- ರಾಘವೇಂದ್ರ ಅಡಿಗ ಎಚ್ಚೆನ್
ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಾಳೆ 52ನೇ ವಸಂತಕ್ಕೆ ಕಾಲಿಡುತ್ತಿರುವ ಸುದೀಪ್ ಇಂದು ಮಾಧ್ಯಮಗೋಷ್ಟಿ ನಡೆಸಿ ಬರ್ತ್ಡೇ ಸೆಲೆಬ್ರೇಷನ್, ಸಿನಿಮಾ ಮತ್ತು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದರು.
ಮುಂದಿನ ಸಿನಿಮಾದಲ್ಲಿ ರಾಜನ ಪಾತ್ರ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಕಿಚ್ಚ ಉತ್ತರವಾಗಿ ರಾಜನಾಗಬೇಕಾದರೆ ಕುದುರೆ ಸವಾರಿ ಮಾಡಬೇಕು ಆದರೆ ದರ್ಶನ್ ಒಂದು ದಿನ ಕುದುರೆಯಿಂದ ಬಿದ್ದದನ್ನು ನೋಡಿ ಕುದುರೆ ಸವಾಸವನ್ನೇ ಬಿಟ್ಟೆ-
ನನಗೆ ಕುದುರೆ ಓಡಿಸೋದು ಆಗಲ್ಲ. ಯಾವುದೋ ಒಂದು ಪಾತ್ರ ಸಿಕ್ಕಿತ್ತು. ಆಗ ಪ್ರ್ಯಾಕ್ಟೀಸ್ ಮಾಡುವಾಗ ಅನುಭವ ಆಯಿತು. ಆಗ ಹೇಳಿದರು, ಹೀರೋ ಅಂದರೆ ಫೈಟ್ ಮಾಡೋದು ಕಲಿಯಬೇಕು, ಕುದುರೆ ಓಡಿಸೋದು ಕಲಿಯಬೇಕು ಅಂತಾ ಏನೇನೋ ಹೇಳಿದ್ದರು. ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆ. ಕಲಿತೆ ಕೂಡ. ಒಂದು ವಾರ ಪ್ರ್ಯಾಕ್ಟೀಸ್ ಮಾಡಿದ್ದೆ.
10 ದಿನ ಚೆನ್ನಾಗಿ ಓಡಿಸಿದೆ. ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತಾ ಗೊತ್ತಿಲ್ಲ. ಕುದಿರೆಯಿಂದ ಬಿದ್ದೆ. ಕಾಲು ಸಿಕ್ಕಾಕಿಕೊಂಡಿತ್ತು. ಸುಮಾರು 20 ಮೀಟರ್ ನನ್ನ ಎಳೆದುಕೊಂಡು ಹೋಗಿತ್ತು. ಆಗ ಆಗಿರುವ ಭಯ ಇದೆಯಲ್ಲ. ಆಗಲೇ ಪ್ರಪಂಚ ಏನು ಅಂತಾ ಗೊತ್ತಾಯ್ತು. ಏನೇ ಹತ್ತಿದ್ದರೂ ಅದರ ಹ್ಯಾಂಡಲ್ ಮತ್ತು ಬ್ರೇಕ್ ಎಲ್ಲಿದೆ ಅಂತಾ ಗೊತ್ತಿರಬೇಕು. ಕುದುರೆಗೆ ಬ್ರೇಕ್ ಎಲ್ಲಿದೆ ಅಂತಾ ಗೊತ್ತಿರಲಿಲ್ಲ. ಇದೆಲ್ಲದರ ಹೊರತುಪಡಿಸಿ ಇನ್ನೊಂದು ದಿನ ನಾವು ದರ್ಶನ್ ತೋಟಕ್ಕೆ ಹೋಗಿದ್ವಿ.
ಅಲ್ಲಿಗೆ ಹೋದಾಗ ಹತ್ತು ಹತ್ತು ಅಂತಾ ತುಂಬಾ ಫೋರ್ಸ್ ಮಾಡಿದ. ನೀನು ತಿಪ್ಪರಲಾಗ ಹೊಡೆದರೂ, ನೀನು ಬೇಡ, ನಿನ್ನ ಕುದುರೆ ಸವಾಸವೂ ಬೇಡ ಅಂತಾ ಹೇಳಿದ್ದೆ. ಆದರೂ ಕುದುರೆ ಹತ್ತಿಸಿದ್ದರು. ಆಗ ಹಿಡಿದುಕೊಂಡು ಇದ್ದರು. ಕುದುರೆ ಹಾಗೆಯೇ ಜೋರಾಗಿ ಹೋಗುತ್ತಿತ್ತು. ಹೋಗ್ತ ಹೋಗ್ತ ಆತ ಬಿದ್ದ. ಅದನ್ನು ನೋಡಿ ನಿಲ್ಲಿಸಿ ಎಂದು ಹೇಳಿದೆ. ಅವತ್ತು ಇಳಿದವನು ಇನ್ನೂ ಕುದುರೆ ಹತ್ತಿಲ್ಲ.
