ಪ್ರತಿ ಹೆಣ್ಣೂ ತನ್ನ ನುಣುಪಾದ ಚರ್ಮದ ತರಹವೇ, ಕೂದಲು ಸಹ ಸಾಫ್ಟ್, ಸಿಲ್ಕಿ, ದಟ್ಟ, ಒತ್ತು ಒತ್ತಾದ ಕಡುಕಪ್ಪಾಗಿ ಹೊಳೆಯುವಂತಿರಬೇಕೆಂದು ಬಯಸುತ್ತಾಳೆ. ಆದರೆ ನಮ್ಮ ಬಿಝಿ ಲೈಫ್‌ ಸ್ಟೈಲ್‌, ಹೊರಗಿನ ಧೂಳುಮಣ್ಣು, ಪರಿಸರ ಮಾಲಿನ್ಯದ ಕಾರಣ ನಮ್ಮ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಆಗ ಕೂದಲು ನಿರ್ಜೀವ, ರಫ್‌ ಆಗಿ ಒರಟಾಗುತ್ತದೆ. ಇದಕ್ಕಾಗಿ ನಾವು ಹೆಚ್ಚು ಕೆಮಿಕಲ್ಸ್ ತುಂಬಿದ ಶ್ಯಾಂಪೂ ಬಳಸಲೇಬಾರದು. ಇದು ನಮ್ಮ ಕೂದಲಿನ ನೈಸರ್ಗಿಕ ಸೌಂದರ್ಯವನ್ನೂ ಹಾಳು ಮಾಡುತ್ತದೆ. ಇದರ ಬದಲು ನೀವು ಅತಿ ಉತ್ತಮ ಗುಣಮಟ್ಟದ ಹರ್ಬಲ್ ಹೇರ್‌ ಶ್ಯಾಂಪೂ ಬಳಸಿದರೆ, ನಿಮ್ಮ ಕೂದಲು ಎಷ್ಟೋ ಮೃದು, ಕೋಮಲವಾಗುತ್ತದೆ. ಅದರಿಂದ ಕೂದಲು ಅಕಾಲಕ್ಕೆ ಬೆಳ್ಳಗಾಗುವುದೂ ತಪ್ಪುತ್ತದೆ. ಹೀಗಾಗಿ ಸದಾ ಅತ್ಯುತ್ತಮ ಗುಣಮಟ್ಟದ, ನೈಸರ್ಗಿಕ ಗಿಡಮೂಲಿಕೆಗಳಿಂದ ಸಮೃದ್ಧ ಹರ್ಬಲ್ ಹೇರ್‌ ಶ್ಯಾಂಪೂ ಮಾತ್ರ ಬಳಸಿರಿ. ಇದು ಕೂದಲನ್ನು ಸಶಕ್ತಗೊಳಿಸಿ, ಬ್ಯೂಟಿಫುಲ್ ಆಗಿಸಿ, ಹೊಳೆ ಹೊಳೆಯುವಂತೆ ಆರೈಕೆ ಮಾಡುತ್ತದೆ.

