ನೀವು ಸಹ ಗ್ಲೋಯಿಂಗ್ಸ್ಕಿನ್ಜೊತೆ ಬ್ಯೂಟಿಫುಲ್ ಹೇರ್ಹೊಂದಲು ಬಯಸುವಿರಾದರೆ, ಮಾಹಿತಿ ನಿಮಗೆ ಹೆಚ್ಚು ಪೂರಕ.....!

ಸಾಮಾನ್ಯವಾಗಿ ಹೆಂಗಸರು ತಮ್ಮ ಚರ್ಮ ಮತ್ತು ಕೂದಲಿನ ಸ್ಥಿತಿಗೆ, ತಮ್ಮ ಜೀವನಶೈಲಿ ಮತ್ತು ಆನುವಂಶಿಕತೆ ಅಷ್ಚೇ ಕಾರಣ ಎಂದು ಭಾವಿಸುತ್ತಾರೆ. ಇವರು ಕೂದಲು ಉದುರುವಿಕೆಗೆ ಹೆಚ್ಚು ಮಹತ್ವ ನೀಡುವುದೂ ಇಲ್ಲ. ದೈನಂದಿನ ಒತ್ತಡಗಳಿಂದಾಗಿ ಇವಕ್ಕೆಲ್ಲ ಆರೈಕೆ ಮಾಡಿಕೊಂಡಿರಲು ಯಾರ ಬಳಿ ಸಮಯವಿದೆ? ಎಂದುಕೊಳ್ಳುತ್ತಾರೆ. ಆದರೆ ದೇಹದಲ್ಲಿನ ನ್ಯೂಟ್ರಿಶನ್‌ ಲೆವೆಲ್ ‌ಆಧರಿಸಿ ಚರ್ಮ ಮತ್ತು ಕೂದಲಿನ ಆರೋಗ್ಯ ಇರುತ್ತದೆ. ನ್ಯೂಟ್ರಿಶನ್‌ ಮತ್ತು ವಿಟಮಿನ್‌ ಲೆವೆಲ್ ‌ಎರಡೂ ಚರ್ಮವನ್ನು ಸ್ವಸ್ಥವಾಗಿರಿಸಿ, ಮೃದುಗೊಳಿಸುತ್ತದೆ. ಕೂದಲನ್ನು ದಟ್ಟ, ಸಶಕ್ತ, ಒತ್ತಾಗಿಸಲು ಪ್ರಧಾನ ಪಾತ್ರ ವಹಿಸುತ್ತದೆ.

ಡಯೆಟ್‌ ಮತ್ತು ಜೀರ್ಣಶಕ್ತಿ ಕೆಡುವುದರಿಂದ, ಪೋಷಣೆಯಲ್ಲಿ ಕೊರತೆ ಕಾಡುತ್ತದೆ. ಇದರಿಂದ ಚರ್ಮಕ್ಕೆ ಹಲವು ಸಮಸ್ಯೆಗಳು ಕಾಡುತ್ತವೆ, ಅದರ ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಆಗುತ್ತದೆ. ಎಷ್ಟೋ ಸಲ ಆಹಾರದಲ್ಲಿ ಏನೂ ಕೊರತೆ ಇರುವುದಿಲ್ಲವಾದರೂ, ಮುಂದೆ ಫುಡ್‌ ಸೆನ್ಸಿಟಿವಿಟಿ ಮತ್ತು ಅಲರ್ಜಿ ಚರ್ಮದ ರೋಗಕ್ಕೆ ಕಾರಣ ಆಗುತ್ತದೆ.

ಆಧುನಿಕ ಅಧ್ಯಯನಗಳ ಪ್ರಕಾರ ಆ್ಯಂಟಿ ಆಕ್ಸಿಡೆಂಟ್‌ ಗಳ ಫೋಟೋ ಪ್ರೊಟೆಕ್ಟಿವ್ ‌ಸಾಮರ್ಥ್ಯ ಚರ್ಮದ ಪ್ರತಿರಕ್ಷಣಾ ತಂತ್ರದ ಮೇಲೆ, ಸೂಕ್ಷ್ಮ ಪೋಷಕಾಂಶಗಳ ಪೂರೈಕೆಯಿಂದ ಪ್ರಭಾವಿತಗೊಳ್ಳುತ್ತದೆ. ವಿಟಮಿನ್‌ ಕೊರತೆಯಿಂದ ಚರ್ಮ ಕೂದಲಿನ ಮೇಲಾಗುವ ಪ್ರಭಾವಗಳ ಬಗ್ಗೆ ತಿಳಿಯೋಣ.

