ಇಲ್ಲಿಯೂ ತಪ್ಪದ ಭೇದಭಾವ : ಟಿಕ್ ಟಾಕ್ ನಮ್ಮಲ್ಲಿ ಬ್ಯಾನ್ ಆಗಿದೆ, ಆದರೆ ಎಲ್ಲೆಲ್ಲಿ ಅದು ಮಾನ್ಯವೋ ಅಲ್ಲೆಲ್ಲ ಜನ ಮುಗಿಬಿದ್ದು ಟ್ರೋಲಿಂಗ್ ಗೆ ತೊಡಗುತ್ತಾರೆ. ಲ್ಯಾಟಿನ್ ಅಮೆರಿಕಾ (ಅಂದ್ರೆ ದ.ಅ) ದಲ್ಲಿ ಇದನ್ನು ಕಾಪಿ ಪೇಸ್ಟ್ ಲ್ಯಾಟಿನಾ ಎನ್ನುತ್ತಾರೆ. ಯಾವ ಹುಡುಗಿಯಾದರೂ ಯೂರೋಪಿಯನ್ ಅಮೆರಿಕನ್ ಮೇಕಪ್ ಮಾಡಿಕೊಂಡು, ಆ ಕಡೆಯ ಮ್ಯೂಸಿಕ್ ಬಳಸಿ ರೀಲ್ ಪೋಸ್ಟ್ ಮಾಡಿದರೆ, ಅದಕ್ಕೆ ಕಡಿಮೆ ಲೈಕ್ಸ್ ಬರುತ್ತಂತೆ! ತಕ್ಷಣ ಅಪಾರ ಟ್ರೋಲಿಂಗ್ ಗೆ ಗುರಿಯಾಗುತ್ತದೆ, ಇದು ಯಾರೋ ಫಿಲಂ ಸ್ಟಾರ್ ನ ಕಾಪಿ ಪೇಸ್ಟ್ ಅಂತ. ಕಷ್ಟಪಟ್ಟಿದ್ದೆಲ್ಲ ದಂಡ ಅಂದುಕೊಳ್ಳಿ. ಲ್ಯಾಟಿನ್ ಹುಡುಗಿಯರನ್ನು ಆ ಜನ ಯೂರೋಪ್, ಅಮೆರಿಕನ್ ಆ್ಯಂಗಲ್ ನಲ್ಲಿ ನೋಡಬಯಸುವುದಿಲ್ಲ.
ಈ ಪ್ರೇತಕಳೆಯಲ್ಲೂ ಒಂದು ಮಜಾ ಇದೆ : ಕೊರಿಯಾದ ಹ್ಯಾಲೋವಿನ್ ಪಾರ್ಟಿಗಳಲ್ಲಿ ಎಷ್ಟೇ ಜನ ಸತ್ತಿರಲಿ, ಈ ಹಬ್ಬವನ್ನಂತೂ ಪಾಶ್ಚಿಮಾತ್ಯರು ಭಲೇ ಮೋಜಿನಿಂದ ಆಚರಿಸುತ್ತಾರೆ, ಅನುಕರಣೆ ಮಾಡಲು ನಮ್ಮವರು ಹಿಂಜರಿಯುವುದಿಲ್ಲ. ಈ ಹಬ್ಬ ಕ್ರೈಸ್ತ ಧರ್ಮದ ಉಗಮಕ್ಕೆ ಮೊದಲೇ ಇತ್ತಂತೆ, ನಂತರ ಆಧುನಿಕ ಪೀಳಿಗೆಗೆ ಇದು ಪ್ರಚಾರ, ಹೊಗಳಿಕೆ ಗಿಟ್ಟಿಸುವ ವೇದಿಕೆ ಆಯಿತು. ಎಲ್ಲರೂ ಮೇಲಿನ ಚಿತ್ರದಂತೆ ದೆವ್ವ ಭೂತಗಳ ಅವತಾರದಲ್ಲಿ ಪಾರ್ಟಿಗಳಲ್ಲಿ ಹಾಡಿ ಕುಣಿದು ಮೋಜು ಮಜಾ ಉಡಾಯಿಸುತ್ತಾರೆ. ಹೀಗಾಗಿ ಸೋನಿ ಮ್ಯೂಸಿಕ್ ಇದೇ ತರಹದ ಗ್ರೀಟಿಂಗ್ ಇಶ್ಯು ಮಾಡಿ, ಇದರ ಮೇಲೆ ಕಾರ್ಪೋರೇಟ್ ಸ್ಟಾಂಪ್ ಒತ್ತಿದೆ!
