ಹ್ಯುಮಿಡಿಟಿ ತುಂಬಿರುವ ಸೀಸನ್ನಲ್ಲಿ ಬಹಳ ಹೊತ್ತು ಮೇಕಪ್ಉಳಿಯಲು ಸಲಹೆಗಳು ಇಲ್ಲಿವೆ……!

ಬೇಸಿಗೆ ಮಧ್ಯೆ ಒಮ್ಮೊಮ್ಮೆ ಮಳೆ ಬಂದುಬಿಡುತ್ತದೆ. ಆಗ ಹ್ಯುಮಿಡಿಟಿ ಹೆಚ್ಚುತ್ತದೆ. ಅಂಥ ಸಂದರ್ಭದಲ್ಲಿ ತಲೆಗೂದಲಲ್ಲಿ ಅಂಟಂಟು, ಸೆಟ್‌ ಆದ ಮೇಕಪ್‌ ಸಹ ಹಾಳಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು ಪಾರ್ಟಿಗೆ ಹೋಗಬೇಕಿದ್ದರೆ ಹೇಗೆ ನಿಭಾಯಿಸುವಿರಿ?

ಆಗ ಬಹಳ ಹೊತ್ತು ಮೇಕಪ್‌ ನೀಟಾಗಿ ಹಾಗೆ ಉಳಿಯುವಂತೆ ಮಾಡುವುದು ಹೇಗೆ? ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ಇಲ್ಲಿ, ತಿಳಿಸಲಾಗಿರುವ ಕೆಲವು ಸಲಹೆಗಳನ್ನು ಅಗತ್ಯ ಅನುಸರಿಸಿ :

makeup

ಕ್ಲೀನಿಂಗ್

ಬೇಸಿಗೆಯಲ್ಲಿ ಚರ್ಮದ ಸಮರ್ಪಕ ಆರೈಕೆಗಾಗಿ ಮುಖವನ್ನು ನಿಯಮಿತವಾಗಿ ಫೇಸ್‌ ವಾಶ್‌ ನಿಂದ ತೊಳೆಯಿರಿ. 10 ನಿಮಿಷಗಳ ನಂತರ ಮುಖಕ್ಕೆ ಐಸ್‌ ತುಂಡಿನಿಂದ ಸ್ಕ್ರಬ್‌ ಮಾಡಿ. ಇದರಿಂದ ಮೇಕಪ್‌ ಬಹಳ ಹೊತ್ತು ಉಳಿಯುತ್ತದೆ. ಜೊತೆಗೆ ಡಲ್ ಸ್ಕಿನ್‌ ಗೆ ಫ್ರೆಶ್‌ ಲುಕ್ಸ್ ದೊರಕುತ್ತದೆ.

ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದರೆ ಆ್ಯಸ್ಟ್ರಿಂಜೆಂಟ್‌ ಬಳಸಿರಿ. ನಾರ್ಮಲ್ ಯಾ ಡ್ರೈ ಸ್ಕಿನ್ನಿನವರು ಫೇಸ್‌ ವಾಶ್‌ ನಂತರ ಟೋನರ್ ಬಳಸಬೇಕು.

primer-lede

ಪ್ರೈಮರ್

ನಿಮ್ಮ ಮುಖ ಹೆಚ್ಚು ಕಲೆಗುರುತು, ಸಣ್ಣ ರಂಧ್ರ, ಗಂದೆ, ಗುಳ್ಳೆಗಳಿದ್ದರೆ ಮಾತ್ರ ಪ್ರೈಮರ್‌ ಹಚ್ಚಬೇಕು. ಈ ಸೀಸನ್‌ ಗೆ ಇದು ಹೆಚ್ಚು ಉಪಯುಕ್ತ. ಪ್ರೈಮರ್‌ ನಮ್ಮ ದೋಷಯುಕ್ತ ಚರ್ಮವನ್ನು ಸಪಾಟು ಮಾಡುತ್ತದೆ, ಹೀಗಾಗಿ ಆ ಪದರದ ಮೇಲೆ ಮೇಕಪ್‌ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದೆ. ಯಾರಿಗೆ ಈ ಸಮಸ್ಯೆ ಇಲ್ಲವೋ ಅವರು ಪ್ರೈಮರ್‌ ಹಚ್ಚುವುದು ಬೇಡ.