ಚರ್ಮದ ಆರೈಕೆಗೆ ಪೋಷಕಾಂಶಗಳ ಪಾತ್ರ

ವಿಟಮಿನ್‌, B‌, Bಗಳ ಪ್ರಾಮುಖ್ಯತೆ : ಇಡೀ ಮಾನವ ದೇಹ, ಅದರಲ್ಲೂ ವಿಶೇಷವಾಗಿ ಚರ್ಮದ ಪೋಷಣೆಯಲ್ಲಿ ವಿಟಮಿನ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದಾಗಿ ಬೆವರು ಗ್ರಂಥಿಗಳಲ್ಲಿ ಅಡಚಣೆ, ತೈಲಗ್ರಂಥಿಗಳಲ್ಲಿ ಕೊರತೆ,  ಫ್ರೈನೋಡರ್ಮಾ, ಸೋರಿಯಾಸಿಸ್‌, ಚರ್ಮದಲ್ಲಿ ಸುಕ್ಕು ಇತ್ಯಾದಿ ಮಾಮೂಲಿ ಆಗುತ್ತವೆ.

ಸಾಮಾನ್ಯಾಗಿ ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ಈ ಸಮಸ್ಯೆಯನ್ನು ಬೇಗ ಗುರುತಿಸಬಹುದು. ವಿಟಮಿನ್‌ಕೊರತೆಯ ಕಾರಣ ಮೊಣಕೈ, ಮೊಣಕಾಲು, ನಿತಂಬಗಳ ಬಳಿಯ ಚರ್ಮ ಬೇಗ ದಟ್ಟ ಕಪ್ಪು ಬಣ್ಣಕ್ಕೆ ತಿರುಗತ್ತದೆ.

ವಿಟಮಿನ್‌ B ‌ಕೊರತೆಯ ಕಾರಣ ಕುತ್ತಿಗೆಯಂಥ ಸದಾ ತೆರೆದ ಅಂಗಗಳ ಮೇಲೆ ಫೋಟೋ ಸೆನ್ಸಿಟಿವಿಟಿ, ರಾಶೆಸ್‌ ನಂಥ ಸನ್ ಬರ್ನ್ಸ್ ಆಗುತ್ತವೆ. ಇದೇ ತರಹ ಕೈಕಾಲುಗಳಲ್ಲಿ ಒಡೆತ ಮಾಮೂಲಿ ಆಗುತ್ತದೆ. ಇದರಿಂದಾಗಿ ಚರ್ಮ ಬೇಗ ಬೇಗ ಬಿರುಕುಬಿಟ್ಟು, ಒಮ್ಮೊಮ್ಮೆ ರಕ್ತ ಸಹ ಜಿನುಗಬಹುದು. ಹೆಂಗಸರು ಸಾಮಾನ್ಯವಾಗಿ ಇದನ್ನು ನಗಣ್ಯ ಎಂದು ನಿರ್ಲಕ್ಷಿಸುತ್ತಾರೆ, ಮುಂದೆ ಇದು ಗಂಭೀರ ರೋಗ ಆಗಬಹುದು.

ಪ್ರತಿದಿನ ಜೋಳ ಮಾತ್ರ ಸೇವಿಸುವವರನ್ನು ವಿಟಮಿನ್‌ B‌ನ ಕೊರತೆ ಕಾಡುತ್ತದೆ. ಹೆಂಡ ಕುಡಿಯುವವರಿಗೂ ಇದು ತಪ್ಪಿದ್ದಲ್ಲ. ಇದರಿಂದಾಗಿ ಚರ್ಮದಲ್ಲಿ ಹೈಪರ್‌ ಪಿಗ್ಮೆಂಟೇಶನ್‌, ಚರ್ಮದ ಊತ, ಸೋಂಕು, ಡಾರ್ಕ್‌ ಸರ್ಕಲ್ಸ್ ಇತ್ಯಾದಿ ಸಹ ಕಾಡಬಹುದು. ಸಕಾಲಕ್ಕೆ ಇದರ ಚಿಕಿತ್ಸೆ ಪಡೆಯದಿದ್ದರೆ ಮುಂದೆ ಪ್ರಾಣ ಘಾತಕ ಆದೀತು.ಹಾಲು, ಪನೀರ್‌, ಮೊಸರು, ಮೊಟ್ಟೆ, ಬಾಳೇಹಣ್ಣು, ಸ್ಟ್ರಾಬೆರಿ, ಟೂನಾ ಫಿಶ್‌, ಚಿಕನ್‌ ಇತ್ಯಾದಿಗಳಲ್ಲಿ ವಿಟಮಿನ್‌ B ‌ಧಾರಾಳ ತುಂಬಿರುತ್ತದೆ. ಈ ಪದಾರ್ಥಗಳ ಸೇವನೆ ನಿಲ್ಲಿಸಬಾರದು. ದೇಹದಲ್ಲಿ B ಮಟ್ಟ ಹೆಚ್ಚಿಸಲು ನಿಮ್ಮ ಮನೆ ವೈದ್ಯರನ್ನು ಸಂಪರ್ಕಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