ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಹಿಳಾ ನಾಯಕಿಯರು
ಬಹುಶಃ ಇಂಗ್ಲೆಂಡಿಗೆ ಕೆಟ್ಟ ದಿನಗಳು ಶುರುವಾಗಿದೆ ಅನಿಸುತ್ತೆ. ಲಿಜ್ ಟ್ರಸ್ ಕನ್ಸರ್ ವೇಟಿವ್ ಪಕ್ಷದ ವತಿಯಿಂದ ಬಲು ಕಷ್ಟಪಟ್ಟು ಗೆದ್ದಿದ್ದರು. ಆದರೆ ಕೇವಲ ಕೆಲವೇ ವಾರಗಳಲ್ಲಿ ಪ್ರಧಾನಿ ಹುದ್ದೆಯನ್ನು ಆಕೆ ರಿಸೈನ್ ಮಾಡಬೇಕಾದ ಪರಿಸ್ಥಿತಿ ಬಂತು. ಏಕೆಂದರೆ ಆಕೆ ಬ್ರಿಟನ್ನಿನ ಬ್ರೇಕಿಸ್ಟ್ ನಂತರ ಎಂಥ ಕೆಸರಿನ ಕೊಳಚೆಗೆ ಸಿಲುಕಿತ್ತೋ, ಅದರಿಂದ ಅದನ್ನು ಬಿಡಿಸಲು ಮಾಡಿದ ಪ್ರಯತ್ನವೆಲ್ಲ, ಆಲೂ ಬೇಯಿಸುವ ವಿಧಾನಕ್ಕೆ 5 ಪುಟಗಳ ವಿವರಣೆ ನೀಡಿದಂತಿತ್ತು. ಆಕೆಯಿಂದ ಒಂದಾದರೂ ಸೀದಾಸಾದಾ ಕೆಲಸ ಆಗಲೇ ಇಲ್ಲ. ಈಕೆಯ ದೆಸೆಯಿಂದ ಇಂಗ್ಲೆಂಡ್ ನಲ್ಲಿ ಮುಂದಿನ ಹಲವು ವರ್ಷ ಹೆಂಗಸರು ಚುನಾವಣೆಗೆ ನಿಲ್ಲುವ ಧೈರ್ಯ ತೋರುವಂತಿಲ್ಲ.
ಇಟಲಿಯ ಜಿೂರ್ಜಿಯಾ ಮೆಲೋನಿ, ಅಮೆರಿಕಾದ ಹಿಲೆರಿ ಕ್ಲಿಂಟನ್, ಕಮಲಾ ಹ್ಯಾರಿಸ್, ಭಾರತದ ಮಾಯಾವತಿ, ಸುಷ್ಮಾ ಸ್ವರಾಜ್, ಪ್ರತಿಭಾ ಪಾಟೀಲ್, ಮ್ಯಾನ್ಮಾರ್ ನ ಆನ್‌ಸಾನ್ ಸೂ ಮುಂತಾದವರೆಲ್ಲ ಬೇಗ ಬೇಗ ರಾಜಕೀಯದ ಮೆಟ್ಟಿಲೇರಿ ಅಷ್ಟೇ ಬೇಗ ಜಾರಿದರು. ಇಂಗ್ಲೆಂಡಿನ ಮಾರ್ಗರೆಟ್ ಥ್ಯಾಚರ್ ಐರನ್ ಲೇಡಿ ಎಂದೇ ಖ್ಯಾತನಾಮರು, ಆದರೆ ಆಕೆಯನ್ನೂ ಅತಿ ಹೀನಾಯವಾಗಿ ಕೆಳಗಿಸಲಾಯಿತು. ಪಾಕಿಸ್ತಾನದಲ್ಲಿ ಬೆನಜೀರ್ ಭುಟ್ಟೋ ಬಲು ಭರವಸೆಯಿಂದ ಪ್ರಧಾನಿ ಆದರು, ಆದರೆ ಕೆಲವೇ ದಿನಗಳಲ್ಲಿ ತಮ್ಮ ವರ್ಚಸ್ಸು ಕಳೆದುಕೊಂಡರು, ಆಕೆಯ ಹತ್ಯೆ ನಡೆಯದೆ ಹೋಗಿದ್ದರೆ, ಮುಂದಿನ ಚುನಾವಣೆಯಲ್ಲಿ ಸೋಲುತ್ತಿದ್ದರು.
