ಮದುವೆಯ ಶಾಪಿಂಗ್ಗಾಗಿ ಜೊತೆಗೆ ಯಾರನ್ನೂ ಕರೆದೊಯ್ಯಬೇಕು ಎಂಬುದನ್ನು ನವ ವಧು ಖಂಡಿತಾ ಅರಿತಿರಬೇಕು.....

ತನ್ನ ಮದುವೆ ಪಕ್ಕಾ ಆದ ನಂತರ ಕಾವೇರಿ ಬಹಳ ಎಗ್ಸೈಟೆಡ್‌ ಆಗಿದ್ದಳು. ಈ ದಿನಕ್ಕಾಗಿ ಅವಳು ಬಹಳಷ್ಟು ಕನಸು ಕಂಡಿದ್ದಳು. ಇದು ತನ್ನ ಜೀವನಪರ್ಯಂತ ನೆನಪಿಡಬೇಕಾದ ದಿನ, ಹೀಗಾಗಿ ತಾನು ಪರ್ಫೆಕ್ಟ್ ನವ ವಧುವಾಗಿ ಸಿದ್ಧಳಾಗಬೇಕೆಂದು ನಾನಾ ತಯಾರಿ ನಡೆಸಿದ್ದಳು.

ಇವಳು ಆ ಮನೆಯ ಕೊನೆ ಮಗಳು. ಇವಳ ತಾಯಿ ತಂದೆ ಮಾತ್ರವಲ್ಲದೆ, ಒಡಹುಟ್ಟಿದವರೂ ಸಹ ಎಲ್ಲಾ ಸೇರಿ, ಮದುವೆಗಾಗಿ ಧಾರಾಳ ಖರ್ಚು ಮಾಡಲು ಸಿದ್ಧರಿದ್ದರು. ಆರ್ಥಿಕವಾಗಿ ಅನುಕೂಲಸ್ಥರೇ ಆದ್ದರಿಂದ ಮದುವೆ ಖರ್ಚು ಟೆನ್ಶನ್‌ ವಿಷಯ ಆಗಿರಲಿಲ್ಲ. ಹೀಗಾಗಿ ಇವಳ ಮದುವೆಯ ಶಾಪಿಂಗ್‌ ಲಿಸ್ಟ್ ಬಹಳ ಉದ್ದ ಇತ್ತು.

ತನ್ನ ಗೆಳತಿಯರು, ಅಕ್ಕಂದಿರ ಮದುವೆಗಳಲ್ಲಿ ಕಾವೇರಿ ಗಮನಿಸಿದಂತೆ ಬಟ್ಟೆಬರೆ, ಡ್ರೆಸ್‌, ಜವಳಿ, ಒಡವೆ, ಮೇಕಪ್‌, ಅಲಂಕಾರ, ಸಂಗೀತ, ಶೋಆಫ್‌ ಇತ್ಯಾದಿ ಭರ್ಜರಿಯಾಗಿರುತ್ತಿತ್ತು. ತನ್ನ ಮದುವೆ ಇವೆಲ್ಲದಕ್ಕಿಂತ ಭಿನ್ನವಾಗಿ, ಗ್ರಾಂಡಾಗಿ ನಡೆಯಬೇಕೆಂದು ಬಯಸಿದಳು. ಹೀಗಾಗಿ ತನ್ನ ವೆಡ್ಡಿಂಗ್‌ ಶಾಪಿಂಗ್‌ ಗಾಗಿ, ತನ್ನ ಸ್ವಭಾವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ತನಗೆ ಹೊಂದಿಕೊಳ್ಳುವಂಥ ಗೆಳತಿಯರ ಜೊತೆಯೇ ಶಾಪಿಂಗ್‌ ಮಾಡಬೇಕೆಂದು ನಿರ್ಧರಿಸಿದಳು. ತನ್ನ ಮದುವೆಯ ಧಾರೆ ಸೀರೆಯಿಂದ ಹಿಡಿದು, ಮೆಹೆಂದಿ ಮೇಕಪ್‌ ಆರ್ಟಿಸ್ಟ್ ವರೆಗೂ ಎಲ್ಲ ಯೂನಿಕ್‌ ಆಗಿರಬೇಕೆಂದು ಬಯಸಿದಳು.

ಇದಕ್ಕಾಗಿ ಇವಳನ್ನು ಆಳವಾಗಿ ಬಲ್ಲಂಥ, ಟ್ರೆಡಿಶನ್‌ ಜೊತೆ ಲೇಟೆಸ್ಟ್ ಫ್ಯಾಷನ್‌ ಕುರಿತು ಅರಿವಿದ್ದಂಥ ವ್ಯಕ್ತಿಯೇ ಇವಳಿಗೆ ಜೊತೆಗಿರಬೇಕಿತ್ತು. ಸೀರೆ, ಲೆಹಂಗಾ, ಭಾರೀ ಡಿಸೈನ್‌ ಕಸೂತಿಯ ಸಲ್ವಾರ್‌ ಸೂಟ್‌, ವೆಸ್ಟರ್ನ್‌ ಡ್ರೆಸ್‌ ಇತ್ಯಾದಿ ಎಲ್ಲವೂ ಲೇಟೆಸ್ಟೇ ಆಗಬೇಕಿತ್ತು. ಇಂಥವನ್ನು ಅವಳು ಹನೀಮೂನ್‌ ನಲ್ಲಿ  ಧರಿಸ ಬಯಸಿದ್ದಳು. ಫ್ರೆಂಡ್ಸ್ ಪಾರ್ಟಿ, ಬ್ಯಾಚ್‌ ಲೋರೆಟ್ ಪಾರ್ಟಿಗಳಲ್ಲಿ ಸಖತ್‌ ಮಿಂಚಲು ಬಯಸಿದ್ದಳು. ಎಲ್ಲಾ ಪಾರ್ಟಿಗಳಿಗೂ ಭಾರಿ ಸೀರೆ ಅಥವಾ ಡ್ರೆಸ್‌ ಅಂತೂ ಧರಿಸುವಂತಿರಲಿಲ್ಲ.

