ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಮೊಹಮ್ಮದ್ ರಫೀಕ್ ಅವರನ್ನು ನೇಮಕ ಮಾಡಿದೆ. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದುಕೊಂಡಿರುವ ರಫೀಕ್  SUFCಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.

14 ವರ್ಷಕ್ಕಿಂತ ಹೆಚ್ಚು ಕಾಲ ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೊಹಮ್ಮದ್ ರಫೀಕ್ ಹಿರಿಯ ವೃತ್ತಿಪರ ತಂಡಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದುವವರೆಗೂ ಎಲ್ಲಾ ಹಂತದ ಫುಟ್ಬಾಲ್ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾರೆ.  FIFA, AIFF ಮತ್ತು ಸರ್ಕಾರದ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಫುಟ್ಬಾಲ್​ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದಾರೆ.

ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ತಂಡದ ಫುಟ್ಬಾಲ್ ನಿರ್ದೇಶಕ,  ಕೇರಳ ಬ್ಲಾಸ್ಟರ್ಸ್ ಎಫ್ಸಿ ಮತ್ತು ಬೆಂಗಳೂರಿನ ಓಜೋನ್ ಎಫ್ಸಿಯ ಸಿಇಒ ಸೇರಿ ಪ್ರಮುಖ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಯಶಸ್ಸಿನಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದು, ವಿಶೇಷವಾಗಿ ISL ಮತ್ತು ರಿಲಯನ್ಸ್ ಫುಟ್ಬಾಲ್ ಡೆವಲಪ್​ಮೆಂಟ್ ಲೀಗ್ (RFDL) ಫೈನಲ್ಸ್​ಗೆ ತಂಡವನ್ನು ಮುನ್ನಡೆಸುವಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದರು. ರಫೀಕ್ ನೇತೃತ್ವದಲ್ಲಿ ಓಝೋನ್ FC ಬೆಂಗಳೂರು ತಂಡವು BDFA ಸೂಪರ್ ಡಿವಿಷನ್ ನ  ಎರಡು ಸೀಸನ್​ಗಳಲ್ಲಿ (2015-16 ಮತ್ತು 2017-18) ಜಯಸಾಧಿಸಿತ್ತು.

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ನೂತನ ಸಿಇಒ ಆಗಿ ನೇಮಕವಾಗಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ರಫೀಕ್, 'ನಾನು ಈ ಜವಾಬ್ದಾರಿ ನಿಭಾಹಿಸುವುದಕ್ಕೆ ತುಂಬಾ ಉತ್ಸುಹಕನಾಗಿದ್ದೇನೆ. ಈ ಯೋಜನೆಯ ಯಶಸ್ಸಿಗೆ ಮತ್ತಷ್ಟು ಸೇವೆ ಸಲ್ಲಿಸುವ ನನ್ನ ಗುರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ನನ್ನ ಅನುಭವ ಮತ್ತು ಸಂಪರ್ಕಗಳನ್ನು ಬಳಸಿಕೊಂಡು ಯುವ ಆಟಗಾರರು ಪ್ರಗತಿ ಸಾಧಿಸಲು ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಉತ್ಸುಕರಾಗಿದ್ದೇನೆ” ಎಂದಿದ್ದಾರೆ.

ಪ್ಯಾನ್-ಇಂಡಿಯಾ ಟ್ಯಾಲೆಂಟ್ ಸ್ಕೌಟಿಂಗ್ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಗೋಲ್ FIFA ಪ್ರಾಜೆಕ್ಟ್ ಟ್ಯಾಲೆಂಟ್ ಸ್ಕೌಟಿಂಗ್​ನೊಂದಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಗೆ ಸಹಾಯ ಮಾಡಿದ್ದಾರೆ.  AIFF ಮತ್ತು ISL ಜೊತೆ ಯುವ ಮತ್ತು ತಳಮಟ್ಟದ ಫುಟ್ಬಾಲ್ ಸಂಬಂಧಿತ ನೀತಿಗಳನ್ನು ರೂಪಿಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ, ವಿವಿಧ ಕ್ಲಬ್​ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನಾರೋಮ್ ಮಹೇಶ್ ಸಿಂಗ್, ಕೆ.ಪಿ. ರಾಹುಲ್ ಮತ್ತು ವಿಭಿನ್ ಮೊಹನನ್ ಎಂಬ ಆಟಗಾರರ ಪ್ರಗತಿಯನ್ನು ಸಮೀಕ್ಷಿಸಿ, ISLನಲ್ಲಿ ಅವರ ಮೊಟ್ಟ ಮೊದಲ ಪಂದ್ಯದಿಂದ ಹಿಡಿದು ಭಾರತೀಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪಲು ರಫೀಕ್ ಸಹಾಯ ಮಾಡಿದ್ದಾರೆ.

ಕೆಎನ್ವಿಬಿ (ಡಚ್ ಫುಟ್ಬಾಲ್ ಅಸೋಸಿಯೇಷನ್) ಜೊತೆ ಕೂಡ ಸಂಪರ್ಕ ಹೊಂದಿದ್ದು, ಯುರೋಪಿನ ಹಲವು ರಾಷ್ಟ್ರೀಯ ಫುಟ್ಬಾಲ್ ಕ್ಲಬ್ ಸೇರಿದಂತೆ ಅನೇಕ ಪ್ರಮುಖ ಫುಟ್ಬಾಲ್ ಕ್ಲಬ್​ಗಳೊಂದಿಗೆ  ರಫೀಕ್ ಒಡನಾಟ ಹೊಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