ಲಿಜ್ ಟ್ರಸ್ ಕೆಲವೇ ದಿನಗಳಲ್ಲಿ ರಿಸೈನ್ ಮಾಡಿದ್ದು ಏನನ್ನು ಸಾಬೀತು ಮಾಡುತ್ತದೆ?
ಸರ್ಕಾರದ ಅಧಿಕಾರವೆಂಬ ಕಾರಿಡಾರ್ ಸಂಭಾಳಿಸುವುದು ಕಿಚನ್ ಶೆಲ್ಫ್ ಸಂಭಾಳಿಸಿದಷ್ಟು ಸುಲಭವಲ್ಲ ಎಂಬುದು. ಅನಾದಿ ಕಾಲದಿಂದ ಹೆಂಗಸರಿಗೆ ಬೇಕೆಂದೇ ಅತ್ಯಲ್ಪ ಮಟ್ಟದ ಕೆಲಸ ವಹಿಸಿ, ಅವರು ಆಂತರ್ಯದಲ್ಲೇ ಉಡುಗುವಂತೆ ಮಾಡಿ, ಶಾಸಕರಿಗೆ ಬೇಕಾದ ಆತ್ಮಾವಿಶ್ವಾಸ ಬೆಳೆಯದಂತೆ ಮಾಡಿಟ್ಟಿದ್ದಾರೆ.
ಇಂದಿರಾಗಾಂಧಿ, ಸೋನಿಯಾಗಾಂಧಿ, ಜರ್ಮನಿಯ ಏಂಜೆಲಾ ಮಾರ್ಕೆಲ್, ನ್ಯೂಝಿಲೆಂಡ್ ನ ಜೆಸಿಂಡಾ ಆರ್ಕಿನ್, ಬಾಂಗ್ಲಾದೇಶದ ಶೇಖ್ ಹಸೀನಾ ಮುಂತಾದವರೂ ಸಹ ಮೊದಮೊದಲಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರೂ, ಇವರುಗಳಿಗೆ ಇದು ಪಿತ್ರಾರ್ಜಿತವಾಗಿ ದೊರೆತಂಥದ್ಧು. ಇವರುಗಳು ಗಾಡ್ ಪಾದರ್ ಇಲ್ಲದೇ ಹೋರಾಡಿ ಗೆದ್ದವರಲ್ಲ.
ಬ್ರಿಟನ್ ಇಂದು ಆರ್ಥಿಕ ಸಂಕಷ್ಟದಲ್ಲಿದೆ, ಇದೀಗ ರಾಜಕೀಯವಾಗಿಯೂ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಏಕೆಂದರೆ ಯಾರು ಪ್ರಧಾನಿ ಆಗುತ್ತಾರೋ ಅವರು ಮುಂದಿನ ವರ್ಷ ಅಲ್ಲಿ ಚುನಾವಣೆ ಎದುರಿಸಲೇಬೇಕು. ಅಷ್ಟು ಮಾತ್ರದ ಕೆಲವೇ ದಿನಗಳಲ್ಲಿ ಅವರು ಜನತೆಯ ಮನ ಗೆಲ್ಲಬಲ್ಲವರೇ ಎಂಬುದರ ಗ್ಯಾರಂಟಿ ಇಲ್ಲ. ಇದೀಗ ಬ್ರಿಟನ್ನಿನ ಪಾಸಿಬಲ್ ಪ್ರಧಾನಿ ಹುದ್ದೆಯ ಅಭ್ಯರ್ಥಿಗಳಲ್ಲಿ, ಮುಂದಿನ ಎಷ್ಟೋ ವರ್ಷ ಹೆಂಗಸರ ಹೆಸರೇ ಇರೋಲ್ಲ ಎಂಬುದಂತೂ ನಿಜ!
