ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಹಿಳಾ ನಾಯಕಿಯರು
ಬಹುಶಃ ಇಂಗ್ಲೆಂಡಿಗೆ ಕೆಟ್ಟ ದಿನಗಳು ಶುರುವಾಗಿದೆ ಅನಿಸುತ್ತೆ. ಲಿಜ್ ಟ್ರಸ್ ಕನ್ಸರ್ ವೇಟಿವ್ ಪಕ್ಷದ ವತಿಯಿಂದ ಬಲು ಕಷ್ಟಪಟ್ಟು ಗೆದ್ದಿದ್ದರು. ಆದರೆ ಕೇವಲ ಕೆಲವೇ ವಾರಗಳಲ್ಲಿ ಪ್ರಧಾನಿ ಹುದ್ದೆಯನ್ನು ಆಕೆ ರಿಸೈನ್ ಮಾಡಬೇಕಾದ ಪರಿಸ್ಥಿತಿ ಬಂತು. ಏಕೆಂದರೆ ಆಕೆ ಬ್ರಿಟನ್ನಿನ ಬ್ರೇಕಿಸ್ಟ್ ನಂತರ ಎಂಥ ಕೆಸರಿನ ಕೊಳಚೆಗೆ ಸಿಲುಕಿತ್ತೋ, ಅದರಿಂದ ಅದನ್ನು ಬಿಡಿಸಲು ಮಾಡಿದ ಪ್ರಯತ್ನವೆಲ್ಲ, ಆಲೂ ಬೇಯಿಸುವ ವಿಧಾನಕ್ಕೆ 5 ಪುಟಗಳ ವಿವರಣೆ ನೀಡಿದಂತಿತ್ತು. ಆಕೆಯಿಂದ ಒಂದಾದರೂ ಸೀದಾಸಾದಾ ಕೆಲಸ ಆಗಲೇ ಇಲ್ಲ. ಈಕೆಯ ದೆಸೆಯಿಂದ ಇಂಗ್ಲೆಂಡ್ ನಲ್ಲಿ ಮುಂದಿನ ಹಲವು ವರ್ಷ ಹೆಂಗಸರು ಚುನಾವಣೆಗೆ ನಿಲ್ಲುವ ಧೈರ್ಯ ತೋರುವಂತಿಲ್ಲ.
ಇಟಲಿಯ ಜಿೂರ್ಜಿಯಾ ಮೆಲೋನಿ, ಅಮೆರಿಕಾದ ಹಿಲೆರಿ ಕ್ಲಿಂಟನ್, ಕಮಲಾ ಹ್ಯಾರಿಸ್, ಭಾರತದ ಮಾಯಾವತಿ, ಸುಷ್ಮಾ ಸ್ವರಾಜ್, ಪ್ರತಿಭಾ ಪಾಟೀಲ್, ಮ್ಯಾನ್ಮಾರ್ ನ ಆನ್‌ಸಾನ್ ಸೂ ಮುಂತಾದವರೆಲ್ಲ ಬೇಗ ಬೇಗ ರಾಜಕೀಯದ ಮೆಟ್ಟಿಲೇರಿ ಅಷ್ಟೇ ಬೇಗ ಜಾರಿದರು. ಇಂಗ್ಲೆಂಡಿನ ಮಾರ್ಗರೆಟ್ ಥ್ಯಾಚರ್ ಐರನ್ ಲೇಡಿ ಎಂದೇ ಖ್ಯಾತನಾಮರು, ಆದರೆ ಆಕೆಯನ್ನೂ ಅತಿ ಹೀನಾಯವಾಗಿ ಕೆಳಗಿಸಲಾಯಿತು. ಪಾಕಿಸ್ತಾನದಲ್ಲಿ ಬೆನಜೀರ್ ಭುಟ್ಟೋ ಬಲು ಭರವಸೆಯಿಂದ ಪ್ರಧಾನಿ ಆದರು, ಆದರೆ ಕೆಲವೇ ದಿನಗಳಲ್ಲಿ ತಮ್ಮ ವರ್ಚಸ್ಸು ಕಳೆದುಕೊಂಡರು, ಆಕೆಯ ಹತ್ಯೆ ನಡೆಯದೆ ಹೋಗಿದ್ದರೆ, ಮುಂದಿನ ಚುನಾವಣೆಯಲ್ಲಿ ಸೋಲುತ್ತಿದ್ದರು.
ಲಿಜ್ ಟ್ರಸ್ ಕೆಲವೇ ದಿನಗಳಲ್ಲಿ ರಿಸೈನ್ ಮಾಡಿದ್ದು ಏನನ್ನು ಸಾಬೀತು ಮಾಡುತ್ತದೆ?