ಬೇಸಿಗೆಯಲ್ಲಿ ಮೇಕಪ್‌ ಮಾಡುವ ಮೊದಲು ಮುಖಕ್ಕೆ ಜೆಲ್ಲಿ ಪ್ರೈಮ್ ಅಗತ್ಯ ಬಳಸಿರಿ. ಈ ಪ್ರೈಮರ್‌ ಹಚ್ಚಿದ ನಂತರ 2-3 ನಿಮಿಷ ಹಾಗೇ ಬಿಡಿ. ಅದರ ನಂತರ ಮುಂದಿನ ಹಂತಕ್ಕೆ ಹೊರಡಿ. ಇದರಿಂದ ಪ್ರೈಮರ್‌ ಹೆಚ್ಚು ಹೊತ್ತು ಉಳಿಯುತ್ತದೆ. ಅಗತ್ಯ ಎನಿಸಿದರೆ ಮಾತ್ರ ಕನ್ಸೀಲರ್‌ ಬಳಸಿರಿ, ಏಕೆಂದರೆ ಹೆಚ್ಚು ಬೆವರು ಕನ್ಸೀಲರ್‌ ಉಳಿಯಲು ಬಿಡುವುದಿಲ್ಲ. ಹಾಗಾದಾಗ ಕನ್ಸೀಲರ್‌ ಮಾತ್ರ ಆರಿಸಿ.

04-make-eyes-pop-760x506

ಐಶ್ಯಾಡೋ

ಬೇಸಿಗೆ ಕಾರಣ ನಿಮ್ಮ ಐ ಬ್ರೋಸ್‌ ನ್ನು ಸದಾ ಸೆಟ್‌ ಮಾಡಿಡಿ. ಆದರೆ ಐ ಬ್ರೋ ಪೆನ್ಸಿಲ್ ‌ಖಂಡಿತಾ ಬಳಸಬೇಡಿ. ಪೆನ್ಸಿಲ್ ‌ಅಂಶ ಬೆವರಿನ ಕಾರಣ ಹರಿದು ಹೋಗಬಹುದು. ಸಾಧ್ಯವಾದಷ್ಟೂ ಐ ಶ್ಯಾಡೋ ಬಳಸಲೇಬೇಡಿ. ಅನಿವಾರ್ಯ ಎನಿಸಿದರೆ, ಕ್ರೀಂ ಬದಲಾಗಿ ಪೌಡರ್‌ ಬಳಸಿರಿ. ಆಗ ಇದು ಮೆಲ್ಟ್ ಆಗಿ ನಿಮ್ಮ ಸುಂದರ ಮುಖವನ್ನು ಹಾಳು ಮಾಡಬಾರದು. ಈ ಕ್ರೀಂ ಐ ಶ್ಯಾಡೋಗೆ ಬದಲಾಗಿ ಹೆಚ್ಚು ಹೊತ್ತು ಉಳಿಯುತ್ತದೆ. ಇದರಲ್ಲೂ ಸಹ ಕೆಲವು ನ್ಯಾಚುರಲ್ ಶೇಡ್ಸ್ ಅಂದ್ರೆ ಪಿಂಕ್‌ ಯಾ ಬ್ರೌನ್ ಬಳಸಿರಿ. ಸ್ಮಜ್‌ ಫ್ರೀ ಕಾಜಲ್ ಬಳಸಿರಿ. ಕಣ್ಣೆವೆಗಳ ಮೇಲೆ ವಾಟರ್‌ ಪ್ರೂಫ್‌ ಮಸ್ಕರಾ ಹಚ್ಚಿರಿ. ಇದು ಹೆಚ್ಚು ಹೊತ್ತು ಉಳಿಯುತ್ತದೆ. ಬೇಸಿಗೆಯಲ್ಲಿ ಬ್ಲ್ಯಾಕ್‌ ಬದಲಾಗಿ ಕಲರ್‌ ಫುಲ್ ಲೈನ್ಸ್ ಜೊತೆ ಟ್ರಾನ್ಸ್ ಪರೆಂಟ್‌ ಮಸ್ಕರಾ ಬಳಸಿಕೊಳ್ಳಿ.

