ಶರತ್ ಚಂದ್ರ
ಸೆಪ್ಟೆಂಬರ್ 2 ತಾರೀಕು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮಹತ್ವದ ದಿನ.ಅಭಿಮಾನಿಗಳು ಪ್ರತೀ ವರ್ಷ ತಮ್ಮ ನೆಚ್ಚಿನ ನಟನ ಬರ್ತ್ಡೇ ಅದ್ದೂರಿ ಯಾಗಿ ಆಚರಿಸಿ ಕೊಂಡು ಬಂದಿದಾರೆ ಕಳೆದ ವರ್ಷ ಬರ್ತ್ಡೇ ದಿನ ಸುದೀಪ್ ಜಯನಗರದ ಗ್ರೌಂಡ್ ನಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದರು. ಈ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಸುದೀಪ್ ಬರ್ತ್ಡೇ ನಡೆಯಲಿದೆ.
ಕೆಲವು ದಿನಗಳ ಹಿಂದೆ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಈ ಬಾರಿ ಬರ್ತ್ಡೇ ದಿನ ಯಾರು ಮನೆಯ ಬಳಿ ಬರಬೇಡಿ ಬರ್ತ್ಡೇ ಮುಂಚಿನ ದಿನ ರಾತ್ರಿ ಒಂದು ಕಡೆ ಎಲ್ಲಾ ಸೇರೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಅಂದ ಹಾಗೆ ರಾಜ್ಯದ ಎಲ್ಲ ಮೂಲೆಗಳಿಂದ ಕಿಚ್ಚ ನ ಬರ್ತ್ಡೇಗೆ ಸಾಕ್ಷಿಯಾಗಲು ಅಭಿಮಾನಿಗಳು ಹರಿದು ಬರುವುದರಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಸೆಪ್ಟೆಂಬರ್ 1ನೇ ತಾರೀಕು ಸಾಯಂಕಾಲದಿಂದಲೇ ಸೆಲೆಬ್ರೇಶನ್ ಶುರುವಾಗಲಿದೆ
ಇಂದು ಸಾಯಂಕಾಲ ನಡೆಯುವ ಈ ಸಮಾರಂಭ ದಲ್ಲಿ ಅಭಿಮಾನಿಗಳಿಗೆ ಒಂದಷ್ಟು ಮಹತ್ವದ ಅಪ್ಡೇಟ್ ಗಳು ಸಿಗಲಿವೆ.
ನಿನ್ನೆ ಮೈಸೂರಿನಲ್ಲಿ ನಡೆದ ಸಂದೇಶ್ ನಾಗರಾಜ್ ಅವರ 80ನೇ ಜನ್ಮ ದಿನಾಚರಣೆಯ ವೇದಿಕೆಯಲ್ಲಿ ಬಿಗ್ ಬಾಸ್ 12 ನೇ ಸೀಸನ್ ಇದೇ ತಿಂಗಳ 28 ನೇ ತಾರೀಖಿನಿಂದ ಪ್ರಸಾರವಾಗುವ ಕುರಿತು ಅನೌನ್ಸ್ ಮಾಡಿದ್ದರು.
ಮ್ಯಾಕ್ಸ್ ಚಿತ್ರ ನಿರ್ದೇಶಕ ವಿಜಯ್ ನಿರ್ದೇಶನದ 'ಕಿಚ್ಚ 47' ಚಿತ್ರದ ಟೈಟಲ್ ಕೂಡ ಇವತ್ತು ಅನಾವರಣವಾಗಲಿದೆ. ಚಿತ್ರದ ಹೆಸರು 'ಮಾರ್ಕ್ ' ಅಂತ ಇರಲಿದೆ ಎಂದು ಈಗಾಗಲೇ ಎಲ್ಲಾ ಕಡೆ ಸುದ್ದಿ ಇದೆ.
ಬಿಲ್ಲ ರಂಗ ಭಾಷಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ನಾಳೆ ಬೆಳಿಗ್ಗೆ ಅನಾವರಣಗೊಳ್ಳಲಿದೆ.ಈ ಕಾರ್ಯಕ್ರಮ ದಲ್ಲಿ ಚಿತ್ರ ತಂಡ, ಸುದೀಪ್ ಕುಟುಂಬ ಹಾಗೂ ಚಿತ್ರರಂಗದ ಒಂದಷ್ಟು ಆತ್ಮೀಯರು ಭಾಗವಹಿಸುವ ಸಾಧ್ಯತೆ ಇದೆ.
ಅಂದ ಹಾಗೆ ಸುದೀಪ್ ಅವರ ಬರ್ತ್ಡೇ ಕಾಮನ್ ಡಿಪಿ ನಿನ್ನೆ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಕಾಮನ್ ಡಿಪಿ ಹಾಕಿ ಬರ್ತ್ಡೇ ಸೆಲೆಬ್ರೇಶನ್ ಗೆ ರೆಡಿ ಯಾಗಿದ್ದಾರೆ.
ಪ್ರತೀ ವರ್ಷ ಸುದೀಪ್ ಅಮ್ಮ ಸರೋಜ ಅವರ ಬರ್ತ್ಡೇ ಆಗಸ್ಟ್ 30ರಂದು ಬರುತ್ತಿತ್ತು.ಪ್ರತೀ ವರ್ಷ ಅಮ್ಮ ನ ಜನ್ಮ ದಿನ ಆಚರಿಸಿದ ನಂತರ ಬರುತ್ತಿದ್ದ ತನ್ನ ಬರ್ತ್ಡೇ ಸುದೀಪ್ ಅಮ್ಮನ ಜೊತೆ ಆಚರಿಸುತ್ತಿದ್ರು. ಆದರೆ ಈ ವರ್ಷ ಅಮ್ಮನ ಬರ್ತ್ಡೇ ದಿನ ಪಾರ್ಕ್ ನಲ್ಲಿ ಗಿಡ ನೆಡುವುದರ ಮೂಲಕ ತಾಯಿಯ ಅರ್ಥಪೂರ್ಣ ಜನುಮದಿನ ಆಚರಿಸಿದ್ದಾರೆ.
ಇತ್ತೀಚಿನ ಹೆಚ್ಚಿನ ಸ್ಟಾರ್ ನಟರು ಶೂಟಿಂಗ್ ನೆಪದಲ್ಲಿ ತಮ್ಮ ಬರ್ತ್ಡೇ ಸೆಲೆಬ್ರೇಶನ್ ಮಾಡುತ್ತಿಲ್ಲ. ಆದರೆ ಕಿಚ್ಚ ಸುದೀಪ್ ಅಮ್ಮ ಅಗಲಿ ಒಂದು ವರ್ಷ ಆಗಿರುವ ನೋವಿನ ನಡುವೆ ಕೂಡ ಫ್ಯಾನ್ಸ್ ಗಳಿಗೆ ನಿರಾಸೆಯಾಗಬಾರದು ಎನ್ನುವ ಉದ್ದೇಶದಿಂದ ದೊಡ್ಡ ಮಟ್ಟದ ಬರ್ತ್ಡೇ ಸೆಲೆಬ್ರೇಶನ್ ಗೆ ರೆಡಿಯಾಗುತ್ತಿದ್ದಾರೆ. .