ಬಾಂಗ್ಲಾದೇಶದ ಜನಪ್ರಿಯ ನಟಿ ನುಸ್ರತ್ ಫರಿಯಾ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬಾಂಗ್ಲಾದೇಶದಿಂದ ಥೈಲ್ಯಾಂಡ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅವರನ್ನು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

2024 ರ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದ ಕೊಲೆ ಯತ್ನ ಪ್ರಕರಣದಲ್ಲಿ ನುಸ್ರತ್​ ಫರಿಯಾಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿ ತಿಳಿಸಿದೆ.

31 ವರ್ಷದ ನಟಿ ನುಸ್ರತ್ ಫರಿಯಾಳನ್ನು ವಲಸೆ ಚೆಕ್ ಪಾಯಿಂಟ್‌ನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನುಸ್ರತ್ ಫರಿಯಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈ ಹಿಂಸಾಚಾರದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದರು.

ಪರೋಕ್ಷವಾಗಿ ವಿದ್ಯಾರ್ಥಿ ನೇತೃತ್ವದ ಚಳವಳಿಯ ವಿರುದ್ಧ ಅವಾಮಿ ಲೀಗ್‌ನ ಪ್ರತಿ-ಪ್ರಯತ್ನಗಳಿಗೆ ಫರಿಯಾ ಹಣಕಾಸು ಒದಗಿಸಿದ್ದಾರೆ ಮತ್ತು ಹಿಂಸಾತ್ಮಕ ದಮನಗಳನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಹೆಸರಿಸಲಾದ ಹಲವಾರು ಪ್ರಮುಖ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು. ಇದು ಪ್ರತಿಭಟನೆಯ ಉತ್ತುಂಗದಲ್ಲಿದ್ದಾಗ ಕೊಲೆ ಯತ್ನದ ಆರೋಪ ಕೂಡ ಮಾಡಲಾಗಿದೆ. ನಟಿಯ ತೀವ್ರ ವಿಚಾರಣೆ ಬಡ್ಡ ವಲಯದ ಸಹಾಯಕ ಪೊಲೀಸ್ ಆಯುಕ್ತ ಶಫಿಕುಲ್ ಇಸ್ಲಾಂ ಈ ಬಗ್ಗೆ ಮಾತನಾಡಿ, ನಟಿಯ ಬಂಧನವನ್ನು ದೃಢಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಬಂಧನದ ನಂತರ, ಫರಿಯಾ ಅವರನ್ನು ಮೊದಲು ವತಾರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ನಂತರ ಹೆಚ್ಚಿನ ವಿಚಾರಣೆಗಾಗಿ ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ಶಾಖೆಯ (ಡಿಬಿ) ಕಚೇರಿಗೆ ವರ್ಗಾಯಿಸಲಾಗಿದೆ.

ನುಸ್ರತ್ ಫರಿಯಾ ನಟನೆ ಮತ್ತು ಮಾಧ್ಯಮದ ಮೂಲಕ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದವರು. ದೂರದರ್ಶನ ಮತ್ತು ಚಿತ್ರರಂಗದಲ್ಲಿ ಮಿಂಚುವ ಮೊದಲು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

2015 ರಲ್ಲಿ ಬಾಂಗ್ಲಾದೇಶ-ಭಾರತ ಜಂಟಿ ನಿರ್ಮಾಣವಾದ ಆಶಿಕಿ: ಟ್ರೂ ಲವ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಭಾರತೀಯ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನಚರಿತ್ರೆಯಾದ ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್ (2023) ನಲ್ಲಿ ಶೇಖ್ ಹಸೀನಾ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಹಯೋಗದ ನಿರ್ಮಾಣವಾದ ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆ ಹಾಗೂ ರಾಜಕೀಯ ಪರಿಶೀಲನೆಗೆ ಒಳಗಾಗಿತ್ತು. ವಿಶೇಷವಾಗಿ 2024 ರ ದಂಗೆಯ ಸಮಯದಲ್ಲಿ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಪ್ರಕ್ಷುಬ್ಧತೆಯ ನಡುವೆ ಈ ಸಿನಿಮಾ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