ಬೇಸಿಗೆಯಲ್ಲೂ ನಿಮ್ಮ ಕೂದಲು ಸಿಲ್ಕಿ ಶೈನ್ ಆಗಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಬಲ್ಲಿರಾ…?
ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆಗಳು ಹೆಚ್ಚು ಹಿಂಸೆ ಕೊಡಲಾರಂಭಿಸುತ್ತವೆ. ಹೀಗಿರುವಾಗ ಈ ಸೀಸನ್ ನಲ್ಲಿ ಕೂದಲಿನ ವಿಶೇಷ ಆರೈಕೆ ಮಾಡಬೇಕಾದುದು ಅನಿವಾರ್ಯ.
ಈ ಕುರಿತಾಗಿ ಕೇಶ ತಜ್ಞೆಯರು ನೀಡುವ ಸಲಹೆ ಎಂದರೆ, ಬೇಸಿಗೆಯಲ್ಲಿ ಕೂದಲು ಆರ್ದ್ರತೆ ಕಳೆದುಕೊಳ್ಳುತ್ತದೆ. ಅದು ನಿರ್ಜೀವವಾಗಿ ಕ್ರಮೇಣ ಉದುರತೊಡಗುತ್ತದೆ. ಆದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಸಲಹೆ ಅನುಸರಿಸಿದರೆ, ಕೂದಲನ್ನು ಈ ಸಮಸ್ಯೆಗಳಿಂದ ದೂರವಿರಿಸಬಹುದು.
ಅಂಟಂಟು ಕೂದಲಿಗೆ ಪರಿಹಾರ
ತಲೆಯ ಸ್ಕಾಲ್ಪ್ ನಲ್ಲಿನ ಚರ್ಮ ಬಿಸಿಲಿನ ಝಳದಿಂದ ಅಂಟಂಟು ಆಗುವಂತೆ, ಕೂದಲೂ ಹಾಗೇ ಆಗುತ್ತದೆ. ಇದರಿಂದ ತಲೆಗೂದಲಲ್ಲಿ ಹೊಟ್ಟು ಅಧಿಕ ಸೇರಿಕೊಳ್ಳುತ್ತದೆ. ಇದರಿಂದ ಕೂದಲುದುರುವಿಕೆ ಕ್ರಮೇಣ ಹೆಚ್ಚುತ್ತದೆ. ಅದಕ್ಕಾಗಿ ಈ ಸಲಹೆ ಅನುಸರಿಸಿ :
ಎಲ್ಲಕ್ಕೂ ಮೊದಲು ಮಾಯಿಶ್ಚರೈಸರ್ ಇಲ್ಲದ ಶ್ಯಾಂಪೂ ಆರಿಸಿ.
ದಿನ ಬಿಟ್ಟು ದಿನ ತಲೆಗೆ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ತಲೆಗೂದಲಲ್ಲಿ ಎಣ್ಣೆ ಜಿಡ್ಡು ಜಮೆಗೊಳ್ಳಲು ಬಿಡಬೇಡಿ.
ಅಂಟಂಟು ಕೂದಲಿಗೆ ಉಗುರು ಬೆಚ್ಚಗಿನ ನೀರಿನ ಬಳಕೆ ಸಾಕು, ಕುದಿ ನೀರು ಬೇಡ.
ಸದಾ ಕೂದಲನ್ನು ಬಾಚುತ್ತಿರಬೇಡಿ.
ಕೂದಲನ್ನು ತೊಳೆದ ನಂತರ, ಅದು ತುಸು ಒಣಗುವ ಮೊದಲೇ ಅದನ್ನು ಬಲವಂತವಾಗಿ ಟವೆಲ್ ನಲ್ಲಿ ಸುತ್ತಬೇಡಿ. ಒದ್ದೆ ಕೂದಲಿನಿಂದ ಬೆವರು ತೊಟ್ಟಿಕ್ಕತೊಡಗಿದರೆ, ಅಂಟಂಟು ಹೆಚ್ಚಾಗುತ್ತದೆ.
ಪ್ರೋಟೀನ್ ಅಂಶ ಹೆಚ್ಚಾಗಿರುವ ಪೌಷ್ಟಿಕ ಆಹಾರ ಸೇವಿಸಿ. ಪ್ರೋಟೀನ್ ಕೊರತೆಯಿಂದಾಗಿ ಕೂದಲು ನಿರ್ಜೀವ ಆಗತೊಡಗುತ್ತದೆ.