ಕನಸು ಮಾರಿ ಹಣ ಮಾಡಿಕೊಳ್ಳುವವರು : ಸೆಕ್ಸ್ ರಾಕೆಟ್ ಯಾವ ತರಹದಲ್ಲಾದರೂ ಮಾರಲ್ಪಡುತ್ತದೆ. ಕೆಲವರು ಈಗ ಇಕೋಸೆಕ್ಸ್ ಹೆಸರಿನಲ್ಲಿ ಸೆಕ್ಸ್ ಸ್ಯಾಟಿಸ್ ಫೆಕ್ಷನ್ ಕೊಡಿಸುವ ಪ್ರಾಮಿಸ್ ಮಾಡಿ, ಎಗ್ಸಾಟಿಕ್ ಪ್ಲಾಂಟ್ಸ್ ವುಳ್ಳ ರೆಸಾರ್ಟ್ಸ್ ಗೆ ಕರೆಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ. ತಾಯಿ ತಂದೆಯರ ಲಕ್ಷಾಂತರ ಹಣ ಲೂಟಿ ಮಾಡಲು ಇಂದಿನ ಯುವಜನತೆಗೆ ಇದಕ್ಕಿಂತ ಬೇಕೇ? ಹುಡುಗ ಹುಡುಗಿ ಇಲ್ಲದೆ ಸೆಕ್ಸ್ ಸುಖ ಎಂಬುದು ಕೇವಲ ಬೊಗಳೆ ಅಷ್ಟೇ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಎಷ್ಟೋ ಕಾಫಿ ಸೆಂಟರ್ ಗಳು ಇದೇ ಸುಖದ ಕನಸು ಮಾರುತ್ತಾ, ನಮ್ಮಲ್ಲಿ ಆಶ್ರಮ ಮಠಗಳಲ್ಲಿ ದೇವರ ಹೆಸರಲ್ಲಿ ನಂಬಿಸಿ ಹಣ ಕೊಳ್ಳೆ ಹೊಡೆಯುವಂತೆ ಮಾಡುತ್ತಿದ್ದಾರೆ.
