ದೇಶಾದ್ಯಂತ ತಮ್ಮ ಅನುಪಮ ಕರಕುಶಲ ಕಲೆಯಿಂದ ಜನರ ಮನ ಗೆದ್ದಿರುವ, ರೇಶ್ಮೆ ಸೀರೆಯ ನೇಕಾರರಿಗೆ, ಅವರನ್ನು ಆದರಿಸುವ, ಅವರ ಶ್ರಮಕ್ಕೆ ಸೂಕ್ತ ಬೆಲೆ ಕಟ್ಟುವ ಗ್ರಾಹಕರ ಅಗತ್ಯ ಖಂಡಿತಾ ಇದೆ.....!

ಫ್ಯಾಷನ್‌ ಲೋಕ ದಿನೇ ದಿನೇ ಬದಲಾಗುತ್ತಿರುತ್ತದೆ. ಇದಕ್ಕೆ ಆಕಾರ ನೀಡುವವರೇ ಡಿಸೈನರ್ಸ್‌! ಇದರ ಲಾಭ ಸಲ್ಲಬೇಕಾದುದು ಅದನ್ನು ರೂಪಿಸುವ ಸಣ್ಣಪುಟ್ಟ ನೇಕಾರರಿಗೆ. ಮೈಸೂರು, ಕೊಳ್ಳೇಗಾಲ, ಕಾಂಜೀವರಂ, ಧರ್ಮಾವರಂ, ವೆಂಕಟಗಿರಿ, ಗುಜರಾತ್‌, ಬಂಗಾಳ, ಅಸ್ಸಾಂ ಇತ್ಯಾದಿ ಎಲ್ಲಾ ಬಗೆಯ ನೇಯ್ಗೆ ಉದ್ಯಮದ ಅದ್ಭುತ ಕರಕುಶಲ ಕಲೆಯನ್ನು ನೋಡಿಯೇ ತಣಿಯಬೇಕು. ಇದರಲ್ಲಿ ಖಾದಿ ಸಿಲ್ಕ್‌, ರಾ ಸಿಲ್ಕ್, ಕಾಟನ್‌ ಇತ್ಯಾದಿ ಬೇಸಿಗೆಗೆ ಪೂರಕವಾದ ಉಡುಗೆಗಳೂ ಇರುತ್ತವೆ. ಇಂಥ ಎಥ್ನಿಕ್ ಉಡುಗೆಗಳು ಇಂದಿನ ಆಧುನಿಕ ಕಾಲದವರು ಒಪ್ಪುವಂತೆ ಜನಪ್ರಿಯ ಗಾರ್ಜಿಯಸ್‌ ಲುಕ್ಸ್ ನೀಡುತ್ತಿವೆ.

ಸ್ಥಾನೀಯ ಬಳಕೆಗೆ ತಕ್ಕಂತೆ ರೂಪಿತ ಈ ವಸ್ತ್ರಗಳು ಹೆಚ್ಚು ಆರಾಮದಾಯಕ. ಇಂಥ ರೇಶ್ಮೆ ಸೀರೆಗಳು ಎಲ್ಲಾ ಶುಭ ಸಮಾರಂಭ, ದೀಪಾವಳಿಯಂಥ ದೊಡ್ಡ ಹಬ್ಬಗಳಿಗೆ ಅತ್ಯಗತ್ಯ. ಇಂದಿನ ಆಧುನಿಕ ತರುಣಿಯರು ಇಂಥ ಸಾಂಪ್ರದಾಯಿಕ ಸೀರೆಗಳ ಜೊತೆ ಮಾಡರ್ನ್‌ ಲುಕ್ಸ್ ಗೇ ಅಧಿಕ ಮಾನ್ಯತೆ ನೀಡುತ್ತಾರೆ. ವಸ್ತ್ರಗಳ ಏಸ್ಥೆಟಿಕ್‌ ವ್ಯಾಲ್ಯೂ ಗಮನಿಸುತ್ತಾ, ತಮ್ಮ ಕಂಫರ್ಟ್‌ ಗೂ ಆದ್ಯತೆ ನೀಡುತ್ತಾರೆ. ಗುಜರಾತ್‌ ನ ಕಚ್‌ ನ ಶಿಲ್ಪಕಲೆ ಮೇರು ಮಟ್ಟದ್ದಾಗಿದ್ದವು, ಅಲ್ಲಿನ ಆರಿ, ಮುಕ್ಕೋ, ನೇರಣ್‌ರಾಬರೀ, ಸೂಫ್‌ ಇತ್ಯಾದಿ ಪಾರಂಪರಿಕ ಕ್ರಾಫ್ಟ್ ಕಲೆ ಅದರಿಂದಲೇ ಪ್ರೇರಿತ.