10-occasion-Lipstick-Mistakes-that-Are-Ruining-Your-Look_680988598-LightField-Studios-760x506

ಲಿಪ್ಸ್ಟಿಕ್

ಲಿಪ್‌ ಸ್ಟಿಕ್‌ ನಿಮ್ಮ ಮುಖದಲ್ಲಿನ ಡಲ್ ನೆಸ್‌ ದೂರ ಮಾಡುತ್ತದೆ. ಪಾರ್ಟಿ ಅಥವಾ ಯಾವುದೇ ಔಟಿಂಗ್‌ ಇರಲಿ, ಉತ್ತಮ ಬ್ರಾಂಡ್ ನ ಸ್ಕಿನ್‌ ಟೋನ್‌ ಗೆ ತಕ್ಕಂತೆ ಲಿಪ್‌ ಸ್ಟಿಕ್‌ ಬಳಸಿರಿ. ಬೇಸಿಗೆಯಲ್ಲಿ ಲಿಪ್‌ ಗ್ಲಾಸ್‌ ಬೇಡ. ಏಕೆಂದರೆ ಅದು ಸುಲಭವಾಗಿ ಕರಗಿ ಹೋಗೀತು (ಬದಲಿಗೆ ನೀವು ಹೆಚ್ಚು ಹೊತ್ತು ಉಳಿಯುವಂಥ ಶಿಮರ್‌ ಗ್ಲಾಸ್‌ ಬಳಸಬಹುದು).

ನೀವು ಲಿಪ್‌ ಸ್ಟಿಕ್‌ ಬಳಸುವುದಿಲ್ಲ ಎಂದರೆ, ನಿಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಸದಾ ಉತ್ತಮ ಬ್ರಾಂಡ್‌ ನ ಲಿಪ್‌ ಬಾಮ್ ಅಗತ್ಯ ಇರಿಸಿಕೊಳ್ಳಿ. ಇದನ್ನು ಹಗಲಿನಲ್ಲಿ 2-3 ಸಲ ಹಚ್ಚಿಕೊಳ್ಳಿ. ಏಕೆಂದರೆ ಒಡೆದ ತುಟಿಗಳು ಮುಖದ ಅಂದ ಕೆಡಿಸುತ್ತದೆ. ಹೀಗಾಗಿ ಲಿಪ್‌ ಬಾಮ್ ಹಚ್ಚಿ ತುಟಿಗಳನ್ನು ಮೃದುಗೊಳಿಸಿ. ಲಿಪ್‌ ಸ್ಟಿಕ್‌ ಬಹಳ ಹೊತ್ತು ಉಳಿಯಲು, ನಿಮ್ಮ ತುಟಿಗಳಿಗೆ ಮೊದಲು ಲೂಸ್ ಪೌಡರ್‌ ನ ಒಂದು ತೆಳು ಕೋಟ್‌ ಸಿಂಪಡಿಸಿ. ನಂತರ ಹತ್ತಿಯಿಂದ ಹೆಚ್ಚುವರಿ ಪೌಡರ್‌ ತೆಗೆದುಬಿಡಿ. ಇದು ನಿಮ್ಮ ಲಿಪ್‌ ಸ್ಟಿಕ್‌ ಗೆ ಒಂದು ಪರ್ಫೆಕ್ಟ್ ಬೇಸ್‌ ಆಗಿರುತ್ತದೆ. ನಂತರ ಲಿಪ್‌ ಲೈನ್‌ ಜೊತೆ ತೆಳುವಾದ ಬಣ್ಣದ ಲಿಪ್‌ ಲೈನರ್‌ ಹಚ್ಚಿರಿ.

