಮೆಂಟ್ ನೀಡಿದ ಬಳಿಕ ಹೂಡಿಕೆದಾರ 750 ರೂ.ಗಳ ಅತ್ಯಂತ ಕನಿಷ್ಠ ಹೂಡಿಕೆ ನೀಡಬೇಕಾಗುತ್ತದೆ.
ರಿಯಲ್ ಎಸ್ಟೇಟ್ : ಇದು ಹೂಡಿಕೆಯ ಒಂದು ಒಳ್ಳೆಯ ಉಪಾಯವಾಗಿದೆ. ಲೀಸ್ ನ ಅವಧಿಯ ತನಕ ಬಾಡಿಗೆಯಿಂದ ನಿಶ್ಚಿತಾದಾಯ, ಓವರ್ ಆಲ್ ಮೌಲ್ಯ ಹೆಚ್ಚಳ ಇದರ ವಿಶೇಷತೆಗಳಾಗಿವೆ. ಅವು ಕಮರ್ಷಿಯಲ್ ಪ್ರಾಪರ್ಟಿಯಲ್ಲಿ ಹೂಡಿಕೆಯ ಲಾಭವನ್ನು ತಿಳಿಸುತ್ತವೆ.
– ಸಿ.ಕೆ. ಪ್ರೀತಿ