ಆಡಲೇಬೇಕು ಅಂತ ಅಗತ್ಯ ಏನಿಲ್ಲ : ದೋಹಾದಲ್ಲಿ ನಡೆಯಲಿರುವ ಫುಟ್ ಬಾಲ್ ವರ್ಲ್ಡ್ ಕಪ್ ಗಾಗಿ ವಿಶ್ವದೆಲ್ಲೆಡೆ ಎಷ್ಟು ಉತ್ಸಾಹ ಹರಡಿದೆಯೋ, ಕ್ರಿಕೆಟ್ ಗಾಗಿ ಅಂಥ ಹೊಸ ಹುಮ್ಮಸ್ಸು ಕಂಡುಬರುತ್ತಿಲ್ಲ. ಭಾರತ ಕ್ರಿಕೆಟ್ ನಲ್ಲಿ ಎಷ್ಟೇ ಮುಂದಿರಲಿ, ಫುಟ್ ಬಾಲ್ ನಲ್ಲಂತೂ ಶೂನ್ಯ ಸಾಧನೆ! ಇದೀಗ ಮುಂದಿನ ವರ್ಷ ವುಮನ್ ಫುಟ್ ಬಾಲ್ ವರ್ಲ್ಡ್ ಕಪ್ ನ ತಯಾರಿ ನಡೆಸುತ್ತಿದೆ, ಅದು 5 ಸಾವಿರ ವಾಲಂಟಿಯರ್ಸ್ ನ್ನು ರಿಕ್ರೂಟ್ ಮಾಡಿದೆ. ಅಂಥವರಿಗೆ ಇದೊಂದು ಉತ್ತಮ ಅನುಭವ, ಲಕ್ಷಾಂತರ ಮಂದಿ ಇದನ್ನು ತಿರಸ್ಕರಿಸುತ್ತಾರೆ ಎಂಬುದೂ ನಿಜ. ಭಾರತೀಯ ತಂಡ ಇದರಲ್ಲಿ ಪಾಸಾಗುತ್ತವೋ ಇಲ್ಲವೋ, ಅವಕಾಶ ಸಿಕ್ಕಿದಾಗ ವಾಲಂಟಿಯರ್ಸ್ ಆಗಬಹುದಲ್ಲವೇ?
ನಮ್ಮ ಮೊರೆ ಆಲಿಸಿ : ನೀವು ಸೇವಿಸುವ ಆಹಾರದಲ್ಲಿ ಪೆಸ್ಟಿಸೈಡ್ ಇದೆ ಎಂಬುದು ನಿಮಗಂತೂ ಗೊತ್ತಿರುವ ವಿಚಾರ. ಏಕೆಂದರೆ, ಪೆಸ್ಟಿಸೈಡ್ಸ್ ಇಲ್ಲದೆ ಉತ್ತಮ ಇಳುವರಿ ಅಸಾಧ್ಯ. ವಿಡಂಬನೆ ಎಂದರೆ ಈ ಪೆಸ್ಟಿಸೈಡ್ ಮಾನವರಿಗೆ ಬಲು ಅಪಾಯಕಾರಿ. ಇದನ್ನು ನೇರ ಸೇವಿಸುವ ಇತರ ಪ್ರಾಣಿಗಳಂತೂ ಬೇಗ ಸಾಯುತ್ತವೆ. ಬಯೋಡೈರ್ಸಿಟಿಗಾಗಿ ಆ್ಯಕ್ಟಿವಿಸ್ಟ್ಸ್ ಯೂರೋಪಿನ ಯೂನಿಯನ್ ಎದುರು ಧರಣಿ ಕುಳಿತು ಇದರ ವಿರುದ್ಧ ಪ್ರತಿಭಟಿಸಿದರು. ಮುಂದಿನ 20-35ರವರೆಗೂ ಇದರ ಬಳಕೆಯೇ ಬೇಡ ಎಂದು ಒತ್ತಾಯಿಸಿದರು.
