– ರಾಘವೇಂದ್ರ ಅಡಿಗ ಎಚ್ಚೆನ್

‘ಬ್ಲಿಂಕ್’ ಚಿತ್ರದ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಹಾಗೂ ಡೈರೆಕ್ಟರ್​ ಶ್ರೀನಿಧಿ ಬೆಂಗಳೂರು ರವರು ಇದೀಗ “ವಿಡಿಯೋ” ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಮೂಲಕ ದೀಕ್ಷಿತ್ ಶೆಟ್ಟಿಯವರು ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಧೀ ಸಿನಿಮಾಸ್ ಅಡಿಯಲ್ಲಿ ಹೊರ ಬರುತ್ತಿರುವ ಮೊದಲ ಚಿತ್ರ ‘ವಿಡಿಯೋ’ ಆಗಿದೆ. ಈ ಚಿತ್ರವು found footage genre ಚಿತ್ರವಾಗಿದ್ದು, vlog ಮತ್ತು documentary ಶೈಲಿಯಲ್ಲಿ ಚಿತ್ರವು ಹೊರಹೊಮ್ಮುತ್ತದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ.

WhatsApp-Image-2025-05-16-at-11.36.32-AM-768x960

ಕಳೆದ ಹನ್ನೊಂದು ವರ್ಷಗಳಿಂದ ನಟನಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ದೀಕ್ಷಿತ್ ಶೆಟ್ಟಿ, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಉದಯೋನ್ಮುಖ ಪ್ರತಿಭೆಗಳಿಗೆ ಬೆಂಬಲ ನೀಡಲು ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ‘ವಿಡಿಯೋ’ ಸಿನಿಮಾದ ಎಂಭತ್ತರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಚಿತ್ರತಂಡ ತಿಳಿಸಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