ಲಿಜ್ ಟ್ರಸ್ಟ್ ಗೆ ಇಂಥ ಅಪಮಾನ ಆದಮೇಲೆ ಬೇರೆ ದೇಶಗಳಲ್ಲೂ ಸಹ, ಹೆಂಗಸರು ತಮ್ಮ ಗದ್ದುಗೆ ಬಿಡಲೇಬೇಕು ಎಂದಾದೀತು. ಮೀಡಿಯಾ ನೇತಾರರ ಮಾರ್ಗ ಅತಿ ಕಷ್ಟಕರ ಆಗುತ್ತದೆ. ಎಲ್ಲಿಯೇ ಹೆಂಗಸರು ಗೆದ್ದು ಬಂದರೂ ತಮ್ಮ ತಂದೆ, ಗಂಡ, ಸೋದರರ ಬಲದಿಂದ ಅಥವಾ ಅವರ ಕೈಗೊಂಬೆ ಆಗಿರಬೇಕಾಗುತ್ತದೆ. ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಹೆಂಗಸರು ರಾಜಕೀಯಕ್ಕಿಳಿದು ಹೇಗೋ ಉಸಿರುಗಟ್ಟಿ ಎದುರಿಸುತ್ತಿದ್ದರೂ, ಅವರಲ್ಲಿ ಹೆಚ್ಚಿನವರು ಸಾರೋಗೇಟ್ ಮದರ್/ಡಾಟರ್ ಇನ್ ಲಾ ತರಹ ಆಗಿದ್ದಾರೆ, ಇವರ ಜಬರ್ದಸ್ತು ಏನಿದ್ದರೂ ತಮ್ಮವರ ಮೇಲೆ ಹಾರಾಡುವ, ಕೆಲಸದಲ್ಲಿ ಕೊರತೆ ಹುಡುಕುವ ಮಟ್ಟಕ್ಕೆ ಸೀಮಿತವಾಗಿ ದೂರದೃಷ್ಟಿಯ ಶಕ್ತಿ ಕುಂದಿರುತ್ತದೆ.
ಲಿಜ್ ಟ್ರಸ್ಟ್ ಸಹ ತಮ್ಮ ಎಕನಾಮಿಕ್ ಪಾಲಿಸಿಯನ್ನು ಒಂದಿಷ್ಟು ವಿಚಾರ ಮಾಡದೆ ಎಕ್ಸ್ ಟ್ರೀಂ ಸ್ಟೆಪಲ್ ಆಗಿ ಮುನ್ನಡೆಸಿದ್ದರು, ಅದು ಅವರಿಗೆ ಮುಳುವಾಯ್ತು. ಇದರಿಂದ ಭಾರತೀಯ ಮೂಲದ ಋಷಿ ಸುನಕ್ ರಿಗೆ ಲಾಭವಾಯ್ತು, ಅವರೇ ಪ್ರಧಾನಿ ಆದರು! ಇದರ ಅರ್ಥ ಭಾರತೀಯರು ಬಿಳಿಯರನ್ನು ಆಳುತ್ತಿದ್ದಾರೆಂದಲ್ಲ! ಈಗ ಇಂಗ್ಲೆಂಡ್ ನಲ್ಲೂ ಟ್ಯಾಲೆಂಟ್ ನ ಅಭಾವವಿದೆ, ಇದನ್ನು ಅತ್ತ ಹೆಂಗಸರು ಅಥವಾ ಬಿಳಿಯರ ನಾಯಕರೂ ತುಂಬಲು ಆಗುತ್ತಿಲ್ಲ.
ಇಂಥ ತೀರ್ಥಯಾತ್ರೆಗಳಿಂದ ಏನು ಲಾಭ?
ಕೇದಾರ್ ನಾಥ್ ದರ್ಶನಕ್ಕೆಂದು ಹೆಲಿಕಾಪ್ಟರ್ ನಿಂದ ಹೊರಟ 7 ಯಾತ್ರಿಕರು ನೇರ ಸ್ವರ್ಗ ತಲುಪಿದರು. ಏಕೆಂದರೆ ದಟ್ಟ ಮಂಜಿನ ಕಾರಣ ಹೆಲಿಕಾಪ್ಟರ್ ಒಂದು ಎತ್ತರದ ಶಿಖರಕ್ಕೆ ಬಡಿಯಿತು, ತಕ್ಷಣ ಸಿಡಿದು ಬರ್ಸ್ಟ್ ಆಯಿತು. ಚಾರ್ ಧಾಮಗಳಲ್ಲಿ ಹೆಲಿಕಾಪ್ಟರ್ ಸೇವೆ ಶುರುವಾದಾಗಿನಿಂದ, ಅಲ್ಲಿ ಹೆಲಿಕಾಪ್ಟರ್ ಗಳು ರಸ್ತೆ ಬದಿಯ ಆಟೋ ತರಹ ಅತಿಯಾಗಿ ಓಡಾಡುತ್ತಲಿವೆ. ಮೂಢನಂಬಿಕೆ ತುಂಬಿದ ಆಸ್ತಿಕರನ್ನು ಅಲ್ಲಿಗೆ ಕೊಂಡೊಯ್ಯುತ್ತವೆ, ಇವರಿಗೆ ಪುಣ್ಯ ಬೇಕು, ಆದರೆ ಕಾಲ್ನಡಿಗೆಯಿಂದ ಕೇದಾರ ಶಿಖರ ಏರಲಾರರು.
