ಬದಲಾಗುತ್ತಿರುವ ಜೀವನಶೈಲಿ, ಕಂಪ್ಯೂಟರ್ ಯಾ ಸ್ಮಾರ್ಟ್ ಫೋನುಗಳ ಅತಿಯಾದ ಬಳಕೆ ಕಂಗಳಲ್ಲಿ ತಂತಾನೇ ಡ್ರೈನೆಸ್ ಹೆಚ್ಚಿಸುತ್ತಾ ರೋಗವಾಗುತ್ತದೆ. ಇದರ ನಿವಾರಣೆಗಾಗಿ ತಜ್ಞರ ಸಲಹೆ ಪಡೋಣವೇ…..?
ನಾವು ನೋಡುವ ಪ್ರತಿ ದೃಶ್ಯವನ್ನೂ ಕಂಗಳು ಮೆದುಳಿಗೆ ತಕ್ಷಣ ಸಂದೇಶವಾಗಿ ರವಾನಿಸುತ್ತದೆ. ಕಂಗಳು ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳು ಎಂದೇ ಹೇಳಬೇಕು. ಹೀಗಾಗಿ ಇದರ ಸುರಕ್ಷತೆಯತ್ತ ನಾವು ಹೆಚ್ಚಿನ ಗಮನ ಹರಿಸಬೇಕು. ಒಂದು ವರದಿ ಪ್ರಕಾರ, ಇತ್ತೀಚೆಗೆ 2 ಲಕ್ಷ ಮಕ್ಕಳು ನಮ್ಮ ದೇಶದಲ್ಲಿ ದೃಷ್ಟಿಹೀನರಾಗಿದ್ದಾರೆ, ಇವರಲ್ಲಿ ಕೆಲವರಿಗೆ ದೃಷ್ಟಿ ಸಿಗಬಹುದು, ಉಳಿದವರು ಜೀವನವಿಡೀ ಅಂಧರಾಗಿಯೇ ಇರಬೇಕು.
ಕೋವಿಡ್ ಹೆಮ್ಮಾರಿಯ ಕಾಲದಲ್ಲೂ ಕಂಗಳ ಮೇಲೆ ಹೆಚ್ಚಿನ ಒತ್ತಡ ಹೇರಲಾಯಿತು. ಏಕೆಂದರೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕಂಪ್ಯೂಟರ್ ಮುಂದೆ ಕೂರಲೇಬೇಕಾದ ಕಾಲವಿದು. ಇದರಿಂದ ಕಂಗಳ ರೆಡ್ ನೆಸ್, ಗೀಜು ಕಟ್ಟುವಿಕೆ, ಕ್ರಮೇಣ ಕಂಬನಿ ಬತ್ತುವಿಕೆ, ಊತ, ಕಂಗಳ ಡ್ರೈನೆಸ್ ಎಲ್ಲಕ್ಕೂ ಹೆಚ್ಚಿನ ಹಿಂಸೆ ನೀಡುತ್ತದೆ.
ತಜ್ಞರು ಈ ಕುರಿತಾಗಿ, ಕೋವಿಡ್ ಕಾರಣ ನಮ್ಮ ಆಧುನಿಕ ಜೀವನಶೈಲಿ ಎಷ್ಟೋ ಬದಲಾಗಿದೆ. ಇದರಿಂದಾಗಿ ಕಂಗಳ ಡ್ರೈನೆಸ್ ದೊಡ್ಡ ಹಿಂಸೆಯಾಗಿದೆ. ಏಕೆಂದರೆ ಕಂಗಳ ಡ್ರೈನೆಸ್ ಒಂದು ಗಂಭೀರ ಸ್ಥಿತಿಯಾಗಿದ್ದು, ಹಲವು ತೊಂದರೆಗಳ ಜೊತೆ ಮುಂದೆ ದೃಷ್ಟಿಹೀನತೆಗೂ ಕಾರಣವಾದೀತು, ಎನ್ನುತ್ತಾರೆ.