ನೆಲ್ಲಿಕಾಯಿಯ ಉತ್ತಮ ಅಂಶಗಳು

ನೆಲ್ಲಿ ತನ್ನಲ್ಲಿ ಅತಿ ಹೆಚ್ಚು ವಿಟಮಿನ್ಸ್, ಮಿನರಲ್ಸ್ ಮೈತುಂಬಿಕೊಂಡಿದೆ. ಹೀಗಾಗಿ ಇದು ಸ್ಕಾಲ್ಪ್ ಗೆ ಉತ್ತಮ ನ್ಯೂಟ್ರಿಶನ್‌, ಆಕ್ಸಿಜನ್‌ ಒದಗಿಸಿ ಕೂದಲನ್ನು ಸ್ವಸ್ಥವಾಗಿ ಇಡಬಲ್ಲದು. ಇದರಿಂದಾಗಿ ಹರ್ಬಲ್ ಶ್ಯಾಂಪೂ ಆ್ಯಂಟಿ ಫಂಗಲ್, ಆ್ಯಂಟಿವೈರಸ್ ಗುಣಗಳನ್ನು ಗಳಿಸುತ್ತದೆ. ಹೀಗಾಗಿ ಸ್ಕಾಲ್ಪ್  ಡ್ಯಾಂಡ್ರಫ್‌, ಸೋಂಕಿನ ತೊಂದರೆ ನಿವಾರಣೆಗೊಳ್ಳುತ್ತದೆ. ಇದರಲ್ಲಿ ವಿಟಮಿನ್‌ ಸಿ ಧಾರಾಳ ಇರುವುದರಿಂದ, ಕೂದಲು ಬೆಳ್ಳಗಾಗುವುದನ್ನು ಸಹಜವಾಗಿ ತಡೆಯುತ್ತದೆ.

ಸೀಗೇಕಾಯಿಯ ಉತ್ತಮಿಕೆ

ನಿಮ್ಮ ಹರ್ಬಲ್ ಹೇರ್‌ ಶ್ಯಾಂಪೂ ಅಗತ್ಯವಾಗಿ ಸೀಗೇಪುಡಿ, ಚಿಗರೆಪುಡಿ, ಅಂಟವಾಳದ ಕಾಯಿಯ ಉತ್ತಮ ಅಂಶಗಳನ್ನು ಹೊಂದಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇದು ಕೂದಲಿನ ಟೆಕ್ಸ್ ಚರ್‌ ನ್ನು ಇಂಪ್ರೂವ್ ಮಾಡಿ, ಹೇರ್‌ ಫಾಲಿಕ್ಸ್‌ ನ್ನು ಕ್ಲೀನ್ ಮಾಡಿ, ಕೂದಲಿನ ಹೆಚ್ಚುವರಿ ತೈಲಾಂಶವನ್ನು ನಿವಾರಿಸುತ್ತದೆ. ಇದರಲ್ಲಿ ಆ್ಯಂಟಿ ಫಂಗಲ್ ಗುಣಗಳಿರುವುದರಿಂದ, ತಲೆ ಹೊಟ್ಟನ್ನು ಸುಲಭವಾಗಿ ನಿವಾರಿಸಿ, ಕೂದಲನ್ನು ಹೆಚ್ಚು ಸಶಕ್ತಗೊಳಿಸುತ್ತದೆ.

ಗ್ರೀನ್ಆ್ಯಪಲ್ ಲಾಭ

ಗ್ರೀನ್‌ ಆ್ಯಪಲ್ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧ. ಹೀಗಾಗಿ ಇದರಲ್ಲಿನ ಫ್ಲಾಲೆನಾಯಡ್ಸ್ ಪಾಲಿಫೆನಾಲ್ಸ್ ಎಂಬ ಆ್ಯಂಟಿ ಆಕ್ಸಿಡೆಂಟ್ಸ್ ಸ್ಕಾಲ್ಪ್ ಸ್ಕಿನ್‌ ನ್ನು ಹೀಲ್ ‌ಮಾಡಿ, ಅದರ ಮರುರಚನೆಗೆ ಸಹಕರಿಸುತ್ತದೆ. ಇದರಿಂದ ಕೂದಲಿಗೆ ಹೊಸ ಜೀವ ಬಂದಂತಾಗುತ್ತದೆ. ಜೊತೆಗೆ ಇದು ವಿಟಮಿನ್ಸ್, ಮಿನರಲ್ಸ್ ನಿಂದ ತುಂಬಿದ್ದು, ಕೂದಲಿನ ಬುಡ ಭಾಗ ಸಶಕ್ತಗೊಳಿಸಿ, ಅದನ್ನು ಸದಾ ಸ್ವಸ್ಥವಾಗಿಡುತ್ತದೆ. ಇದು ಸ್ಕಾಲ್ಪ್ ನ್ನು ಡೀಪ್‌ ಕ್ಲೀನ್‌ಮಾಡಿ, ನಿಮ್ಮ ಕೂದಲನ್ನು ಸಹಜವಾಗಿ ಸುರಸುಂದರ ಗೊಳಿಸಬಲ್ಲದು.

