ಶರತ್ ಚಂದ್ರ 

ಉತ್ತರ ಭಾರತದ ಚಿತ್ರಗಳಲ್ಲಿ ತಮ್ಮ ಚಿತ್ರ ಜೀವನ ಆರಂಭಿಸಿ, ಯಶಸ್ವೀಯಾಗದೆ ದಕ್ಷಿಣ ದತ್ತ ಮುಖ ಮಾಡಿ ಇಲ್ಲಿ ಯಶಸ್ವಿಯಾಗಿ ಇಲ್ಲೇ ನೆಲೆಯೂರಿರುವ ಅನೇಕ ನಾಯಕಿಯರನ್ನು ನಾವು ನೋಡಿದ್ದೇವೆ.

ಕೆಲವು ನಾಯಕಿಯರು ನೇರವಾಗಿ ದಕ್ಷಿಣ ಭಾರತದ ಚಿತ್ರಗಳ ಮೂಲಕ ಎಂಟ್ರಿ ನೀಡಿ, ಇಲ್ಲಿಯವರೇ ಆಗಿ ಹೋಗುತ್ತಾರೆ. ಆ ಪೈಕಿ ಹರಿಯಾಣ ಮೂಲದ ನಾಯಕಿ ಮಿಶಾ ನಾರಂಗ್ ಕೂಡ ಒಬ್ಬರು.ಈ ನಟಿ

ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಒಂದು ರೌಂಡ್ ಮುಗಿಸಿ ಈಗ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

1000532441

‘ಶ್ರಾವಣಿ ಸುಬ್ರಮಣ್ಯ’ ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶನದಲ್ಲಿ   ಬಿಡುಗಡೆಗೆ ಸಿದ್ದವಾಗಿರುವ ‘ರೆಟ್ರೋ ಕಾಲದ ಕಥೆ ಹೊಂದಿರುವ   ‘ಸರಳ ಸುಬ್ಬರಾವ್ ‘ ಕನ್ನಡ ಚಿತ್ರದಲ್ಲಿ ಮಿಶಾ ನಾರಂಗ್  , ಅಜಯ್ ರಾವ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆ ಯಾದ  ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ  ‘ರಂಗೋಲಿ ಅಂಗಳಿನಲ್ಲಿ,,’ ಹಾಡು ಬಿಡುಗಡೆ ಯಾಗಿದ್ದು ಮಿಶಾ ಅವರ ರೆಟ್ರೋ ಲುಕ್ ಸಾಕಷ್ಟು ಜನರ ಗಮನ ಸೆಳೆದಿದೆ.

1000532452

ಆಕೆಯ ಅಭಿನಯದ ಕುರಿತು ಕೂಡ ಇಡೀ ಚಿತ್ರ ತಂಡ ಹಾಡಿ ಹೊಗಳಿದೆ. ಕನ್ನಡ ಭಾಷೆ ಗೊತ್ತಿಲ್ಲದಿದ್ದರೂ, ಸಂಭಾಷಣೆ ಯನ್ನು ಅಭ್ಯಾಸ ಮಾಡಿ, ಭಾಷೆಯನ್ನು ಗ್ರಹಿಸಿ ನೂರು ಪ್ರತಿಶತ ಕೊಡುಗೆ ನೀಡುವಲ್ಲಿ ಮಿಶಾ ಶ್ರಮಿಸಿದ್ದರಂತೆ.

ನೂರಾರು ಹುಡುಗಿಯಾರನ್ನು ಸ್ಕ್ರೀನ್ ಟೆಸ್ಟ್ ಮಾಡಿದ ಮೇಲೆ ಮಿಶಾ ಈ ಚಿತ್ರಕ್ಕೆ ಆಯ್ಕೆ ಆಗಿದ್ದರಂತೆ. ಬೆಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಕನ್ನಡ ದಲ್ಲೇ ಮಾತನಾಡಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾದ ಮಿಶಾ ನಾರಂಗ್ ಗೆ ಕನ್ನಡ ದಲ್ಲಿ ಇನ್ನೊಂದಷ್ಟು ಪಾತ್ರಗಳನ್ನು ಮಾಡುವ ಆಸೆಯಿದೆಯಂತೆ. ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಕನ್ನಡ ಕಲಿತು ನಿಮ್ಮ ಮುಂದೆ ಬರಲಿದ್ದೇನೆ ಎಂದು ತಿಳಿಸಿದ್ದಾರೆ.

1000532448

ಒಟ್ಟಿನಲ್ಲಿ ಕೆಲವೊಂದು ಕನ್ನಡದ ನಾಯಕಿಯರು ಕನ್ನಡ ಮಾತಾಡುವ ವಿಷಯ ದಲ್ಲಿ ಕಂಜೂಸ್ ಗಲಾಗುತ್ತಿರುವ ಈ ಸಂದರ್ಭದಲ್ಲಿ, ಬೇರೆ ಭಾಷೆ ಯ ನಟಿಯರು ಕನ್ನಡ ದ ಬಗ್ಗೆ ತೋರುತ್ತಿರುವ ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