ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ.

ಆಗಸ್ಟ್ 14 ರಂದು ಬಿಡುಗಡೆಯಾದ ಕೂಲಿ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಬಿಡುಗಡೆಯಾದ ಆರಂಭದಲ್ಲಿ 151 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಕೂಲಿ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 504 ಕೋಟಿ ರೂ. ಸಂಗ್ರಹ ಕಂಡಿದೆ. ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿಯೇ 327 ಕೋಟಿ ರೂ. ಗಳಿಸಿದೆ.ಕೂಲಿ ಚಿತ್ರವು ನಟ ರಜನಿಕಾಂತ್ ಅವರ 171ನೇ ಚಿತ್ರವಾಗಿದ್ದು, ಅವರು ಕೂಲಿ ಪಾತ್ರದಲ್ಲಿ ನಟಿಸಿದ್ದಾರೆ. ಬಂದರು ಪಟ್ಟಣದಲ್ಲಿ ತಮ್ಮ ಮಾಜಿ ಸಹೋದ್ಯೋಗಿಗಳು ಎದುರಿಸುವ ಸಂಕಷ್ಟದ ವಿರುದ್ಧ ನಿಲ್ಲುತ್ತಾರೆ.

ನಟರಾದ ಸೌಬಿನ್ ಶಾಹಿರ್, ಉಪೇಂದ್ರ, ಶೃತಿ ಹಾಸನ್, ಸತ್ಯರಾಜ್, ನಾಗಾರ್ಜುನ, ರಚಿತಾ ರಾಮ್ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಸನ್ ಪಿಕ್ಚರ್ಸ್ ಸಹಯೋಗದಲ್ಲಿ ಪೆನ್ ಸ್ಟುಡಿಯೋಸ್ ಈ ಚಿತ್ರವನ್ನು ವಿತರಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