ಶಾಪಿಂಗ್ನಲ್ಲಿ ಅಗತ್ಯದ ನೆರವು

ಇಷ್ಟು ಮಾತ್ರವಲ್ಲ.... ತನ್ನ ಡ್ರೆಸ್‌ ಗೆ ಹೊಂದು ಒಡವೆ, ಆ್ಯಕ್ಸೆಸರೀಸ್‌, ಸ್ಯಾಂಡಲ್ಸ್ ಇತ್ಯಾದಿಗಳನ್ನು ಆರಿಸಬೇಕಿತ್ತು. ಲೇಟೆಸ್ಟ್ ಡಿಸೈನಿನ ಇನ್ನರ್‌ ವೇರ್‌, ನೈಟಿ, ಬಳೆ, ಕಾಸ್ಮೆಟಿಕ್ಸ್ ಇತ್ಯಾದಿಗಳ ಪಟ್ಟಿ ಮತ್ತಷ್ಟಿತ್ತು. ಇದೆಲ್ಲವನ್ನೂ  ಮನೆಯ ಹಿರಿ ಹೆಂಗಸರ ಬದಲಾಗಿ ತನ್ನ ಸಮವಯಸ್ಕ ಗೆಳತಿಯರೊಂದಿಗೆ ಮಾಡಬಯಸಿದಳು.

ತನ್ನ ಲಿಸ್ಟ್ ಪ್ರಕಾರ, ಐಟಂ ಅನುಸರಿಸಿ ಅದನ್ನು 3 ವಿಭಾಗ ಮಾಡಿಕೊಂಡಳು. ಮದುವೆಯ ಮುಖ್ಯ ಜವಳಿ, ಲಾಂಜರಿ, ಡ್ರೆಸ್‌, ನೈಟಿ, ಫುಟ್‌ ವೇರ್‌, ಬ್ಯಾಗ್‌, ಕಾಸ್ಮೆಟಿಕ್ಸ್ ಇತ್ಯಾದಿಗಳ ಖರೀದಿಗಾಗಿ ತನ್ನ ಇಬ್ಬರು ಆಪ್ತ ಗೆಳತಿಯರನ್ನು ಆರಿಸಿಕೊಂಡಳು.

ಒಂದು ವಸ್ತು ಕೊಳ್ಳಲು ಹಲವು ಅಂಗಡಿ ಮೆಟ್ಟಿಲು ಹತ್ತಿಳಿಯುವುದೇ ಅವಳ ಅಭ್ಯಾಸ. ಒಂದೇ ಕಡೆ ಅವಳಿಗೆ ಬೇಕಾದ ಯಾವ ವಸ್ತು ಇಷ್ಟ ಆಗುತ್ತಿರಲಿಲ್ಲ. ರತ್ನಾ, ಸ್ನೇಹಾ ಮೊದಲಿನಿಂದಲೂ ಇವಳ ಕ್ಲೋಸ್‌ ಫ್ರೆಂಡ್ಸ್. ಇವರೆಲ್ಲ ಕೂಡಿ 1-1 ಐಟಂಗಾಗಿ ಹಲವು ಕಡೆ ಸುತ್ತಾಡುತ್ತಿದ್ದರು. ಅಂಗಡಿಯವನ ಜೊತೆ ಸಾಕು ಸಾಕೆನಿಸುವಷ್ಟು ಚೌಕಾಸಿ ಮಾಡುತ್ತಿದ್ದರು. ಈ ಮೂವರೂ ಪರಸ್ಪರರನ್ನು ಬಿಟ್ಟು ಶಾಪಿಂಗ್‌ ಮಾಡುತ್ತಿರಲಿಲ್ಲ. ಈ ಮೂವರ ಅಂಡರ್‌ ಸ್ಟಾಂಡಿಂಗ್‌ ಚೆನ್ನಾಗಿತ್ತು. ಬೆಳಗ್ಗೆ ಶುರು ಮಾಡಿದ ಶಾಪಿಂಗ್‌, ಸಂಜೆ 8 ಗಂಟೆಗೇ ಮುಗಿಯುತ್ತಿತ್ತು. ಹೀಗಾಗಿ ಅವರನ್ನು ಮದುವೆ ಶಾಪಿಂಗ್‌ ಗೆ ಹೊರಡಿಸಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