ಅನುಪಮ ಸೌಂದರ್ಯ

ಅಸ್ಸಾಮಿನ ಮೇಖಾ ಚಾದೋರ್‌, ಅಲ್ಲಿನ ಉದ್ಯಮದ ಬ್ಯೂಟಿ ಬಗ್ಗೆ ಹೇಳುತ್ತಾ, ಅಸ್ಸಾಂ ಸಿಲ್ಕ್ ಬಗ್ಗೆ ಜನರಿಗೆ ಗೊತ್ತು. ಆದರೆ ಅಸಲಿ ಅಸ್ಸಾಂ ಸಿಲ್ಕ್ ನ್ನು ಗುರುತಿಸುವವರು ಬಹಳ ಕಡಿಮೆ. ಜನ ಹಳೆಯದು ಬೇಡವೆಂದು ಸದಾ ಹೊಸತರ ಕಡೆ ಮುಗಿಬೀಳುತ್ತಾರೆ. ಸ್ವಯಂ ಡಿಸೈನರ್‌ ಆದ ಈಕೆ ಅಸ್ಸಾಂ ಸಿಲ್ಕ್ ನ ವಸ್ತ್ರಗಳಿಗೆ ವಿಭಿನ್ನ ಮೋಟಿಫ್‌, ಆಧುನಿಕ ವಿನ್ಯಾಸಗಳನ್ನು ಒದಗಿಸಿದ್ದಾರೆ.

ಅಲ್ಲಿನ ನೇಕಾರರಿಗಂತೂ ಬಹು ದಿನಗಳ ಕಾಲ ಒಂದು ಸಂಪೂರ್ಣ ಸೀರೆ ನೇಯ್ದ ನಂತರ ಅದಕ್ಕೆ ಬಲು ಕಡಿಮೆ ಹಣ ಸಿಗುತ್ತದೆ. ಹೀಗಾಗಿ ಇವರ ಹೊಸ ಪೀಳಿಗೆ ಇದನ್ನು ಬಿಟ್ಟು ಆಧುನಿಕ ಕೆಲಸ ಹುಡುಕುತ್ತಿದೆ.

ಆಕರ್ಷಕ ಡಿಸೈನ್ಸ್

ಬಯೋ ಡೀಗ್ರೇಡೆಬಲ್ ಫೈಬರ್‌ ಹಾಗೂ ಹ್ಯಾಂಡ್‌ ಲೂಂ ಬಟ್ಟೆಗಳನ್ನು ಹೊಸ ಉಡುಗೆಗಳಲ್ಲಿ ಬಳಸಿಕೊಳ್ಳುವುದರಿಂದ ಅವು ಹೆಚ್ಚು ಪರಿಸರಸ್ನೇಹಿ ಎನಿಸುತ್ತದೆ. ಇವು ಸಿಂಥೆಟಿಕ್‌ ಗೆ ಪೈಪೋಟಿ ನೀಡಲಾರ, ಆದರೆ ಇಂದಿನ ಕಾಲಕ್ಕೆ ಅತಿ ಬೇಕಾದ ಎನ್ನಬಹುದು. ಇದರ ನೇಕಾರರು, ಡೈ ಮಾಡುವವರು, ಕಸೂತಿಗಾರರು.... ಎಲ್ಲರಿಗೂ ಸೂಕ್ತ ಮಜೂರಿ ಸಿಗಬೇಕಿದೆ. ಇವರೆಲ್ಲ ಅಲ್ಲಿನ ರಿಮೋಟ್‌ ಏರಿಯಾಗಳಲ್ಲಿದ್ದು, ಪ್ರಯಾಣವೇ ದುಸ್ತರ ಎನಿಸುತ್ತದೆ. ಅಂಥವರಿಗೆ ಡಿಸೈನ್‌ ಕುರಿತು ಹೇಳುವುದು, ಟ್ರೇನಿಂಗ್‌ ನೀಡುವುದೂ ಕಷ್ಟದ ಕೆಲಸ. ಹೀಗಾಗಿ ಎಥ್ನಿಕ್‌ ಡ್ರೆಸೆಸ್‌ ನೋಡಲು ಸುಮಾರಾಗಿದ್ದು, ದುಬಾರಿ ಎನಿಸುತ್ತವೆ. ಇಂದಿನ ಆಧುನಿಕ ಸಮಾಜ ಇವರಿಗೆ ಒತ್ತಾಸೆ ನೀಡಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