'ಕುಲವಧು', 'ಲಕ್ಷ್ಮೀ ನಿವಾಸ' ಮತ್ತಿತರ ಧಾರಾವಾಹಿಗಳ ಮೂಲಕ ಮನೆಮಾತಾದ ನಟಿ ದಿಶಾ ಮದನ್ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಕನ್ನಡ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಟಿ ದಿಶಾ ಮದನ್ಗೆ ಇನ್‌ಸ್ಟಾಗ್ರಾಮ್‌ನಲ್ಲೇ 9.5 ಲಕ್ಷಕ್ಕೂ ಅಧಿಕ ಮಂದಿ ಪಾಲೋವರ್ಸ್ ಇದ್ದಾರೆ.
ಇಬ್ಬರು ಮಕ್ಕಳ ತಾಯಿಯಾಗಿರುವ ದಿಶಾ ಮದನ್ ಈಗ ಫ್ರಾನ್ಸ್‌ನಲ್ಲಿ ನಡೆಯತ್ತಿರುವ ವಿಶ್ವದ ಪ್ರತಿಷ್ಠಿತ 78ನೇ ಆವೃತ್ತಿಯ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕಾನ್ಸ್ ಫೆಸ್ಟಿವಲ್‌ಗೆ ಬಾಲಿವುಡ್ ನಟಿಯರಿಗೆ ಹೆಚ್ಚು ಆಹ್ವಾನ ಬರುತ್ತದೆ ಹಾಗೂ ಅವರೇ ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಕನ್ನಡದ ನಟಿ ದಿಶಾ ಮದನ್ ಅವರು ಕೂಡ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ವಿಶಿಷ್ಠವಾಗಿ ವಿನ್ಯಾಸಗೊಳಿಸಿದ ಕಾಂಜೀವರಂ ಸೀರೆಯೊಂದನ್ನು ಧರಿಸಿ, ದಿಶಾ ಮಿಂಚಿದ್ದಾರೆ. ಆ ಕ್ಷಣದ ಸುಂದರ ಫೋಟೋಗಳು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ದಿಶಾ ಮದನ್ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಚಿಕ್ಕ ವಯಸ್ಸಿನಲ್ಲಿಯೇ ದಿನಕ್ಕೆ 3 ರಿಂದ 4ಗಂಟೆ ಡ್ಯಾನ್ಸ್ ಮಾಡುತ್ತಿದ್ದ ದಿಶಾ, ಅನಂತರ ನಟನೆಯನ್ನು ಆರಂಭಿಸಿದರು.
ಕುಲವಧು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಪ್ರಸ್ತುತ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತರೆ ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ದಿಶಾ ಆಕ್ಟೀವ್ ಆಗಿದ್ದಾರೆ.
ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಿಂದ ಆಹ್ವಾನ ಪಡೆದು, ರೆಡ್ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
"ಎಲ್ಲಾ ರೀತಿಯ ಸಿನಿಮಾಗಳನ್ನು ಆನಂದಿಸುವ ನನ್ನನ್ನು ಇಂದು ವಿಶ್ವದ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ. ಇಲ್ಲಿಯವರೆಗಿನ ನನ್ನ ಪ್ರಯಾಣ ಅವಿಸ್ಮರಣೀಯ. ಕರ್ನಾಟಕದಿಂದ ಕಾನ್ಸ್‌ಗೆ.." ಎಂದು ಕಾನ್ಸ್‌ಗೆ ಹೋಗುವುದಕ್ಕೂ ಮುನ್ನ ದಿಶಾ ಹೇಳಿದ್ದರು.
ಕನ್ನಡದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ದಿಶಾ ಮದನ್ ನಟಿಸಿದ್ದಾರೆ. ಅಲ್ಲದೆ, ಕನ್ನಡ ಕಿರುತೆರೆಗೆ ಬರುವ ಮೊದಲು ಹಿಂದಿ ಕಿರುತೆರೆಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 4ರಲ್ಲಿ ದಿಶಾ ಸ್ಪರ್ಧಿಯಾಗಿದ್ದರು.