ನಿಮ್ಮದು ತೆಳು ತುಟಿಗಳಾಗಿದ್ದರೆ, ಲಿಪ್‌ ಲೈನ್‌ ನ ಹೊರ ಭಾಗದಲ್ಲಿ ಲೈನರ್‌ ಬಳಸಬೇಕು. ನೀವು ನಿಮ್ಮ ತುಟಿಗಳನ್ನು ತೆಳುವಾಗಿ ತೋರ್ಪಡಿಸ ಬಯಸಿದರೆ, ತುಟಿಗಳ ಮಧ್ಯೆ ಲಿಪ್‌ ಲೈನರ್‌ ಬಳಸಿಕೊಳ್ಳಿ. ಲಿಪ್‌ ಸ್ಟಿಕ್‌ ಹಚ್ಚಿದ ನಂತರ ಒಂದು ತೆಳುಪದರ ಲೂಸ್‌ ಪೌಡರ್‌ ಕೋಟ್‌ ನ್ನು ಮತ್ತೆ ಸಿಂಪಂಡಿಸಿ. ಇದರಿಂದ ನಿಮ್ಮ ತುಟಿಗಳ ಲಿಪ್‌ ಸ್ಟಿಕ್‌ ಹೆಚ್ಚು ಹೊತ್ತು ಉಳಿಯುತ್ತದೆ.

naturalfoundation-850x444

ಫೌಂಡೇಶನ್

ಬೇಸಿಗೆಯಲ್ಲಿ ಮೇಕಪ್‌ ಕರಗಿ ಹೋಗಬಾರದು ಎಂಬ ಕಾರಣಕ್ಕೆ ಲಿಕ್ವಿಡ್‌ ಯಾ ಕ್ರೀಂ ಫೌಂಡೇಶನ್‌ ಗೆ ಬದಲಾಗಿ ಆಯಿಲ್ ‌ಫ್ರೀ ಮಾಯಿಶ್ಟರೈಸರ್‌ ನ ತೆಳು ಕೋಟ್‌ ಹಚ್ಚಬಹುದು. ಟಚ್‌ ಅಪ್‌ ಗಾಗಿ ಹಗುರವಾಗಿ ಕಾಂಪ್ಯಾಕ್ಟ್ ಪೌಡರ್‌ ಉದುರಿಸಿ. ಫೌಂಡೇಶನ್‌ ಗೆ ಬದಲಾಗಿ ಟಿಂಟೆಡ್‌ ಮಾಯಿಶ್ಚರೈಸರ್‌ ಸಹ ಬಳಸಬಹುದು.

ಬೇಸಿಗೆಯಲ್ಲಿ ಮುಖ್ಯವಾಗಿ ನಿಮ್ಮ ಬ್ಲಶ್‌ ಸೌಮ್ಯ, ಡ್ರೆಸ್‌ ಗೆ ಸೂಟ್‌ ಆಗುವಂತಿರಬೇಕು. ಆದ್ದರಿಂದ ಈ ಸಲುವಾಗಿ ಶಿಮರಿ ಬ್ಲಶ್ ಬಳಸಬೇಡಿ. ಏಕೆಂದರೆ ಇದು ಅಂಟಂಟಾಗಬಹುದು. ಜೊತೆಗೆ ಬೆವರಿನ ಸಂಪರ್ಕದಿಂದ ಹರಿಯತೊಡಗುತ್ತದೆ. ಪೌಡರ್‌ ಬ್ಲಶ್‌ ಗೆ ಬದಲಾಗಿ ನೀವು ಕ್ರೀಂ ಬ್ಲಶ್‌ ಬಳಸಿಕೊಳ್ಳಿ. ನೀವು ಇನ್ನಷ್ಟು ಬಣ್ಣ ಎದ್ದು ಕಾಣಲಿ ಎಂದು ಬಯಸಿದರೆ, ಕ್ರೀಂ ಬ್ಲಶ್‌ ಮೇಲೆ ಪೌಡರ್ ಬ್ಲಶ್‌ ಹಚ್ಚಿರಿ, ಆಗ ಇದು ಕೆನ್ನೆ ಮೇಲೆ ಹೆಚ್ಚು ಹೊತ್ತು ಉಳಿಯುತ್ತದೆ, ಅದು ನಿಮ್ಮ ಮುಖಕ್ಕೆ ಹೆಚ್ಚಿನ ಹೊಳಪು, ಬಣ್ಣ ನೀಡುವ ಜೊತೆ ಬ್ಯೂಟಿ ಹೆಚ್ಚಿಸಬಲ್ಲದು.

