ಇಲ್ಲಿಯೂ ತಪ್ಪದ ಭೇದಭಾವ : ಟಿಕ್ ಟಾಕ್ ನಮ್ಮಲ್ಲಿ ಬ್ಯಾನ್ ಆಗಿದೆ, ಆದರೆ ಎಲ್ಲೆಲ್ಲಿ ಅದು ಮಾನ್ಯವೋ ಅಲ್ಲೆಲ್ಲ ಜನ ಮುಗಿಬಿದ್ದು ಟ್ರೋಲಿಂಗ್ ಗೆ ತೊಡಗುತ್ತಾರೆ. ಲ್ಯಾಟಿನ್ ಅಮೆರಿಕಾ (ಅಂದ್ರೆ ದ.ಅ) ದಲ್ಲಿ ಇದನ್ನು ಕಾಪಿ ಪೇಸ್ಟ್ ಲ್ಯಾಟಿನಾ ಎನ್ನುತ್ತಾರೆ. ಯಾವ ಹುಡುಗಿಯಾದರೂ ಯೂರೋಪಿಯನ್ ಅಮೆರಿಕನ್ ಮೇಕಪ್ ಮಾಡಿಕೊಂಡು, ಆ ಕಡೆಯ ಮ್ಯೂಸಿಕ್ ಬಳಸಿ ರೀಲ್ ಪೋಸ್ಟ್ ಮಾಡಿದರೆ, ಅದಕ್ಕೆ ಕಡಿಮೆ ಲೈಕ್ಸ್ ಬರುತ್ತಂತೆ! ತಕ್ಷಣ ಅಪಾರ ಟ್ರೋಲಿಂಗ್ ಗೆ ಗುರಿಯಾಗುತ್ತದೆ, ಇದು ಯಾರೋ ಫಿಲಂ ಸ್ಟಾರ್ ನ ಕಾಪಿ ಪೇಸ್ಟ್ ಅಂತ. ಕಷ್ಟಪಟ್ಟಿದ್ದೆಲ್ಲ ದಂಡ ಅಂದುಕೊಳ್ಳಿ. ಲ್ಯಾಟಿನ್ ಹುಡುಗಿಯರನ್ನು ಆ ಜನ ಯೂರೋಪ್, ಅಮೆರಿಕನ್ ಆ್ಯಂಗಲ್ ನಲ್ಲಿ ನೋಡಬಯಸುವುದಿಲ್ಲ.
ಈ ಪ್ರೇತಕಳೆಯಲ್ಲೂ ಒಂದು ಮಜಾ ಇದೆ : ಕೊರಿಯಾದ ಹ್ಯಾಲೋವಿನ್ ಪಾರ್ಟಿಗಳಲ್ಲಿ ಎಷ್ಟೇ ಜನ ಸತ್ತಿರಲಿ, ಈ ಹಬ್ಬವನ್ನಂತೂ ಪಾಶ್ಚಿಮಾತ್ಯರು ಭಲೇ ಮೋಜಿನಿಂದ ಆಚರಿಸುತ್ತಾರೆ, ಅನುಕರಣೆ ಮಾಡಲು ನಮ್ಮವರು ಹಿಂಜರಿಯುವುದಿಲ್ಲ. ಈ ಹಬ್ಬ ಕ್ರೈಸ್ತ ಧರ್ಮದ ಉಗಮಕ್ಕೆ ಮೊದಲೇ ಇತ್ತಂತೆ, ನಂತರ ಆಧುನಿಕ ಪೀಳಿಗೆಗೆ ಇದು ಪ್ರಚಾರ, ಹೊಗಳಿಕೆ ಗಿಟ್ಟಿಸುವ ವೇದಿಕೆ ಆಯಿತು. ಎಲ್ಲರೂ ಮೇಲಿನ ಚಿತ್ರದಂತೆ ದೆವ್ವ ಭೂತಗಳ ಅವತಾರದಲ್ಲಿ ಪಾರ್ಟಿಗಳಲ್ಲಿ ಹಾಡಿ ಕುಣಿದು ಮೋಜು ಮಜಾ ಉಡಾಯಿಸುತ್ತಾರೆ. ಹೀಗಾಗಿ ಸೋನಿ ಮ್ಯೂಸಿಕ್ ಇದೇ ತರಹದ ಗ್ರೀಟಿಂಗ್ ಇಶ್ಯು ಮಾಡಿ, ಇದರ ಮೇಲೆ ಕಾರ್ಪೋರೇಟ್ ಸ್ಟಾಂಪ್ ಒತ್ತಿದೆ!