ಹಿಮಾಚಲ ಬೆಟ್ಟಗಳಲ್ಲಿ ಈ ಧರ್ಮಸ್ಥಳಗಳು ಏಕಿಷ್ಟು ಪ್ರಸಿದ್ಧ ಎಂದರೆ, ಹಿಂದೆಲ್ಲ ಇಲ್ಲಿಗೆ ತಲುಪುದೇ ಮಹಾ ಕಷ್ಟಕರವಾಗಿತ್ತು. ಆಗ ಅಲ್ಲಿ ರಸ್ತೆ ಇರಲಿಲ್ಲ ಅಥವಾ ಬೇರಾವ ಅನುಕೂಲಗಳೂ ಇರಲಿಲ್ಲ. ಪುರಾಣಗಳಲ್ಲಿ ಇವುಗಳ ಮಹತ್ವ ಹಾಗೂ ಮನಮೋಹಕ ಚಿತ್ರಣ ನೀಡಲಾಗಿದೆ. ಹೀಗಾಗಿಯೇ ಭಕ್ತಗಣ ಈ ಧಾಮಗಳಿಗೆ ದರ್ಶನಕ್ಕೆಂದು ಹಾತೊರೆಯುತ್ತಾ, ಅಲ್ಲಿನ ಪಂಡಿತರ ಸೇವೆಗೆ ಧಾವಿಸುತ್ತಾರೆ. ಅದರಲ್ಲೂ ಅತಿ ದಟ್ಟ ಕಾಡುಗಳ ಮಧ್ಯೆ ಮೈ ಕೊರೆಯುವ ಚಳಿ ತುಂಬಿರುವಾಗ ಭಕ್ತರು ಇವರ ಮೊರೆಹೋಗುತ್ತಾರೆ.
ಈಗ ಎಷ್ಟೋ ಮಹಂತರು ಅಲ್ಲೇ ನೆಲೆಸುತ್ತಾರೆ. ಏಕೆಂದರೆ ಅಲ್ಲಿ ಈಗ ವಿದ್ಯುತ್, ನೀರು, ಹೀಟರ್, ಎಸಿ, ಆಹಾರ ಸಾಮಗ್ರಿ ಇತ್ಯಾದಿ ಈ ಇಕ್ಕಟ್ಟಾದ ರಸ್ತೆಗಳಿಗೂ ಬಂದು ತಲುಪುತ್ತಿವೆ. ಬೆಟ್ಟಗಳನ್ನು ಕೊರೆದು ಈ ಧರ್ಮದ ವ್ಯಾಪಾರ ಅಭಿವೃದ್ಧಿಗೊಳ್ಳುವಂತೆ ಮಾಡಲಾಗಿದೆ. ಭಕ್ತಾದಿಗಳ ಯಾತ್ರೆ ಸುಲಭಗೊಳಿಸಲು, ಅಂತಿಮ ಘಟ್ಟದಲ್ಲಿ ಶಿಖರ ಏರುವುದು ಎಲ್ಲಿ ಅತಿ ದುಸ್ತರವೋ, ಅಲ್ಲಿ ಈಗ ಹೆಲಿಕಾಪ್ಟರ್ ಸಂಚಾರ ಶುರುವಾಗಿದೆ. ಇಲ್ಲಿಂದ ಭಕ್ತಾದಿಗಳನ್ನು ಧಾಮಗಳಿಗೆ ಸಲೀಸಾಗಿ ತಲುಪಿಸಲಾಗುತ್ತದೆ.