ಹೊರಗೆ ಹೊರಡುವ ಮೊದಲು ತಲೆಗೂದಲನ್ನು ದುಪಟ್ಟಾ, ಸೆರಗಿನಿಂದ ಮರೆಮಾಡಿ.
ಮತ್ತೆ ಮತ್ತೆ ಕೂದಲನ್ನು ಮುಟ್ಟುತ್ತಾ ಇರಬೇಡಿ. ಇದರಿಂದಾಗಿ ಕೈನಲ್ಲಿನ ಕೊಳಕು ಕೂದಲಿಗೆ ಹೋಗಿ ಅದು ಅಂಟಂಟಾಗುತ್ತದೆ.
ತೈಲೀಯ ಸ್ಕಾಲ್ಪ್ ಗೆ ಆರೈಕೆ
ಸ್ಕಾಲ್ಪ್ ನಲ್ಲಿ (ತಲೆ ಬುರುಡೆಯ ಚರ್ಮ) ಹಲವಾರು ಸಿಬೇಶನ್ ಗ್ಲಾಂಡ್ಸ್ ಇರುತ್ತದೆ. ಇದರಿಂದ ಸೀಬಮ್ ಸ್ರವಿಸಲ್ಪಡುತ್ತದೆ. ಇದು ಕೂದಲಿಗೆ ಹೆಚ್ಚು ಲಾಭಕರ. ಇದು ಕೂದಲು ಶುಷ್ಕ ನಿರ್ಜೀವ ಆಗದಂತೆ ತಡೆಯುತ್ತದೆ. ಆದರೆ ಇದರ ಅಧಿಕ ಸ್ರಾವದಿಂದ ಕೂದಲು ಆಯ್ಲಿ ಆಗುತ್ತದೆ. ಇಲ್ಲಿನ ಸಲಹೆ ಅನುಸರಿಸಿ ಈ ತೊಂದರೆಯಿಂದ ಪಾರಾಗಬಹುದು :
ತೈಲೀಯ ಸ್ಕಾಲ್ಪ್ ಗೂ ಸಹ ಬೇಸಿಗೆಯಲ್ಲಿ ದಿನ ಬಿಟ್ಟು ದಿನ ಶ್ಯಾಂಪೂ ಬಳಸಿರಿ.
ನೀವು ಪ್ರತಿದಿನ ವ್ಯಾಯಾಮ ಮಾಡುವುದಾದರೆ, ಪ್ರತಿದಿನ ಶ್ಯಾಂಪೂ ಬಳಸಿರಿ. ಏಕೆಂದರೆ ಈ ಸೀಸನ್ ನಲ್ಲಿ ಸ್ಕಾಲ್ಪ್ ನ್ನು ಬೆವರಿನಿಂದ ರಕ್ಷಿಸಬೇಕಾದುದು ಮುಖ್ಯ.
ನಿಮ್ಮ ಸ್ಕಾಲ್ಪ್ ಆಯ್ಲಿ ಆಗಿದ್ದರೆ ಕೂದಲಿಗೆ ಡ್ರೈ ಶ್ಯಾಂಪೂ ಸ್ಪ್ರೇ ಸಹ ಮಾಡಬೇಕು. ಇದು ಸ್ಕಾಲ್ಪ್ ಆಯಿಲ್ ಹೀರಿಕೊಂಡು ಕೂದಲು ಅಂಟಂಟಾಗದಂತೆ ರಕ್ಷಿಸುತ್ತದೆ. ಹೊರಗಿನ ಓಡಾಟಕ್ಕೆ ಮೊದಲು ಡ್ರೈ ಶ್ಯಾಂಪೂ ಅತ್ಯುತ್ತಮ ಆಯ್ಕೆಯಾಗಿದೆ.
ಬೇಸಿಗೆಯಲ್ಲಿ ಸ್ಕಾಲ್ಪ್ ಗೆ ಎಣ್ಣೆ ಹಚ್ಚುವುದನ್ನು ನಿಲ್ಲಿಸಿ. ಏಕೆಂದರೆ ಸ್ಕಾಲ್ಪ್ ಆಯ್ಲಿ ಆಗಿದ್ದರೆ, ಈ ಎಣ್ಣೆಯ ಜಿಡ್ಡು ಅದನ್ನು ಮತ್ತಷ್ಟು ತೈಲೀಯ ಮಾಡುತ್ತದೆ.
