- ರಾಘವೇಂದ್ರ ಅಡಿಗ ಎಚ್ಚೆನ್.
ಕಿಚ್ಚ ಸುದೀಪ್ ಮುಂದಿನ ಚಿತ್ರಕ್ಕೆ 'ಮಾರ್ಕ್' ಎಂದು ಶೀರ್ಷಿಕೆ ಇಡಲಾಗಿದೆ. ಸುದೀಪ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟೀಸರ್ನೊಂದಿಗೆ ಚಿತ್ರ ತಂಡದಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ.
ಕಿಚ್ಚ ಸುದೀಪ್ ನಟನೆಯ ‘K 47’ ಸಿನಿಮಾದ ಶೂಟ್ ಜುಲೈನಲ್ಲಿ ಆರಂಭ ಆಗಿದೆ. ಈ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಕೇವಲ ಆರು ತಿಂಗಳಲ್ಲಿ ಸಿನಿಮಾ ಕೆಲಸ ಮುಗಿಸಿ ಜನರ ಎದುರು ತಂದಿಡೋ ಪ್ಲ್ಯಾನ್ ಇದೆ ಎಂದು ಸುದೀಪ್ ಅವರು ಸಿನಿಮಾ ಘೋಷಿಸೋ ಸಮಯದಲ್ಲಿ ಹೇಳಿದ್ದರು. ಈಗಲೂ ತಮ್ಮ ಮಾತಿಗೆ ಬದ್ಧರಾಗಿರೋದಾಗಿ ಅವರು ಹೇಳಿದ್ದಾರೆ. ಹಾಗಾದಲ್ಲಿ, ‘ಡೆವಿಲ್’ ಹಾಗೂ ‘45’ ಚಿತ್ರದ ಜೊತೆ ಈ ಸಿನಿಮಾ ಕ್ಲ್ಯಾಶ್ ಆಗಲಿದೆ.
‘ಡೆವಿಲ್’ ಹಾಗೂ ‘45’ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಇದು ಸೆಲೆಬ್ರೇಷನ್ನೋ ಅಥವಾ ಕಾಂಪಿಟೇಷನ್ನೋ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನೀವು ಇದನ್ನು ಕಾಂಪಿಟೇಷನ್ ಎಂದಾದರೂ ತೆಗೆದುಕೊಳ್ಳಬಹುದು, ಸೆಲೆಬ್ರೇಷನ್ ಎಂದಾದರೂ ತೆಗೆದುಕೊಳ್ಳಬಹುದು. ನಾವು ಸಿನಿಮಾ ಮಾತ್ರ ಮಾಡುತ್ತಿದ್ದೇವೆ. ನನ್ನ ನಿರ್ಮಾಪಕರಿಗೆ, ನನ್ನ ಥಿಯೇಟರ್ಗೆ, ನನ್ನ ಅಭಿಮಾನಿಗಳಿಗಾಗಿ ಸಿನಿಮಾ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು
‘ನಾನು ಜುಲೈ 5ರಂದೇ ನನ್ನ ಸಿನಿಮಾ ರಿಲೀಸ್ ಘೋಷಣೆ ಮಾಡಿದ್ದೆ. ಹೀಗಿರುವಾಗ, ಆ ಸಮಯದಲ್ಲಿ ಯಾವೆಲ್ಲ ಸಿನಿಮಾಗಳು ಘೋಷಣೆ ಆಗಿದ್ದವು ಎಂಬುದನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ನಾನು ಆ ಬಗ್ಗೆ ಹೆಚ್ಚು ಯೋಚಿಸಲ್ಲ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಆ ಸಮಯಕ್ಕೆ ಸಿನಿಮಾ ರಿಲೀಸ್ ಮಾಡೋದು ಖಚಿತ ಎಂದಿದ್ದಾರೆ.
ರಾಜಕೀಯದ ಎಂಟ್ರಿ ಯಾವಾಗ
ರಾಜಕೀಯಕ್ಕೆ ಬರೋದು ಯಾವಾಗ ಎಂದು ಕೇಳಿದ್ದಕ್ಕೆ, ‘ಗೊತ್ತಿಲ್ಲ.. ಸದ್ಯಕ್ಕೆ ಆ ಯೋಚನೆ ಇಲ್ಲ. ಆದರೆ ಆಗಾಗ ಯೋಚನೆ ಬರುವ ಹಾಗೆ ಮಾಡುತ್ತಿರುತ್ತಾರೆ ಕೆಲವರು’ ಎಂದಿದ್ದಾರೆ ಸುದೀಪ್. . ‘ಅಮ್ಮನ ಹೆಜ್ಜೆ ಹಸಿರು ಹೆಜ್ಜೆ’ ಎಂದು ಸುದೀಪ್ ಅವರು ಪರಿಸರ ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ‘ಕಲಾವಿದನಾಗಿ ಸದ್ಯಕ್ಕೆ ಇಷ್ಟು ಮಾಡಬಲ್ಲೆ. ರಾಜಕೀಯಕ್ಕೆ ಎಂಟ್ರಿ ಆದಾಗ ಬೇರೆ ಎಲ್ಲ ಮಾಡೋಣ’ ಎಂದು ಸುದೀಪ್ ಹೇಳಿದ್ದಾರೆ.
ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾಡ್ತಾರಾ
ಸು ಫ್ರಮ್ ಸೋ ಸಿನಿಮಾದ ಗೆಲುವು ತುಂಬ ಬ್ಯೂಟಿಫುಲ್ ಆಗಿದೆ. ನಮ್ಮ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಾ ಇರಬೇಕು. ಆವಾಗಲೇ ಒಳ್ಳೆಯದಾಗೋದು. ಇಲ್ಲಿ ಕಲಾವಿದರಿಲ್ಲ, ಸಿನಿಮಾ ಮಾಡೋಕೆ ಬರಲ್ಲ, ಸಿನಿಮಾ ಓಡುತ್ತಿಲ್ಲ ಅಂತ ಹೇಳುವವರಿಗೆಲ್ಲ ಒಂದು ಪಾಠ ಇದು. ಚಿತ್ರರಂಗದಲ್ಲಿ ಕಲಾವಿದರು ಇಲ್ಲವಾ? ಈಗ ಯಾರಿದ್ದಾರೆ ಎಂದು ಕೆಲವರು ಸಂದರ್ಶನದಲ್ಲಿ ಹೇಳುತ್ತಾರೆ. ಏನು ಮಾಡುತ್ತಿದ್ದೀರಿ? ರಿಷಬ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ, ದುನಿಯಾ ವಿಜಿ, ಶಿವಣ್ಣ, ಉಪೇಂದ್ರ, ರಕ್ಷಿತ್ ಶೆಟ್ಟಿ ಇವರೆಲ್ಲ ಹೀರೋಗಳಲ್ಲವಾ?’ ಎಂದಿದ್ದಾರೆ ಸುದೀಪ್.
‘ಈಗ ಸು ಫ್ರಮ್ ಸೋ ಸಿನಿಮಾದಲ್ಲಿ ಇರುವವರು ಯಾರು ಎಂಬುದೇ ಗೊತ್ತಿಲ್ಲ. ಇಷ್ಟೆಲ್ಲ ಕಲಾವಿದರು ಇರುವಂತಹ ಚಿತ್ರರಂಗ ನಮ್ಮದು. ಹಾಗಾಗಿ ಮಾತಿನ ಬಗ್ಗೆ ಕೆಲವರು ಹುಷಾರಾಗಿ ಇರಬೇಕು. ಮಾತಾಡೋಕೆ ಬರುತ್ತೆ ಅಂತ ಯಾರಿಗೋ ನೋವು ಮಾಡೋದಲ್ಲ. ಯಶ್ ಎಂತೆಂಥ ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗ ಚಿತ್ರರಂಗ ಮುಚ್ಚಿಹೋಗುತ್ತೆ ಎನ್ನುವ ಸಮಯದಲ್ಲಿ ಸು ಫ್ರಮ್ ಸೋ ರೀತಿಯ ಸಿನಿಮಾ ಸಕ್ಸಸ್ ಆದಾಗ ಹೊಸಬರಿಗೆ ಧೈರ್ಯ ಬಂದಿದೆ. ಈ ರೀತಿಯ ಭರವಸೆ ನಮಗೆ ಬೇಕು’ ಎಂದು ಸುದೀಪ್ ಅವರು ಹೇಳಿದ್ದಾರೆ.
ಸು ಫ್ರಮ್ ಸೋ ಸಿನಿಮಾದ ನಿರ್ದೇಶಕರು ಹಲವು ವರ್ಷಗಳ ಹಿಂದೆಯೇ ನನ್ನನ್ನು ಭೇಟಿ ಆಗಿದ್ದರು. ಒಂದು ತುಳು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಿದ್ದರು. ನಾನು ಹೋಗಿದ್ದೆ, ತುಂಬ ಜನ ಇದ್ದರು. ಅದನ್ನು ಅವರು ಈಗ ನೆನಪಿಸಿದರು. ಹೀಗೆ ನೀವು ಯಾರಿಗಾದರೂ ಒಳ್ಳೆಯದು ಮಾಡಿದರೆ ಅದು ವಾಪಸ್ ಬರುತ್ತದೆ. ಈಗ ಅವರು ತುಂಬಾ ಒಳ್ಳೆಯ ಸಿನಿಮಾ ಮಾಡಿದ್ದಾರೆ.’ ಎಂದರು ಸುದೀಪ್.
ಕಿಚ್ಚನಿಂದ ಡೈರೆಕ್ಷನ್ ಕನ್ಫಮ್
ನನಗೆ ತುಂಬಾ ಇಷ್ಟವಾದ ಕಥೆ ನನ್ನ ಬಳಿ ಇದೆ..! ಸಧ್ಯದಲ್ಲೇ ಆ ಸಿನಿಮಾಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ಅಕ್ಷನ್ ಕಟ್ ಹೇಳ್ತಿನಿ ಎಂದ ಸುದೀಪ್