ಪೌರಾಣಿಕ ಸಿನಿಮಾ ಮಾಡಿದರೆ ನಮ್ಮನ್ನು ಮೊದಲು ಯುದ್ಧಕ್ಕೆ ಬಿಡ್ತೀರಿ. ಆಗ ಕುದುರೆ ಮೇಲೆ ಬರಬೇಕು. ಆದಲ್ಲ ಯಾಕೆ ಬೇಕು, ಈಗ ಮಾಡ್ತಿರೋ ಸಿನಿಮಾ ಮಾಡಿದ್ರೆ ಬೈಕಲ್ಲೋ, ಕಾರಲ್ಲೂ ಬರ್ತೀವಿ. ಬೇಗ ಮುಗಿಸಿ ಮನೆಗೆ ಹೋಗಬಹುದು. ಜೊತೆಗೆ ಸಿನಿಮಾ ಕೂಡ ಬೇಗ ರಿಲೀಸ್ ಆಗಲಿದೆ ಎಂದರು. .
ಇದೆಲ್ಲವೂ ಸಾಧು ಕೋಕಿಲಾ ಅವರ ಕಿತಾಪತಿ
ಇದೇ ವೇಳೆ ಡಿಸಿಎಂ ಡಿಕೆಶಿ ನಟ್ಟು-ಬೋಲ್ಟ್ ವಿಚಾರ ಸಂಬಂಧ ಸುದೀಪ್ ಮಾತನಾಡಿ, ನಟ್ಟು ಬೋಲ್ಟ್ ವಿಚಾರದಲ್ಲಿ ಡಿಕೆಶಿ ಸಾಹೇಬ್ರುದು ಏನೂ ಇಲ್ಲ. ಈ ಎಲ್ಲಾ ಕಿತಾಪತಿ ಸಾಧುಕೋಕಿಲ ಅವರದ್ದು, ಸಾಧುದು ಪಾಪ ತಪ್ಪಿಲ್ಲ. ಸಾಧುಕೋಕಿಲ ಅವರು ಯಾವಾಗಲೂ ಕಾಮಿಡಿ ಮಾಡ್ತಾನೆ ಇರ್ತಾರೆ, ಅದ್ರೆ ಆ ವಿಚಾರ ಸೀರಿಯಸ್ ಆಗಿ ಹೋಗಿದೆ ಅಷ್ಟೇ ಎಂದಿದ್ದಾರೆ.
ಯಾರ್ಯಾರನ್ನು ವೈಯುಕ್ತಿಕವಾಗಿ ಕರೆದಿದ್ದಾರೋ ಅವರೆಲ್ಲಾ ಹೋಗಿದ್ದಾರೆ, ಕರೆಯದಿದ್ದರೇ ಯಾರು ತಾನೇ ಹೋಗುತ್ತಾರೆ. ದರ್ಶನ್ ಅಭಿನಯದ ʼಡೆವಿಲ್ʼ ಚಿತ್ರಕ್ಕೆ ಒಳ್ಳೆಯದಾಗಲಿ, ಎಲ್ಲ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣಬೇಕು ಎನ್ನುವುದೇ ಆಶಯ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮಾತನಾಡಲು ನನಗೆ ಆಸಕ್ತಿ ಇಲ್ಲ. ದರ್ಶನ್ ನೋವು ಅವರಿಗಿರುತ್ತದೆ. ಅವರ ಅಭಿಮಾನಿಗಳು ನೋವಿನಲ್ಲಿದ್ದಾರೆ, ದರ್ಶನ್ ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಈ ಸಮಯದಲ್ಲಿ ನಾವು ಮಾತನಾಡಿದರೆ ತಪ್ಪಾಗುತ್ತದೆ, ಮಾತನಾಡಬಾರದು. ಕಾನೂನು ಏನು ಮಾಡಬೇಕೊ ಅದು ಮಾಡುತ್ತೆ, ತಪ್ಪು ಸರಿ ನಿರ್ಧಾರವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.
ವಿಷ್ಣುವರ್ಧನ್ ಸ್ಮಾರಕ: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಮಾತನಾಡಿದ ಸುದೀಪ್, ''ನಾವು ಈಗಾಗ್ಲೇ ಜಾಗ ತೆಗೆದುಕೊಂಡಿದ್ದೀವಿ. ನಾಳೆ ನನ್ನ ಹುಟ್ಟುಹಬ್ಬದ ಪ್ರಯುಕ್ತ ಈ ಸಂಬಂಧ ಒಂದು ಸಣ್ಣ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಜಾಗ ಎಲ್ಲಿ ಅನ್ನೋದು ಗೊತ್ತಾಗಲಿದೆ. ವಿಷ್ಣು ಸ್ಮಾರಕದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಕಾನೂನು ಹೋರಾಟ ಕೂಡಾ ಇದೆ. ಅದರ ಪಾಡಿಗೆ ಅದು ನಡೆಯಲಿ. ನಮ್ಮ ಪಾಡಿಗೆ ನಾವು ನಮ್ಮ ಕೆಲಸ ಮಾಡುತ್ತೇವೆ'' ಎಂದು ತಿಳಿಸಿದರು.