hair-serum

ಹೇರ್ಸೀರಮ್

ಬೇಸಿಗೆಯಲ್ಲಿ ಮುಖದ ನಂತರ ಕೇಶ ಸೌಂದರ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಹೆಚ್ಚು ಬೆವರಿನ ಕಾರಣ ಸ್ಕಾಲ್ಪ್ ನಲ್ಲಿ ಆರ್ದ್ರತೆ ಸೇರಿಕೊಳ್ಳುತ್ತದೆ. ಆ ಕಾರಣದಿಂದಾಗಿ ಕೂದಲು ಹೆಚ್ಚು ಉದುರುತ್ತದೆ. ಜೊತೆಗೆ ತೇವಾಂಶದ ಕಾರಣ ಕೂದಲು ಹೊಳಪು ಕಳೆದುಕೊಂಡು ನಿರ್ಜೀವ ಆಗಿ ತೋರುತ್ತದೆ. ಹೀಗಾಗಿ ಇದಕ್ಕೆ ಅಗತ್ಯ ಹೇರ್‌ ಸೀರಮ್ ಬಳಸಿರಿ. ಕೂದಲು ಸಿಕ್ಕಾಗುವುದನ್ನು ತಡೆಯಿರಿ. ಇದಕ್ಕಾಗಿ ಜಡೆ, ಕೊಂಡೆ ಹಾಕಿಕೊಳ್ಳುತ್ತಿರಿ.

ಮಿಸ್ಟೀ ಸ್ಪ್ರೇ

ನಿಮ್ಮ ಮುಖವನ್ನು ಆದಷ್ಟು ಗ್ಲೋಯಿಂಗ್‌ಫ್ರೆಶ್‌ ಆಗಿ ತೋರಿಸಲು, ಮಿಸ್ಟೀ ಸ್ಪ್ರೇಯನ್ನು ಕನಿಷ್ಠ 12-15 ಇಂಚು ದೂರದಿಂದ ಬಳಸಬೇಕು. ಸ್ಪ್ರೇ ಮಾಡಿದ ನಂತರ 6-7 ಕ್ಷಣಗಳ ಕಾಲ ಸೆಟ್‌ ಆಗಲು ಬಿಡಿ.

ಭಾರತಿ ತನೇಜಾ 

ಒಂದಿಷ್ಟು ಮನೆಮದ್ದು

ಬೇಸಿಗೆಯಲ್ಲಿ ರಾತ್ರಿ ಹೊತ್ತು ಅಗತ್ಯ ಸ್ಕಿನ್‌ ಟೋನಿಂಗ್‌ ಮಾಡಿ. ಇದಕ್ಕಾಗಿ 1 ಸಣ್ಣ ಚಮಚ ಹಾಲಿಗೆ 5 ಹನಿ ಬಾದಾಮಿ ಎಣ್ಣೆ ಬೆರೆಸಿ. ಈ ಮಿಶ್ರಣವನ್ನು ಮುಖ, ಕುತ್ತಿಗೆಗೆ ಸವರಿಕೊಳ್ಳಿ.

ಚರ್ಮ ಅಂಟಂಟು ಎನಿಸಿದರೆ, ಚಂದನದ ಪುಡಿಗೆ ಗುಲಾಬಿ ಜಲ ಬೆರೆಸಿಕೊಂಡು ಮುಖ, ಕುತ್ತಿಗೆ, ತೋಳು, ಕೈಗಳಿಗೆ ಹಚ್ಚಿಕೊಳ್ಳಿ.

ಚರ್ಮಕ್ಕೆ ನ್ಯಾಚುರಲ್ ಹೊಳಪು ನೀಡಲು, ಸಮ ಪ್ರಮಾಣದಲ್ಲಿ ಮೊಸರು ಜೇನು ಬೆರೆಸಿಕೊಂಡು ಮುಖ, ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ನಿಮ್ಮದು ಡ್ರೈ ಸ್ಕಿನ್‌ ಆಗಿದ್ದರೆ, 2 ಚಮಚ ಹಾಲಿನ ಕೆನೆಗೆ ಗುಲಾಬಿ ಜಲ ಬೆರೆಸಿಕೊಂಡು ಮುಖ, ಕುತ್ತಿಗೆ, ಕೈಗಳಿಗೆ ಸವರಿ, 15 ನಿಮಿಷ ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