ವೀಟ್‌ ಪ್ರೋಟೀನ್‌ ಇದು ಸಹಜವಾಗಿ ಜಲ ಮೈಗೂಡಿಸುವ ಹೈಡ್ರೇಟೆಡ್‌ ನೇಚರ್‌ ಹೊಂದಿದೆ. ಇದರ ಬಳಕೆಯಿಂದ ನಿಮ್ಮ ಕೂದಲೆಂದೂ ನಿರ್ಜಲ ಆಗಲಾರದು. ಇದು ಹೇರ್‌ ಶ್ಯಾಫ್ಟ್ ನ್ನು ಸಶಕ್ತಗೊಳಿಸಿ ಅದನ್ನು ಹೆಚ್ಚು ಮಾಯಿಶ್ಚರ್‌ ಯುಕ್ತ ಮಾಡಿ, ಕೂದಲುದುರುವಿಕೆಯನ್ನು ಸುಲಭವಾಗಿ ನಿಯಂತ್ರಿಸುತ್ತದೆ. ಇದರಲ್ಲಿನ ಪ್ರೋಟೀನ್‌ ಹೇರ್‌ ಫಾಲಿಕ್ಸ್‌ ವರೆಗೆ ಆಳವಾಗಿಳಿದು ಅದನ್ನು ರಿಪೇರಿ ಮಾಡುತ್ತದೆ. ಜೊತೆಗೆ ಇದು ಕೂದಲಿಗೆ ವಾಲ್ಯೂಂ ಪಲ್ ನೆಸ್‌ ನೀಡುತ್ತದೆ. ಇದು ಹೇರ್‌ ಸ್ಟ್ರಾಂಡ್ಸ್ ನಿಂದ ಮಾಯಿಶ್ಚರ್‌ ಸೋರಿಹೋಗದಂತೆ, ಕೂದಲಿನ ಎಲಾಸ್ಟಿಸಿಟಿ ಹೆಚ್ಚಿಸುತ್ತದೆ. ಇದರಿಂದ ಕೂದಲು ಹೆಚ್ಚು ಶೈನಿಯಾಗಿ ಆಕರ್ಷಕವಾಗುತ್ತದೆ.

ಟೀ ಟ್ರೀ ಆಯಿಲ್

‌ಇದರಲ್ಲಿ ಮುಖ್ಯವಾಗಿ ಆ್ಯಂಟಿ ಮೈಕ್ರೋಬಿಯಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಅಡಗಿದ್ದು, ಇದು ಸ್ಕ್ಪಾಲ್ ನ ಸ್ವಾಸ್ಥ್ಯ ಸುಧಾರಿಸುವಲ್ಲಿ ಸದಾ ಮುಂದು. ಹೀಗಾಗಿ ಡ್ಯಾಂಡ್ರಫ್‌ ತಂತಾನೇ ಮಾಯ ಆಗುತ್ತದೆ. ಇದು ನಿಮ್ಮ ಕೂದಲನ್ನು ಹೆಲ್ದಿ, ಮಾಯಿಶ್ಚರೈಸ್ಡ್ ಆಗಿಡುತ್ತದೆ. ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಬೇಗ ಬೆಳೆಯುತ್ತದೆ. ಇದರ ಶ್ಯಾಂಪೂ ಬಳಸುವುದರಿಂದ ನಿಮ್ಮ ಕೂದಲು ಕಡಿಮೆ ಅವಧಿಯಲ್ಲೇ ಸೂಪರ್‌ ಹೆಲ್ದಿ ಸ್ಟ್ರಾಂಗ್‌ ಆಗುತ್ತದೆ.