ಬೇಸಿಗೆಯಲ್ಲಿ ಆ್ಯಂಟಿ ಫಂಗಲ್ ಹೆಚ್ಚಾಗಿರುವ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂವನ್ನೇ ಬಳಸಬೇಕು. ಇದರಲ್ಲಿ ಅಡಗಿರುವ ಆಮ್ಲೀಯ ಅಂಶ ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಪೂರಕ.
ಮಾಲಿನ್ಯದಿಂದ ಕೂದಲುದುರುವಿಕೆ ಮಹಾನಗರಗಳಲ್ಲಿ ಕೆಲಸದಲ್ಲಿರುವ ಯುವಜನತೆಗೆ ತಮ್ಮ ಸ್ಕಾಲ್ಪ್ ಸದಾ ನವೆ, ತುರಿಕೆ, ಜಿಡ್ಡು, ತಲೆ ಹೊಟ್ಟು, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳಿಗೆ ತುತ್ತಾಗುವುದನ್ನು ಗಮನಿಸುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಪರಿಸರ ಮಾಲಿನ್ಯ. ಸ್ಕಾಲ್ಪ್ ಗೆ ಧೂಳು, ಮಣ್ಣು, ನಿಕಲ್, ಲೆಡ್, ಆರ್ಸಿನಿಕ್ ಇತ್ಯಾದಿ ರಾಸಾಯನಿಕಗಳು ಕೂಡಿಕೊಳ್ಳುತ್ತಾ ಹೋದರೆ, ಕೂದಲುದುರುವಿಕೆ ಸಹಜವಾಗಿಯೇ ಹೆಚ್ಚುತ್ತದೆ. ಈ ತೊಂದರೆ ನಿವಾರಿಸಲು ಉಪಾಯಗಳೆಂದರೆ : ಆಯ್ಲಿ ಸ್ಕಾಲ್ಪ್ ಗಾಗಿ ಕ್ಲೆನ್ಸಿಂಗ್ ಎಲ್ಲಕ್ಕಿಂತಲೂ ಉತ್ತಮ ಉಪಾಯ. ಇದಕ್ಕಾಗಿ ಕೂದಲನ್ನು ದಿನ ಬಿಟ್ಟು ದಿನ ಶ್ಯಾಂಪೂನಿಂದ ಶುಚಿಗೊಳಿಸುತ್ತಿರಿ. ಡ್ರೈ ಸ್ಕಾಲ್ಪ್ ಅಥವಾ ಕಲರ್ಡ್ ಹೇರ್ ಗಾಗಿ ಆದಷ್ಟೂ ವಾರಕ್ಕೊಂದು ಸಲ ಮಾತ್ರ ಶ್ಯಾಂಪೂ ಬಳಸಿರಿ. ಬೇಸಿಗೆಯಲ್ಲಿ ಸ್ಕಾಲ್ಪ್ ಮತ್ತು ಕೂದಲು ಎರಡೂ ಶುಚಿಯಾಗಿ ಆರೋಗ್ಯಕರವಾಗಿರಬೇಕು. ಆಗ ಕೂದಲುದುರುವಿಕೆ ಸಹಜವಾಗಿ ತಗ್ಗುತ್ತದೆ.
ಬೇಸಿಗೆಯಲ್ಲಿ ಕೂದಲಿಗೆ ಡೀಪ್ ಕಂಡೀಶನಿಂಗ್ ಮಾಡಬೇಕಾದುದು ಅನಿವಾರ್ಯ. ಏಕೆಂದರೆ ಇದರಿಂದ ಮಾಲಿನ್ಯಕ್ಕೆ ಒಳಗಾದ ಡ್ಯಾಮೇಜ್ಡ್ ಕೂದಲು ಬೇಗ ಬೇಗ ಡ್ರೈ ಆಗುತ್ತಾ, ತುಂಡರಿಸುತ್ತಾ, ಉದುರುತ್ತದೆ. ಈ ಸಮಸ್ಯೆಗಳು ಡೀಪ್ ಕಂಡೀಶನಿಂಗ್ ನಿಂದಾಗಿ ದೂರಾಗುತ್ತದೆ. ವಾರದಲ್ಲಿ ಒಮ್ಮೆ ಮರೆಯದೆ ಹೀಗೆ ಮಾಡಿ.
