ಐಪಿಎಲ್ ಕಪ್ ಆರ್​ಸಿಬಿ​ ಕೈ ಸೇರಿದೆ, 18 ವರ್ಷಗಳ ಕಾಯುವಿಕೆಗೆ ಇದೀಗ ಕೊನೆಯಾಗಿದೆ. ಪಂದ್ಯದ ಕೊನೆಯ ಹಂತ ತಲುಪುತ್ತಿದ್ದಂತೆ ಅಭಿಮಾನದ ಸಂಭ್ರಮಕ್ಕೆ ಕೊಹ್ಲಿ ಕಣ್ಣೀರು ಹಾಕಿದ್ದು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. 18 ವರ್ಷಗಳಲ್ಲಿ ಆರ್​ಸಿಬಿಯ ಮೊದಲ ಜಯಭೇರಿ ಬಗ್ಗೆ ವಿರಾಟ್​ ಕೊಹ್ಲಿ ಅವರು ತಮ್ಮ ಇನ್​ಸ್ಟಾದಲ್ಲಿ ಭಾವುಕವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕನಸನ್ನು ನನಸು ಮಾಡಿದೆ. ಈ ಅತ್ಯದ್ಭುತವಾದ ಸೀಸನ್​ ಅನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಕಳೆದ 2.5 ತಿಂಗಳುಗಳಿಂದ ಈ ಟೂರ್ನಿಯನ್ನು ಎಲ್ಲರೂ ಆನಂದಿಸಿದ್ದೇವೆ. ಸೀಸನ್​ಗಳು ಕಳೆಯುತ್ತ ಬಂದರೂ ಆರ್​ಸಿಬಿ ಅಭಿಮಾನಿಗಳು ನಮ್ಮನ್ನು ಎಂದಿಗೂ ಕೈಬಿಟ್ಟಿರಲಿಲ್ಲ. ಈ ಹಿಂದೆ ಆಗಿದ್ದ ಟೀಕೆ, ನಿರಾಶೆ, ಹತಾಶೆಗಳಿಗೆ ಈ ಒಂದು ಟ್ರೋಫಿ ಸಾಕು ಎಂದು ವಿರಾಟ್​ ಹೇಳಿದ್ದಾರೆ.

This team made the dream possible , a season I’ll never ever forget. We’ve thoroughly enjoyed the ride over the last 2.5 months. This one is for the fans of rcb who never ever left our side in the worst of times. This one is for all the years of heartbreaks and disappointment. This is for every inch of effort left on the field playing for this team. As far as the ipl trophy is concerned- you’ve made me wait 18 years to be able to lift you and celebrate my friend, but it’s been absolutely worth the wait. ❤️ 🏆@royalchallengers.bengaluruಮೈದಾನದಲ್ಲಿ ಆಡುವಾಗ ತಂಡದ ಆಟಗಾರರು ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚಿಂಚಿಗೂ ಶ್ರಮ ಹಾಕಿದ್ದಾರೆ. ಐಪಿಎಲ್ ಟ್ರೋಫಿ ನನ್ನನ್ನು 18 ವರ್ಷಗಳ ಕಾಲ ಕಾಯುವಂತೆ ಮಾಡಿತ್ತು. ನಿನ್ನನ್ನು ಮೇಲೆತ್ತಲು ನಾನು ಹಾಗೂ ನನ್ನ ಸ್ನೇಹಿತರು ಇಷ್ಟು ವರ್ಷ ಕಾಯಬೇಕಾಯಿತು. ಕಾದಿದ್ದು ಕೊನೆಗೂ ಸಂಪೂರ್ಣವಾಗಿ ಸಾರ್ಥಕವಾಯಿತು. ಲವ್ ಯು ಟ್ರೋಫಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ವಿರಾಟ್​ ಕೊಹ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.

ಆರ್​ಸಿಬಿ ವಿಜಯ ಸಾಧಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ಅಭಿನಂದನೆಗಳ ಮಳೆ ಸುರಿಸಿದ್ದಾರೆ. ರಾಜಕಾರಣಿಗಳು, ಸೆಲೆಬ್ರಿಟಿಗಳು, ಚಿತ್ರೋದ್ಯಮ ಸೇರಿದಂತೆ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗಿನ ಅಭಿಮಾನಿಗಳು ನಮ್ಮ ತಂಡದ ಹುಡುಗರು ಎಂಬ ಹೆಮ್ಮೆಯಲ್ಲಿ ಆರ್​ಸಿಬಿ… ಆರ್​ಸಿಬಿ… ಕಪ್​ ನಮ್ದೆ ಅಂತ ಬೀಗುತ್ತಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