ಮೇನಿಂದ ಅಕ್ಟೋಬರ್ ವರೆಗೂ ಪ್ರತಿದಿನ ಡಜನ್ ಗಟ್ಟಲೆ ಭಕ್ತರನ್ನು ಪ್ರತಿ ಪಾಳಿಯಲ್ಲೂ ಅಲ್ಲಿಗೆ ರವಾನಿಸುತ್ತಾರೆ. ಏವಿಯೇಶನ್ ಕಂಪನಿಗಳು ಇಲ್ಲಿ ಧಾರಾಳ ಹಣ ಕಮಾಯಿಸುತ್ತಿವೆ. ಈ ಯಾತ್ರೆ ಕೆಲವೇ ನಿಮಿಷಗಳದಾದ್ದರಿಂದ, ಟಿಕೆಟ್ ದುಬಾರಿ ಆದರೂ ಅದೇನೂ ಬಾಧಿಸದು. ಅಕ್ಟೋಬರ್ 18 ರಂದು ನಡೆದ ದುರ್ಘಟನೆಯಲ್ಲಿ 20 ವರ್ಷದ ಪೂರ್ವಾ. 30 ವರ್ಷದ ಕೃತೀ, 25 ವರ್ಷದ ಉರ್ವೀ ಹಾಗೂ ಇಬ್ಬರು ಹಿರಿಯ ವ್ಯಕ್ತಿಗಳು ಜೊತೆಗಿದ್ದರು. ಇಲ್ಲಿನ ಸಾಲು ಎಂದರೆ, ಯೌವನದದ ಬಿಸಿ ರಕ್ತದಲ್ಲಿ ಅಡ್ವೆಂಚರ್‌ಬೇಕೆನಿಸುವಾಗ, ದೇಹದಲ್ಲಿ ಶಕ್ತಿ ತುಂಬಿರುತ್ತದೆ. ಇಂಥವರೂ ಹೆಲಿಕಾಪ್ಟರ್ ಹತ್ತುವ ಅಗತ್ಯವೇನಿತ್ತು? ಮೂಢನಂಬಿಕೆ ಎಷ್ಟು ಹೆಚ್ಚಿದೆ ಎಂದರೆ, ಕೇದಾರನಾಥಕ್ಕೆ ಹೋಗಲೇಬೇಕು ಎಂದಿದ್ದರೆ, ಮೊದಲೇ ಏಕೆ ಇಡೀ ಪ್ರಯಾಣದ ಬಗ್ಗೆ ನಿರ್ಧರಿಸುವುದಿಲ್ಲ?
ಈ ದಾರಿಯಲ್ಲಿ ಕಾಲ್ನಡಿಗೆ ಕಷ್ಟಕರವಾದರೂ ಅಸಾಧ್ಯ ಏನಲ್ಲ. ರಾಹುಲ್ ಗಾಂಧಿ ಇದನ್ನು ನಿರೂಪಿಸಿದ್ದಾರೆ. ಭಾರತ ಯಾತ್ರೆಯ ನೆಪದಲ್ಲಿ ಇಡೀ ದೇಶದ ಹಳ್ಳಿಗಳ್ಳಿ, ನಗರ ಪ್ರದೇಶ, ಬೆಟ್ಟ ಗುಡ್ಡಗಾಡುಗಳನ್ನೂ ದಾಟಿದ್ದಾರೆ. ಕಾಲ್ನಡಿಗೆಯಿಂದ ತೊಂದರೆ ಇಲ್ಲ ಎಂದು ಇದು ಅವರ ಆದರ್ಶವನ್ನು ಎತ್ತಿ ಹಿಡಿಯುತ್ತದೆ. ಟ್ರೆಕಿಂಗ್ ಇಂದಿನ ಯುವಜನತೆಯ ಮೆಚ್ಚಿನ ಹಾಬಿ. ಹಾಗಿರುವಾಗ 20, 25, 30ರ ತರುಣಿಯರು ಅದೇಕೆ ಹೆಲಿಕಾಪ್ಟರ್‌ಗೆ ಶರಣಾದರು.