ಮಕ್ಕಳ ಸ್ಕ್ರೀನ್ ಟೈಂ ಹೆಚ್ಚುವಿಕೆ, ಪೌಷ್ಟಿಕ ಆಹಾರ ಸೇವಿಸದೆ, ಜಂಕ್/ಫಾಸ್ಟ್ ಫುಡ್ ಗೆ ಮೊರೆ ಹೋಗುವುದು, ಅನಿಯಮಿತ ನಿದ್ದೆ ಇತ್ಯಾದಿಗಳಿಂದ ಕಂಗಳ ಡ್ರೈನೆಸ್ ಹೆಚ್ಚುತ್ತದೆ. ಇದರಿಂದ ಪಾರಾಗಲು ಹೀಗೆ ಮಾಡಿ : ಮನೆಯಲ್ಲೇ ಇರುವುದರಿಂದ ಟಿವಿ ನೋಡುತ್ತಾ, ಫೋನ್ ತಡಕಾಡುತ್ತಾ ಕಂಗಳ ಡ್ರೈನೆಸ್ ಪ್ರಕರಣ ಹೆಚ್ಚುತ್ತಾ ಹೋಗುತ್ತದೆ. ಸದಾ ಕಣ್ಣು ಉಜ್ಜಿಕೊಳ್ಳಬೇಕು, ಉರಿ, ನೋವು ಇದರ ಲಕ್ಷಣಗಳು. ಇನ್ ಡೋರ್ ಏರ್ ಕ್ವಾಲಿಟಿ ಸಹ ಕಂಗಳ ಡ್ರೈನೆಸ್ ಗೆ ಮತ್ತೊಂದು ಕಾರಣ. ಕಂಗಳ ಒಳಗಿನ ನೀರು ಬಾಷ್ಪೀಕರಣಗೊಂಡು, ಮುಂದೆ ಊತಕ್ಕೆ ದಾರಿ ಆಗುತ್ತದೆ.
ಅಡುಗೆ ಮಾಡು ವಿಧಾನ, ಆಹಾರದ ವೇಳೆ (ಊಟ, ತಿಂಡಿ ನಡುವಿನ ಟೈಂ ಗ್ಯಾಪ್), ಅನುಚಿತ ಆಹಾರ ಸೇವನೆಯಿಂದಾಗಿ, ದೇಹದಲ್ಲಿ ಅಗತ್ಯದ ಫ್ಯಾಟಿ ಆ್ಯಸಿಡ್ಸ್, ವಿಟಮಿನ್‌ಗಳ ಕೊರತೆ ಆಗುತ್ತದೆ. ಇದು ಕಂಗಳ ಆರೋಗ್ಯ ಹಾಳಾಗಲು ಮುಖ್ಯ ಕಾರಣ. ಸರಿಯಾಗಿ ನಿದ್ದೆ ಮಾಡದೆ ಇರುವುದು ಸಹ ಕಂಗಳಲ್ಲಿನ ದ್ರವ ಹಿಂಗಲು ಪೂರಕ. ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ನ ಸತತ ಬಳಕೆ ನಮ್ಮನ್ನು ಬಲು ಹಿಂಸಿಸುತ್ತದೆ.
ರೆಪ್ಪೆ ಬಡಿಯದಿರುವಿಕೆ : ಸ್ಕ್ರೀನ್ ಟೈಂ ಸತತ ಹೆಚ್ಚುತ್ತಿರುವುದೇ ಕಂಗಳ ಡ್ರೈನೆಸ್ ಗೆ ಮೂಲಕಾರಣ. ಆರೋಗ್ಯವಂತರು ಪ್ರತಿ ನಿಮಿಷಕ್ಕೆ 15 ಸಲ ಬ್ಲಿಂಕ್ ಮಾಡಬೇಕು, ಆದರೆ ಈ ಸ್ಕ್ರೀನ್ ಟೈಂನಿಂದಾಗಿ ಇದರ ದರ ತಗ್ಗಿ ಪ್ರತಿ ನಿಮಿಷಕ್ಕೆ 5-7 ಸಲ ಬ್ಲಿಂಕ್ ಮಾಡುವಂತಾಗಿದೆ. ಈ ರೀತಿ ಕನಿಷ್ಠ ಬ್ಲಿಂಕ್ಸ್ ಕಂಗಳ ಒಳಪದರದಲ್ಲಿ ಆರ್ದ್ರತೆಯನ್ನು ಹಿಂಗಿಸುತ್ತದೆ.