ಆ್ಯಂಟಿ ಆಕ್ಸಿಡೆಂಟ್ ಸಪ್ಲಿಮೆಂಟ್ಸ್ ಸೇವನೆ ಅಗತ್ಯ ಮಾಡಿ. ಆಗ ಹೇರ್ ಡ್ಯಾಮೇಜ್ ನ್ನು ಆದಷ್ಟೂ ತಡೆಯಬಹುದು. ಓವರ್ ವಿಟಮಿನ್ಸ್, ಮಿನರಲ್ಸ್ ಆ್ಯಂಟಿ ಆಕ್ಸಿಡೆಂಟ್ಸ್ ಕೂದಲಿಗೆ ಸುರಕ್ಷತೆ ಒದಗಿಸುವುದರ ಜೊತೆಗೆ, ಅದರ ಬೆಳವಣಿಗೆಗೂ ಪೂರಕ.
ಕೂದಲನ್ನು ಮಾಲಿನ್ಯದಿಂದ ಕಾಪಾಡಲು ಕಂಡೀಶನರ್ ಬಳಸಿರಿ. ಇದು ಸ್ಕಾಲ್ಪ್ ಮತ್ತು ಕೂದಲಿನ ನಡುವೆ ರಕ್ಷಣಾ ಗೋಡೆಯಾಗಿ ನಿಲ್ಲುತ್ತದೆ.
ಮನೆಮದ್ದು
ಆ್ಯಲೋವೆರಾ ಮಾಸ್ಕ್ ಬಹಳ ಉತ್ತಮ ಹೇರ್ ಕೇರ್ ಮಾಸ್ಕ್ ಆಗಿದೆ. ಇದರ ಜೆಲ್ ನಿಂದ ಡ್ರೈ ಹೇರ್ ಮತ್ತು ಸ್ಕಾಲ್ಪ್ ನ್ನು ಮಸಾಜ್ ಮಾಡಿ. 20 ನಿಮಿಷಗಳ ನಂತರ ತುಸು ಬಿಸಿ ನೀರಿನಿಂದ ತೊಳೆದು, ಮೈಲ್ಡ್ ಶ್ಯಾಂಪೂ ಬಳಸಿರಿ.
2-3 ಸ್ಟ್ರಾಬೆರಿ ಕ್ರಶ್ ಮಾಡಿ. ಇದಕ್ಕೆ 2 ಚಮಚ ಮೋನೀಸ್ ಬೆರೆಸಿ, ಮಾಸ್ಕ್ ತಯಾರಿಸಿ ಸ್ಕಾಲ್ಪ್ ಗೆ ಹಚ್ಚಿರಿ. ಸ್ಟ್ರಾಬೆರಿಯು ಸ್ಕಾಲ್ಪ್ ನ ಜಿಡ್ಡಿನಂಶದ ರಿಸಾಲ್ ನ್ನು ನಿಯಮಿತಗೊಳಿಸುತ್ತದೆ, ಮೋನೀಸ್ ಆರ್ದ್ರತೆಯನ್ನು ಒದಗಿಸುತ್ತದೆ. ಇದನ್ನು ಹಚ್ಚಿ 20 ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ.
ಬಾಳೆಹಣ್ಣು, ಜೇನು, ಆಲಿಲ್ ಆಯಿಲ್ ಬೆರೆಸಿ ಚೆನ್ನಾಗಿ ಮಸೆದು ಕಂಡೀಶನರ್ ತಯಾರಿಸಿ ತಲೆಗೂದಲು, ಸ್ಕಾಲ್ಪ್ ಗೆ ಹಚ್ಚಿ 30 ನಿಮಿಷ ಹಾಗೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ, ಇದು ಹೆಚ್ಚು ಲಾಭಕರ.
– ಸುಧಾ ರಾಹುಲ್
ಆರೋಗ್ಯಕರ ಕೂದಲಿಗಾಗಿ ಹೇರ್ ಮಾಸ್ಕ್
ಡ್ರೈ ಕೂದಲಿಗಾಗಿ ಬಾದಾಮಿ ಎಣ್ಣೆ ಮೊಸರು ಆ್ಯಲೋವೆರಾ ಹೆಲ್ದಿ ಸ್ಕಾಲ್ಪ್ ಗಾಗಿ ಸ್ಟ್ರಾಬೆರಿ ಮೆಯೋನೀಸ್ ಕೊಬ್ಬರಿ ಎಣ್ಣೆ ಹೇರ್ ಕಂಡೀಶ್ ನಿಂಗ್ ಗಾಗಿ ಬಾಳೆಹಣ್ಣು ಜೇನು ಆಲಿಲ್ ಎಣ್ಣೆ