ಕನಸು ಮಾರಿ ಹಣ ಮಾಡಿಕೊಳ್ಳುವವರು : ಸೆಕ್ಸ್ ರಾಕೆಟ್ ಯಾವ ತರಹದಲ್ಲಾದರೂ ಮಾರಲ್ಪಡುತ್ತದೆ. ಕೆಲವರು ಈಗ ಇಕೋಸೆಕ್ಸ್ ಹೆಸರಿನಲ್ಲಿ ಸೆಕ್ಸ್ ಸ್ಯಾಟಿಸ್ ಫೆಕ್ಷನ್ ಕೊಡಿಸುವ ಪ್ರಾಮಿಸ್ ಮಾಡಿ, ಎಗ್ಸಾಟಿಕ್ ಪ್ಲಾಂಟ್ಸ್ ವುಳ್ಳ ರೆಸಾರ್ಟ್ಸ್ ಗೆ ಕರೆಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ. ತಾಯಿ ತಂದೆಯರ ಲಕ್ಷಾಂತರ ಹಣ ಲೂಟಿ ಮಾಡಲು ಇಂದಿನ ಯುವಜನತೆಗೆ ಇದಕ್ಕಿಂತ ಬೇಕೇ? ಹುಡುಗ ಹುಡುಗಿ ಇಲ್ಲದೆ ಸೆಕ್ಸ್ ಸುಖ ಎಂಬುದು ಕೇವಲ ಬೊಗಳೆ ಅಷ್ಟೇ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಎಷ್ಟೋ ಕಾಫಿ ಸೆಂಟರ್ ಗಳು ಇದೇ ಸುಖದ ಕನಸು ಮಾರುತ್ತಾ, ನಮ್ಮಲ್ಲಿ ಆಶ್ರಮ ಮಠಗಳಲ್ಲಿ ದೇವರ ಹೆಸರಲ್ಲಿ ನಂಬಿಸಿ ಹಣ ಕೊಳ್ಳೆ ಹೊಡೆಯುವಂತೆ ಮಾಡುತ್ತಿದ್ದಾರೆ.
ಆಡಲೇಬೇಕು ಅಂತ ಅಗತ್ಯ ಏನಿಲ್ಲ : ದೋಹಾದಲ್ಲಿ ನಡೆಯಲಿರುವ ಫುಟ್ ಬಾಲ್ ವರ್ಲ್ಡ್ ಕಪ್ ಗಾಗಿ ವಿಶ್ವದೆಲ್ಲೆಡೆ ಎಷ್ಟು ಉತ್ಸಾಹ ಹರಡಿದೆಯೋ, ಕ್ರಿಕೆಟ್ ಗಾಗಿ ಅಂಥ ಹೊಸ ಹುಮ್ಮಸ್ಸು ಕಂಡುಬರುತ್ತಿಲ್ಲ. ಭಾರತ ಕ್ರಿಕೆಟ್ ನಲ್ಲಿ ಎಷ್ಟೇ ಮುಂದಿರಲಿ, ಫುಟ್ ಬಾಲ್ ನಲ್ಲಂತೂ ಶೂನ್ಯ ಸಾಧನೆ! ಇದೀಗ ಮುಂದಿನ ವರ್ಷ ವುಮನ್ ಫುಟ್ ಬಾಲ್ ವರ್ಲ್ಡ್ ಕಪ್ ನ ತಯಾರಿ ನಡೆಸುತ್ತಿದೆ, ಅದು 5 ಸಾವಿರ ವಾಲಂಟಿಯರ್ಸ್ ನ್ನು ರಿಕ್ರೂಟ್ ಮಾಡಿದೆ. ಅಂಥವರಿಗೆ ಇದೊಂದು ಉತ್ತಮ ಅನುಭವ, ಲಕ್ಷಾಂತರ ಮಂದಿ ಇದನ್ನು ತಿರಸ್ಕರಿಸುತ್ತಾರೆ ಎಂಬುದೂ ನಿಜ. ಭಾರತೀಯ ತಂಡ ಇದರಲ್ಲಿ ಪಾಸಾಗುತ್ತವೋ ಇಲ್ಲವೋ, ಅವಕಾಶ ಸಿಕ್ಕಿದಾಗ ವಾಲಂಟಿಯರ್ಸ್ ಆಗಬಹುದಲ್ಲವೇ?