ಇಂದಿನ ವೇಟ್ ಬಗ್ಗೆ ಮಾತ್ರ ಅವರ ಚಿಂತೆ : ಪರಿಸರ ಮಾಲಿನ್ಯದ ವಿಷಯದಲ್ಲಿ ವಿಶ್ವದಲ್ಲೇ ಭಾರತ ಅತಿ ಎತ್ತರದಲ್ಲಿದೆ. ಅದರಲ್ಲೂ ದೆಹಲಿ ಇಡೀ ದೇಶದಲ್ಲೇ ಅತಿ ಹೀನಾಯ ಸ್ಥಿತಿಯಲ್ಲಿದೆ. ಹಿಂದುಳಿದ ದೇಶಗಳು ತಮ್ಮ ಜನತೆಯ ಬಗ್ಗೆ ಕಾಳಜಿ ವಹಿಸದೆ, ರಾಗಾಲಾಪ ನಡೆಸುತ್ತಾ, ಕ್ಲೈಮೆಟ್ ಚೇಂಜ್ ಗೆ ಶ್ರೀಮಂತ ದೇಶಗಳೇ ಕಾರಣ ಎಂದು ಆರೋಪಿಸುತ್ತಿವೆ, ಅದರ ನಷ್ಟ ಪರಿಹಾರ ಅವರೇ ಕೊಡಬೇಕೆಂತೆ! ಆ ಶ್ರೀಮಂತ ದೇಶಗಳಿಗೆ ತಮ್ಮ ಕೊಳೆ ಕಸವನ್ನು ಎಲ್ಲೋ ಒಂದು ಕಡೆ ಸುರಿದರಾಯ್ತು ಎಂಬ ನಿರ್ಲಕ್ಷ್ಯ! ಬಡದೇಶಗಳ ಬೇಡಿಕೆಗಳಿಗೆ ಹ್ಞಾಂ ಹ್ಞೂಂ ಎನ್ನುತ್ತಾ ನಿರ್ಲಕ್ಷಿಸುತ್ತಿವೆ. ಹೆಂಗಸರ ಗ್ರೂಪ್ ಅಂತೂ ಇಂದಿನಿಂದ, ಈಗಲೇ ಕ್ಲೈಮೆಟ್ ಚೇಂಜ್ ವಿಷಯಕ್ಕಾಗಿ ಈ ದೇಶಗಳು ಖರ್ಚು ಮಾಡಲಿ, ಆಗಲೇ ಮುಂದಿನ ಪೀಳಿಗೆ ನೆಮ್ಮದಿ ಕಾಣಲು ಸಾಧ್ಯ ಎಂದು ಪ್ರತಿಭಟಿಸುತ್ತಿವೆ. ಆದರೆ ಇದೊಂದಕ್ಕೂ ಕಿವಿಗೊಡದ ರಾಜಕಾರಣಿಗಳು, ಇವತ್ತು ನಮಗೆ ವೇಟ್ ಸಿಕ್ಕರೆ ಸಾಕು ಎಂದು ನಾಳಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದ್ದಾರೆ.
ಇದೆಂಥ ವಿಡಂಬನೆ? : ಕಾಲೇಜುಗಳಲ್ಲಿ ಸ್ಟ್ರೈಕ್ಸ್ ಎಷ್ಟು ಮಹಾ ಯಶಸ್ವಿ ಆಗುತ್ತಿವೆ? ನಮ್ಮ ದೇಶದಲ್ಲಂತೂ ಏನೇನೂ ಇಲ್ಲ. ಪ್ರಕರಣ ಏನೇ ಇರಲಿ, ಸ್ಟಾಫ್ ಗೆ ಸಿಂಪಥಿ ತೋರಿಸುವ ನೆಪದಲ್ಲಿ ಹಳ್ಳ ತೋಡುವ ಉಪಾಯಗಳು ನಡೆಯುತ್ತಿವೆಯಷ್ಟೆ. ಪಿಟ್ಝರ್‌ನಂಥ ಕಾಲೇಜುಗಳಲ್ಲಿ ಭಾರಿ ದೊಡ್ಡ ಮೊತ್ತದ ಫೀಸ್ ತುಂಬ ಬೇಕಾಗುತ್ತದೆ. ಅದನ್ನು ಬಂದ್ ಮಾಡೋದು ಅಂದ್ರೆ ನಮ್ಮದೇ ಹಣವನ್ನು ತಿಪ್ಪೆಗೆ ಎಸೆದಂತೆ. ಕೆಲವು ತಿಂಗಳ ಹಿಂದೆ ಈ ಮುಠ್ಠಾಳ ವಿದ್ಯಾರ್ಥಿಗಳು ಸ್ಟಾಫ್ ಗೆ ಸಮರ್ಥನೆ ನೀಡುವಂಥ ಸ್ಟ್ರೈಕ್ ಮಾಡಿದ್ದರು, ಇದಲ್ಲವೇ ವಿಡಂಬನೆ?