ಬಹುಶಃ ಧಾರಾಳ ಹಣ ಇದಕ್ಕೆ ಮೂಲವಿರಬೇಕು. ಒಂದಿಷ್ಟೂ ಕೈ ಕಾಲು ಆಡಿಸದೆ ಕುಳಿತಲ್ಲಿಯೇ ಅತಿ ಸುಖ ಬಯಸುವ ಈ ಮಂದಿ ಮಹಾ ಆಲಸಿಗಳು. ಟ್ರೆಕಿಂಗ್ ನಲ್ಲಿ ಧಾಮ ತಲುಪುವುದು ಹೆಚ್ಚು ಮಜಾ ನೀಡುತ್ತದೆ, ರಿಸ್ಕ್ ಸಹ ಇದ್ದೇ ಇದೆ, ದರ್ಶನೀಯ ನೋಟಗಳಿಗೇನೂ ಕಡಿಮೆ ಇಲ್ಲ, ಹೆಚ್ಚಿನ ಅನುಭವ ಸಹ ಸಿಗುತ್ತದಲ್ಲವೇ? ಇಂದಿನ ಯುವಜನತೆ ಹಣದ ಮದದಲ್ಲಿ ಇಂಥದ್ದನ್ನು ನಿರ್ಲಕ್ಷಿಸಬಹುದೇ?
ಪಬ್ಲಿಕ್ ಸ್ವಿಮಿಂಗ್ ಪೂಲ್ ನ ಹೆಚ್ಚಿನ ಲಾಭಗಳು
ಫ್ರಾನ್ಸಿನ ಹೆಂಗಸರಿಗೆ ರಷ್ಯಾದ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ಕುರಿತು ಹೆಚ್ಚಿನ ಕ್ರಶ್ ಅಂತೆ! ಇದೀಗ ಅವರು ತಮ್ಮ ಸುಂದರ ಮೈಕಟ್ಟನ್ನು ಇಂಥ ಈಜುಕೊಳದಲ್ಲಿ ಪ್ರದರ್ಶಿಸುವಂತಿಲ್ಲ. ಇಬ್ಬರ ನಡುವೆ ಇದೆಂಥ ಸಂಬಂಧ ಅಂತೀರಾ? ಅಸಲಿಗೆ ರಷ್ಯಾದ ಪ್ರೆಸಿಡೆಂಟ್ ತಮ್ಮ ಪವರ್ ತೋರಿಸಲು, ಯಾವ ಮುನ್ಸೂಚನೆ ಇಲ್ಲದೆ ಯುಕ್ರೇನ್ ಮುತ್ತಿದಾಗ, ಯೂರೋಪ್‌ಅಮೆರಿಕಾ ಎರಡೂ ರಷ್ಯಾ ವಿರುದ್ಧ ಎಲ್ಲಾ ಟ್ರೇಡ್ ಗೆ ನಿಷೇಧ ಹೇರಿವೆ. ಬದಲಿಗೆ ರಷ್ಯಾ ತನ್ನ ಗ್ಯಾಸ್ ಸಿಲಿಂಡರ್ ಗಳನ್ನು ಯೂರೋಪಿಗೆ ಮಾರುವುದೇ ಇಲ್ಲವೆಂದು ಹಟ ಹೂಡಿದೆ. ಕ್ರಮೇಣ ಯೂರೋಪಿನ ಅಡುಗೆಮನೆ ತಣ್ಣಗಾಗುತ್ತಿದೆ, ಅಡುಗೆಯ ಗದ್ದಲವಿಲ್ಲ. ಈ ಚಳಿಗಾಲದಲ್ಲಿ ಅವರಿಗೆ ಸಾಯುವ ಸ್ಥಿತಿ ಬಂದಿದೆ.
ಇದೇ ಪ್ರಸಂಗದಲ್ಲಿ ಫ್ರಾನ್ಸ್ ನಿರ್ಧರಿಸಿದ್ದೆಂದರೆ, ಪಬ್ಲಿಕ್ ಸ್ವಿಮಿಂಗ್ ಪೂಲ್ ಗಳಲ್ಲಿ ಈಗ ಗ್ಯಾಸ್ ಸಿಗದ ಕಾರಣ, ಬಿಸಿ ನೀರು ಲಭ್ಯವಿಲ್ಲ ಅಂತಾಗಿದೆ. ಯಂಗ್ ಅಥವಾ ಸ್ಲಿಮ್ ಇರಲಿ, ಎಲ್ಲರಿಗೂ ದಪ್ಪ, ಫುಲ್ ಬಾಡಿ ಸ್ವಿಮಿಂಗ್ ಸೂಟ್ ಧರಿಸುವಿಕೆ ಕಡ್ಡಾಯ.