ನಿಂಬೆಯ ಮಹಿಮೆ

ನಿಂಬೆ ಸದಾ ವಿಟಮಿನ್‌ ಸಿ ಯಿಂದ ಸದಾ ಸಮೃದ್ಧ ಆಗಿದೆ. ಹಾಗಾಗಿ ಕೊಲ್ಯಾಜೆನ್‌ ತಯಾರಿ ಹೆಚ್ಚಿಸಿ, ಇದು ಕೂದಲಿನ ಬೆಳವಣಿಗೆಗೆ ಬಲು ಪೂರಕ ಎನಿಸುತ್ತದೆ. ಇದು ಹೇರ್‌ ಫಾಲಿಕ್ಸ್‌ ನ್ನು ಸಶಕ್ತಗೊಳಿಸಿ, ಕೂದಲು ಉದುರದಂತೆ, ತುಂಡರಿಸದಂತೆ ತಡೆಯುತ್ತದೆ. ಜೊತೆಗೆ ಸ್ಕಾಲ್ಪ್ ನ Ph‌  ಲೆವೆಲ್ ಬ್ಯಾಲೆನ್ಸ್ ಮಾಡುತ್ತಾ, ಅದರ ಡೀಪ್‌ ಕ್ಲೀನಿಂಗ್‌ ನ್ನು ಸಹ ಮಾಡುತ್ತದೆ.

ಮೆಹೆಂದಿ

ಇದರಲ್ಲಿ ವಿಟಮಿನ್‌ಹೆಚ್ಚಾಗಿದ್ದು, ಕೂದಲು ಅತಿ ಮೃದು, ಕೋಮಲವಾಗಲು ಸಹಕಾರಿ. ಜೊತೆಗೆ ಕೂದಲು ಅಕಾಲದಲ್ಲಿ ನರೆಗಟ್ಟುವುದನ್ನೂ ತಪ್ಪಿಸುತ್ತದೆ. ಇದರ ಎಲೆ ಪ್ರೋಟೀನ್‌, ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧ. ಹೀಗಾಗಿ ಕೂದಲು ಸ್ವಸ್ಥ, ಸೊಂಪಾಗುತ್ತದೆ. ಸಹಜವಾಗಿಯೇ ಕೂದಲು ಕಡು ಕಪ್ಪಾಗಿ ಹೊಳೆಯುತ್ತದೆ.

ಬಳಕೆ ಹೇಗೆ?

ಮೇಲೆ ತಿಳಿಸಲಾದ ಎಲಲ್ ಘಟಕಗಳೂ ನಿಮ್ಮ ಹರ್ಬಲ್ ಹೇರ್‌ ಶ್ಯಾಂಪೂನಲ್ಲಿ ಇದೇ ತಾನೇ ಎಂದು ಖಾತ್ರಿಪಡಿಸಿಕೊಂಡೇ ಅದನ್ನು ಖರೀದಿಸಿ. ಇಂಥ ಶ್ಯಾಂಪೂ ಎಲ್ಲಾ ತರಹದ ಕೂದಲಿಗೂ ಬಳಕೆ ಆಗುತ್ತದೆ. ಇದನ್ನು ಬಳಸುವ ಮುನ್ನ, ಅಗತ್ಯವಾಗಿ ಕೂದಲನ್ನು ಒದ್ದೆ ಮಾಡಿಕೊಳ್ಳಿ. ಅಂಗೈ ಮೇಲೆ ತುಸು ಶ್ಯಾಂಪೂ, ಸ್ವಲ್ಪ ನೀರು ಬೆರೆಸಿಕೊಂಡು, ಕೂದಲು, ತಲೆಯ ನೆತ್ತಿಗೆ ಒತ್ತಿ ಚೆನ್ನಾಗಿ ಮಸಾಜ್‌ ಮಾಡಿ. 1-2 ನಿಮಿಷ ತಿಕ್ಕಿರಿ. ನಂತರ ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ವಾರಕ್ಕೆ 2-3 ಸಲ ಹೀಗೆ ಮಾಡಿ, 2-3 ತಿಂಗಳಲ್ಲಿ ಉತ್ತಮ ಪರಿಣಾಮ ಲಭ್ಯ.

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