ಸರ್ಕಾರದ ಅಧಿಕಾರವೆಂಬ ಕಾರಿಡಾರ್ ಸಂಭಾಳಿಸುವುದು ಕಿಚನ್ ಶೆಲ್ಫ್ ಸಂಭಾಳಿಸಿದಷ್ಟು ಸುಲಭವಲ್ಲ ಎಂಬುದು. ಅನಾದಿ ಕಾಲದಿಂದ ಹೆಂಗಸರಿಗೆ ಬೇಕೆಂದೇ ಅತ್ಯಲ್ಪ ಮಟ್ಟದ ಕೆಲಸ ವಹಿಸಿ, ಅವರು ಆಂತರ್ಯದಲ್ಲೇ ಉಡುಗುವಂತೆ ಮಾಡಿ, ಶಾಸಕರಿಗೆ ಬೇಕಾದ ಆತ್ಮಾವಿಶ್ವಾಸ ಬೆಳೆಯದಂತೆ ಮಾಡಿಟ್ಟಿದ್ದಾರೆ.
ಇಂದಿರಾಗಾಂಧಿ, ಸೋನಿಯಾಗಾಂಧಿ, ಜರ್ಮನಿಯ ಏಂಜೆಲಾ ಮಾರ್ಕೆಲ್, ನ್ಯೂಝಿಲೆಂಡ್ ನ ಜೆಸಿಂಡಾ ಆರ್ಕಿನ್, ಬಾಂಗ್ಲಾದೇಶದ ಶೇಖ್ ಹಸೀನಾ ಮುಂತಾದವರೂ ಸಹ ಮೊದಮೊದಲಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರೂ, ಇವರುಗಳಿಗೆ ಇದು ಪಿತ್ರಾರ್ಜಿತವಾಗಿ ದೊರೆತಂಥದ್ಧು. ಇವರುಗಳು ಗಾಡ್ ಪಾದರ್ ಇಲ್ಲದೇ ಹೋರಾಡಿ ಗೆದ್ದವರಲ್ಲ.
ಬ್ರಿಟನ್ ಇಂದು ಆರ್ಥಿಕ ಸಂಕಷ್ಟದಲ್ಲಿದೆ, ಇದೀಗ ರಾಜಕೀಯವಾಗಿಯೂ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಏಕೆಂದರೆ ಯಾರು ಪ್ರಧಾನಿ ಆಗುತ್ತಾರೋ ಅವರು ಮುಂದಿನ ವರ್ಷ ಅಲ್ಲಿ ಚುನಾವಣೆ ಎದುರಿಸಲೇಬೇಕು. ಅಷ್ಟು ಮಾತ್ರದ ಕೆಲವೇ ದಿನಗಳಲ್ಲಿ ಅವರು ಜನತೆಯ ಮನ ಗೆಲ್ಲಬಲ್ಲವರೇ ಎಂಬುದರ ಗ್ಯಾರಂಟಿ ಇಲ್ಲ. ಇದೀಗ ಬ್ರಿಟನ್ನಿನ ಪಾಸಿಬಲ್ ಪ್ರಧಾನಿ ಹುದ್ದೆಯ ಅಭ್ಯರ್ಥಿಗಳಲ್ಲಿ, ಮುಂದಿನ ಎಷ್ಟೋ ವರ್ಷ ಹೆಂಗಸರ ಹೆಸರೇ ಇರೋಲ್ಲ ಎಂಬುದಂತೂ ನಿಜ!
ಲಿಜ್ ಟ್ರಸ್ಟ್ ಗೆ ಇಂಥ ಅಪಮಾನ ಆದಮೇಲೆ ಬೇರೆ ದೇಶಗಳಲ್ಲೂ ಸಹ, ಹೆಂಗಸರು ತಮ್ಮ ಗದ್ದುಗೆ ಬಿಡಲೇಬೇಕು ಎಂದಾದೀತು. ಮೀಡಿಯಾ ನೇತಾರರ ಮಾರ್ಗ ಅತಿ ಕಷ್ಟಕರ ಆಗುತ್ತದೆ. ಎಲ್ಲಿಯೇ ಹೆಂಗಸರು ಗೆದ್ದು ಬಂದರೂ ತಮ್ಮ ತಂದೆ, ಗಂಡ, ಸೋದರರ ಬಲದಿಂದ ಅಥವಾ ಅವರ ಕೈಗೊಂಬೆ ಆಗಿರಬೇಕಾಗುತ್ತದೆ. ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಹೆಂಗಸರು ರಾಜಕೀಯಕ್ಕಿಳಿದು ಹೇಗೋ ಉಸಿರುಗಟ್ಟಿ ಎದುರಿಸುತ್ತಿದ್ದರೂ, ಅವರಲ್ಲಿ ಹೆಚ್ಚಿನವರು ಸಾರೋಗೇಟ್ ಮದರ್/ಡಾಟರ್ ಇನ್ ಲಾ ತರಹ ಆಗಿದ್ದಾರೆ, ಇವರ ಜಬರ್ದಸ್ತು ಏನಿದ್ದರೂ ತಮ್ಮವರ ಮೇಲೆ ಹಾರಾಡುವ, ಕೆಲಸದಲ್ಲಿ ಕೊರತೆ ಹುಡುಕುವ ಮಟ್ಟಕ್ಕೆ ಸೀಮಿತವಾಗಿ ದೂರದೃಷ್ಟಿಯ ಶಕ್ತಿ ಕುಂದಿರುತ್ತದೆ.