ಇದಂತೂ ನಿಜಕ್ಕೂ ಟಾರ್ಚರ್ರೇ ಸರಿ! ಹುಡುಗಿಯರು ಊಟ ತಿಂಡಿಯಲ್ಲಿ ಮಹಾ ಡಯೆಟಿಂಗ್ ಮಾಡಿ, ಜಾಗಿಂಗ್ ಮುಗಿಸಿ, ಜಿಮ್ ಮಾಡುತ್ತಾರೆ. ವರ್ಕ್ ಔಟ್ ಗೂ ಕೊರತೆಯಿಲ್ಲ. ಆದರೆ ಅವರ ಸ್ಲಿಮ್ ಟ್ರಿಮ್ ಬಾಡಿಯನ್ನು ನೋಡುವವರೇ ಇಲ್ಲ ಅಂತಾಗಿಬಿಟ್ಟರೆ ಇವೆಲ್ಲದರ ಲಾಭವಾದರೂ ಏನು?
ನಮ್ಮ ದೇಶದಲ್ಲಾದರೆ ಅನುಕೂಲಸ್ಥ ಮನೆತನಗಳ ಹೆಂಗಸರು ಸಹಜವಾಗಿಯೇ ದಪ್ಪ ಇರುತ್ತಾರೆ. ಸೀರೆ, ಸಲ್ವಾರ್ ಕಮೀಜ್ ಗಳಲ್ಲಿ ಫ್ಯಾಟ್ ಲೇಯರ್ ಮುಚ್ಚಿಹೋಗುತ್ತವೆ, ಹೀಗಾಗಿ ದೇಹದ ಮೈಕಟ್ಟಿನ ಕಡೆ ಇವರ ಗಮನ ಹರಿಯುವುದಿಲ್ಲ. ಆದರೆ ದೇಹ ಪ್ರದರ್ಶನ ಮಾಡಬೇಕಾದ ಕಡೆ, ಇಂಥ ಹುಡುಗಿಯರು, ಭಲೇ ಜಾಗ್ರತೆ ವಹಿಸುತ್ತಾರೆ.
ಪಬ್ಲಿಕ್ ಗಾರ್ಡನ್ ತರಹ ಪಬ್ಲಿಕ್ ಈಜುಕೊಳ ಸಹ ಎಲ್ಲಕ್ಕೂ ದೊಡ್ಡ ಇನ್ ಸೆಂಟಿವ್ ಆಗಬಹುದು, ಅದರಲ್ಲೂ ಹುಡುಗಿಯರನ್ನು ಫಿಟ್ ಆಗಿರಿಸಲು. ಯೂರೋಪ್ ಅಮೆರಿಕಾದ ಹುಡುಗಿಯರು ಏಕೆ ಅತಿ ಫಿಟ್ ಎಂದರೆ, ಅಲ್ಲೆಲ್ಲ ಪಬ್ಲಿಕ್ ಈಜುಕೊಳ ಜಾಸ್ತಿ. ನಮ್ಮ ದೇಶದಲ್ಲೋ… ಇದು ಕೇವಲ ಫೈವ್ ಸ್ಟಾರ್ ಹೋಟೆಲ್ ಸಂಸ್ಕೃತಿ.
ಹಾಗಿದ್ದರೆ ಈ ಹುಡುಗಿಯರು ಏನು ಮಾಡಬೇಕು?
ಚುನಾಲಣೆಗೆ ನಿಲ್ಲುವ ಪಕ್ಷಗಳು ನಿರುದ್ಯೋಗದ ಸಮಸ್ಯೆ ನಿವಾರಿಸುವ ಭರವಸೆ ಕೊಡುತ್ತದೋ ಇಲ್ಲವೋ, ಹೆಚ್ಚು ಈಜುಕೊಳ ನಿರ್ಮಿಸುವ ಭರವಸೆ ಕೊಡಲೇಬೇಕು, ಆಗಲೇ ಇವರುಗಳ ಫಿಟ್ ನೆಸ್ ಇಂಪ್ರೂವ್ ಆಗೋದು!