ರಿಸರ್ಚ್ ಪ್ರಕಾರ, ಸ್ಕ್ರೀನ್ ನಿಂದ ನೀಲಿ ಬೆಳಕು ಹೊರಹೊಮ್ಮಿದರೆ ಅಧಿಕ ಹಾನಿ ಇಲ್ಲ, ಆದರೆ ಇದು ನಿದ್ದೆಯ ಶೈಲಿಯನ್ನು ಪ್ರಭಾವಿತಗೊಳಿಸಬಹುದು. ಕಡಿಮೆ ನಿದ್ದೆಯಿಂದ ಕಂಗಳ ಡ್ರೈನೆಸ್ ತೀವ್ರ ಹೆಚ್ಚುತ್ತದೆ. ಅದೇ ತರಹ ಮಾಸ್ಕ್ ಸರಿಯಾಗಿ ಬಳಸದಿರುವುದು ಸಹ ಡ್ರೈನೆಸ್ ಹೆಚ್ಚಿಸುತ್ತದೆ. ಏಕೆಂದರೆ ಮಾಸ್ಕ್ ನಿಂದಾಗಿ ಉಸಿರಾಡುವಾಗ, ಬಿಸಿ ಹವೆ ಮೇಲ್ಭಾಗ ತಲುಪುತ್ತದೆ, ಇದರಿಂದ ಕಂಗಳು ಪ್ರಭಾವಿತಗೊಳ್ಳುತ್ತವೆ. ಇದರಿಂದಾಗಿ ಕಣ್ಣಿನ ದ್ರವ ಬೇಗ ಬಾಷ್ಪೀಕರಣಗೊಂಡು ಡ್ರೈನೆಸ್ ಹೆಚ್ಚುತ್ತದೆ. ಮೂಗಿನ ಮೇಲೆ ಸರಿಯಾಗಿ ಮಾಸ್ಕ್ ಇರಿಸಿಕೊಂಡಾಗ ಮಾತ್ರ ಮೇಲ್ಭಾಗಕ್ಕೆ ಒಣ ಹವೆ ಹೋಗುವುದನ್ನು ತಗ್ಗಿಸಬಹುದು. ಇದರಿಂದ ಕಂಗಳ ಡ್ರೈನೆಸ್ ಎಷ್ಟೋ ತಗ್ಗುತ್ತದೆ.
20:20:20 ಪ್ಯಾಟರ್ನ್ : ಇಂದು ಪ್ರತಿ ವಯೋಮಾನದವರೂ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಮೊಬೈಲ್ ಗಳಲ್ಲೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ. ಹೀಗಾಗಿ ಕೆಳಗಿನ ಸಲಹೆ ಅನುಸರಿಸಿ ಇದರಿಂದಾಗುವ ಹಾನಿಯಿಂದ ಪಾರವಾಗಿ :
ನೇತ್ರತಜ್ಞರ ಪ್ರಕಾರ 20:20:20 ಪ್ಯಾಟರ್ನ್ ಅನುಸರಿಸಬೇಕು. ಇದರಿಂದಾಗಿ ಪ್ರತಿಯೊಬ್ಬರೂ ಪ್ರತಿ 20 ನಿಮಿಷಕ್ಕೊಮ್ಮೆ ಸ್ಕ್ರೀನ್ ನಿಂದ ಬ್ರೇಕ್ ಪಡೆಯಬೇಕು, 20 ಅಡಿಗಳ ಅಂತರದಲ್ಲಿನ ವಸ್ತುಗಳನ್ನು ಸತತ 20 ಕ್ಷಣ (ಹಸಿರು ಗಿಡಮರ ಇನ್ನೂ ಉತ್ತಮ) ನೋಡುತ್ತಿರಬೇಕು.
ಮತ್ತೆ ಮತ್ತೆ ಕಣ್ಣಿನ ರೆಪ್ಪೆ ಆಡಿಸುತ್ತಿರಬೇಕು.
ಒಣ ಹವೆ ಕಣ್ಣಿನ ಭಾಗ ತಲುಪುವುದನ್ನು ತಪ್ಪಿಸಲು ಸರಿಯಾಗಿ ಮಾಸ್ಕ್ ಧರಿಸಿ. ಮಲಗುವ 2-3 ಗಂಟೆಗಳ ಮೊದಲು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಆಫ್ ಮಾಡಿ.
ವೈದ್ಯರ ಸಲಹೆ ಪ್ರಕಾರ, ಲ್ಯೂಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸಬೇಕು. ತೊಂದರೆ ಮುಂದುವರಿದರೆ ಕೂಡಲೇ ನೇತ್ರತಜ್ಞರನ್ನು ಸಂಪರ್ಕಿಸಿ.
ನಿಯಮಿತವಾಗಿ ಆಗಾಗ ನೇತ್ರ ಪರೀಕ್ಷೆ ಮಾಡಿಸಿ.
– ಡಾ. ಸುಮಾ